ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
492014
in | en
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ನಮ್ಮ ಕಥೆ

ಪ್ರಮುಖ ಕೃಷಿ ವಿಜ್ಞಾನ ಕಂಪನಿಯಾಗಿ ವಿಶೇಷವಾಗಿ ಬೆಳೆ ರಕ್ಷಣೆ, ರಾಸಾಯನಿಕ ವಿಜ್ಞಾನ ಮತ್ತು ಅದರ ವಿತರಣೆಗೆ ಮೀಸಲಾಗಿದೆ, ಎಫ್ಎಂಸಿಯು ಬೆಳೆಗಾರರ ಕ್ಷೇತ್ರಗಳನ್ನು ಮತ್ತು ಫಸಲನ್ನು 135 ವರ್ಷಗಳಿಗಿಂತ ಹೆಚ್ಚಿನ ವರ್ಷಗಳಿಂದ ರಕ್ಷಿಸಲು ಸಹಾಯ ಮಾಡಿದೆ. ಮೊದಲ ಪಿಸ್ಟನ್-ಪಂಪ್ ಕೀಟನಾಶಕದ ಸ್ಪ್ರೇಯರ್ ಅನ್ನು ಅಭಿವೃದ್ಧಿಪಡಿಸಿದ ಜಾನ್ ಬೀನ್ ಅವರಿಂದ ಬೀನ್ ಸ್ಪ್ರೇ ಪಂಪ್ ಕಂಪನಿಯಾಗಿ 1883 ರಲ್ಲಿ ಎಫ್ಎಂಸಿಯನ್ನು ಸ್ಥಾಪಿಸಲಾಯಿತು. 1928 ರಲ್ಲಿ ಬೀನ್ ಸ್ಪ್ರೇ ಪಂಪ್ ಇದು ಆಂಡರ್ಸನ್-ಬಾರ್ನ್‌ಗ್ರೋವರ್ ಕಂಪನಿ ಮತ್ತು ಸ್ಪ್ರಾಗ್-ಸೆಲ್ಸ್ ಕಂಪನಿಯನ್ನು ಖರೀದಿಸಿತು ಮತ್ತು ಕಂಪನಿಯ ಹೆಸರನ್ನು ಫುಡ್ ಮಶಿನರಿ ಕಾರ್ಪೊರೇಶನ್ ಆಗಿ ಬದಲಾಯಿಸಿತು. ಹೀಗೆ ಎಫ್ಎಂಸಿ ಹುಟ್ಟಿಕೊಂಡಿತು.

ಶತಮಾನದ ನಂತರವೂ, ವಿಜ್ಞಾನ, ಸುರಕ್ಷತೆ ಮತ್ತು ಸುಸ್ಥಿರತೆಯಲ್ಲಿ ಆಳವಾಗಿ ಹರಡಿಕೊಂಡಿರುವ ವಿಶೇಷವಾದ ನಾವೀನ್ಯತೆಯ ಪರಿಹಾರಗಳು ಮತ್ತು ಅಪ್ಲಿಕೇಶನ್ ವ್ಯವಸ್ಥೆಗಳನ್ನು ನೀಡುವ ಮೂಲಕ ಎಫ್ಎಂಸಿ ಜಾಗತಿಕ ಕೃಷಿ ಮಾರುಕಟ್ಟೆಗಳಿಗೆ ಸೇವೆ ನೀಡುವುದನ್ನು ಮುಂದುವರೆಸುತ್ತಿದೆ. 2015 ರಲ್ಲಿ, ಎಫ್ಎಂಸಿಯು ಡೆನ್ಮಾರ್ಕ್ ಆಧಾರಿತ ಬಹುರಾಷ್ಟ್ರೀಯ ಬೆಳೆ ಪೋಷಣೆ ಕಂಪನಿಯಾದ ಕೆಮಿನೋವಾ ಎ/ಎಸ್ ಅನ್ನು ಸ್ವಾಧೀನಪಡಿಸಿಕೊಂಡಿತು. ಆ ವಹಿವಾಟು ನಮ್ಮ ಕೃಷಿ ಪರಿಹಾರಗಳ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಿತು ಮತ್ತು ನಮ್ಮ ಮಾರುಕಟ್ಟೆ ಪ್ರವೇಶವನ್ನು ಗಮನಾರ್ಹವಾಗಿ ಬಲಪಡಿಸಿತು. 2017 ರಲ್ಲಿ, ಎಫ್ಎಂಸಿ ಡುಪಾಂಟ್‌ನ ಬೆಳೆ ರಕ್ಷಣೆ ಪೋರ್ಟ್‌ಫೋಲಿಯೋದಲ್ಲಿ ಗಮನಾರ್ಹ ಭಾಗವನ್ನು ಪಡೆದುಕೊಂಡಿದೆ, ಎಫ್ಎಂಸಿ ಗ್ರಾಹಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರಿಗೆ ನಮ್ಮ ಭರವಸೆಯನ್ನು ಮತ್ತಷ್ಟು ಬಲಗೊಳಿಸುತ್ತದೆ: ಕೃಷಿಯನ್ನು ಮುಂದುವರಿಸಲು ಸುಧಾರಿತ ರಾಸಾಯನಿಕ ವಿಧಾನ ಅನುಸರಿಸುತ್ತದೆ.

ಎಫ್ಎಂಸಿ ಕಾರ್ಪೊರೇಶನ್ ಜಗತ್ತಿನಾದ್ಯಂತ 6,000 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ನಮ್ಮ 7% ಆದಾಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ, ಎಫ್ಎಂಸಿಯು ಜಾಗತಿಕವಾಗಿ ಹೆಚ್ಚು ಮನ್ನಣೆ ಪಡೆದ ಸಂಶೋಧನೆ ಮತ್ತು ಅಭಿವೃದ್ಧಿ ಪೈಪ್‌ಲೈನ್ ಅನ್ನು ಹೊಂದಿದೆ.

ಮಾರುಕಟ್ಟೆ-ಚಾಲಿತ ತಂತ್ರಜ್ಞಾನಗಳ ಮೇಲೆ ಗಮನಹರಿಸುತ್ತದೆ

ಪ್ರಮುಖ ಕೃಷಿ ವಿಜ್ಞಾನ ಕಂಪನಿಯಾಗಿ, ಗ್ರಾಹಕರ ಅಭಿವೃದ್ಧಿ ಅಗತ್ಯಗಳಿಗೆ ಪ್ರತಿಕ್ರಿಯಿಸಲು ಎಫ್ಎಂಸಿ ಬದ್ಧವಾಗಿದೆ. ವಿಶ್ವದಾದ್ಯಂತ ಸುಸ್ಥಿರ ಕೃಷಿಯನ್ನು ಬೆಂಬಲಿಸುವ ಸುಧಾರಿತ ನಿಖರವಾದ ಕೃಷಿ ತಂತ್ರಜ್ಞಾನಗಳ ಜೊತೆಗೆ ಹೊಸ ಸಕ್ರಿಯ ಪದಾರ್ಥಗಳನ್ನು ಆವಿಷ್ಕಾರ ಮಾಡಲು, ನಾವೀನ್ಯತೆಯ ಸೂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಜೀವಶಾಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಗಮನಾರ್ಹ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಿದ್ದೇವೆ.

ನೀವು ಬೆಳೆ ಬೆಳೆಯಲು ಸಹಾಯ ಮಾಡುವುದಕ್ಕೆ ನಾವು ಇಲ್ಲಿದ್ದೇವೆ

ಇನ್ನೂ ಕೂಡ ರಾಸಾಯನಿಕ ವಿಧಾನ ಮತ್ತು ಅದರ ತಲುಪಿಸುವಿಕೆಯ ಮೇಲೆ ಕೇಂದ್ರೀಕೃತ ಗಮನವನ್ನು ನೀಡುತ್ತಾ, ಉತ್ಪಾದಕತೆ, ಲಾಭದಾಯಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವಲ್ಲಿ ಗ್ರಾಹಕರಿಗೆ ನಂಬಿಕೆ ನೀಡಲು ಭಯರಹಿತ, ಸ್ವತಂತ್ರ, ಸಹಯೋಗಿ ಪಾಲುದಾರರಾಗಿ ಎಫ್ಎಂಸಿಯು ಬೆಳೆ ರಕ್ಷಣೆಯ ವಿಜ್ಞಾನವನ್ನು ಆವಿಷ್ಕರಿಸಿದೆ.

ಸರಳವಾಗಿ ಹೇಳುವುದಾದರೆ, ನಾವು ನಿಮಗೆ ಹೆಚ್ಚು ಸ್ವಾತಂತ್ರ್ಯ ಮತ್ತು ಹೊಂದಾಣಿಕೆಯ ಅನುಕೂಲವನ್ನು ಒದಗಿಸುತ್ತೇವೆ.

ಎಫ್ಎಂಸಿ ಇಂಡಿಯಾ

ಭಾರತದಲ್ಲಿ, ಎಫ್ಎಂಸಿಯು ಪ್ರಮುಖ ಬೆಳೆ ಸಂರಕ್ಷಣಾ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಕೀಟನಾಶಕಗಳ ವಿಭಾಗದಲ್ಲಿ ಪ್ರಮುಖ ಪಾತ್ರ ಹೊಂದಿದೆ. ನಾವು ಬೆಳೆ ರಕ್ಷಣೆ, ಬೆಳೆ ಪೋಷಣೆ ಮತ್ತು ವೃತ್ತಿಪರ ಕೀಟ ನಿರ್ವಹಣೆಗಾಗಿ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಒದಗಿಸುತ್ತೇವೆ. ಅತ್ಯುತ್ತಮ ಮನಸ್ಸುಗಳು ಮತ್ತು ಸಂಪನ್ಮೂಲಗಳೊಂದಿಗೆ, ನಮ್ಮ ಗ್ರಾಹಕರು, ಸಮಾಜ ಮತ್ತು ಪರಿಸರದ ಅಗತ್ಯಗಳನ್ನು ಪೂರೈಸಲು ಪರಿಹಾರಗಳನ್ನು ನೀಡಲು ನಾವು ನಮ್ಮ ಗ್ರಾಹಕರೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತೇವೆ.

ಎಫ್ಎಂಸಿ ಇಂಡಿಯಾವು ಮುಂಬೈನಲ್ಲಿ ಮುಖ್ಯ ಕಾರ್ಯಾಲಯವನ್ನು, ಗುರುಗ್ರಾಮದಲ್ಲಿ ಪ್ರಾದೇಶಿಕ ಕಚೇರಿಯನ್ನು ಹೊಂದಿದೆ. ನಮ್ಮ ಸೂತ್ರೀಕರಣ ತಯಾರಿಕಾ ಸೈಟ್ ಗುಜರಾತ್‌ನ ಸಾವ್ಲಿಯಲ್ಲಿದೆ. ನಾವು ಹೈದರಾಬಾದ್‌ನಲ್ಲಿರುವ ಭಾರತ ನಾವೀನ್ಯತೆ ಕೇಂದ್ರದಲ್ಲಿ ಆವಿಷ್ಕಾರದ ಸಂಶೋಧನಾ ಗುಂಪನ್ನು ಹೊಂದಿದ್ದೇವೆ ಮತ್ತು ಗುಜರಾತ್‌ನ ವಡೋದರಾದಲ್ಲಿ ಎಸ್ಎಎಫ್‌‌ಇಎಸ್ ಅನ್ನು ಹೊಂದಿದ್ದೇವೆ. ~610 ಉದ್ಯೋಗಿ ಶಕ್ತಿಯೊಂದಿಗೆ ನಾವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಇದ್ದೇವೆ ಮತ್ತು ಸುಮಾರು 30 ಬೆಳೆಗಳಿಗೆ ಪರಿಹಾರಗಳನ್ನು ಒದಗಿಸುತ್ತೇವೆ.

ನಾವು ಸುಸ್ಥಿರತೆಗೆ ಬದ್ಧರಾಗಿದ್ದೇವೆ