ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಭಾರತದಲ್ಲಿ ಕೃಷಿ ಕ್ಷೇತ್ರದತ್ತ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಎಫ್ಎಂಸಿ ಇಂಡಿಯಾ ಬದ್ಧವಾಗಿದೆ ಮತ್ತು ಈ ದಿಕ್ಕಿನಲ್ಲಿ, ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮ ವನ್ನು ಪರಿಚಯಿಸಲು ನಮಗೆ ಸಂತೋಷವಾಗುತ್ತಿದೆ.

ಕೃಷಿ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳ ಆಗಮನದ ಅಗತ್ಯವಿದೆ. ದುರದೃಷ್ಟವಶಾತ್, ಇತರ ವಲಯಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತಿರುವುದರಿಂದ, ದೇಶದ ಯುವ ಜನತೆ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಕೃಷಿ ವಿಜ್ಞಾನ ವಿಭಾಗ ಆಯ್ಕೆ ಮಾಡುವುದರಿಂದ ದೂರ ಸರಿದಿದ್ದಾರೆ. ಮತ್ತೊಂದೆಡೆ, ಕೃಷಿ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ವ್ಯವಸ್ಥೆಯಲ್ಲಿ ಸಾಮರ್ಥ್ಯವನ್ನು ನಿರ್ಮಿಸುವುದು ಅವಶ್ಯಕವಾಗಿದೆ. ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮವು ಕ್ಷೇತ್ರದಲ್ಲಿ ಸುಧಾರಣೆಯನ್ನು ನಿರ್ಮಿಸಲು ಕೃಷಿ ವಿಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಾಮರ್ಥ್ಯ ಬೆಳೆಸುವ ಪ್ರಯತ್ನವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ಎಫ್ಎಂಸಿಯ ಕಾರ್ಯಕ್ರಮವು ಕೃಷಿ ಸಂಶೋಧನಾ ವ್ಯವಸ್ಥೆಯೊಳಗೆ ಪ್ರತಿಭೆಗಳು ಬೆಳೆಯಲು ಬೆಂಬಲ ನೀಡುತ್ತದೆ. ಈ ಕಾರ್ಯಕ್ರಮವು ಕೃಷಿ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುತ್ತದೆ ಮತ್ತು ಸ್ನಾತಕೋತ್ತರ ಅಥವಾ ಪಿಎಚ್‌ಡಿ ಕಾರ್ಯಕ್ರಮ ಪದವಿಗೆ ಸಂಪೂರ್ಣ ಧನಸಹಾಯ ಮಾಡುತ್ತದೆ. ಎಫ್ಎಂಸಿ ಆಯ್ದ ಅಭ್ಯರ್ಥಿಗಳಿಗೆ ಅಗತ್ಯವಾದ ಉದ್ಯಮ ಅನುಭವ ಮತ್ತು ಮಾರ್ಗದರ್ಶನವನ್ನು ಒದಗಿಸುವ ಮೂಲಕ, ಪದವಿ ಪೂರ್ಣಗೊಳಿಸಿದ ನಂತರ ಅವರು ಉನ್ನತ ಮಟ್ಟದಲ್ಲಿ ಕೊಡುಗೆ ನೀಡುವಂತೆ ಮಾಡುತ್ತದೆ.

ಬೆಂಬಲಿತ ಅಭ್ಯರ್ಥಿಗಳು ಬಯಸಿದರೆ, ಭವಿಷ್ಯದಲ್ಲಿ ಎಫ್ಎಂಸಿಯಲ್ಲಿ ತೆರೆದುಕೊಳ್ಳುವ ಅಗತ್ಯ ಸ್ಥಾನಗಳ ಮೇಲಿನ ಎಫ್ಎಂಸಿ ನೇಮಕಾತಿಯಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಯು ಕೃಷಿಯಲ್ಲಿ ಮಹಿಳೆಯರಿಗೆ ಬೆಂಬಲ ನೀಡುವ ಗುರಿಯನ್ನು ಪ್ರೋತ್ಸಾಹಿಸಲು ಮಹಿಳಾ ಅಭ್ಯರ್ಥಿಗಳಿಗೆ 50% ಸ್ಥಾನ ಹಂಚಿಕೆ ಮಾಡುತ್ತದೆ.

FMC India is committed to attracting and developing talent in Agriculture in India.