ಹಣ್ಣುಗಳು ಮತ್ತು ತರಕಾರಿಗಳು
ಹಣ್ಣು ಮತ್ತು ತರಕಾರಿಗಳ (ಎಫ್&ವಿ) ಕೃಷಿಯು ಭಾರತೀಯ ಕೃಷಿ ಬೆಳವಣಿಗೆಯ ಪ್ರಮುಖ ಭಾಗ ಆಗಿದೆ ಮತ್ತು ಮುಂಬರುವ ದಿನಗಳಲ್ಲಿಯೂ ಮುಂದುವರಿಯಲಿದೆ. ಸದ್ಯದ 2.6% ಕೃಷಿ ಬೆಳವಣಿಗೆಗೆ ಹೋಲಿಸಿದರೆ ಕಳೆದ ದಶಕದಿಂದ ತರಕಾರಿ ಉತ್ಪಾದನೆಯು 4.6% ಸಿಎಜಿಆರ್ ಅಲ್ಲಿ ಬೆಳೆಯುತ್ತಿದೆ. ನಾವೀನ್ಯತೆಯು ಈ ಬೆಳವಣಿಗೆಯನ್ನು ಪ್ರೇರೇಪಿಸುತ್ತಿದೆ ಮತ್ತು ಉತ್ಪಾದಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಪಾರ ಸಾಧ್ಯತೆಗಳಿವೆ. ಬೆಳೆಯುತ್ತಿರುವ ಜನಸಂಖ್ಯೆಯ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ದೃಷ್ಟಿಕೋನದಿಂದ ಹಿಡಿದು, ರೈತರ ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ಆರೋಗ್ಯಕರ ಮತ್ತು ರೋಗ-ಮುಕ್ತ ಜೀವನದ ನಿರ್ವಹಣೆಯವರೆಗೆ, ಹಣ್ಣು ಮತ್ತು ತರಕಾರಿಗಳು ನಮ್ಮ ಮುಂದಿರುವ ಮಾರ್ಗವಾಗಿದೆ.
ಇದುವರೆಗೆ ಎಫ್ಎಂಸಿ ಸಾಲು ಬೆಳೆಗಳ ಪರಿಹಾರ ಪೂರೈಕೆದಾರ ಎಂದು ಗುರುತಿಸಲ್ಪಟ್ಟಿದೆ. ಆದಾಗ್ಯೂ, ನವೀಕರಿಸಿದ ವಿಧಾನದೊಂದಿಗೆ ನಾವು ಎಫ್&ವಿ ರೈತರಿಗೆ ಹತ್ತಿರವಾಗುತ್ತಿದ್ದೇವೆ. ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸಲು ಸುಸ್ಥಿರ ಪರಿಹಾರಗಳನ್ನು ಒದಗಿಸುವ ಮೂಲಕ ನಾವು ಅವರ ಕನಸುಗಳನ್ನು ನನಸಾಗಿಸಲು ಅವರಿಗೆ ಸಹಾಯ ಮಾಡುತ್ತಿದ್ದೇವೆ. ಕೆಲವು ಪ್ರಮುಖ ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಸೂಕ್ತವಾದ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ನೋಡಿ.
ಒಣಮೆಣಸು
ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಎಫ್ಎಂಸಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ. ಈ ವಿಭಾಗದಲ್ಲಿ ಮೆಣಸಿನ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಟೊಮ್ಯಾಟೋ
ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಟೊಮ್ಯಾಟೋ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಸಂಬಂಧಿತ ಉತ್ಪನ್ನಗಳು
ಈ ಬೆಳೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಲು ಒಂದು ಉತ್ಪನ್ನವನ್ನು ಆಯ್ಕೆಮಾಡಿ.