ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಕಾರ್ಪೊರೇಶನ್ ನಿಯಮ ಮತ್ತು ಷರತ್ತುಗಳು

ಪರಿಚಯ ಮತ್ತು ಸ್ವೀಕೃತಿ

ಎಫ್‌ಎಂಸಿ ಕಾರ್ಪೊರೇಶನ್ ("ಕಂಪನಿ") ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಈ ವೆಬ್‌ಸೈಟ್ ("ವೆಬ್‌ಸೈಟ್") ಅನ್ನು ನಿರ್ವಹಿಸುತ್ತದೆ. ನೀವು ಈ ವೆಬ್‌ಸೈಟ್‌ ಅನ್ನು ಪ್ರವೇಶಿಸುವುದು ಮತ್ತು ಬಳಸುವುದು ಈ ನಿಯಮ ಮತ್ತು ಷರತ್ತುಗಳಿಂದ ("ನಿಯಮ ಮತ್ತು ಷರತ್ತುಗಳು") ಪ್ರತ್ಯೇಕವಾಗಿ ನಿಯಂತ್ರಿಸಲ್ಪಟ್ಟಿದೆ. ಈ ವೆಬ್‌ಸೈಟ್ ಅನ್ನು ಪ್ರವೇಶಿಸುವ ಮತ್ತು ಬಳಸುವ ಮೂಲಕ, ನೀವು ಈ ನಿಯಮ ಮತ್ತು ಷರತ್ತುಗಳನ್ನು ಓದಿದ್ದೀರಿ, ಅಂಗೀಕರಿಸಿದ್ದೀರಿ ಮತ್ತು ಅವುಗಳಿಗೆ ಬದ್ಧರಾಗಿರುತ್ತೀರಿ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಈ ನಿಯಮ ಮತ್ತು ಷರತ್ತುಗಳನ್ನು ಯಾವುದೇ ಸಮಯದಲ್ಲಿ, ಸೂಚನೆ ನೀಡದೆ ಮಾರ್ಪಡಿಸುವ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಕಂಪನಿಯು ಕಾಯ್ದಿರಿಸುತ್ತದೆ.

ಥರ್ಡ್ ಪಾರ್ಟಿ ಇಂಟರ್ನೆಟ್ ವೆಬ್‌ಸೈಟ್‌ಗಳು

ಕಂಪನಿಯು ಕಾಲಕಾಲಕ್ಕೆ ಈ ವೆಬ್‌ಸೈಟ್‌ನಲ್ಲಿ ಥರ್ಡ್ ಪಾರ್ಟಿಗಳ ("ಥರ್ಡ್ ಪಾರ್ಟಿ ಸೈಟ್‌ಗಳು") ಇಂಟರ್ನೆಟ್ ಸೈಟ್‌ಗಳಿಗೆ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಒದಗಿಸಬಹುದು. ಥರ್ಡ್ ಪಾರ್ಟಿ ಸೈಟ್‌ಗಳಿಗೆ ಈ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಅನುಕೂಲಕ್ಕಾಗಿ ಮಾತ್ರ ಒದಗಿಸಲಾಗಿದೆ. ಥರ್ಡ್ ಪಾರ್ಟಿ ಸೈಟ್‌ಗಳಲ್ಲಿ ಲಭ್ಯವಿರುವ ಯಾವುದೇ ಮಾಹಿತಿ, ಉತ್ಪನ್ನಗಳು ಅಥವಾ ಸೇವೆಗಳನ್ನು ಕಂಪನಿಯು ಪರಿಶೀಲನೆ ಮಾಡಿಲ್ಲ ಮತ್ತು ಯಾವುದೇ ರೀತಿಯಲ್ಲಿಯೂ ಅವುಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಅಥವಾ ನಿಯಂತ್ರಿಸುವುದಿಲ್ಲ ಮತ್ತು ಯಾವುದೇ ಥರ್ಡ್ ಪಾರ್ಟಿ ಸೈಟ್‌ಗಳಲ್ಲಿ ಒದಗಿಸಲಾದ ಯಾವುದೇ ಮಾಹಿತಿಗೆ ಕಂಪನಿಯು ಜವಾಬ್ದಾರವಲ್ಲ. ಕಂಪನಿಯು ಥರ್ಡ್ ಪಾರ್ಟಿ ಸೈಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಾತಿನಿಧ್ಯಗಳನ್ನು ಮಾಡುವುದಿಲ್ಲ ಮತ್ತು ಖಾತರಿಗಳನ್ನು ನೀಡುವುದಿಲ್ಲ, ಮತ್ತು ಕಂಪನಿಯು ಈ ವೆಬ್‌ಸೈಟ್‌ನಲ್ಲಿ ಯಾವುದೇ ಥರ್ಡ್ ಪಾರ್ಟಿ ಸೈಟ್‌ಗೆ ಲಿಂಕ್ ಒದಗಿಸಿರುವ ಅಂಶವು, ಅಂತಹ ಥರ್ಡ್ ಪಾರ್ಟಿ ಸೈಟ್ ಅಥವಾ ಅದರ ಮಾಲೀಕರು ಅಥವಾ ಪೂರೈಕೆದಾರರು ಅಥವಾ ಥರ್ಡ್ ಪಾರ್ಟಿ ಸೈಟ್‌ನಲ್ಲಿ ಉಲ್ಲೇಖಿಸಲಾದ ಅಥವಾ ಒದಗಿಸಲಾದ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಕಂಪನಿಯಿಂದ ಅನುಮೋದನೆ, ಅಧಿಕಾರ, ಪ್ರಾಯೋಜಕತ್ವ ಅಥವಾ ಸಹಭಾಗಿತ್ವವನ್ನು ಹೊಂದಿರುವುದಿಲ್ಲ. ಎಲ್ಲಾ ಥರ್ಡ್ ಪಾರ್ಟಿ ಸೈಟ್‌ಗಳು ಒದಗಿಸಿದ, ಜಾಹೀರಾತು ನೀಡಿದ ಅಥವಾ ಮಾರಾಟ ಮಾಡಿದ ಉತ್ಪನ್ನಗಳು ಅಥವಾ ಸೇವೆಗಳ ಮಾಹಿತಿಯ ನಿಖರತೆ ಮತ್ತು/ಅಥವಾ ಗುಣಮಟ್ಟಕ್ಕೆ ಕುರಿತಾದ ಯಾವುದೇ ಜವಾಬ್ದಾರಿಯನ್ನು ಕಂಪನಿಯು ಸ್ಪಷ್ಟವಾಗಿ ನಿರಾಕರಿಸುತ್ತದೆ.

ಭವಿಷ್ಯದ ನಿರೀಕ್ಷಿತ ಸ್ಟೇಟ್ಮೆಂಟ್‌ಗಳು

ಈ ವೆಬ್‌ಸೈಟ್‌ನಲ್ಲಿ ಕಂಪನಿಯ ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ("ಎಸ್ಇದುಸಿ") ವರದಿಗಳಲ್ಲಿ ವಿವರಿಸಲಾದ ಅಪಾಯಗಳು ಸೇರಿದಂತೆ, ನಿಜವಾದ ಫಲಿತಾಂಶಗಳು ಮುನ್ಸೂಚನೆಗಳಿಗಿಂತ ಭಿನ್ನವಾಗಿರಬಹುದಾದ ಅಪಾಯಗಳು ಮತ್ತು ಅನಿಶ್ಚಿತತೆಗಳಿಗೆ ಒಳಪಟ್ಟಿರುವ ಫಾರ್ವರ್ಡ್ ಲುಕಿಂಗ್ ಸ್ಟೇಟ್‌ಮೆಂಟ್‌ಗಳನ್ನು ಹೊಂದಿರಬಹುದು.

ಮಾಹಿತಿಯ ಕಾಲಾವಧಿ

ಈ ವೆಬ್‌ಸೈಟ್‌ನಲ್ಲಿ ಇರುವ ಎಲ್ಲಾ ಪತ್ರಿಕಾ ಪ್ರಕಟಣೆಗಳು ಮತ್ತು ಇತರ ಮಾಹಿತಿಯು ಬಿಡುಗಡೆಯಾದ ಸಂದರ್ಭದಲ್ಲಿ ಕಂಪನಿಯ ಅತ್ಯುತ್ತಮ ಜ್ಞಾನಕ್ಕೆ ತಕ್ಕಂತೆ, ಸಕಾಲಿಕ ಮತ್ತು ನಿಖರವಾಗಿ ಇವೆ. ಆದಾಗ್ಯೂ, ಸಮಯ ಕಳೆದಂತೆ ಎಲ್ಲಾ ವಿಷಯಗಳು ಹಳೆಯದಾಗಬಹುದು, ಮತ್ತು ಹಳೆಯ ವಿಷಯಗಳನ್ನು ಓದುವುದರಿಂದ ಉಂಟಾಗಬಹುದಾದ ಯಾವುದೇ ತಪ್ಪು ಗ್ರಹಿಕೆಗಳಿಗೆ ಕಂಪನಿಯು ಜವಾಬ್ದಾರವಲ್ಲ. ಈ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯ ವಿತರಣೆಯ ದಿನಾಂಕಗಳನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಆರ್ಥಿಕ ಮಾಹಿತಿ

ಈ ವೆಬ್‌ಸೈಟ್‌ನಲ್ಲಿ ತೋರಿಸಲಾದ ಕಂಪನಿಯ ಹಣಕಾಸಿನ ಮಾಹಿತಿಯು ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮಾತ್ರ ಅನುಗುಣವಾಗುತ್ತದೆ. ನಿಗದಿತ ದಿನಾಂಕದ ನಂತರ ಸಂಭವಿಸುವ ಹಣಕಾಸು, ವ್ಯವಹಾರ ಅಥವಾ ಯಾವುದೇ ಇತರ ಬೆಳವಣಿಗೆಗಳ ಪರಿಣಾಮವಾಗಿ ಹಣಕಾಸಿನ ಮಾಹಿತಿಯನ್ನು ನವೀಕರಿಸುವ ಅಥವಾ ಸರಿಪಡಿಸುವ ಯಾವುದೇ ಹೊಣೆಗಾರಿಕೆಯನ್ನು ಕಂಪನಿಯು ನಿರಾಕರಿಸುತ್ತದೆ. ಕಂಪನಿಯು ಎಸ್‌ಇಸಿ/ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಗಳು ಮತ್ತು ಇತರ ದಾಖಲೆಗಳಲ್ಲಿ ಒಳಗೊಂಡಿರುವ ಮಾಹಿತಿಗೆ ಹಣಕಾಸಿನ ಮಾಹಿತಿಯು ಪರ್ಯಾಯವಾಗಿರುವ ಉದ್ದೇಶವಿಲ್ಲ. ಕಂಪನಿಯ ಬಗ್ಗೆ ವಿವರವಾದ ಹಣಕಾಸು ಮತ್ತು ಇತರ ಮಾಹಿತಿಯು ಇಲ್ಲಿ ಲಭ್ಯವಿದೆ: (ಎ) ಕಂಪನಿಯ ಅತ್ಯಂತ ಇತ್ತೀಚಿನ ವಾರ್ಷಿಕ ವರದಿ; (ಬಿ) ಫಾರ್ಮ್ 10-ಕ್ಯೂನಲ್ಲಿನ ಕಂಪನಿಯ ನಂತರದ ತ್ರೈಮಾಸಿಕ ವರದಿಗಳು ಮತ್ತು (ಸಿ) ಕಂಪನಿಯು ಎಸ್‌ಇಸಿ/ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಿದ ಇತರ ವರದಿಗಳು ಮತ್ತು ದಾಖಲೆಗಳು. ಕಂಪನಿ ಅಥವಾ ಯಾವುದೇ ಘಟಕಕ್ಕೆ ಸಂಬಂಧಿಸಿದಂತೆ ಎಸ್‌‍ಇಸಿ ನಿರ್ವಹಿಸುವ ಎಡ್ಗರ್‌ (ಎಲೆಕ್ಟ್ರಾನಿಕ್ ಡೇಟಾ ಸಂಗ್ರಹಣೆ, ವಿಶ್ಲೇಷಣೆ ಮತ್ತು ಮರುಪಡೆಯುವಿಕೆ ವ್ಯವಸ್ಥೆ) ನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ ನಿಖರ ಅಥವಾ ಪ್ರಸ್ತುತವಾಗಿರಬೇಕಿಲ್ಲ ಎಂದು ಕಂಪನಿಯು ನಿಮಗೆ ಎಚ್ಚರಿಕೆ ನೀಡುತ್ತದೆ.

ವಿಷಯ ಮತ್ತು ಹೊಣೆಗಾರಿಕೆ ಹಕ್ಕುತ್ಯಾಗ

ಈ ವೆಬ್‌ಸೈಟ್‌ನಲ್ಲಿನ ಮಾಹಿತಿಯು ಬಗ್‌ಗಳು, ವೈರಸ್‌ಗಳು, ದೋಷಗಳು, ಸಮಸ್ಯೆಗಳು ಅಥವಾ ಇತರ ಮಿತಿಗಳನ್ನು ಒಳಗೊಂಡಿರಬಹುದು. ಈ ವೆಬ್‌ಸೈಟ್‌ನ ಕಾರ್ಯನಿರ್ವಹಣೆ, ಅಥವಾ ವಿಷಯಕ್ಕೆ ಸಂಬಂಧಿಸಿದ ಯಾವುದೇ ದೋಷಗಳು ಅಥವಾ ಲೋಪಗಳಿಗೆ ಕಂಪನಿಯು ಯಾವುದೇ ಹೊಣೆಗಾರಿಕೆ ಹೊಂದಿರುವುದಿಲ್ಲ ಮತ್ತು ಜವಾಬ್ದಾರವಲ್ಲ ಮತ್ತು ಯಾವುದೇ ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ಈ ವೆಬ್‌ಸೈಟ್‌ಗೆ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಕಾಯ್ದಿರಿಸಿದೆ. ಇದಲ್ಲದೆ, ಈ ವೆಬ್‌ಸೈಟಿನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ, ಟೆಕ್ಸ್ಟ್, ಗ್ರಾಫಿಕ್ಸ್, ಲಿಂಕ್‌ಗಳು ಅಥವಾ ಇತರ ವಿಷಯಗಳ ನಿಖರತೆ, ಕರೆನ್ಸಿ, ವಿಶ್ವಾಸಾರ್ಹತೆ ಅಥವಾ ಸಂಪೂರ್ಣತೆಗೆ ಕಂಪನಿ ಖಾತರಿ ನೀಡುವುದಿಲ್ಲ. ಇದಕ್ಕೆ ಅನುಗುಣವಾಗಿ, ಈ ವೆಬ್‌ಸೈಟ್‌ನಲ್ಲಿ ಎಲ್ಲಾ ವಿಷಯಗಳನ್ನು "ಇರುವಂತೆ" ಮತ್ತು ಯಾವುದೇ ರೀತಿಯ ವಾರಂಟಿ, ತಿಳಿಸಿದ ಅಥವಾ ವಿಧಿಸಿದ, ಒಳಗೊಂಡ ಆದರೆ ಇದಕ್ಕೆ ಮಾತ್ರ ಸೀಮಿತವಾಗಿರದೆ, ಮರ್ಚೆಂಟೆಬಿಲಿಟಿಗೆ ವಿಧಿಸಲಾದ ವಾರಂಟಿಗಳು, ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತವಾಗುವಂತೆ ಅಥವಾ ಉಲ್ಲಂಘನೆ ಮಾಡದವುಗಳನ್ನು ಒಳಗೊಂಡು ನೀಡಲಾಗಿದೆ. ಈ ವೆಬ್‌ಸೈಟ್‌ನಲ್ಲಿನ ಎಲೆಕ್ಟ್ರಾನಿಕ್ ಫೈಲ್‌ಗಳಲ್ಲಿರುವ ವೈರಸ್‌ಗಳಿಂದ ಉಂಟಾಗುವ ಯಾವುದೇ ಹಾನಿಗಳಿಗೆ ಕಂಪನಿಯು ಎಲ್ಲಾ ರೀತಿಯ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ. ಕೆಲವು ನ್ಯಾಯ ವ್ಯಾಪ್ತಿಗಳು ಸೂಚ್ಯ ವಾರಂಟಿಗಳನ್ನು ಹೊರಗಿಡುವುದನ್ನು ಅನುಮತಿಸುವುದಿಲ್ಲ, ಆದ್ದರಿಂದ ಮೇಲಿನ ಹೊರಗಿಡುವಿಕೆಯು ನಿಮಗೆ ಅನ್ವಯವಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ಕಂಪನಿಯು ಯಾವುದೇ ರೀತಿಯ ಹಾನಿಗಳಿಗೆ ಜವಾಬ್ದಾರವಲ್ಲ, ಮತ್ತು ನಿರ್ದಿಷ್ಟವಾಗಿ ಈ ವೆಬ್‌ಸೈಟ್‌ ಅಥವಾ ಕಂಪನಿಯ ಇತರ ಯಾವುದೇ ವೆಬ್‌ಸೈಟ್‌‌ ಅಥವಾ ಅದರಲ್ಲಿ ಇರುವ ಮಾಹಿತಿಯ ಕಾರಣದಿಂದ ಉಂಟಾದ ಅಥವಾ ಅದಕ್ಕೆ ಸಂಬಂಧಿಸಿದ ವಿಶೇಷ, ಪರೋಕ್ಷ, ಸಾಂದರ್ಭಿಕ, ಪ್ರಾಸಂಗಿಕ ಹಾನಿಗಳಿಗೆ ಅಥವಾ ನಷ್ಟದ ಹಾನಿ, ಆದಾಯ ನಷ್ಟ, ಅಥವಾ ಬಳಕೆಯ ನಷ್ಟಗಳಿಗೆ, ಅಂತಹ ಹಾನಿಗಳು ಒಪ್ಪಂದ, ನಿರ್ಲಕ್ಷ್ಯ, ವೈಯಕ್ತಿಕ ಅಪರಾಧ, ಶಾಸನಬದ್ಧ, ನ್ಯಾಯಯುತ, ಕಾನೂನು ಪ್ರಕಾರ ಅಥವಾ ಇತರೆ ರೀತಿಯಲ್ಲಿ ಉಂಟಾಗಿದ್ದರೂ ಕಂಪನಿ ಅದಕ್ಕೆ ಜವಾಬ್ದಾರವಲ್ಲ.

ಬಳಕೆದಾರರು ಒದಗಿಸಿದ ಮಾಹಿತಿ

ಮೇಲಿನ ಗೌಪ್ಯತಾ ಹೇಳಿಕೆಯಿಂದ ನಿಯಂತ್ರಿಸಲ್ಪಡುವ ವೈಯಕ್ತಿಕ ಮಾಹಿತಿಯನ್ನು ಹೊರತುಪಡಿಸಿ, ನಿಮ್ಮಿಂದ ಪಡೆದ ಯಾವುದೇ ಮಾಹಿತಿ ಅಥವಾ ವಿಷಯಗಳನ್ನು ಗೌಪ್ಯವಲ್ಲದ ಆಧಾರದ ಮೇಲೆ ನೀವು ಒದಗಿಸಿರುವಂತೆ ಮತ್ತು ಹಾಗೆಯೇ ಕಂಪನಿಯು ಅದನ್ನು ಸ್ವೀಕರಿಸಿದಂತೆ ಪರಿಗಣಿಸಲಾಗುತ್ತದೆ. ಕಂಪನಿಯೊಂದಿಗೆ ಸಂವಹನ ನಡೆಸುವ ಮೂಲಕ, ಸಂವಹನ ಅಥವಾ ಅದರಲ್ಲಿರುವ ಯಾವುದೇ ಮಾಹಿತಿಯನ್ನು ಯಾವುದೇ ಉದ್ದೇಶಕ್ಕಾಗಿ, ಈಗ ತಿಳಿದಿರುವ ಅಥವಾ ಮುಂದೆ ಅಭಿವೃದ್ಧಿಪಡಿಸುವ ಯಾವುದೇ ರೂಪ, ಮಾಧ್ಯಮ ಅಥವಾ ತಂತ್ರಜ್ಞಾನದಲ್ಲಿ ಪ್ರತ್ಯೇಕವಾಗಿ ಅಥವಾ ಇತರ ಯಾವುದೇ ಕೆಲಸಗಳ ಭಾಗವಾಗಿ ಬಳಸಲು, ಪುನರುತ್ಪಾದಿಸಲು, ಮಾರ್ಪಾಡಿಸಲು, ಪ್ರಕಟಿಸಲು, ತಿದ್ದುಪಡಿ ಮಾಡಲು, ಅನುವಾದಿಸಲು, ವಿತರಿಸಲು, ಕಾರ್ಯ ನಿರ್ವಹಿಸಲು ಮತ್ತು ಪ್ರದರ್ಶಿಸಲು ಹಾಗೂ ಅಂತಹ ಹಕ್ಕುಗಳನ್ನು ಮೂರನೇ ವ್ಯಕ್ತಿಗಳಿಗೆ ಉಪ ಪರವಾನಗಿ ನೀಡಲು ನೀವು ಸ್ವಯಂಚಾಲಿತವಾಗಿ ಕಂಪನಿಗೆ ರಾಯಧನ ರಹಿತ, ಶಾಶ್ವತ, ಬದಲಾಯಿಸಲಾಗದ, ಪ್ರತ್ಯೇಕವಲ್ಲದ ಪರವಾನಗಿಯನ್ನು ನೀಡುತ್ತೀರಿ.

ವೆಬ್‌ಸೈಟ್ ನೋಂದಣಿ ಮತ್ತು ವಿಚಾರಣೆಗಳು

ಈ ವೆಬ್‌ಸೈಟ್ ಉದ್ಯಮ ಖರೀದಿದಾರರು, ಸಂಶೋಧಕರು ಮತ್ತು ಇತರ ಆಸಕ್ತ ವ್ಯಕ್ತಿಗಳಿಗೆ ಮಾಹಿತಿ ಸೇವೆ ನೀಡುವ ಉದ್ದೇಶ ಹೊಂದಿದೆ. ಈ ಸೇವೆಗಳ ದುರುಪಯೋಗ ಅಥವಾ ಅಪ್ರಾಮಾಣಿಕ ಬಳಕೆಗಳು ಕಂಡು ಬಂದರೆ ನೋಂದಣಿಗಳನ್ನು ನಿರಾಕರಿಸುವ ಮತ್ತು ವಿಚಾರಣೆಗಳನ್ನು ತಿರಸ್ಕರಿಸುವ ಹಕ್ಕನ್ನು ಕಂಪನಿಯು ಕಾಯ್ದಿರಿಸುತ್ತದೆ. ನಮೂದುಗಳು ಮತ್ತು ಸಲ್ಲಿಸಿದ ಇತರ ವಿಷಯಗಳು ಕಂಪನಿಯ ಆಸ್ತಿಯಾಗುತ್ತವೆ ಮತ್ತು ಅವುಗಳನ್ನು ಅಂಗೀಕರಿಸಲಾಗುವುದಿಲ್ಲ ಅಥವಾ ಹಿಂದಿರುಗಿಸಲಾಗುವುದಿಲ್ಲ ("ಗೌಪ್ಯತಾ ಹೇಳಿಕೆ" ಕೂಡ ಓದಿ). ಕಂಪನಿಯು ಯಾವುದೇ ಟೆಲಿಫೋನ್ ನೆಟ್ವರ್ಕ್, ಕಂಪ್ಯೂಟರ್ ಉಪಕರಣಗಳು, ಸಾಫ್ಟ್‌ವೇರ್ ಅಥವಾ ಅದರ ಯಾವುದೇ ಸಂಯೋಜನೆಗೆ ಸಂಬಂಧಿಸಿದಂತೆ ಅಪೂರ್ಣ, ತಡವಾದ, ಕಳೆದುಹೋದ, ದಿಕ್ಕು ತಪ್ಪಿದ ಅಥವಾ ಯಾವುದೇ ತಾಂತ್ರಿಕ ಅಸಮರ್ಪಕತೆ, ಮಾನವ ದೋಷ, ಕಳೆದುಹೋದ/ವಿಳಂಬವಾದ ಮಾಹಿತಿ ಪ್ರಸರಣ, ಲೋಪ, ಅಡಚಣೆ, ಅಳಿಸುವಿಕೆ, ದೋಷ ಅಥವಾ ಲೈನ್ ವೈಫಲ್ಯಕ್ಕೆ ಜವಾಬ್ದಾರವಲ್ಲ. ಓದಲು ಆಗದ, ತಪ್ಪಾದ, ಅಪೂರ್ಣವಾದ, ವಿರೂಪಗೊಂಡ, ತಿರುಚಲಾದ, ನಕಲಿಯಾದ, ಯಾಂತ್ರಿಕವಾಗಿ ಮರು ಮುದ್ರಿಸಲ್ಪಟ, ಯಾವುದೇ ರೀತಿಯಲ್ಲಿ ಅನಿಯಮಿತವಾದ ಅಥವಾ ಈ ನಿಯಮಗಳನ್ನು ಅನುಸರಿಸದ ನಮೂದುಗಳು ಅನೂರ್ಜಿತಗೊಳ್ಳುತ್ತವೆ. ಯಾವುದೇ ಕಾರಣಕ್ಕಾಗಿ ವೆಬ್‌ಸೈಟ್‌ಗೆ ಯೋಜಿಸಿದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ, ತನ್ನ ಸ್ವಂತ ವಿವೇಚನೆಯಿಂದ ಯಾವುದೇ ನೋಂದಣಿಯನ್ನು ರದ್ದುಪಡಿಸುವ, ಕೊನೆಗೊಳಿಸುವ, ಮಾರ್ಪಡಿಸುವ ಅಥವಾ ಅಮಾನತುಗೊಳಿಸುವ ಹಕ್ಕನ್ನು ಕಂಪನಿಯು ಕಾಯ್ದಿರಿಸುತ್ತದೆ.

ಹಕ್ಕುಸ್ವಾಮ್ಯ ಮತ್ತು ಬಳಕೆಯ ನಿಯಮಗಳು

ಪಠ್ಯ, ಗ್ರಾಫಿಕ್ಸ್, ಆಡಿಯೋ, ವಿನ್ಯಾಸ, ಸಾಫ್ಟ್‌ವೇರ್, ಮತ್ತು ಮೇಲಿನ ಯಾವುದೇ ವಿಷಯದ ಆಧಾರದಲ್ಲಿ ನಡೆದ ಎಲ್ಲಾ ಉತ್ಪನ್ನ ಕೃತಿಗಳನ್ನು ಒಳಗೊಂಡಂತೆ ಈ ವೆಬ್‌ಸೈಟ್ ಕಂಪನಿಯ ಹಕ್ಕುಸ್ವಾಮ್ಯದ ಕೆಲಸವಾಗಿದೆ ಅಥವಾ ಹಕ್ಕುಸ್ವಾಮ್ಯದ ಮಾಲೀಕರ ಅನುಮತಿಗೆ ಒಳಪಟ್ಟು ಕಂಪನಿಯಿಂದ ಬಳಸಲ್ಪಡುತ್ತದೆ. ಈ ನಿಯಮಗಳು ಮತ್ತು ಷರತ್ತುಗಳಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಕಂಪನಿಯು ಈ ಸೈಟ್ ಮತ್ತು ಇದರಲ್ಲಿ ಇರುವ ವಿಷಯಗಳನ್ನು (''ವಿಷಯಗಳು'') ಈ ವೆಬ್‌ಸೈಟ್‌ ಜೊತೆಗಿನ ನಿಮ್ಮ ಸಂವಹನಕ್ಕೆ ಸಂಬಂಧಿಸಿದ ಉದ್ದೇಶಗಳಿಗೆ ಮಾತ್ರ ಬಳಸಲು ಮತ್ತು ಪ್ರದರ್ಶಿಸಲು ನಿಮಗೆ ವಿಶೇಷವಲ್ಲದ, ವರ್ಗಾಯಿಸಲು ಆಗದ, ಸೀಮಿತ ಮತ್ತು ವೈಯಕ್ತಿಕ ಪರವಾನಗಿಯನ್ನು ನೀಡುತ್ತದೆ, ವಿಷಯಗಳಲ್ಲಿ ಇರುವ ಎಲ್ಲಾ ಹಕ್ಕುಸ್ವಾಮ್ಯ, ಟ್ರೇಡ್‌ಮಾರ್ಕ್ ಮತ್ತು ಇತರ ಮಾಲೀಕತ್ವದ ಸೂಚನೆಗಳನ್ನು ನೀವು ಪಾಲಿಸಬೇಕಾಗುತ್ತದೆ. ವಿಷಯಗಳ ಯಾವುದೇ ಮಾರ್ಪಾಡು ಅಥವಾ ಇತರ ಉದ್ದೇಶಕ್ಕಾಗಿ ವಿಷಯಗಳನ್ನು ಬಳಸುವುದು ಕಂಪನಿಯ ಹಕ್ಕುಸ್ವಾಮ್ಯ ಮತ್ತು ಇತರ ಮಾಲೀಕತ್ವದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಕಂಪನಿಯ ಮಾಹಿತಿ ಪ್ರಸ್ತುತಿಯು ಅದರ ಟ್ರೇಡ್‌ಮಾರ್ಕ್‌ಗಳು, ವ್ಯಾಪಾರದ ಹೆಸರುಗಳು, ಹಕ್ಕುಸ್ವಾಮ್ಯಗಳು, ಪೇಟೆಂಟ್‌ಗಳು ಅಥವಾ ಇತರ ಮಾಲೀಕತ್ವದ ಹಕ್ಕುಗಳು ಅಥವಾ ಮಾಹಿತಿಯಲ್ಲಿ ಯಾವುದೇ ಮಾಲೀಕತ್ವದ ಅಥವಾ ಇತರ ಹಕ್ಕುಗಳನ್ನು ಒದಗಿಸುವುದಿಲ್ಲ, ಹಾಗೆಯೇ ಇತರರು ಹೊಂದಿರುವ ಪೇಟೆಂಟ್ ಹಕ್ಕುಗಳು ಅಥವಾ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಉದ್ದೇಶವನ್ನು ಹೊಂದಿಲ್ಲ. ಈ ಯಾವುದೇ ನಿಯಮಗಳನ್ನು ನೀವು ಉಲ್ಲಂಘಿಸಿದರೆ, ಈ ಸೀಮಿತ ಪರವಾನಗಿಯು ನಿಮಗೆ ಯಾವುದೇ ಸೂಚನೆ ನೀಡದೆ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ಕೊನೆಗೊಂಡ ನಂತರ, ನೀವು ಯಾವುದೇ ಡೌನ್ಲೋಡ್ ಮಾಡಿದ ಮತ್ತು ಮುದ್ರಿತ ವಿಷಯಗಳನ್ನು ತಕ್ಷಣವೇ ನಾಶಪಡಿಸಬೇಕು. ನೀವು ಈ ವೆಬ್‌ಸೈಟ್‌ ಅಥವಾ ಯಾವುದೇ ವಿಷಯಗಳ ಮೇಲೆ ಹಕ್ಕು, ಶೀರ್ಷಿಕೆ, ಅಧಿಕಾರ (ಮತ್ತು ಯಾವುದೇ ಹಕ್ಕುಸ್ವಾಮ್ಯ, ಟ್ರೇಡ್‌ಮಾರ್ಕ್ ಅಥವಾ ಇತರ ಬೌದ್ಧಿಕ ಆಸ್ತಿ ಹಕ್ಕುಗಳಿಲ್ಲ) ಹೊಂದಿಲ್ಲ ಮತ್ತು ಈ ಸೈಟ್ ಹಾಗೂ ಈ ವೆಬ್‌ಸೈಟ್‌ನಲ್ಲಿ ಇರುವ ಅಥವಾ ಇಲ್ಲಿಂದ ಪಡೆಯಬಹುದಾದ ಯಾವುದೇ ವಿಷಯವನ್ನು ಕಂಪನಿಯ ಮುಂದುವರಿದ ಲಿಖಿತ ಅನುಮತಿ ಇಲ್ಲದೆ ಇತರೆ ಯಾವುದೇ ಸರ್ವರ್ ಅಥವಾ ಇಂಟರ್‌ನೆಟ್-ಆಧರಿತ ಸಾಧನಕ್ಕೆ "ಚೌಕಟ್ಟು ನೀಡುವ" ಅಥವಾ "ಪ್ರತಿಬಿಂಬಿಸುವ" ಕೆಲಸ ಮಾಡುವುದಿಲ್ಲ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಈ ಸೈಟ್‌ನ ಕಾರ್ಯಾಚರಣೆಗೆ ಯಾವುದೇ ರೀತಿಯಲ್ಲಿ ಅಡಚಣೆ ಮಾಡುವುದಿಲ್ಲ ಅಥವಾ ಅಡಚಣೆಗೆ ಪ್ರಯತ್ನಿಸುವುದಿಲ್ಲ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಕಾಲಕಾಲಕ್ಕೆ ಅಪ್ಡೇಟ್ ಮಾಡಬಹುದಾದ್ದರಿಂದ, ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಎಲ್ಲಾ ಹೆಚ್ಚುವರಿ ನಿರ್ಬಂಧಗಳನ್ನು ಪಾಲಿಸಲು ನೀವು ಒಪ್ಪುತ್ತೀರಿ.

ಟ್ರೇಡ್‌‌ಮಾರ್ಕ್‌‌ಗಳು

ಎಫ್ಎಂಸಿ, ಎಫ್ಎಂಸಿ ಲೋಗೋ ಮತ್ತು ಎಲ್ಲಾ ಬ್ರ್ಯಾಂಡ್ ಹೆಸರುಗಳು, ಕಂಪನಿಯ ಹೆಸರುಗಳು, ಸೇವಾ ಗುರುತುಗಳು, ಲೋಗೋಗಳು ಮತ್ತು ಕಂಪನಿಯ ಟ್ರೇಡ್ ಡ್ರೆಸ್‌‌ಗಳು ಅಥವಾ ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಅಥವಾ ಪರವಾನಗಿದಾರರು ("ಗುರುತುಗಳು") ಟ್ರೇಡ್‌ಮಾರ್ಕ್‌ಗಳು ಅಥವಾ ಕಂಪನಿಯ ಅಥವಾ ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಅಥವಾ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಲ್ಲಿನ ಪರವಾನಗಿದಾರರ ನೋಂದಾಯಿತ ಟ್ರೇಡ್‌ಮಾರ್ಕ್‌ಗಳು. ಇತರ ಬ್ರ್ಯಾಂಡ್ ಹೆಸರುಗಳು, ಕಂಪನಿಯ ಹೆಸರುಗಳು, ಸೇವಾ ಗುರುತುಗಳು, ಲೋಗೋಗಳು ಮತ್ತು ಟ್ರೇಡ್ ಡ್ರೆಸ್‌ಗಳು ಇತರರ ಟ್ರೇಡ್‌ಮಾರ್ಕ್‌ಗಳು ಅಥವಾ ಸೇವಾ ಗುರುತುಗಳಾಗಿರಬಹುದು. ಈ ನಿಯಮಗಳು, ಷರತ್ತುಗಳು ಮತ್ತು ನಿರ್ಬಂಧಗಳಲ್ಲಿ ಅಧಿಕೃತವಾಗಿರುವಂತೆ ಅಥವಾ ಕಂಪನಿಯಿಂದ ಲಿಖಿತವಾಗಿ ಅಧಿಕೃತವಾಗಿರುವಂತೆ ಈ ವೆಬ್‌ಸೈಟ್‌ನಲ್ಲಿನ ಗುರುತುಗಳ ನಿಮ್ಮ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

©2021 ಎಫ್ಎಂಸಿ ಕಾರ್ಪೋರೇಶನ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಪೇಟೆಂಟ್ ಸ್ಥಾನ

ಉತ್ಪನ್ನವನ್ನು ಇತರ ವಸ್ತುಗಳ ಸಂಯೋಜನೆಯಲ್ಲಿ ಅಥವಾ ಯಾವುದೇ ಪ್ರಕ್ರಿಯೆಯ ಕಾರ್ಯಾಚರಣೆಯಲ್ಲಿ ಬಳಸಿದ ಕಾರಣದಿಂದ ಆದ ಮೂರನೇ ವ್ಯಕ್ತಿಗಳ ಪೇಟೆಂಟ್‌ಗಳ ಉಲ್ಲಂಘನೆಯ ವಿರುದ್ಧ ಎಫ್ಎಂಸಿ ಕಾರ್ಪೋರೇಶನ್ ಸಮರ್ಥನೆ ನೀಡುವುದಿಲ್ಲ; ಅಂತಹ ಯಾವುದೇ ಬಳಕೆ, ಸಂಯೋಜನೆ ಅಥವಾ ಕಾರ್ಯಾಚರಣೆಯ ಕಾರಣದಿಂದ ಆಗುವ ಪೇಟೆಂಟ್ ಉಲ್ಲಂಘನೆಯ ಎಲ್ಲಾ ಅಪಾಯಗಳನ್ನು ಖರೀದಿದಾರರು ಭರಿಸುತ್ತಾರೆ. ಕಂಪನಿಯ ಉತ್ಪನ್ನಗಳಿಗೆ ಸಂಬಂಧಿಸಿದ ಹಲವಾರು ಯುನೈಟೆಡ್ ಸ್ಟೇಟ್ಸ್ ಪೇಟೆಂಟ್‌ಗಳಿಗೆ ಎಫ್ಎಂಸಿ ಕಾರ್ಪೋರೇಶನ್ ಮಾಲೀಕ ಅಥವಾ ಸನ್ನದುದಾರ ಆಗಿದೆ. ಇಲ್ಲಿ ವಿವರಿಸಲಾದ ಎಫ್ಎಂಸಿ ಉತ್ಪನ್ನಗಳು, ಬಾಕಿ ಉಳಿದ ಪೇಟೆಂಟ್ ಅರ್ಜಿಗಳು ಅಥವಾ ಇತರ ದೇಶಗಳಲ್ಲಿನ ಅರ್ಜಿಗಳಿಂದ ಒಂದು ಅಥವಾ ಅದಕ್ಕಿಂತ ಹೆಚ್ಚು ಯುನೈಟೆಡ್ ಸ್ಟೇಟ್ಸ್ ಪೇಟೆಂಟ್‌ ನಿಂದ ಕೂಡಿರಬಹುದು.

ವಾರಂಟಿ

ಫಲಿತಾಂಶಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುವ ಕಾರಣದಿಂದಾಗಿ, ಖರೀದಿದಾರರು ತಮ್ಮ ನಿರ್ದಿಷ್ಟ ಉದ್ದೇಶಕ್ಕಾಗಿ ಈ ಉತ್ಪನ್ನಗಳ ಸೂಕ್ತತೆಯನ್ನು ನಿರ್ಧರಿಸಲು ಸ್ವಂತ ಪರೀಕ್ಷೆಯನ್ನು ಮಾಡುತ್ತಾರೆ ಎಂಬ ತಿಳುವಳಿಕೆಯ ಆಧಾರದಲ್ಲಿ ಎಫ್ಎಂಸಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಬಳಕೆಯ ಅನೇಕ ಸಾಧ್ಯತೆಗಳನ್ನು ಅನ್ವೇಷಿಸಲು ನಮ್ಮ ಗ್ರಾಹಕರಿಗೆ ಸಹಾಯ ಮಾಡುವ ಸಲುವಾಗಿ ಮಾತ್ರ ಎಫ್ಎಂಸಿ ಸೂಚಿಸುವ ಹಲವಾರು ಉಪಯೋಗಗಳನ್ನು ನಮೂದಿಸಲಾಗುತ್ತದೆ. ನೀಡಿರುವ ಎಲ್ಲಾ ಮಾಹಿತಿ ಮತ್ತು ಡೇಟಾ ನಿಖರ ಮತ್ತು ವಿಶ್ವಾಸಾರ್ಹವಾಗಿದೆ ಎಂದು ನಂಬಲಾಗಿದೆ, ಆದರೆ ಎಫ್ಎಂಸಿ ಇದರ ಯಾವುದೇ ಹೊಣೆಗಾರಿಕೆಯನ್ನು ಹೊರುವುದಿಲ್ಲ.

ತಾಂತ್ರಿಕ ಸೇವೆ

ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯು ಸಾಮಾನ್ಯ ಸ್ವರೂಪದ್ದಾಗಿದೆ. ಎಫ್‌ಎಂಸಿ ಪದಾರ್ಥಗಳು ಮತ್ತು ಹೊಸ ಬೆಳವಣಿಗೆಗಳ ನಿರ್ದಿಷ್ಟ ಬಳಕೆಗಳಿಗೆ ಸಂಬಂಧಿಸಿದ ತಂತ್ರಗಳು ಮತ್ತು ಮಾಹಿತಿಯನ್ನು ನಿಯತಕಾಲಿಕವಾಗಿ ಪ್ರಕಟಿಸಲಾಗುತ್ತದೆ.

ವೆಬ್‌ಸೈಟ್‌ನ ಅಂತರಾಷ್ಟ್ರೀಯ ಬಳಕೆ

ಈ ವೆಬ್‌ಸೈಟ್‌ನಲ್ಲಿನ ಯಾವುದೇ ಮಾಹಿತಿಯು ಸೂಕ್ತವಾಗಿದೆ ಅಥವಾ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಹೊರಗೆ ಡೌನ್ಲೋಡ್ ಮಾಡಬಹುದು ಎಂದು ಕಂಪನಿಯು ಯಾವುದೇ ಪ್ರಾತಿನಿಧ್ಯಗಳು ಅಥವಾ ಹಕ್ಕುಗಳನ್ನು ನೀಡುವುದಿಲ್ಲ. ಈ ವೆಬ್‌ಸೈಟ್‌‌ ಮತ್ತು ಈ ವೆಬ್‌ಸೈಟ್‌ನಲ್ಲಿ ಇರುವ ಯಾವುದೇ ಮಾಹಿತಿಗೆ ಪ್ರವೇಶ ಪಡೆಯುವುದು ಕೆಲವು ವ್ಯಕ್ತಿಗಳು ಅಥವಾ ಕೆಲವು ದೇಶಗಳಲ್ಲಿ ಕಾನೂನುಬಾಹಿರ ಆಗಿರಬಹುದು. ನೀವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಹೊರಗಿನಿಂದ ಈ ವೆಬ್‌ಸೈಟ್‌ ಪ್ರವೇಶಿಸಿದರೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಥವಾ ನಿಮ್ಮ ನ್ಯಾಯಾಂಗ ವ್ಯಾಪ್ತಿಯ ಕಾನೂನುಗಳ ಅಡಿಯಲ್ಲಿ ನಿಮ್ಮ ಸ್ವಂತ ಹೊಣೆಗಾರಿಕೆಯ ಅಪಾಯದಲ್ಲಿ ನೀವು ಪ್ರವೇಶಿಸುತ್ತೀರಿ.

ಪರಿಹಾರ ಕಾರ್ಯ

ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿಯ ಸಲ್ಲಿಕೆಗಳು ಮತ್ತು ಅನಧಿಕೃತ ಬಳಕೆಯು ಹಕ್ಕುಸ್ವಾಮ್ಯ ಕಾನೂನುಗಳು, ಟ್ರೇಡ್‌ಮಾರ್ಕ್ ಕಾನೂನುಗಳು, ಗೌಪ್ಯತೆ ಮತ್ತು ಪ್ರಚಾರದ ಕಾನೂನುಗಳು, ಕೆಲವು ಸಂವಹನ ಕಾನೂನುಗಳು ಮತ್ತು ನಿಬಂಧನೆಗಳು ಮತ್ತು ಇತರ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಬಹುದು. ನಿಮ್ಮ ಕೆಲಸಗಳಿಗೆ ಮತ್ತು ನಿಮ್ಮ ಯೂಸರ್‌ನೇಮ್ ಮತ್ತು/ಅಥವಾ ಪಾಸ್ವರ್ಡ್ ಬಳಸುವ ಯಾವುದೇ ವ್ಯಕ್ತಿಯ ಕೆಲಸಗಳಿಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ಅದರಂತೆ, ನೀವು ವೆಬ್‌ಸೈಟ್ ಬಳಸಿರುವುದರಿಂದ ಅಥವಾ ನಿಮ್ಮ ಯೂಸರ್‌ನೇಮ್ ಮತ್ತು/ಅಥವಾ ಪಾಸ್‌ವರ್ಡ್‌ ಬಳಸಿ ಯಾವುದೇ ವ್ಯಕ್ತಿಯು ವೆಬ್‌ಸೈಟ್ ಬಳಸಿರುವುದರಿಂದ ಯಾವುದೇ ಅನ್ವಯವಾಗುವ ಕಾನೂನು, ನಿಬಂಧನೆ ಅಥವಾ ಮೂರನೇ ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯಾದರೆ, ಆ ಕಾರಣದಿಂದ ಆದ, ಅದಕ್ಕೆ ಸಂಬಂಧಿಸಿದ, ಅಥವಾ ಮೂರನೇ ವ್ಯಕ್ತಿಯ ಯಾವುದೇ ಹಕ್ಕು ಅಥವಾ ಬೇಡಿಕೆಯನ್ನು ನಿರಾಕರಿಸಿ ಉಂಟಾದ ಯಾವುದೇ ಮತ್ತು ಎಲ್ಲಾ ವೆಚ್ಚಗಳು, ಹಾನಿಗಳು, ಹೊಣೆಗಾರಿಕೆಗಳು ಮತ್ತು ಖರ್ಚುಗಳಿಂದ (ವಕೀಲರ ಶುಲ್ಕ ಸೇರಿದಂತೆ) ನೀವು ಕಂಪನಿ ಮತ್ತು ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಅಂಗಸಂಸ್ಥೆಗಳು, ಏಜೆಂಟ್‌ಗಳು, ಪರವಾನಗಿದಾರರು ಮತ್ತು ಬಿಸಿನೆಸ್ ಪಾಲುದಾರರನ್ನು ಬಿಡುಗಡೆಗೊಳಿಸುವಿರಿ.

ವಿವಾದಗಳು

ಈ ವೆಬ್‌ಸೈಟ್ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಇರುವ ಕಂಪನಿಯ ಕಾರ್ಪೊರೇಟ್ ಪ್ರಧಾನ ಕಚೇರಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಕಾರ್ಯನಿರ್ವಹಿಸಲ್ಪಡುತ್ತದೆ. ಈ ವೆಬ್‌ಸೈಟ್‌ಗೆ ಸಂಬಂಧಿಸಿದ ಯಾವುದೇ ವಿವಾದಗಳು ಮತ್ತು ಇಲ್ಲಿ ಒಳಗೊಂಡಿರುವ ಮಾಹಿತಿಯು ಪೆನ್ಸಿಲ್ವೇನಿಯಾ ಕಾನೂನಿನಿಂದ (ಕಾನೂನು ತತ್ವಗಳ ಸಂಘರ್ಷಗಳಿಗೆ ಸಂಬಂಧಿಸದಂತೆ) ನಿಯಂತ್ರಿಸಲ್ಪಡುತ್ತದೆ. ಈ ವೆಬ್‌ಸೈಟ್‌ನಿಂದ ಉಂಟಾಗಬಹುದಾದ ಅಥವಾ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು, ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ಸೂಕ್ತ ರಾಜ್ಯ ಅಥವಾ ಫೆಡರಲ್ ನ್ಯಾಯಾಲಯಗಳಲ್ಲಿ ಮಾತ್ರ ಹಾಜರು ಪಡಿಸಬೇಕು.

ಸಂಪೂರ್ಣ ಒಪ್ಪಂದ

ಈ ನಿಯಮಗಳು ಮತ್ತು ಷರತ್ತುಗಳು ಕಂಪನಿ ಮತ್ತು ನಿಮ್ಮ ನಡುವಿನ ಸಂಪೂರ್ಣ ಮತ್ತು ಏಕೈಕ ಒಪ್ಪಂದವನ್ನು ರೂಪಿಸುತ್ತದೆ ಮತ್ತು ಈ ವೆಬ್‌ಸೈಟ್‌ಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲಾ ಹಿಂದಿನ ಅಥವಾ ಸಮಕಾಲೀನ ಒಪ್ಪಂದಗಳು, ಪ್ರಾತಿನಿಧ್ಯಗಳು, ಖಾತರಿಗಳು ಮತ್ತು ತಿಳಿವಳಿಕೆಗಳನ್ನು ಅತಿಕ್ರಮಿಸುತ್ತದೆ.