ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಬೆನೀವಿಯಾ® ಕೀಟನಾಶಕ

ಬೆನೀವಿಯಾ® ಕೀಟನಾಶಕವನ್ನು ಎಲೆಗಳ ಸಿಂಪಡಣೆಗಾಗಿ ತೈಲ ಪ್ರಸರಣ ಸೂತ್ರೀಕರಣದ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದು ಆಂಥ್ರಾನಿಲಿಕ್ ಡೈಮೈಡ್ ಕೀಟನಾಶಕವಾಗಿದೆ. ಬೆನೀವಿಯಾ® ಕೀಟನಾಶಕ ಸೈಜೈಪರ್® ಅಂಶಗಳಿಂದ ಸಕ್ರಿಯವಾಗಿದ್ದು ಹಲವಾರು ಹೀರುವ ಮತ್ತು ಜಗಿಯುವ ಕೀಟಗಳ ಮೇಲೆ ಪರಿಣಾಮಕಾರಿ ಕ್ರಿಯೆಯನ್ನು ಪ್ರದರ್ಶಿಸುತ್ತದೆ. ಬೆನೀವಿಯಾ ® ಕೀಟನಾಶಕವನ್ನು ಬೆಳೆಯ ಜೀವನ ಚಕ್ರದಲ್ಲಿ ಮುಂಚಿತವಾಗಿ ಬಳಕೆ ಮಾಡಿದರೆ, ಬೆಳೆಯ ಭರವಸೆಯ ಆರಂಭಕ್ಕೆ ಮತ್ತು ಆರಂಭಿಕ ಹಂತದ ಬೆಳೆ ರಚನೆಗೆ ಅದು ಸಹಾಯ ಮಾಡುತ್ತದೆ, ಇದು ಉತ್ತಮ ಗುಣಮಟ್ಟದ ಬೆಳೆ ಮತ್ತು ಉತ್ತಮ ಇಳುವರಿಗೆ ದಾರಿ ಮಾಡಿಕೊಡುತ್ತದೆ.

ಮುಖ್ಯಾಂಶಗಳು

  • ಬೆನೀವಿಯಾ® ಕೀಟನಾಶಕವು ಸೈಜೈಪೈರ್® ಸಕ್ರಿಯ ಅಂಶದಿಂದ ಕೂಡಿದ ನವೀನ ಕೀಟನಾಶಕವಾಗಿದ್ದು, ಅದು ಕೀಟಗಳ ಸ್ನಾಯುವಿನ ಕಾರ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ಕೀಟಗಳ ಆಹಾರ, ಚಲನೆ ಮತ್ತು ಸಂತಾನೋತ್ಪತ್ತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ
  • ಬೆನೀವಿಯಾ® ಕೀಟನಾಶಕವು ಒಂದು ವಿಶಿಷ್ಟ ಬಹು ವ್ಯಾಪ್ತಿಯ ಚಟುವಟಿಕೆಯನ್ನು ಒದಗಿಸುತ್ತದೆ, ಇದು ಹೀರುವ ಮತ್ತು ಜಗಿಯುವ ಕೀಟಗಳನ್ನು ನಿಯಂತ್ರಿಸುವ ಮೂಲಕ ಏಕಕಾಲಕ್ಕೆ ಎರಡಕ್ಕೂ ಪರಿಹಾರವನ್ನು ನೀಡುತ್ತದೆ
  • ಬೆನೀವಿಯಾ® ಕೀಟನಾಶಕವು, ತ್ವರಿತವಾಗಿ ತಿಂದು ಮುಗಿಸುವ ಕೀಟಗಳ ಹಾನಿಯಿಂದ ಎಲೆ ಗೊಂಚಲು ಮತ್ತು ಬೆಳೆಯುತ್ತಿರುವ ಹಣ್ಣುಗಳನ್ನು ರಕ್ಷಿಸುತ್ತದೆ ಮತ್ತು ಅದರ ಟ್ರಾನ್ಸ್‌ಲಾಮಿನಾರ್ ಕ್ರಿಯೆಯು ಕೀಟಗಳು ಎಲ್ಲಿ ಮುತ್ತಿಕೊಂಡಿರುತ್ತವೆಯೋ (ಎಲೆಯ ಕೆಳಗಿನ ಭಾಗವನ್ನು ಸೇರಿದಂತೆ) ಅಲ್ಲಿಗೆ ಉತ್ಪನ್ನವನ್ನು ತಲುಪಿಸುವ ಮೂಲಕ ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುತ್ತವೆ
  • ತ್ವರಿತ ಮಳೆ ತಡೆಯುವ ಶಕ್ತಿ
  • ಹಸಿರು ಲೇಬಲ್ ಉತ್ಪನ್ನ

ಸಕ್ರಿಯ ಪದಾರ್ಥಗಳು

  • ಸೈಜಿಪೈರ್ ® ಸಕ್ರಿಯ - 10.26% ಒಡಿ ಒಳಗೊಂಡಿರುವ

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ರೈತರು ಯಾವಾಗಲೂ ಆರೋಗ್ಯಕರ ಮತ್ತು ಸಮೃದ್ಧ ಬೆಳೆಯ ಕನಸು ಕಾಣುತ್ತಾರೆ. ಬೆಳೆಯು ಹೆಚ್ಚು ಸಮೃದ್ಧವಾಗಿದ್ದರೆ, ಅದು ಎಲ್ಲೆಡೆ ಚರ್ಚೆಯ ವಿಷಯವಾಗುತ್ತದೆ. ಆದರೆ, ವಿವಿಧ ಕೀಟಗಳ ದಾಳಿಯು ಬೆಳೆಯ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ. ಈ ತೊಂದರೆಯನ್ನು ಎದುರಿಸಲು ರೈತರಿಗೆ ಸಹಾಯ ಮಾಡಲು, ಎಫ್ಎಂಸಿ, ಸೈಜಿಪೈರ್® ಅಂಶದಿಂದ ಸಕ್ರಿಯವಾಗಿರುವ ವಿಶಿಷ್ಟ ಅಣು- ಬೆನೀವಿಯಾ® ಕೀಟನಾಶಕವನ್ನು ಪ್ರಸ್ತುತ ಪಡಿಸುತ್ತಿದೆ. ಎಫ್ಎಂಸಿಯ ಬೆನೀವಿಯಾ® ಕೀಟನಾಶಕವು ರೈತರ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಆರಂಭದಿಂದಲೇ ಬೆಳೆಗಳಿಗೆ ಉತ್ತಮ ಆರೈಕೆಯನ್ನು ನೀಡುತ್ತದೆ. ಹೀರುವ ಮತ್ತು ಜಗಿಯುವ ಎರಡೂ ರೀತಿಯ ಕೀಟಗಳ ಮೇಲೆ ಪರಿಣಾಮಕಾರಿ ಆಗಿರುವ ಚಟುವಟಿಕೆಯಿಂದಾಗಿ, ಬೆನೀವಿಯಾ® ಕೀಟನಾಶಕವು ಬೆಳೆಗೆ ಆರೋಗ್ಯಕರ ಮತ್ತು ಭರವಸೆಯ ಆರಂಭ ನೀಡಲು ಸಹಾಯ ಮಾಡುತ್ತದೆ, ಇದರಿಂದಾಗಿ ರೈತರು ಉತ್ತಮ ಇಳುವರಿಯನ್ನು ಪಡೆಯಲು ಸಹಾಯವಾಗುತ್ತದೆ. ಬೆನೀವಿಯಾ® ಕೀಟನಾಶಕದೊಂದಿಗೆ ರೈತರು ತಮ್ಮ ಬೆಳೆಗೆ ತಾವು ಬಯಸಿದ ಸಂಪೂರ್ಣ ರಕ್ಷಣೆಯನ್ನು ಪಡೆಯಬಹುದು ಮತ್ತು ಅಸಾಧ್ಯವನ್ನು ಸಾಧ್ಯವಾಗಿಸಬಹುದು.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಒಣಮೆಣಸು
  • ಟೊಮ್ಯಾಟೋ
  • ದಾಳಿಂಬೆ
  • ದ್ರಾಕ್ಷಿ
  • ಹತ್ತಿ
  • ಕಲ್ಲಂಗಡಿ
  • ಬದನೆಕಾಯಿ
  • ಬೆಂಡೆಕಾಯಿ
  • ಎಲೆಕೋಸು
  • ಹಾಗಲ ಕಾಯಿ
  • ಹೀರೇಕಾಯಿ
  • ಮುಳ್ಳು ಸೌತೆ