ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಏಷ್ಯಾದಲ್ಲಿ, ಅದರಲ್ಲೂ ವಿಶೇಷವಾಗಿ ಭಾರತದ ಕೃಷಿಯಲ್ಲಿ ಮಹಿಳೆಯರು ಅಸಾಧಾರಣ ಚಾಲನಾ ಶಕ್ತಿಯಾಗಿದ್ದಾರೆ. ಗ್ರಾಮೀಣ ಭಾರತದಲ್ಲಿ, ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು 84% ರಷ್ಟಿದೆ. ಸುಮಾರು 33% ರೈತರು ಮತ್ತು 47% ಕೃಷಿ ಕಾರ್ಮಿಕರು ಮಹಿಳೆಯರಾಗಿದ್ದಾರೆ (ಹೈನುಗಾರಿಕೆ, ಮೀನುಗಾರಿಕೆ ಮತ್ತು ದೇಶದಲ್ಲಿನ ಇತರ ಪೂರಕ ಆಹಾರ ಉತ್ಪಾದನೆಯ ವಿಧಗಳನ್ನು ಹೊರತುಪಡಿಸಿ). 2009 ರಲ್ಲಿ, 94% ಬೆಳೆ ಬೆಳೆಯುವ ಮಹಿಳಾ ಕೃಷಿ ಕಾರ್ಮಿಕ ಶಕ್ತಿಯು ಏಕದಳ ಧಾನ್ಯ ಉತ್ಪಾದನೆಯಲ್ಲಿತ್ತು.

ಕಾರ್ಮಿಕ ಶಕ್ತಿಯಲ್ಲಿ ತಮ್ಮ ಪ್ರಾಬಲ್ಯದ ಹೊರತಾಗಿಯೂ, ಭಾರತದಲ್ಲಿ ಮಹಿಳೆಯರು ವೇತನ, ಭೂಮಿ ಹಕ್ಕುಗಳು ಮತ್ತು ಸ್ಥಳೀಯ ರೈತ ಸಂಘಟನೆಗಳ ಪ್ರಾತಿನಿಧ್ಯದ ವಿಷಯದಲ್ಲಿ ತೀವ್ರ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅವರ ಸಬಲೀಕರಣದ ಕೊರತೆಯು ಅವರ ಮಕ್ಕಳ ಕಡಿಮೆ ಶೈಕ್ಷಣಿಕ ಸಾಧನೆ ಮತ್ತು ಕಳಪೆ ಕೌಟುಂಬಿಕ ಆರೋಗ್ಯದಂತಹ ನಕಾರಾತ್ಮಕ ಬಾಹ್ಯ ಪರಿಣಾಮಗಳಿಗೆ ಕಾರಣವಾಗುತ್ತದೆ.

ಮೇಲಿನವುಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಕೃಷಿಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅವರಲ್ಲಿ ಸಾಮರ್ಥ್ಯ ಹೆಚ್ಚಿಸಲು ಎಫ್ಎಂಸಿ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ.