ಎಫ್ಎಂಸಿಯು ಸುರಕ್ಷಿತ ಮತ್ತು ಸುಭದ್ರ ಆಹಾರ ಪೂರೈಕೆಯನ್ನು ನಿರ್ವಹಿಸಲು ಸಹಾಯ ಮಾಡುವ ಮಾತ್ರವಲ್ಲದೆ, ಭೂಮಿಯ ಮೇಲೆ ಕನಿಷ್ಠ ಪರಿಣಾಮ ಬೀರುವ ಉತ್ಪನ್ನಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ರೈತರ ಉತ್ಪಾದಕತೆ ಮತ್ತು ಸಮೃದ್ಧಿಯನ್ನು ಸುಸ್ಥಿರವಾಗಿ ಹೆಚ್ಚಿಸುವ ನವೀನ ಪರಿಹಾರಗಳ ಮೂಲಕ, ನಾವು ಭಾರತದಲ್ಲಿ ಕೃಷಿ ಆಧರಿತ ಆರ್ಥಿಕ ಬೆಳವಣಿಗೆಗೆ ಬದ್ಧರಾಗಿದ್ದೇವೆ. ನಾವು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳೀಯ ಸಮುದಾಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಜೊತೆಗೆ, ನಮ್ಮ ಉತ್ಪನ್ನಗಳ ಜವಾಬ್ದಾರಿಯುತ ಬಳಕೆಯನ್ನು ಸಹ ನಿರ್ವಹಿಸುತ್ತಿದ್ದೇವೆ.
ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸಲು, ನಮಗೆ ನಾವೇ ಸವಾಲೊಡ್ಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ನಮ್ಮ ಗ್ರಾಹಕರು, ಮಾರಾಟಗಾರರು, ರೈತರು ಮತ್ತು ಸ್ಥಳೀಯ ಸಮುದಾಯದೊಂದಿಗೆ ಸುಸ್ಥಿರತೆಯ ಗುರಿಗಳನ್ನು ಎಫ್ಎಂಸಿ ಹೊಂದಿದೆ. ಹಲವಾರು ವರ್ಷಗಳಿಂದ ನಮ್ಮ ನಾವೀನ್ಯತೆ, ಸುರಕ್ಷತೆ ಮತ್ತು, ಸಮುದಾಯ ತೊಡಗುವಿಕೆ ಮತ್ತು ಪರಿಸರ ಸಂರಕ್ಷಣೆ ಗುರಿಗಳ ವಿಷಯದಲ್ಲಿ ನಾವು ಸಾಧಿಸಿದ ಪ್ರಗತಿಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ.