ಕೃಷಿಗೆ ಸಂಬಂಧಿಸಿದಂತೆ ಭಾರತದಲ್ಲಿ 80%ಕ್ಕಿಂತ ಅಧಿಕ ಮೇಲ್ಮೈ ನೀರನ್ನು ಬಳಸಲಾಗುತ್ತದೆ*, ಇದು ನಿರಂತರವಾಗಿ ಅಂತರ್ಜಲ ಕ್ಷೀಣಿಸಲು ಕಾರಣವಾಗುತ್ತದೆ. ಕುಡಿಯುವ ನೀರಿನ ಗುಣಮಟ್ಟ ಕುಸಿತ ಗ್ರಾಮೀಣ ಪ್ರದೇಶದ ಇನ್ನೊಂದು ಪ್ರಮುಖ ಕಳಕಳಿಯಾಗಿದೆ. ನೀರಿನ ನಿರ್ವಹಣೆ ಸಮಸ್ಯೆಗಳ ಬಗ್ಗೆ ಪಾಲುದಾರರ ಸಂವೇದನೆಯನ್ನು ಹೆಚ್ಚಿಸಲು ಎಫ್ಎಂಸಿ ಇಂಡಿಯಾ ತನ್ನ ಪ್ರಯತ್ನಕ್ಕೆ ಬದ್ಧವಾಗಿದೆ. ಇದು ನೀರಿನ ಬಳಕೆಯನ್ನು ಉತ್ತಮಗೊಳಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಸುಧಾರಿಸಲು ದಕ್ಷ ಮತ್ತು ಸುಸ್ಥಿರ ವಿಧಾನಗಳನ್ನು ಉತ್ತೇಜಿಸುತ್ತದೆ.
ಅದರ ಬಹು-ವರ್ಷದ ಕಾರ್ಯಕ್ರಮ - ಸಮರ್ಥ್ ಮೂಲಕ, ಎಫ್‌ಎಂಸಿ ಇಂಡಿಯಾವು ಗ್ರಾಮೀಣ ಸಮುದಾಯಗಳನ್ನು ನೀರಿನ ನಿರ್ವಹಣೆಯ ಮೂಲಕ ಸಬಲೀಕರಣಗೊಳಿಸುತ್ತಿದೆ, ಇದು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ''ಸಮರ್ಥ್' ಎಂಬುದು ಹಿಂದಿ ಪದವಾಗಿದ್ದು ಅದರರ್ಥ ಸಬಲೀಕರಣವಾಗಿದೆ. ಕಾರ್ಯಕ್ರಮದ 3 ಮುಖ್ಯ ವಿಷಯಗಳು - ನೀರಿನ ಆರೋಗ್ಯ, ನೀರಿನ ಸಂರಕ್ಷಣೆ ಮತ್ತು ಪ್ರತಿ ಹನಿಯೊಂದಿಗೆ ಹೆಚ್ಚಿನ ಬೆಳೆ.
ಪ್ರಾಜೆಕ್ಟ್ ಸಮರ್ಥ್ ಅದರ ಪ್ರಯಾಣವನ್ನು 2019 ನಲ್ಲಿ ಉತ್ತರ ಪ್ರದೇಶದಿಂದ ಪ್ರಾರಂಭಿಸಿತು ಮತ್ತು ಇಂದು ಇತರ ರಾಜ್ಯಗಳಿಗೆ ಕೂಡ ವಿಸ್ತರಿಸಲಾಗಿದೆ. ಕಾರ್ಯಕ್ರಮದ ಕೆಲವು ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ –
ಹಂತ 1, 2019 ಮುಖ್ಯಾಂಶಗಳು
- ಪ್ರತಿ ಗಂಟೆಗೆ 2000 ಲೀಟರ್‌ಗಳನ್ನು; ದಿನಕ್ಕೆ 48 ಸಾವಿರ ಲೀಟರ್‌ಗಳನ್ನು ಶುದ್ಧೀಕರಿಸುವ ಸಾಮರ್ಥ್ಯದ 15 ನೀರು ಶುದ್ಧೀಕರಣ ಘಟಕಗಳನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
- ತೋಟಗಳಿಂದ ಜೀವನ ನಿರ್ವಹಿಸುತ್ತಿರುವ 60 ಫಲಾನುಭವಿ ಹಳ್ಳಿಗಳಲ್ಲಿ ಸುಮಾರು 40000 ರೈತ ಕುಟುಂಬಗಳ ಸುರಕ್ಷಿತ ನೀರಿನ ಅಗತ್ಯಗಳನ್ನು ಪರಿಹರಿಸುವುದು.
- ವಿತರಣಾ ಘಟಕಗಳನ್ನು ಸ್ವೈಪ್ ಕಾರ್ಡ್‌ಗಳಿಂದ ನಿಯಂತ್ರಿಸಲಾಗುತ್ತದೆ.
- ಪ್ರತಿ ಫಲಾನುಭವಿ ಕುಟುಂಬಕ್ಕೆ ಸ್ವೈಪ್ ಕಾರ್ಡ್ ನೀಡಲಾಗುತ್ತದೆ, ಇದರಿಂದ ಅವರಿಗೆ ದಿನಕ್ಕೆ 20 ಲೀಟರ್ ಕುಡಿಯುವ ನೀರು ಪಡೆಯಲು ಸಾಧ್ಯವಾಗುತ್ತದೆ.
- ಈ ಘಟಕಗಳನ್ನು ಗ್ರಾಮೀಣ ಸಮುದಾಯದ ಜನರು ತಾವಾಗಿಯೇ ನಿರ್ವಹಿಸುತ್ತಾರೆ. ಎಫ್ಎಂಸಿ ಕ್ಷೇತ್ರದ ಸಿಬ್ಬಂದಿ ತರಬೇತಿ ಮತ್ತು ನಿರ್ವಹಣೆಯ ಮೂಲಕ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುತ್ತಾರೆ.
ಹಂತ 2, 2020 ಮುಖ್ಯಾಂಶಗಳು
- ಉತ್ತರ ಪ್ರದೇಶದಲ್ಲಿ 18 ಹೊಸ ಸಮುದಾಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.
- ಪಂಜಾಬ್‌ನಲ್ಲಿ 9 ಹೊಸ ಸಮುದಾಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.
- 100 ಹಳ್ಳಿಗಳ 80,000 ರೈತ ಕುಟುಂಬಗಳಿಗೆ ಸೇವೆ ನೀಡುವ ಗುರಿ ಹೊಂದಿದೆ.
- ವಿತರಣಾ ಘಟಕಗಳನ್ನು ಸ್ವೈಪ್ ಕಾರ್ಡ್‌ಗಳಿಂದ ನಿಯಂತ್ರಿಸಲಾಗುತ್ತದೆ.
- ಪ್ರತಿ ಕುಟುಂಬವು ದಿನಕ್ಕೆ 20-ಲೀಟರ್ ನೀರಿನ ಹಂಚಿಕೆಯೊಂದಿಗೆ ಸ್ವೈಪ್ ಕಾರ್ಡ್ ಪಡೆಯುತ್ತದೆ.
- ಎಫ್ಎಂಸಿ ಸಿಬ್ಬಂದಿಗಳು ಸ್ಥಳೀಯ ಸಮುದಾಯಗಳ ತರಬೇತಿ ಮತ್ತು ನಿರ್ವಹಣೆಗೆ ಬೆಂಬಲ ನೀಡುತ್ತಾರೆ.
ಯೋಜನೆಗಳು 2021
- ಉತ್ತರ ಪ್ರದೇಶ ಮತ್ತು ಪಂಜಾಬ್ ಹೊರತುಪಡಿಸಿ ಯೋಜನೆಯನ್ನು 5 ಹೊಸ ರಾಜ್ಯಗಳಿಗೆ ವಿಸ್ತರಿಸಲಾಗುವುದು.
- ಗ್ರಾಮೀಣ ಭಾರತದಲ್ಲಿ ಮೌಲ್ಯಮಾಪನ ಮಾಡಿದ ಸ್ಥಳಗಳಲ್ಲಿ 30 ಹೊಸ ಸಮುದಾಯ ನೀರಿನ ಶೋಧನೆ ಘಟಕಗಳನ್ನು ಆಯೋಜಿಸಲಾಗುತ್ತದೆ.
ನೀರಿನ ನಿರ್ವಹಣೆಯನ್ನು ಉತ್ತೇಜಿಸುವುದು
- 18 ರಾಜ್ಯಗಳಾದ್ಯಂತ 400+ ರೈತರ ಸೇರುವಿಕೆಯೊಂದಿಗೆ ಫೆಬ್ರವರಿ 22, 2021 ರಂದು ಎಫ್ಎಂಸಿಯು ವಿಶ್ವ ಜಲ ದಿನ 2021 ವನ್ನು ಆಚರಿಸಿದೆ, 14000 ಕ್ಕಿಂತ ಅಧಿಕ ಕೃಷಿ ಸಮುದಾಯವನ್ನು ತಲುಪಿದೆ.
- ಎಫ್ಎಂಸಿ ನೀರಿನ ಬಳಕೆಯ ತೀವ್ರತೆಯನ್ನು ಹಣಕಾಸು ವರ್ಷ 2021 ರಲ್ಲಿ ತನ್ನ ಪನೋಲಿ ಉತ್ಪಾದನಾ ಸೈಟ್‌ನಲ್ಲಿ 26% ರಷ್ಟು ಸುಧಾರಿಸಿದೆ.
ಸಮರ್ಥ್ ಅನ್ನು, 2021 ರಲ್ಲಿ ಕೂಡ ಹೆಚ್ಚುವರಿ ಆಯಾಮಗಳೊಂದಿಗೆ ವಿಸ್ತರಿಸಲಾಗುತ್ತದೆ. ಇದು ಇನ್ನಷ್ಟು ವಿಸ್ತಾರಗೊಳ್ಳುತ್ತದೆ.