ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಗೆಜೆಕೋ® ಶಿಲೀಂಧ್ರನಾಶಕ

ಗೆಜೆಕೋ® ಶಿಲೀಂಧ್ರನಾಶಕ, ಒಂದು ವಿಶಾಲ ವ್ಯಾಪ್ತಿಯ ಶಿಲೀಂಧ್ರನಾಶಕವಾಗಿದ್ದು ಗುಣಮಟ್ಟದ ಇಳುವರಿಯನ್ನು ನೀಡುವಲ್ಲಿ ಗಮನ ಹರಿಸುವ ಕಾರಣದಿಂದ ರೋಗಗಳ ವಿರುದ್ಧ ರಕ್ಷಣಾತ್ಮಕ ಕ್ರಮವನ್ನು ಒದಗಿಸುತ್ತದೆ. ಈ ಉತ್ಪನ್ನವು ರೋಗದ ನಿಯಂತ್ರಣವನ್ನು ಮಾತ್ರವಲ್ಲದೆ ಬಹು ಬೆಳೆಯ ಲೇಬಲ್‌ಗಳೊಂದಿಗೆ ಆರೋಗ್ಯವನ್ನು ಸ್ಥಾಪಿಸಲು ಉತ್ತಮ ಕೊಡುಗೆ ನೀಡುತ್ತದೆ ಮತ್ತು ಜಾಗತಿಕವಾಗಿ ಪ್ರಮುಖ ಬೆಳೆಗಳಿಗಾಗಿ ಎಂಆರ್‌ಎಲ್‌ಗಳನ್ನು ಸ್ಥಾಪಿಸಿದೆ.

ಸ್ಟ್ರೋಬ್ಯುಲಿರಿನ್ ಮತ್ತು ಟ್ರಯಾಜೋಲ್ ರಾಸಾಯನಿಕದ ವಿಶಿಷ್ಟ ಸಂಯೋಜನೆಯು ಪರಿಣಾಮಕಾರಿ ಮತ್ತು ದೀರ್ಘಾವಧಿಯ ರೋಗ ನಿರ್ವಹಣೆಗಾಗಿ ಇದನ್ನು ಹೆಚ್ಚು ವಿಶ್ವಾಸಾರ್ಹ ಆಯ್ಕೆಯನ್ನಾಗಿಸಿದೆ. ಗೆಜೆಕೋ® ಶಿಲೀಂಧ್ರನಾಶಕ ಇದನ್ನು ಸರಿಯಾದ ಸಮಯಕ್ಕೆ ಬಳಸುವುದರಿಂದ ಸಸ್ಯಗಳನ್ನು ಶಿಲೀಂಧ್ರ ಧಾಳಿಯಿಂದ ರಕ್ಷಿಸುತ್ತದೆ ಮತ್ತು ಶಿಲೀಂಧ್ರದ ಹೆಚ್ಚಿನ ಬೆಳವಣಿಗೆಯನ್ನು ಕೂಡ ಪರಿಶೀಲಿಸುತ್ತದೆ.

ತ್ವರಿತ ವಿವರಣೆಯ ವಿಷಯಗಳು

 • ಶಿಲೀಂಧ್ರದ ವಿರುದ್ಧ ಅತ್ಯುತ್ತಮ ರಕ್ಷಣಾತ್ಮಕ ಚಟುವಟಿಕೆಯೊಂದಿಗೆ ಎರಡು ವಿಭಿನ್ನ ಆಧುನಿಕ ವಿಧಾನಗಳ ಕ್ರಿಯೆಯ ಅಣುಗಳ ಸಂಯೋಜನೆ
 • ಟ್ರಿಫ್ಲಾಕ್ಸಿಸ್ಟ್ರೋಬಿನ್ ತಾಂತ್ರಿಕತೆಯು ಶಿಲೀಂಧ್ರಗಳ ಉಸಿರಾಟದ ಚಕ್ರಕ್ಕೆ ಅಡ್ಡಿಪಡಿಸುತ್ತದೆ ಮತ್ತು ಶಿಲೀಂಧ್ರ ಕೋಶ ಗೋಡೆಯ ರಚನೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಟೆಬುಕೊನಜೋಲ್ ಭಾಗಿಯಾಗುತ್ತದೆ
 • ಗೆಜೆಕೋ® ಶಿಲೀಂಧ್ರನಾಶಕ ಬೆಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಬೆಳೆಯನ್ನು ಉತ್ತಮ ಹಸಿರು ಪರಿಣಾಮದೊಂದಿಗೆ ಸೂಕ್ತವಾಗಿರಿಸುತ್ತದೆ ಮತ್ತು ಗುಣಮಟ್ಟದ ಉತ್ದಾದನೆಗಾಗಿ ಬಲವಾದ ವೇದಿಕೆಯನ್ನು ನೀಡುತ್ತದೆ
 • ಮೆಸೊಸ್ಟೆಮಿಕ್ ಕ್ರಿಯೆಯನ್ನು (ಉತ್ತಮ ಪ್ರವೇಶ ಮತ್ತು ಮರು-ವಿತರಣೆ) ಅನ್ನು ಪ್ರದರ್ಶಿಸುತ್ತದೆ, ಇದು ಹೆಚ್ಚು ವಿಶ್ವಾಸಾರ್ಹ ನಿಯಂತ್ರಣ, ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದಲ್ಲಿ ಕಟಾವು ಮಾಡಲಾದ ಧಾನ್ಯ ಮತ್ತು ಹಣ್ಣುಗಳನ್ನು ಒದಗಿಸುತ್ತದೆ
 • ರಕ್ಷಣಾತ್ಮಕ ಬಳಕೆಯೊಂದಿಗೆ ಅತ್ಯುತ್ತಮ ದಕ್ಷತೆಯನ್ನು ಸಾಧಿಸಬಹುದು

ಸಕ್ರಿಯ ಪದಾರ್ಥಗಳು

 • ಟೆಬುಕೋನಾಜೋಲ್‌ 50%
 • ಟ್ರಿಫ್ಲಾಕ್ಸಿಸ್ಟ್ರೋಬಿನ್ 25% ಡಬ್ಲ್ಯೂಜಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಬೆಂಬಲಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ರೈತರು ಸಾಮಾನ್ಯವಾಗಿ ರೋಗದ ಸಮಸ್ಯೆಗಳಿಗೆ ಸಮಗ್ರ, ವೆಚ್ಚ ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ದೀರ್ಘಾವಧಿಯ ನಿರಂತರ ಪರಿಹಾರವನ್ನು ಹುಡುಕುತ್ತಾರೆ. ಗೆಜೆಕೋ® ಶಿಲೀಂಧ್ರನಾಶಕ ಅದರ ಎರಡು ವಿಶಿಷ್ಟ ವಿಧಾನಗಳ ವಿಶೇಷ ಕ್ರಿಯಾತ್ಮಕ ಅಣುಗಳ ಸಂಯೋಜನೆಯೊಂದಿಗೆ ಎಲೆಕವಚ ಅಂಗಮಾರಿ ರೋಗ, ಪೈರು ಕೊಳೆ, ಬೂದಿ ರೋಗ, ಆರಂಭಿಕ ಅಂಗಮಾರಿ ರೋಗ, ಪಕ್ಷಿ ಕಣ್ಣು ಎಲೆಚುಕ್ಕೆ ರೋಗ, ಹಳದಿ ತುಕ್ಕು ಮುಂತಾದ ಪ್ರಮುಖ ರೋಗಗಳ ವಿರುದ್ಧ ಉತ್ತಮ ದಕ್ಷತೆಯನ್ನು ತೋರಿಸುತ್ತದೆ. ಎರಡು ವಿಧದಲ್ಲಿ ಪರಿಣಾಮಕಾರಿ ಕ್ರಿಯೆಯನ್ನು ನೀಡುವ ಎಫ್ಆರ್‌‌ಎಸಿ (3 + 11) ಗುಂಪಿನ ಅಣುಗಳು ಆರ್ಥಿಕವಾಗಿ ತೊಂದರೆಗೊಳಗಾದ ಭತ್ತ, ಗೋಧಿ ಮತ್ತು ಪ್ರಮುಖ ಎಫ್ ಮತ್ತು ವಿ ಬೆಳೆಗಳಲ್ಲಿ ಅಧಿಕವಾಗಿ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ನಿಯಂತ್ರಣವನ್ನು ತರುತ್ತವೆ. ಗೆಜೆಕೋ® ಶಿಲೀಂಧ್ರನಾಶಕ ಅತ್ಯುತ್ತಮ ಬೆಳೆ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಅಪೇಕ್ಷಣೀಯ ಶಾರೀರಿಕ ಪ್ರಯೋಜನಗಳನ್ನು ನೀಡುತ್ತದೆ. ಬೆಳೆ ಇಳುವರಿ ಮತ್ತು ಕೊಯ್ಲು ಮಾಡಿದ ಧಾನ್ಯಗಳ ಗುಣಮಟ್ಟದ ಮೇಲೆ ಪ್ರಯೋಜನಕಾರಿ ಪರಿಣಾಮಗಳ ಜೊತೆಗೆ ದೀರ್ಘಕಾಲೀನ, ಹವಾಮಾನ- ರಕ್ಷಣಾತ್ಮಕ ರೋಗ ನಿಯಂತ್ರಣವನ್ನು ಒದಗಿಸುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

 • ಭತ್ತ
 • ಒಣಮೆಣಸು
 • ಟೊಮ್ಯಾಟೋ
 • ಗೋಧಿ
 • ಸೇಬು
 • ನೆಲಕಡಲೆ
 • ಟೀ