ಸುಸ್ಥಿರತೆಯು ನಮ್ಮ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ. ಎಫ್ಎಂಸಿ, ಜಾಗತಿಕವಾಗಿ ಮತ್ತು ಭಾರತದಲ್ಲಿ ಯಾವಾಗಲೂ ತನ್ನ ಆಂತರಿಕ ಮತ್ತು ಬಾಹ್ಯ ಪಾಲುದಾರರ ಕಡೆಗೆ ಇರುವ ತನ್ನ ಜವಾಬ್ದಾರಿಯ ಮೇಲೆ ಗಮನ ಹರಿಸುತ್ತದೆ. ಸಂಸ್ಥೆಯ ಒಳಗೆ ಮತ್ತು ಹೊರಗೆ, ನಾವು ಕೆಲಸ ಮಾಡುವ ಸಮುದಾಯಗಳೊಂದಿಗೆ ಆಳವಾದ ತೊಡಗುವಿಕೆ, ಜಾಗೃತಿ ಮತ್ತು ವಿಶ್ವಾಸದ ಮೂಲಕ ನಮ್ಮ ಸುಸ್ಥಿರತೆಯ ಪ್ರಯತ್ನಗಳನ್ನು ನಿರಂತರವಾಗಿ ನಿರ್ಮಿಸುತ್ತಿದ್ದೇವೆ.
ಎಫ್ಎಂಸಿ ಗಮನಹರಿಸುವ ಪ್ರಮುಖ ಅಂಶಗಳಲ್ಲಿ, ''ಸರಿಯಾದ ಮತ್ತು ಪ್ರಜ್ಞಾಪೂರ್ವಕ ಸಂಪನ್ಮೂಲ ಸಂರಕ್ಷಣೆ'' ಒಂದಾಗಿದೆ”. ನಮ್ಮ ಉತ್ಪಾದನಾ ಘಟಕಗಳಲ್ಲಿ ಒಂದಾದ ಗುಜರಾತ್‌ನ ಪನೋಲಿ ಘಟಕವು, ಡಿಸ್ಕಾಮ್ (ವಿತರಣಾ ಕಂಪನಿ), ಗೆಟ್ಕೋ (ಗುಜರಾತ್ ಇಂಧನ ಪ್ರಸರಣ ಕಾರ್ಪೊರೇಶನ್ ಲಿಮಿಟೆಡ್) ಮತ್ತು ಗೇಡಾ (ಗುಜರಾತ್ ಇಂಧನ ಅಭಿವೃದ್ಧಿ ಸಂಸ್ಥೆ) ನಡುವಿನ ಸೌರಶಕ್ತಿ ಒಪ್ಪಂದದ ಅಡಿಯಲ್ಲಿ50 ಮೆಗಾವ್ಯಾಟ್ ಸ್ಥಾವರದಿಂದ ಸೌರಶಕ್ತಿಯನ್ನು ಪಡೆಯಲು ಯಶಸ್ವಿಯಾಗಿದೆ ಎಂಬುದನ್ನು ಹಂಚಿಕೊಳ್ಳಲು ನಮಗೆ ಹೆಮ್ಮೆ ಆಗುತ್ತಿದೆ. ಸೌರ ಶಕ್ತಿಯನ್ನು ಬಳಸುವ ಮೂಲಕ, ಪನೋಲಿಯಲ್ಲಿರುವ ಒಂದು ಘಟಕವು ಶೂನ್ಯ ಜಿಎಚ್‌ಜಿ ಹೊರಸೂಸುವಿಕೆಯನ್ನು ಹೊಂದಿದೆ. ಇದು ಸಂಪೂರ್ಣ ಘಟಕಕ್ಕೆ ಜಿಎಚ್‌ಜಿಯಲ್ಲಿ 10% ಕಡಿತದ ವಾರ್ಷಿಕ ಪ್ರಯೋಜನವನ್ನು ಪಡೆಯಲು ಕಾರಣವಾಗಿದೆ. ಇದು ನಮ್ಮ ಇಂಗಾಲದ ಬಿಡುಗಡೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ನಮ್ಮ ಸುಸ್ಥಿರತೆಯ ಗುರಿಗಳಿಗೆ ಕೊಡುಗೆ ನೀಡಲು, ಹಾಗೂ ಸೌರ ಶಕ್ತಿಯು ಸುಸ್ಥಿರ ಶಕ್ತಿಯ ರೂಪವಾಗಿರುವುದರಿಂದ ವೆಚ್ಚಗಳನ್ನು ಉಳಿಸಲು ಸಹಾಯ ಮಾಡುತ್ತದೆ.