ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
News & Insights

ಉಗಮ್

1ಡಿಸೆಂಬರ್ 5, 2020 ರಂದು ಜಾಗತಿಕ ಮಣ್ಣು ದಿನವನ್ನು ಆಚರಿಸಲು, ಎಫ್ಎಂಸಿ ಇಂಡಿಯಾ ದೇಶಾದ್ಯಂತ ಉತ್ತಮ ಮಣ್ಣಿನ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸಲು, ಅಚ್ಛಿ ಸಮಜ್, ಅಚ್ಚಿ ಉಪಜ್ (ಉತ್ತಮ ತಿಳುವಳಿಕೆ, ಉತ್ತಮ ಇಳುವರಿ) ಎಂಬ ಘೋಷವಾಕ್ಯದ ಅಡಿಯಲ್ಲಿ ಉಗಮ್ (ಹಿಂದಿಯಲ್ಲಿ 'ಮೇಲಕ್ಕೆ ಏರುವುದು' ಎಂಬ ಅರ್ಥ ) ಅಭಿಯಾನವನ್ನು ಪ್ರಾರಂಭಿಸಿತು.

2ಮಣ್ಣು ಆರೋಗ್ಯ ದಿನ 2020- ಮಣ್ಣನ್ನು ಜೀವಂತವಾಗಿರಿಸಿ, ಜೈವಿಕ ವೈವಿಧ್ಯತೆಯನ್ನು ರಕ್ಷಿಸಿ ಪರಿಕಲ್ಪನೆಯ ಪ್ರಕಾರ, ಈ ಅಭಿಯಾನವು ರೈತರಿಗೆ ತಮ್ಮ ಮಣ್ಣಿನ ಆರೋಗ್ಯವನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಲು ಜಾಗೃತಿ, ಜ್ಞಾನ ಮತ್ತು ಸರಿಯಾದ ಸಾಧನಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಉಗಮ್ ಅಭಿಯಾನದ ಅಡಿಯಲ್ಲಿ, ಆಧುನಿಕ ಮಣ್ಣು ಪರೀಕ್ಷಾ ಉಪಕರಣಗಳೊಂದಿಗೆ ಸಜ್ಜುಗೊಂಡ ಎಫ್ಎಂಸಿ ಬ್ರ್ಯಾಂಡೆಡ್ ಮಣ್ಣು ಆರೋಗ್ಯ ವ್ಯಾನ್ ಗುಜರಾತ್ ರಾಜ್ಯದಿಂದ ಪ್ರಯಾಣ ಆರಂಭಿಸಿದೆ.

3ಮಣ್ಣು ಆರೋಗ್ಯ ವ್ಯಾನ್, ಅರ್ಹ ಕೃಷಿ ವಿಜ್ಞಾನಿಯನ್ನು ಒಳಗೊಂಡಿದ್ದು, ಗುಜರಾತ್‌ನ ಹಳ್ಳಿಗಳಲ್ಲಿ ಸಂಚರಿಸುತ್ತಾ ಪ್ರತಿನಿತ್ಯ ರೈತರ ಸಭೆಗಳನ್ನು ನಡೆಸುತ್ತಿದೆ ಮತ್ತು ಸ್ಥಳದಲ್ಲಿಯೇ ಉಚಿತವಾಗಿ ಮಣ್ಣಿನ ಆರೋಗ್ಯ ವರದಿಗಳನ್ನು ಒದಗಿಸುತ್ತಿದೆ. ವ್ಯಾನ್‌ನಲ್ಲಿ ವಿವಿಧ ಸಂವಾದಾತ್ಮಕ ಸಂವಹನ ಸಾಧನಗಳು, ವಿಆರ್ ಕಂಟೆಂಟ್ ಮತ್ತು ಗೇಮಿಂಗ್ ಎಂಗೇಜ್ಮೆಂಟ್‌ಗಳಿದ್ದು, ಇದರಿಂದ ರೈತರು ಈ ವಿಷಯದ ಕುರಿತು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಿದೆ.

4ಚಾಲ್ತಿಯಲ್ಲಿರುವ ನಿಯಮಾವಳಿಗಳು ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ನಿರ್ವಹಿಸುತ್ತಾ, ವ್ಯಾನ್ ಒಳಗೆ ಸಾಮಾಜಿಕ ಅಂತರ, ಅಗತ್ಯವಾದ ನೈರ್ಮಲ್ಯ ಪ್ರಕ್ರಿಯೆಗಳು ಮತ್ತು ಇತರ ಅಗತ್ಯ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಾ ಸ್ಥಿರ ಗುಂಪುಗಳ ಜೊತೆ ಮಾತುಕತೆಗಳನ್ನು ನಡೆಸಲಾಗುತ್ತಿದೆ.

5ಎಫ್ಎಂಸಿ ಇಂಡಿಯಾ ಅಧ್ಯಕ್ಷ ಶ್ರೀ ಪ್ರಮೋದ್ ತೋಟಾ ಮಣ್ಣಿನ ಆರೋಗ್ಯ ವ್ಯಾನ್‌ಗೆ ಡಿಜಿಟಲ್ ಆಗಿ ಚಾಲನೆ ನೀಡಿದರು. “ಮಣ್ಣಿನ ಆರೋಗ್ಯವು ಕೃಷಿ ಉತ್ಪಾದಕತೆಯನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಜನಸಂಖ್ಯೆಗೆ ಆಹಾರ ಒದಗಿಸುವ ಆಧುನಿಕ ಕೃಷಿಯ ಧ್ಯೇಯವನ್ನು ಬೆಂಬಲಿಸಲು ಮಣ್ಣಿನ ಜೀವವೈವಿಧ್ಯವನ್ನು ರಕ್ಷಿಸುವುದು ಬಹಳ ಮುಖ್ಯ. ಭಾರತದ ರೈತರಿಗೆ ಬೆಂಬಲ ನೀಡಲು ಇಂತಹ ಅನನ್ಯ ಉದ್ಯಮ-ಪ್ರಮುಖ ರಾಷ್ಟ್ರೀಯ ಮಣ್ಣು ಆರೋಗ್ಯ ಜಾಗೃತಿ ಅಭಿಯಾನವನ್ನು ಕಲ್ಪಿಸಿ, ಅಭಿವೃದ್ಧಿಪಡಿಸಿ ಮತ್ತು ಅನುಷ್ಠಾನಗೊಳಿಸಿದ ಭಾರತದ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ"- ಎಂದು ಪ್ರಮೋದ್ ತೋಟ ಹೇಳಿದ್ದಾರೆ.

6ಉಗಮ್ ಆರಂಭವಾದಲ್ಲಿಂದ, 70+ ಹಳ್ಳಿಗಳಲ್ಲಿ 30,000 ಕ್ಕಿಂತ ಹೆಚ್ಚು ರೈತರನ್ನು ತಲುಪಿರುವುದಲ್ಲದೆ, ಫೇಸ್‌ಬುಕ್, ವಾಟ್ಸ್ಯಾಪ್ ಮತ್ತು ಯೂಟ್ಯೂಬ್ ಮುಂತಾದ ಡಿಜಿಟಲ್ ಚಾನೆಲ್‌ಗಳ ಮೂಲಕ ಮತ್ತಷ್ಟು ಜನರನ್ನು ತಲುಪಿದೆ. ಆರಂಭವಾದ ತಿಂಗಳ ಒಳಗೆ 4500+ ಎಕರೆ ಕೃಷಿ ಭೂಮಿಯಿಂದ ಪಡೆದ ಮಾದರಿಗಳ ಮೇಲೆ 1400 ಕ್ಕೂ ಹೆಚ್ಚು ಮಣ್ಣಿನ ಆರೋಗ್ಯ ವರದಿಗಳನ್ನು ರಚಿಸಲಾಗಿದೆ. ಈ ತೊಡಗುವಿಕೆಯು ಸುಸ್ಥಿರ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುವ ಎಫ್ಎಂಸಿ ಇಂಡಿಯಾದ ಇನ್ನೊಂದು ಹೆಜ್ಜೆಯಾಗಿದೆ.