ಮುಖ್ಯಾಂಶಗಳು
- ದಶಕಗಳಿಂದ ಲಕ್ಷಾಂತರ ರೈತರು ನಂಬಿರುವ ನವೀನ ತಂತ್ರಜ್ಞಾನ
- ಕೀಟಗಳಿಂದ ಉತ್ತಮ ರಕ್ಷಣೆ ಒದಗಿಸುತ್ತದೆ, ಗರಿಷ್ಠ ಇಳುವರಿ ಸಾಮರ್ಥ್ಯವನ್ನು ಸಾಧಿಸಲು ಬೆಳೆಗಳಿಗೆ ಅನುವು ಮಾಡಿಕೊಡುತ್ತದೆ
- ದೀರ್ಘಕಾಲೀನ ಕೀಟ ರಕ್ಷಣೆ ನೀಡುತ್ತದೆ
- ಸಂಯೋಜಿತ ಕೀಟ ನಿರ್ವಹಣೆಗೆ (ಐಪಿಎಂ) ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ರೈನಾಕ್ಸಿಪೈರ್® ಸಕ್ರಿಯ ಅಂಶದಿಂದ ಚಾಲಿತ ಕೊರಾಜೆನ್® ಕೀಟನಾಶಕವು ಗ್ರೂಪ್ 28 ಗೆ ಸೇರಿದ ಮಹತ್ವದ ಕ್ರಿಯಾತ್ಮಕ ಕೀಟನಾಶಕವಾಗಿದ್ದು, ಇದು ಉದ್ದೇಶಿತ ಕೀಟಗಳಿಂದ ಉತ್ತಮ ರಕ್ಷಣೆಯನ್ನು ನೀಡುತ್ತದೆ. ಈ ಮಹತ್ವದ ತಂತ್ರಜ್ಞಾನವು ಆರ್ಥಿಕ ನಷ್ಟವನ್ನು ಉಂಟು ಮಾಡುವ ಎಲ್ಲಾ ಪ್ರಮುಖ ಚಿಟ್ಟೆ, ಪತಂಗದಂತಹ ಕೀಟಗಳು ಮತ್ತು ಆಯ್ದ ಇತರ ಪ್ರಭೇದಗಳನ್ನು ನಿಯಂತ್ರಿಸುತ್ತದೆ. ಈ ವಿಶಿಷ್ಟ ಸೂತ್ರೀಕರಣವು ತ್ವರಿತ ಕಾರ್ಯಕ್ಷಮತೆ, ಕೀಟಗಳನ್ನು ನಾಶ ಮಾಡುವ ಹೆಚ್ಚಿನ ಸಾಮರ್ಥ್ಯ, ದೀರ್ಘಾವಧಿಯ ನಿಯಂತ್ರಣದ ಜೊತೆಗೆ, ಬೆಳೆಗಳು ಮತ್ತು ಉದ್ದೇಶಿತವಲ್ಲದ ಜೀವಿಗಳಿಗೆ ಯಾವುದೇ ಹಾನಿ ಮಾಡದೆ ಅತ್ಯುತ್ತಮ ಸುರಕ್ಷತೆಯೊಂದಿಗೆ ಬಳಸಲು ಸುಲಭವಾಗಿದೆ. ಪ್ರಾಥಮಿಕ ಸೇವನೆಯ ಮೂಲಕ ಕೆಲಸ ಮಾಡುವ ಕೊರಾಜೆನ್® ಕೀಟನಾಶಕವು, ಬಾಲ್ಯದಿಂದ ಹಿಡಿದು ವಯಸ್ಕ ಹಂತದವರೆಗೆ ಎಲ್ಲಾ ಹಂತಗಳಲ್ಲಿ ಕೀಟಗಳನ್ನು ನಿರ್ವಹಿಸುತ್ತದೆ, ಇದರಿಂದಾಗಿ ಅತ್ಯುತ್ತಮ ಮತ್ತು ದೀರ್ಘಾವಧಿಯ ಬೆಳೆಯ ರಕ್ಷಣೆಯನ್ನು ಒದಗಿಸುತ್ತದೆ. ಕೀಟನಾಶಕವನ್ನು ಸೇವಿಸಿದ ಕೀಟಗಳು ನಿಮಿಷಗಳಲ್ಲಿ ಆಹಾರ ಸೇವನೆಯನ್ನು ನಿಲ್ಲಿಸುತ್ತವೆ ಮತ್ತು ವಿಸ್ತರಿತ ಉಳಿದ ಚಟುವಟಿಕೆಯಿಂದಾಗಿ ಬೆಳೆಗಳನ್ನು ಇತರ ಸ್ಪರ್ಧಾತ್ಮಕ ಆಯ್ಕೆಗಳಿಗಿಂತ ಹೆಚ್ಚು ಸಮರ್ಥವಾಗಿ ರಕ್ಷಿಸುತ್ತದೆ. ಬೆಳೆಗಾರರಿಗೆ ಲಭ್ಯವಿರುವ ಅನೇಕ ಪರಿಹಾರಗಳಲ್ಲಿ ಇದು ವಿವಿಧ ಬೆಳೆಗಳ ಮೇಲೆ ಅತ್ಯಂತ ವ್ಯಾಪಕ ಲೇಬಲ್ ಹಕ್ಕುಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದೆ ಮತ್ತು ಉದ್ದೇಶಿತ ಬೆಳೆಗಳಲ್ಲಿ ಕೀಟಗಳನ್ನು ನಿರ್ವಹಿಸಲು ಬೆಳೆಗಾರರಿಗೆ ಇರುವ ಅತ್ಯುತ್ತಮ ಆಯ್ಕೆಯಾಗಿದೆ.
ಬೆಳೆಗಳು

ಕಬ್ಬು
ಕಬ್ಬು ಬೆಳೆಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗೆದ್ದಲು
- ಆರಂಭಿಕ ಚಿಗುರು ಕೊರಕ
- ತುದಿ ಕೊರಕ

ಸೋಯಾಬೀನ್
ಸೋಯಾಬೀನ್ಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಹಸಿರು ಕೊಂಡಿಹುಳು
- ಕಾಂಡ ನೊಣ
- ಸುತ್ತುವ ಜೀರುಂಡೆ

ಮೆಕ್ಕೆ ಜೋಳ
ಮೆಕ್ಕೆಜೋಳಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಚುಕ್ಕೆ ಕಾಂಡ ಕೊರಕ
- ಗುಲಾಬಿ ಕಾಯಿ ಕೊರಕ
- ಫಾಲ್ ಸೈನಿಕ ಹುಳು

ನೆಲಕಡಲೆ
ನೆಲಕಡಲೆಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ತಂಬಾಕು ಎಲೆಗಳ ಹುಳು

ಕಡಲೆ ಕಾಳು
ಕಡಲೆ ಕಾಳಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಬೀಜಕೋಶ ಕೊರಕ

ಭತ್ತ
ಭತ್ತಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಕಾಂಡ ಕೊರಕ
- ಎಲೆ ಸುರಳಿ ಹುಳ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಕಬ್ಬು
- ಸೋಯಾಬೀನ್
- ಮೆಕ್ಕೆ ಜೋಳ
- ನೆಲಕಡಲೆ
- ಕಡಲೆ ಕಾಳು
- ಭತ್ತ
- ತೊಗರಿ ಕಾಳು
- ಕಪ್ಪು ಉದ್ದು
- ಹತ್ತಿ
- ಎಲೆಕೋಸು
- ಒಣಮೆಣಸು
- ಟೊಮ್ಯಾಟೋ
- ಬದನೆಕಾಯಿ
- ಹಾಗಲ ಕಾಯಿ
- ಬೆಂಡೆಕಾಯಿ