ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಸಿಲ್ಪಿರಾಕ್ಸ್® ಶಿಲೀಂಧ್ರನಾಶಕ

ಸಿಲ್ಪಿರಾಕ್ಸ್® ಶಿಲೀಂಧ್ರನಾಶಕ ಒಂದು ವ್ಯವಸ್ಥಿತ ಶಿಲೀಂಧ್ರನಾಶಕವಾಗಿದ್ದು ಇದು ಕ್ಯಾಬೊಕ್ಸಿನಿಲೈಡ್ ಗುಂಪಿಗೆ ಸೇರಿದೆ. ಇದು ರೋಗ ಬರುವ ಸಂಭವವನ್ನು ತಡೆಯುತ್ತದೆ ಮತ್ತು ಹೆಚ್ಚಿನ ಬೆಳವಣಿಗೆ/ಹರಡುವಿಕೆಯನ್ನು ಪರಿಶೀಲಿಸುತ್ತದೆ. ಕ್ಯಾಬಾಕ್ಸಿನಿಲೈಡ್ ಗುಂಪು ಆಧಾರಿತ ಸಿಲ್ಪಿರಾಕ್ಸ್® ಶಿಲೀಂಧ್ರನಾಶಕವು ಇದು ಶಿಲೀಂಧ್ರದ ಶಕ್ತಿ ಉತ್ಪಾದನೆಗೆ ಸಹಾಯ ಮಾಡುವ ಮೈಟೊಕಾಂಡ್ರಿಯದಲ್ಲಿ ಸಕ್ಸಿನೇಟ್ ಡಿಹೈಡ್ರೋಜಿನೇಸ್ ಅನ್ನು ತಡೆಯುತ್ತದೆ. ಇದು ಬೇರುಗಳು ಮತ್ತು ಎಲೆಗಳಿಂದ ವೇಗವಾಗಿ ಹೀರಲ್ಪಡುತ್ತದೆ ಮತ್ತು ಸಸ್ಯದುದ್ದಕ್ಕೂ ಕ್ಸೈಲೆಮ್ ಮತ್ತು ಅಪೊಪ್ಲ್ಯಾಸ್ಟ್‌ಗೆ ವರ್ಗಾವಣೆಯಾಗುತ್ತದೆ. ಅತ್ಯುತ್ತಮ ದಕ್ಷತೆಗಾಗಿ ರೋಗ ಸಂಭವಿಸುವ ಮೊದಲು ಸಿಲ್ಪಿರಾಕ್ಸ್® ಶಿಲೀಂಧ್ರನಾಶಕವನ್ನು ಬಳಸಬೇಕು. ಭತ್ತದಲ್ಲಿನ ಎಲೆಕವಚ ಅಂಗಮಾರಿ ರೋಗ ಮತ್ತು ಆಲೂಗಡ್ಡೆಯಲ್ಲಿನ ಕಪ್ಪು ಪೊರೆ ರೋಗಕ್ಕೆ ಇದನ್ನು ಶಿಫಾರಸು ಮಾಡಲಾಗುತ್ತದೆ.

ಮುಖ್ಯಾಂಶಗಳು

  • ಇದು ಎಸ್‌ಡಿಎಚ್‌ಐ ಅಣುವಾಗಿದ್ದು, ಭತ್ತದಲ್ಲಿನ ಎಲೆಕವಚ ಅಂಗಮಾರಿ ರೋಗ ಮತ್ತು ಆಲೂಗಡ್ಡೆಯಲ್ಲಿನ ಕಪ್ಪು ಪೊರೆ ರೋಗದ ಮೇಲೆ ತುಂಬಾ ಪರಿಣಾಮಕಾರಿಯಾಗಿದೆ
  • ಇದು ವ್ಯವಸ್ಥಿತ ರೂಪದಲ್ಲಿದ್ದು ಬೇರುಗಳಿಂದ ಹೀರಿಕೊಳ್ಳಲ್ಪಡುತ್ತದೆ ಮತ್ತು ಸಸ್ಯದ ಇತರ ಭಾಗಗಳಿಗೆ ವರ್ಗಾವಣೆಯಾಗುತ್ತದೆ
  • ಸಿಲ್ಪಿರಾಕ್ಸ್® ಶಿಲೀಂಧ್ರನಾಶಕ ರೋಗದ ಸಂಭವವನ್ನು ತಡೆಯುತ್ತದೆ
  • ಇದು ರೋಗನಿರೋಧಕ ಗುಣವನ್ನು ಹೊಂದಿದೆ
  • ಹೆಚ್ಚಿನ ರೋಗದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ

ಸಕ್ರಿಯ ಪದಾರ್ಥಗಳು

  • ತಿಫ್ಲುಜಾಮೈಡ್ 24% ಎಸ್‌ಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಶಿಲೀಂಧ್ರ ರೋಗಗಳು ಭತ್ತ ಬೆಳೆಯುವ ರೈತರಿಗೆ ಅತ್ಯಂತ ಗಮನಾರ್ಹ ಸಮಸ್ಯೆಗಳಲ್ಲಿ ಒಂದಾಗಿವೆ. ಗುಣಲಕ್ಷಣಗಳು ಕೋಶದಿಂದ ಪ್ರಾರಂಭವಾಗುತ್ತವೆ, ನಂತರ ಎಲೆಗಳಿಗೆ ಹರಡುತ್ತದೆ ಮತ್ತು ಅನುಕೂಲಕರ ಹವಾಮಾನ ಪರಿಸ್ಥಿತಿಗಳ ಅಡಿಯಲ್ಲಿ ಇದು ಬೆಳೆಯ ಫಸಲನ್ನು ಕಡಿಮೆ ಮಾಡುವ ಗಂಭೀರ ಸ್ಥಿತಿಗೂ ಹೋಗಬಹುದು. ಎಲೆಕವಚ ಅಂಗಮಾರಿ ರೋಗದ ವಿರುದ್ಧ ಉತ್ತಮ ರಕ್ಷಣೆಯು ಸಸ್ಯಗಳು ತಟಸ್ಥವಾಗುವ ಅವಕಾಶವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಎಲೆಗಳಿಗೆ ಕಡಿಮೆ ಹಾನಿಯಾಗಿ ದ್ಯುತಿಸಂಶ್ಲೇಷಣೆಗೆ ಹೆಚ್ಚಿನ ಎಲೆ ಪ್ರದೇಶವನ್ನು ಒದಗಿಸುತ್ತದೆ. ಸಿಲ್ಪಿರಾಕ್ಸ್® ಶಿಲೀಂಧ್ರನಾಶಕವನ್ನು ಎಲೆಕವಚ ಅಂಗಮಾರಿ ರೋಗದ ವಿದುದ್ಧ ಪರಿಣಾಮಕಾರಿ ಅಣುವಾಗಿ ಶಿಫಾರಸು ಮಾಡಲಾಗಿದೆ. ಸಿಲ್ಪಿರಾಕ್ಸ್® ಶಿಲೀಂಧ್ರನಾಶಕವನ್ನು ಸರಿಯಾದ ಸಮಯಕ್ಕೆ ಹಾಕುವುದರಿಂದ ಸಸ್ಯವನ್ನು ಶಿಲೀಂಧ್ರದ ಧಾಳಿಯಿಂದ ರಕ್ಷಿಸುತ್ತದೆ ಮತ್ತು ಹೆಚ್ಚಿನ ಶಿಲೀಂಧ್ರ ಬೆಳವಣಿಗೆಯನ್ನು ಪರಿಶೀಲಿಸುತ್ತದೆ. ಸಿಲ್ಪಿರಾಕ್ಸ್® ಶಿಲೀಂಧ್ರನಾಶಕವನ್ನು ಆಲೂಗಡ್ಡೆಯ ಬೀಜೋಪಚಾರಕ್ಕೆ ಕೂಡ ಶಿಫಾರಸು ಮಾಡಲಾಗಿದ್ದು ಅದು ಕಪ್ಪು ಪೊರೆ ರೋಗದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ
  • ಆಲೂಗಡ್ಡೆ