ಭಾರತವು ಜಾಗತಿಕವಾಗಿ 155 ದಶಲಕ್ಷ ಹೆಕ್ಟೇರ್‌ನಷ್ಟು ಅಧಿಕ ಕೃಷಿ ಭೂಮಿಯನ್ನು ಹೊಂದಿದೆ (ಅಮೆರಿಕ, ಚೀನಾ ಮತ್ತು ಬ್ರೆಜಿಲ್ ಒಳಗೊಂಡಂತೆ) ಮತ್ತು ವಿಶ್ವದ ಪ್ರಮುಖ ಕೃಷಿ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. 2019 ರಲ್ಲಿ, ಕೃಷಿ ವಲಯವು ಸುಮಾರು ರೂ. 19 ಲಕ್ಷ ಕೋಟಿ (ಯುಎಸ್‌ಡಿ 265 ಬಿಲಿಯನ್) ವ್ಯವಹಾರ ಮಾಡಿದ್ದು, ಅದು ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 18% ಅನ್ನು ಒಳಗೊಂಡಿದೆ ಹಾಗೂ ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಕೆಲಸ ಒದಗಿಸಿದೆ. ಅದಾಗ್ಯೂ, ಕಡಿಮೆ ಉತ್ಪಾದಕತೆ (~3 ಟನ್‌ಗಳು/ಹೆಕ್ಟೇರ್), ಆರ್ಥಿಕವಲ್ಲದ ಭೂ ಹಿಡುವಳಿ ಗಾತ್ರ (<2ಎಕರೆಗಳು), ಕಡಿಮೆ ಗುಣಮಟ್ಟದ ವಸ್ತುಗಳ ಬಳಕೆಯ ದಕ್ಷತೆ, ಹೆಚ್ಚಿನ ಜೈವಿಕ ನಷ್ಟಗಳು ಮತ್ತು ಕಡಿಮೆ ಮಟ್ಟದ ಯಾಂತ್ರೀಕರಣ ಸೇರಿದಂತೆ ಅನೇಕ ರಚನಾತ್ಮಕ ಸವಾಲುಗಳನ್ನು ವಲಯವು ಎದುರಿಸುತ್ತಿದೆ.
ಭಾರತವು ವಿಶ್ವದ ಉನ್ನತ ಕೃಷಿ ಉತ್ಪಾದಕ ದೇಶವಾಗುವುದರೊಂದಿಗೆ ತನ್ನ ರಾಷ್ಟ್ರೀಯ ಆಕಾಂಕ್ಷೆಯನ್ನು ಸಾಧಿಸಲು, ಅದೇ ಸಮಯದಲ್ಲಿ ಪ್ರಕ್ರಿಯೆಯೊಂದಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಕೃಷಿ ಕ್ಷೇತ್ರದಲ್ಲಿ ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಎಲ್ಲಾ ರೈತರಿಗೆ ಮಾರುಕಟ್ಟೆ ಮಾಹಿತಿಯನ್ನು ಸುಲಭವಾಗಿ ಕೈಸೇರುವಂತೆ ಮಾಡಲು ಪ್ರಮುಖ ಡಿಜಿಟಲ್ ಮತ್ತು ನಿಖರವಾದ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ತಕ್ಷಣದ ಅಗತ್ಯವಿದೆ.
ಡ್ರೋನ್‌ಗಳು ಅಂತಹ ಒಂದು ತಂತ್ರಜ್ಞಾನವಾಗಿದ್ದು, ಕೃಷಿ ಉದ್ಯಮವನ್ನು ಅಗತ್ಯಕ್ಕೆ ತಕ್ಕಂತೆ ನಿಖರವಾದ ಮತ್ತು ಕೇಂದ್ರೀಕರಿಸಿದ ಬೆಳೆ ಒಳಹರಿವಿನ ಮೂಲಕ ಕೃಷಿ ಉದ್ಯಮದಲ್ಲಿ ಕ್ರಾಂತಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಇದು ನೇರವಾಗಿ ಒಳಹರಿವಿನ ಬಳಕೆಯ ದಕ್ಷತೆಯನ್ನು ಮತ್ತು ರೈತರ ಸುರಕ್ಷತೆಯನ್ನು ಹೆಚ್ಚಿಸುವುದರೊಂದಿಗೆ ಏಕಕಾಲದಲ್ಲಿ ಕೃಷಿಗೆ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಚೀನಾ, ಜಪಾನ್, ಏಷ್ಯನ್, ಯುಎಸ್ಎ ಮತ್ತು ಬ್ರೆಜಿಲ್ ಮುಂತಾದ ಅನೇಕ ಕೃಷಿ ದೇಶಗಳು ಕೃಷಿಯಲ್ಲಿ ಬಳಕೆಗಾಗಿ ಡ್ರೋನ್‌ಗಳನ್ನು ಅಳವಡಿಸಿಕೊಳ್ಳಲು ತ್ವರಿತ ಪ್ರಗತಿ ಹಂತಗಳನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಪ್ರಾಯೋಜಿತ ಡ್ರೋನ್‌ಗಳನ್ನು ಅಳವಡಿಸಿಕೊಳ್ಳಲು ನಿಯಂತ್ರಕ ಮತ್ತು ರಚನಾತ್ಮಕ ಅಭಿವೃದ್ಧಿಗಳಿಗೆ ಆದ್ಯತೆ ನೀಡಿವೆ. ಉದಾಹರಣೆಗೆ, ಚೀನಾದಲ್ಲಿ, ಡ್ರೋನ್‌ಗಳು ಕೃಷಿ ಕ್ರಾಂತಿಗೆ ಕಾರಣವಾಗುತ್ತಿವೆ. ಎಕ್ಸ್‌ಎಜಿ ಸಂಶೋಧನೆಯ ಪ್ರಕಾರ "ಬೆಳೆ ನಿರ್ವಹಣೆಗಾಗಿ ಡ್ರೋನ್‌ಗಳನ್ನು ಬಳಸಿದ ನಂತರ ಚೀನಾದ ಕೃಷಿ ಉತ್ಪಾದನೆಗಳು 17-20 ಪ್ರತಿಶತ ಸುಧಾರಿಸಿವೆ”. ಅದರ ಡ್ರೋನ್ ಮಾರುಕಟ್ಟೆಯು ಸಿಎಜಿಆರ್‌ನಲ್ಲಿ (ಸಂಯುಕ್ತ ವಾರ್ಷಿಕ ಬೆಳವಣಿಗೆ ದರ) 13.8 ಪ್ರತಿಶತ ಬೆಳೆಯುತ್ತಿದೆ. ಹೀಗಾಗಿ, ಚೀನಾದ ಕೃಷಿ ಭೂಮಿಗಳ ಮೇಲೆ, ಪ್ರತಿ ದಿನ 1.2 ಮಿಲಿಯನ್‌ಗಿಂತ ಹೆಚ್ಚು ವಿಮಾನಗಳು ಮಾಡುವುದಕ್ಕಿಂತ ಹೆಚ್ಚಿನದನ್ನು 42,000 ಡ್ರೋನ್‌ಗಳು ಮಾಡುತ್ತಿವೆ.
ಡ್ರೋನ್‌ಗಳು ಮತ್ತು ನಿಖರವಾದ ಕೃಷಿ
ನಿಖರವಾದ ಕೃಷಿ ಎನ್ನುವುದು ರೈತರಿಗೆ ಒಟ್ಟಾರೆ ಉತ್ಪಾದಕತೆ, ಗುಣಮಟ್ಟ ಮತ್ತು ಇಳುವರಿಯನ್ನು ಸುಧಾರಿಸಲು ನೀರು, ರಸಗೊಬ್ಬರ ಮತ್ತು ಕೀಟನಾಶಕಗಳ ದಕ್ಷತೆಯನ್ನು ಹೆಚ್ಚಿಸಲು ಒಂದು ಮಾರ್ಗವಾಗಿದೆ. ನೆಲ ಮಟ್ಟದ ಸ್ಥಳದ ಪರಿಶೀಲನೆಯಲ್ಲಿ ಕಾಣಿಸಿಕೊಳ್ಳದ ಕೆಲವು ಸಮಸ್ಯೆಗಳನ್ನು ಡ್ರೋನ್‌ಗಳನ್ನು ಬಳಸಿಕೊಂಡು ಕೂಡ ಸ್ಪಷ್ಟಪಡಿಸಬಹುದು.
ರೈತರಿಗೆ ಕೃಷಿ ಸವಾಲುಗಳೊಂದಿಗೆ ಸಹಾಯ ಮಾಡಲು ಡ್ರೋನ್‌ಗಳೊಂದಿಗೆ ಅನೇಕ ಮಾರ್ಗಗಳಿವೆ:
- ಮಣ್ಣು ಮತ್ತು ಕೃಷಿ ಭೂಮಿ ಯೋಜನೆ: ಡ್ರೋನ್‌ಗಳನ್ನು ನೀರಾವರಿಗಾಗಿ, ರಸಗೊಬ್ಬರ ಚಟುವಟಿಕೆಗಳಿಗೆ ಮತ್ತು ಪೋಷಕ ಮಟ್ಟಗಳನ್ನು ಪರಿಶೀಲಿಸಲು, ತೇವಾಂಶ ಕೇಂದ್ರೀಕರಣಗಳನ್ನು ಮತ್ತು ಸವೆತ ಹಾಗೂ ಇತರವುಗಳನ್ನು ಪರಿಶೀಲಿಸಲು ಮಣ್ಣಿನ ಮತ್ತು ಕ್ಷೇತ್ರ ವಿಶ್ಲೇಷಣೆಗಾಗಿ ಬಳಸಬಹುದು.
- ಬೆಳೆ ಮೇಲ್ವಿಚಾರಣೆ: ಡ್ರೋನ್‌ಗಳು ನಿರಂತರ ಮತ್ತು ಸ್ಥಿರವಾದ ಬೆಳೆಗಳ ಕಣ್ಗಾವಲನ್ನು ನಿರ್ವಹಿಸಬಲ್ಲವು, ಇದು ಬೆಳೆಗಳ ಮೇಲೆ ವಿವಿಧ ಜೈವಿಕ ಮತ್ತು ಅಜೈವಿಕ ಒತ್ತಡಗಳ ಪರಿಣಾಮವನ್ನು ಕಡಿಮೆ ಮಾಡುವ ಕ್ರಮಗಳನ್ನು ಪ್ರಚೋದಿಸಬಹುದು. ಅಂತಹ ಕಣ್ಗಾವಲಿನ ಮೂಲಕ ಸಿಗುವ ದತ್ತಾಂಶವು, ಉತ್ಪನ್ನ ಬಳಕೆಯನ್ನು ಲಾಭದಾಯಕಗೊಳಿಸಲು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಕ್ಷೇತ್ರ-ನಿರ್ದಿಷ್ಟ ಕೃಷಿ ವಿಜ್ಞಾನಕ್ಕೆ ಸಹಾಯ ಮಾಡುತ್ತದೆ.
- ಕಳೆಗಳು, ಕೀಟಗಳು ಮತ್ತು ರೋಗಗಳಿಂದ ಬೆಳೆ ರಕ್ಷಣೆ: ಡ್ರೋನ್‌ಗಳು ನಿಖರ ಪ್ರಮಾಣದಲ್ಲಿ ಕೀಟನಾಶಕ, ಕಳೆನಾಶಕ ಮತ್ತು ರೋಗ ನಿಯಂತ್ರಕ ಉತ್ಪನ್ನಗಳನ್ನು ಸಿಂಪಡಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅವುಗಳು ಉತ್ಪನ್ನದ ಸರಿಯಾದ ಪ್ರಮಾಣವನ್ನು ಖಚಿತಪಡಿಸುತ್ತವೆ, ಸಿಂಪಡಣೆ ಮಾಡುವವರಿಗೆ ಆಕಸ್ಮಿಕವಾಗಿ ಉತ್ಪನ್ನ ತಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪನ್ನಗಳ ಒಟ್ಟಾರೆ ಪರಿಣಾಮವನ್ನು ಸುಧಾರಿಸುತ್ತದೆ ಮತ್ತು ಆ ಮೂಲಕ ಬೆಳೆಗಾರರ ಇಳುವರಿಯನ್ನು ಹೆಚ್ಚಿಸುತ್ತದೆ.
- ಉತ್ಪಾದಕತೆ: ಡ್ರೋನ್‌ಗಳು ಪ್ರತಿದಿನದ ಬೆಳೆ ಕವರೇಜ್ ಪ್ರದೇಶವನ್ನು ಹೆಚ್ಚಿಸುತ್ತಾ, ಕೀಟನಾಶಕ ಅಥವಾ ರಸಗೊಬ್ಬರ ಸಿಂಪಡಣೆಯಂತಹ ಕೃಷಿ ಕೆಲಸಗಳ ಮೇಲೆ ಕಾರ್ಮಿಕ ಒತ್ತಡವನ್ನು ಗಮನಾರ್ಹವಾಗಿ ತಗ್ಗಿಸಬಹುದು. ಇದು ರೈತರಿಗೆ ಕೃಷಿ ಚಟುವಟಿಕೆಯನ್ನು ಗಮನಾರ್ಹವಾಗಿ ಸುಲಭವಾಗಿಸುತ್ತದೆ, ಜೈವಿಕ ಸವಾಲುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾ ತಾವು ಉಳಿಸಿದ ಸಮಯವನ್ನು ಅವರು ಇತರ ಚಟುವಟಿಕೆಗಳನ್ನು ನಿರ್ವಹಿಸಲು ಬಳಸಬಹುದು.
- ಹೊಸ ಸೇವಾ ಮಾದರಿಗಳು: ಡೇಟಾ ಸಂಗ್ರಹಣೆ ಮತ್ತು ಕೃಷಿ ಉತ್ಪನ್ನಗಳ ಬಳಕೆಗಾಗಿ ಡ್ರೋನ್‌ಗಳನ್ನು ಅಳವಡಿಸಿಕೊಳ್ಳುವುದರಿಂದ ಹೊಸ ಸೇವಾ ಮಾದರಿಗಳನ್ನು ಪ್ರಚೋದಿಸುವ ಸಾಧ್ಯತೆಯಿದೆ, ಇದರಲ್ಲಿ ಬೆಳೆ ಉತ್ಪನ್ನ ಕಂಪನಿಗಳು ಡ್ರೋನ್ ಆಪರೇಟರ್‌ಗಳು ಮತ್ತು ಇತರ ಮೌಲ್ಯ ಸರಪಳಿ ಪಾಲುದಾರರ ಜೊತೆ ಸೇರಿಕೊಂಡು ಬೆಳೆ ರಕ್ಷಣೆ/ ಪೋಷಣೆಯನ್ನು ರೈತರಿಗೆ ಶುಲ್ಕದ ಸೇವೆಯಾಗಿ ನೀಡಬಹುದು.
ಡ್ರೋನ್‌ಗಳ ಮೂಲಕ ಉದ್ಯೋಗ ಮಾರ್ಗಗಳನ್ನು ತೆರೆಯುವುದು
ಡ್ರೋನ್‌ಗಳನ್ನು ನಿರ್ವಹಿಸುವುದು ಒಂದು ವಿಶೇಷ ಕೌಶಲ್ಯ ಆಗಿರುವುದರಿಂದ, ತರಬೇತಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯ ಇದೆ. ಈ ಹೊಸ ಯುಗದ ತಂತ್ರಜ್ಞಾನಗಳು ಗ್ರಾಮೀಣ ಪ್ರದೇಶಗಳಲ್ಲಿ 2.1 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಅಂದಾಜು ಮಾಡಲಾಗಿದೆ.
ಡ್ರೋನ್‌ಗಳ ಪರಿಣಾಮಕಾರಿ ಅಳವಡಿಕೆಗಾಗಿ ಅಸ್ತಿತ್ವದಲ್ಲಿರುವ ಸವಾಲುಗಳನ್ನು ನಿಭಾಯಿಸುವುದು
ಪರಿಣಾಮಕಾರಿ ಅಳವಡಿಕೆಗಾಗಿ ಅನೇಕ ಸವಾಲುಗಳನ್ನು ಪರಿಹರಿಸಬೇಕಾಗುತ್ತದೆ.
- ನಿಯಂತ್ರಕ ಚೌಕಟ್ಟು: ಡ್ರೋನ್ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ನಿಯಂತ್ರಕ ಚೌಕಟ್ಟು ಇನ್ನೂ ರೂಪುಗೊಳ್ಳುತ್ತಿದೆ. ಅನುಮೋದಿತ ಕೀಟನಾಶಕಗಳ (ಡ್ರೋನ್‌ಗಳ ಮೂಲಕ ಬೆಳೆಗಳಿಗೆ ಬಳಸಬಹುದು) ಮೇಲೆ ಅನುಮೋದಿತ ಲೇಬಲ್ ಕ್ಲೈಮ್‌ಗಳ ವಿಸ್ತರಣೆಗೆ ಅನುಮತಿ ನೀಡುವ ಮಾರ್ಗಸೂಚಿಗಳನ್ನು ಶೀಘ್ರವಾಗಿ ರೂಪಿಸುವುದು, ರೈತರ ಹೊಲಕ್ಕೆ ಕೀಟನಾಶಕಗಳನ್ನು ತಲುಪಿಸಲು ಡ್ರೋನ್‌ಗಳನ್ನು ಅಳವಡಿಸಿಕೊಳ್ಳುವುದನ್ನು ತ್ವರಿತಗೊಳಿಸುತ್ತದೆ.
- ಸೀಮಿತ ಹಾರಾಟ ಸಮಯ ಮತ್ತು ಶ್ರೇಣಿ: ಪ್ರಯೋಜನಗಳೊಂದಿಗೆ, ಕೃಷಿ ಉದ್ದೇಶಗಳಿಗಾಗಿ ಡ್ರೋನ್‌ಗಳ ಬಳಕೆಗೆ ಕೆಲವು ಮಿತಿಗಳು ಕೂಡಾ ಇವೆ. ಹೆಚ್ಚಿನ ಪೇಲೋಡ್‌ಗಳ ಕಾರಣದಿಂದ ಡ್ರೋನ್‌ಗಳ ಹಾರಾಟವು ಸಾಮಾನ್ಯವಾಗಿ 20-60 ನಿಮಿಷಗಳವರೆಗೆ ಇರುತ್ತದೆ. ಇದು ಪ್ರತಿ ಚಾರ್ಜಿಗೆ ಸೀಮಿತ ಕ್ಷೇತ್ರ ಕವರ್ ಮಾಡಲು ಕಾರಣವಾಗುತ್ತದೆ ಮತ್ತು ಡ್ರೋನ್‌ನ ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಕೃಷಿ ಚಟುವಟಿಕೆಗಳಲ್ಲಿ ಬಳಸಲಾಗುವ ಡ್ರೋನ್‌ಗಳಿಗೆ ಹೆಚ್ಚಿನ ಹೊಂದಾಣಿಕೆ ಒದಗಿಸಲು ಅತಿ ಕಡಿಮೆ ತೂಕದ ಉನ್ನತ ಶ್ರೇಣಿಯ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲು ನಡೆಯುತ್ತಿರುವ ಸಂಶೋಧನೆಯು ಸರ್ಕಾರಿ ಬೆಂಬಲದೊಂದಿಗೆ ವೇಗವನ್ನು ಪಡೆಯಬೇಕು.
- ಕಾರ್ಯಸಾಧ್ಯವಾದ ವಾಣಿಜ್ಯ ಮಾದರಿ: ಡ್ರೋನ್ ಖರೀದಿಯ ಆರಂಭಿಕ ವೆಚ್ಚಗಳು, ಕನೆಕ್ಟಿವಿಟಿ ಪಡೆಯುವುದು ಮತ್ತು ಕಾರ್ಯಾಚರಣೆಯ ವೆಚ್ಚಗಳು ಮತ್ತು ಸಣ್ಣ ಕೃಷಿ ಹಿಡುವಳಿಗಳನ್ನು ಪರಿಗಣಿಸಿ, ಸರ್ಕಾರಿ ಪ್ರೋತ್ಸಾಹಧನದಿಂದ ಬೆಂಬಲಿತ ಕಾರ್ಯಸಾಧ್ಯವಾದ ಮಾದರಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ, ಇದು ಪೈಲಟ್‌ಗಳ ತರಬೇತಿಯನ್ನು ಹೊರತುಪಡಿಸಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ.
ಗ್ರಾಮೀಣ ಭಾರತದ ಮುಂದಿನ ದಾರಿ ಯಾವುದು?
ರೈತರಿಗೆ ತಮ್ಮ ಕ್ಷೇತ್ರಗಳು ಮತ್ತು ಸಂಪನ್ಮೂಲಗಳನ್ನು ಉತ್ತಮ ಮತ್ತು ಹೆಚ್ಚು ಸುಸ್ಥಿರ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುವ ಮೂಲಕ ಡ್ರೋನ್‌ಗಳು ಭಾರತೀಯ ಕೃಷಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಕೃಷಿ ವಲಯದಲ್ಲಿ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲು, ಕಡಿಮೆ ಖರ್ಚಿನಲ್ಲಿ ಕಾರ್ಯಾಚರಣೆ, ತರಬೇತಿ ಕೇಂದ್ರಗಳು ಮತ್ತು ಕೃಷಿ-ಉತ್ಪನ್ನ ಉದ್ಯಮದೊಂದಿಗೆ ಕಾರ್ಯಾಚರಣೆಯ ಸಹಭಾಗಿತ್ವವನ್ನು ತ್ವರಿತವಾಗಿ ಹೆಚ್ಚಿಸಲು ಡ್ರೋನ್ ತಯಾರಕರಿಗೆ ಪ್ರೋತ್ಸಾಹಧನವನ್ನು ಪರಿಚಯಿಸಬೇಕಿದೆ. ಡ್ರೋನ್‌ಗಳು ಮತ್ತು ಸಂಬಂಧಿತ ಸೇವೆಗಳನ್ನು ಖರೀದಿಸಲು ಬೆಳೆಗಾರರಿಗೆ ನೇರವಾಗಿ ಸಬ್ಸಿಡಿಗಳನ್ನು ಒದಗಿಸಬಹುದು.
ಬಳಕೆಯ ಜೊತೆಗೆ ಜೀವನವನ್ನು ಸುರಕ್ಷಿತ ಮತ್ತು ಸುಲಭವಾಗಿಸಲು ನೋಂದಣಿಯಿಂದ ಹಿಡಿದು, ಸ್ವಾಧೀನ ಮತ್ತು ಕಾರ್ಯಾಚರಣೆವರೆಗೆ ಡ್ರೋನ್‌ಗಳಿಗೆ ವ್ಯಾಪಕವಾದ ಉತ್ಪನ್ನದ ನಿರ್ವಹಣೆ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ.
ಇನ್ನೂ ಆರಂಭದ ಹಂತದಲ್ಲಿದ್ದರೂ, ಸರಿಯಾದ ಸುಧಾರಣೆಗಳೊಂದಿಗೆ, ಭಾರತವು ಮುಂದಿನ ಕೃಷಿ ಕ್ರಾಂತಿಯನ್ನು ತರಲು ಡ್ರೋನ್‌ಗಳು ನೀಡುವ ಪ್ರಯೋಜನಗಳನ್ನು ಪಡೆಯಲು ಸಿದ್ಧವಾಗಿದೆ.