ಲೇಬಲ್ ಪ್ರಕಾರ ಉತ್ಪನ್ನವನ್ನು ನೋಡಿ
ಉತ್ಪನ್ನದ ಹೆಸರು ಅಥವಾ ಬ್ರ್ಯಾಂಡ್ ಮೂಲಕ ಹುಡುಕಿ
ಉತ್ಪನ್ನದ ವರ್ಗಗಳು
ನಿಮ್ಮ ಬೆಳೆಯ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಸರಿಯಾದ ಪರಿಹಾರವನ್ನು ಹುಡುಕಿ.
ಕೀಟನಾಶಕಗಳು
ರೈನಾಕ್ಸಿಪೈರ್ ®ಮತ್ತು ಸೈಜೈಪರ್® ಸಕ್ರಿಯ ಅಂಶಗಳ ನೂತನ ತಂತ್ರಜ್ಞಾನಗಳ ಆಧಾರದ ಕೆಲವು ಪ್ರಮುಖ ಕೀಟ ನಿಯಂತ್ರಣ ಉತ್ಪನ್ನಗಳನ್ನು ಒಳಗೊಂಡ ಸದೃಢ ಕೀಟನಾಶಕಗಳ ಪೋರ್ಟ್‌ಫೋಲಿಯೋ ಜೊತೆಗೆ ಎಫ್ಎಂಸಿ ರೈತರಿಗೆ ನವೀನ ಪರಿಹಾರಗಳನ್ನು ಒದಗಿಸುತ್ತದೆ. ಉತ್ತಮ ನಿಯಂತ್ರಣಕ್ಕಾಗಿ, ನವೀನ ರಸಾಯನಶಾಸ್ತ್ರವನ್ನು ಒಳಗೊಂಡ ನಮ್ಮ ಕೀಟನಾಶಕದ ಕೊಡುಗೆಗಳನ್ನು ಪರಿಶೀಲಿಸಿ.
ಕಳೆನಾಶಕಗಳು
ನಮ್ಮ ಕಳೆನಾಶಕಗಳ ಪೋರ್ಟ್‌ಫೋಲಿಯೋ ಕಳೆ ಹುಟ್ಟುವ ಮೊದಲು ಮತ್ತು ಕಳೆ ಹುಟ್ಟಿದ ನಂತರ ಅವುಗಳನ್ನು ನಾಶಪಡಿಸುವ ನೂತನ ಕಳೆನಾಶಕಗಳನ್ನು ಒದಗಿಸುತ್ತದೆ, ಇದು ನಿಮಗೆ ವಿಶಾಲ ವ್ಯಾಪ್ತಿಯ ಕಳೆ ನಿಯಂತ್ರಣವನ್ನು ನೀಡುತ್ತದೆ ಮತ್ತು ವಿಶಾಲ ಪ್ರಕಾರದ ಬೆಳೆಗಳಲ್ಲಿ ಕಾಣಿಸುವ ಅಗಲ ಎಲೆಯ ಕಳೆಗಳು, ಹುಲ್ಲುಗಳು ಮತ್ತು ಜೇಕುಗಳಂತಹ ಅತ್ಯಂತ ಪ್ರತಿರೋಧಕ ಮತ್ತು ಕೊಲ್ಲಲು ಕಠಿಣವಾದ ಕಳೆಗಳನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.
ಶಿಲೀಂಧ್ರನಾಶಕಗಳು
ಎಫ್ಎಂಸಿಯ ಶಿಲೀಂಧ್ರನಾಶಕಗಳ ಕೊಡುಗೆಗಳು ಭತ್ತದ ಎಲೆ ಕವಚ ಅಂಗಮಾರಿ ರೋಗ ಮತ್ತು ಹಣ್ಣು ಮತ್ತು ತರಕಾರಿಗಳ ಓಮೈಸೀಟ್ಸ್ ಹಾಗೂ ಅಸ್ಕೊಮೈಸೆಟ್ಸ್ ರೀತಿಯ ಅತ್ಯಂತ ನಿರ್ಣಾಯಕ ರೋಗಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಅಣು ರೂಪದ ಪರಿಹಾರಗಳನ್ನು ಒದಗಿಸುತ್ತವೆ. ನಾವು ನೂತನ ಮತ್ತು ನಮ್ಮ ಗ್ರಾಹಕರಿಗೆ ಮತ್ತು ಸಮುದಾಯಕ್ಕೆ ಸುಸ್ಥಿರ ಪರಿಹಾರಗಳನ್ನು ಒದಗಿಸುವ ಉತ್ಪನ್ನಗಳನ್ನು ತಲುಪಿಸುವ ಕಡೆ ಗಮನಹರಿಸುತ್ತೇವೆ.
ಬೆಳೆ ಪೋಷಣೆ
ತೃಪ್ತಿಕರ ಬೆಳವಣಿಗೆ ಮತ್ತು ಗುಣಮಟ್ಟದ ಇಳುವರಿಗೆ ಬೆಳೆಗಳಿಗೆ ಪೋಷಕಾಂಶಗಳ ಅಗತ್ಯವಿದೆ. ಪ್ರತಿಯೊಂದು ಪೋಷಕಾಂಶದ ಅತ್ಯುತ್ತಮ ಸಮತೋಲನವು ಸಮಗ್ರ ಪೋಷಕಾಂಶ ನಿರ್ವಹಣೆಗೆ (ಐಎನ್ಎಂ) ಪ್ರಮುಖವಾಗಿದೆ. ಸೂಕ್ಷ್ಮ ಪೋಷಕಾಂಶಗಳು ಮತ್ತು ಸಸ್ಯ ಬೆಳವಣಿಗೆ ನಿಯಂತ್ರಕಗಳು ಎಫ್ಎಂಸಿ ಬೆಳೆ ಪೋಷಕಾಂಶ ವಿಭಾಗದಲ್ಲಿ ಪ್ರಮುಖವಾಗಿವೆ, ಇದು ರೈತರಿಗೆ ಸಮೃದ್ಧ ಇಳುವರಿ ಪಡೆಯಲು ಅತ್ಯುತ್ತಮ ಸೂತ್ರೀಕರಣವನ್ನು ನೀಡಲು ಸಹಾಯ ಮಾಡುತ್ತದೆ.
ಜೈವಿಕ ಪರಿಹಾರಗಳು
ಬೆಳೆ ಉತ್ಪಾದಕತೆಯ ಸವಾಲುಗಳನ್ನು ಪರಿಹರಿಸಲು ಜೈವಿಕ ಸಂಪನ್ಮೂಲವು ಮುಖ್ಯವಾಗಿದೆ. ನೈಸರ್ಗಿಕ ಸಾರಗಳು, ಆಮ್ಲ ಆಧಾರಿತ ಜೈವಿಕ-ಉತ್ತೇಜನಗಳು, ಸೂಕ್ಷ್ಮಾಣು ಜೀವಿಯ-ತಳಿಗಳು, ಬ್ಯಾಕ್ಟೀರಿಯಾ, ಶಿಲೀಂಧ್ರ ಇತ್ಯಾದಿಗಳು ಎಫ್ಎಂಸಿಯಲ್ಲಿ ಜೈವಿಕ ಪರಿಹಾರಗಳ ಭವಿಷ್ಯವಾಗಿವೆ. ಜೈವಿಕ-ಪರಿಹಾರಗಳ ಬಲವಾದ ಪೈಪ್‌ಲೈನ್ ಮುಂಬರುವ ದಿನಗಳಲ್ಲಿ ನಮಗೆ ಆಧುನಿಕತೆಯನ್ನು ನೀಡುತ್ತದೆ.
ಬೀಜೋಪಚಾರ
ಸಮೃದ್ಧ ಇಳುವರಿಯು ಆರೋಗ್ಯಕರ ಬೀಜಗಳೊಂದಿಗೆ ಪ್ರಾರಂಭವಾಗುತ್ತದೆ. ಬೀಜೋಪಚಾರವು ಪ್ರಾರಂಭಿಕ ಹಂತಗಳಲ್ಲಿ ಕೀಟ ಮತ್ತು ರೋಗ ಬಾಧೆಯ ವಿರುದ್ಧ ಕವಚವಾಗಿ ಕಾರ್ಯನಿರ್ವಹಿಸುತ್ತದೆ.