.jpg?itok=RVHJuO1h)
ಸರಿಯಾದ ಪ್ರತಿಭೆಯನ್ನು ಸರಿಯಾದ ರೋಲ್‌ಗೆ ಹೊಂದಿಸುವುದು ಮತ್ತು ಅವರನ್ನು ನಮ್ಮೊಂದಿಗೆ ಬೆಳೆಸುವುದು ನಮ್ಮ ಗಮನವಾಗಿದೆ.
ಎಫ್ಎಂಸಿ ಇಂಡಿಯಾದೊಂದಿಗೆ ನಿಮ್ಮ ಆಸಕ್ತಿಯನ್ನು ಹುಡುಕಿಕೊಳ್ಳಲು ಮತ್ತು ನಿಮ್ಮ ವೃತ್ತಿಜೀವನವನ್ನು ಅಭಿವೃದ್ಧಿಪಡಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ನಮ್ಮೊಂದಿಗೆ ಸೇರಿ! employeereferral@fmc.com ನಲ್ಲಿ ನಮಗೆ ಬರೆಯಿರಿ
ಕ್ಯಾಂಪಸ್ ತಲುಪುವಿಕೆ
ಈ ಕ್ಯಾಂಪಸ್ ಪ್ರೋಗ್ರಾಂ ನಮ್ಮ ಎಫ್ಎಂಸಿ ಇಂಡಿಯಾದ ಒಂದು ತೊಡಗುವಿಕೆಯಾಗಿದ್ದು, ನಮ್ಮ ವಿಶಿಷ್ಟ ಪ್ರೋಗ್ರಾಂಗಳಾದ - ಇಂಟರ್ನ್‌ಶಿಪ್, ಮ್ಯಾನೇಜ್ಮೆಂಟ್ ತರಬೇತಿ ಮತ್ತು ಎಫ್ಎಂಸಿ ಕ್ಯಾಂಪಸ್-ಕನೆಕ್ಟ್ ಮೂಲಕ ಪ್ರತಿಭೆಗಳನ್ನು ತೊಡಗಿಸಲು ಮತ್ತು ನಾಯಕತ್ವದ ಹಾದಿಯನ್ನು ಬಲಪಡಿಸಲು ಮೀಸಲಾದ ಕಾರ್ಯವಾಗಿದೆ. ಇಂಟರ್ನ್‌ಶಿಪ್ ಕಾರ್ಯಕ್ರಮವು ತಮ್ಮ ಕಾರ್ಪೊರೇಟ್ ಅನುಭವವನ್ನು ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕ ಬಿಸಿನೆಸ್ ವಾತಾವರಣದಲ್ಲಿ ಹೊಸ ಬಿಸಿನೆಸ್ ಸವಾಲುಗಳನ್ನು ಪರಿಹರಿಸಲು ಅಗತ್ಯವಿರುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಎಫ್‌ಎಂಸಿ ಇಂಡಿಯಾದಲ್ಲಿ ಲಾಭದಾಯಕ ಮತ್ತು ಸವಾಲಿನ ವೃತ್ತಿಜೀವನ ರೂಪಿಸಲು ಅಗತ್ಯವಿರುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೊಸ ತಲೆಮಾರಿನ, ಜೆನ್ ಝೆಡ್‌ಗೆ ಅವಕಾಶವನ್ನು ಒದಗಿಸುತ್ತದೆ.
ಮ್ಯಾನೇಜ್‌ಮೆಂಟ್ ಟ್ರೈನಿ ಕಾರ್ಯಕ್ರಮವು ಒಂದು ವರ್ಷದ ತರಬೇತಿ ಕಾರ್ಯಕ್ರಮವಾಗಿದೆ. ಇದು ಎಫ್ಎಂಸಿ ಇಂಡಿಯಾದ ವೇಗವಾಗಿ ಬೆಳೆಯುತ್ತಿರುವ ವ್ಯವಹಾರವನ್ನು ತಿಳಿದುಕೊಳ್ಳುವ ಮೂಲಕ ಯಶಸ್ವಿ ವೃತ್ತಿಜೀವನಕ್ಕಾಗಿ ತಯಾರಾಗಲು ಯುವ ಪ್ರತಿಭೆಗಳಿಗೆ ಸಿಗುವ ಒಂದು ಅನನ್ಯ ಅವಕಾಶವಾಗಿದೆ. ಇದು ಮಾರಾಟ/ ಮಾರ್ಕೆಟಿಂಗ್/ ಕ್ಷೇತ್ರ ಅಭಿವೃದ್ಧಿಯಂತಹ ವಿವಿಧ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ಬಹು ಆಯಾಮದ ಮ್ಯಾನೇಜ್ಮೆಂಟ್ ಅನುಭವವನ್ನು ಒದಗಿಸುತ್ತದೆ.
ಎಫ್‌ಎಂಸಿ ಕ್ಯಾಂಪಸ್-ಕನೆಕ್ಟ್ ಎನ್ನುವುದು ವಿದ್ಯಾರ್ಥಿ ತೊಡಗಿಕೊಳ್ಳುವಿಕೆ ಕಾರ್ಯಕ್ರಮವಾಗಿದ್ದು, ಭಾರತದ ವಿವಿಧ ಗುರುತಿಸಲ್ಪಟ್ಟ ಕೃಷಿ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳ ಶೈಕ್ಷಣಿಕ ಮತ್ತು ಸಂಶೋಧನಾ ಪ್ರತಿಭೆಯನ್ನು ಗುರುತಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿದೆ.. ಈ ಕಾರ್ಯಕ್ರಮವು ಪಿಎಚ್‌ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಪ್ರಾಯೋಜಿಸುವ ಮೂಲಕ ಕೀಟಶಾಸ್ತ್ರ, ರೋಗಶಾಸ್ತ್ರ, ಕೃಷಿ ವಿಜ್ಞಾನ, ಮಣ್ಣು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತದೆ.