ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿಯ ಉದ್ಯಮದ ಪ್ರಮುಖ ರೈನಾಕ್ಸಿಪೈರ್®️ ಸಕ್ರಿಯ ಕೀಟ ನಿಯಂತ್ರಣ ತಂತ್ರಜ್ಞಾನವನ್ನು ಅತ್ಯುತ್ತಮ ಬ್ರ್ಯಾಂಡ್‌ಗಳ ಕಾಂಕ್ಲೇವ್ 2023 ರಲ್ಲಿ ಗುರುತಿಸಲಾಗಿದೆ

ಮುಂಬೈ, 21 ಡಿಸೆಂಬರ್ 2023: ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾ ಮತ್ತು ಅದರ ಉದ್ಯಮ-ಪ್ರಮುಖ ಕೀಟ ನಿಯಂತ್ರಣ ತಂತ್ರಜ್ಞಾನ ರೈನಾಕ್ಸಿಪೈರ್®️ ಆ್ಯಕ್ಟಿವ್ ಅನ್ನು ಅತ್ಯುತ್ತಮ ಬ್ರ್ಯಾಂಡ್‌ಗಳ ಕಾಂಕ್ಲೇವ್ 2023 ರಲ್ಲಿ ಕೃಷಿಯ ಅತ್ಯುತ್ತಮ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಭಾರತದ ಪ್ರಮುಖ ಮಾಧ್ಯಮ ಗುಂಪಾದ ದಿ ಟೈಮ್ಸ್ ಗ್ರೂಪ್‌ನ ಭಾಗವಾದ ದಿ ಎಕನಾಮಿಕ್ ಟೈಮ್ಸ್ (ಇಟಿ) ಎಡ್ಜ್‌ನ ಈ ಗುರುತಿಸುವಿಕೆಯು, ಎಫ್ಎಂಸಿಯ ರೈನಾಕ್ಸಿಪೈರ್®️ ಭಾರತದ ಕೃಷಿ ಉದ್ಯಮದಲ್ಲಿ ಬೀರಿರುವ ಗಮನಾರ್ಹ ಪರಿಣಾಮಕ್ಕೆ ಸಾಕ್ಷಿಯಾಗಿದೆ.

ET Edge

ರೈನಾಕ್ಸಿಪೈರ್® ಸಕ್ರಿಯ ಕೀಟನಾಶಕವು ಸೈನಿಕ ಹುಳುಗಳು, ಲೂಪರ್ಸ್, ಸಿಲ್ವರ್‌ಲೀಫ್ ವೈಟ್‌ಫ್ಲೈ ನಿಂಫ್ಸ್, ಎಲೆ ಕೊರಕ ಲಾರ್ವಾ ಮತ್ತು ಇನ್ನೂ ಹೆಚ್ಚಿನ ಕೀಟಗಳ ವಿಶಾಲ-ವ್ಯಾಪ್ತಿಯ ನಿಯಂತ್ರಣವನ್ನು ನೀಡುತ್ತದೆ ಇದು ಭಾರತದ ಎರಡು ಪ್ರಮುಖ ಬೆಳೆ ರಕ್ಷಣಾ ಉತ್ಪನ್ನ ಬ್ರ್ಯಾಂಡ್‌ಗಳಾದ, ಕೊರಾಜೆನ್® ಕೀಟನಾಶಕ ಮತ್ತು ಫರ್ಟೆರಾ® ಕೀಟನಾಶಕದ ಹಿಂದಿನ ಚಾಲನಾ ಶಕ್ತಿ ಆಗಿದೆ. ಈ ಪ್ರಮುಖ ಬ್ರ್ಯಾಂಡ್‌ಗಳ ಮೂಲಕ, ರೈನಾಕ್ಸಿಪೈರ್® ಆ್ಯಕ್ಟಿವ್ ದೇಶದ 16 ಪ್ರಮುಖ ಬೆಳೆಗಳಿಗೆ ಉತ್ತಮ ಬೆಳೆ ರಕ್ಷಣೆಯನ್ನು ಒದಗಿಸುತ್ತದೆ. ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ, ಇದು ರೈತರಿಗೆ ಸಾಟಿಯಿಲ್ಲದ ದಕ್ಷತೆಯೊಂದಿಗೆ ಸೇವೆ ಸಲ್ಲಿಸಿದೆ ಮತ್ತು ಭಾರತದಲ್ಲಿ ಲಕ್ಷಾಂತರ ರೈತರ ಅತ್ಯಂತ ವಿಶ್ವಾಸಾರ್ಹ ಆಯ್ಕೆಯಾಗಿದೆ.

ಎಫ್ಎಂಸಿ ಇಂಡಿಯಾ ಮತ್ತು ನೈಋತ್ಯ ಏಷ್ಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು, "ರೈನಾಕ್ಸಿಪೈರ್® ಸಕ್ರಿಯ ಉತ್ಪನ್ನಕ್ಕೆ ಕೃಷಿಯ ಅತ್ಯುತ್ತಮ ಬ್ರ್ಯಾಂಡ್‌ಗಳಲ್ಲಿ ಒಂದು ಎಂಬ ಮನ್ನಣೆ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ. ಇದು ರೈನಾಕ್ಸಿಪೈರ್® ಸಕ್ರಿಯ ಬ್ರ್ಯಾಂಡ್‌ನ ಕೊಡುಗೆಯನ್ನು ಗುರುತಿಸುವುದು ಮಾತ್ರವಲ್ಲದೆ, ಕೃಷಿಯ ಸುಸ್ಥಿರ ಬೆಳವಣಿಗೆಗೆ ನವೀನ ಬೆಳೆ ರಕ್ಷಣಾ ಪರಿಹಾರಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ನಾವು ರೈತರೊಂದಿಗೆ ಪಾಲುದಾರಿಕೆ ನಡೆಸಲು ಮತ್ತು ಸುಧಾರಿತ, ವೈಜ್ಞಾನಿಕವಾಗಿ ಸಾಬೀತಾದ ಮತ್ತು ಸುಸ್ಥಿರ ಬೆಳೆ ಪರಿಹಾರಗಳ ಮೂಲಕ ಅವರನ್ನು ಸಜ್ಜುಗೊಳಿಸಲು, ಆ ಮೂಲಕ ಅವರ ಉತ್ಪಾದಕತೆ ಮತ್ತು ಲಾಭದಾಯಕತೆಯ ಹೆಚ್ಚಳಕ್ಕೆ ಕೊಡುಗೆ ನೀಡಲು ಬದ್ಧರಾಗಿದ್ದೇವೆ'' ಎಂದು ಹೇಳಿದರು.

10 ವಿವಿಧ ಉದ್ಯಮಗಳಾದ್ಯಂತ 120 ಕ್ಕಿಂತ ಹೆಚ್ಚು ಕಂಪನಿಗಳ ಕಠಿಣ ಮೌಲ್ಯಮಾಪನದ ನಂತರ ಎಫ್ಎಂಸಿಯ ರೈನಾಕ್ಸಿಪೈರ್® ಆ್ಯಕ್ಟಿವ್ ಅತ್ಯುತ್ತಮ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅವುಗಳ ಮಾರಾಟ ವಹಿವಾಟು, ಮಾರುಕಟ್ಟೆ ಗಾತ್ರ, ಬ್ರ್ಯಾಂಡ್ ಮರುಸ್ಥಾಪನೆ, ಗ್ರಾಹಕರ ಅಭಿಪ್ರಾಯಗಳು, ಉದ್ಯಮಕ್ಕೆ ನೀಡಿದ ಕೊಡುಗೆ ಮತ್ತು ಒಟ್ಟಾರೆ ಮಾರುಕಟ್ಟೆ ಪ್ರಭಾವದ ಆಧಾರದ ಮೇಲೆ ಪ್ರೊಫೈಲ್‌ಗಳನ್ನು ಸ್ವತಂತ್ರವಾಗಿ ವಿಶ್ಲೇಷಿಸಲಾಯಿತು.  

ಇಟಿ ಎಡ್ಜ್ ಅತ್ಯುತ್ತಮ ಬ್ರ್ಯಾಂಡ್‌ಗಳ ಪುರಸ್ಕಾರವು, ರೈನಾಕ್ಸಿಪೈರ್® ಆ್ಯಕ್ಟಿವ್ ಉದ್ದೇಶಿತ ಕೀಟಗಳ ವಿರುದ್ಧ ದೀರ್ಘಾವಧಿಯ ಮತ್ತು ವೇಗವಾಗಿ ಕಾರ್ಯ ನಿರ್ವಹಿಸುವ ರಕ್ಷಣೆಗಾಗಿ ಬಳಸಬಹುದಾದ ಉದ್ಯಮದ ಪ್ರಮುಖ ಉತ್ಪನ್ನವೆಂದು ಪುನರುಚ್ಛರಿಸಿದೆ. ಇದು 2008 ರಲ್ಲಿ ಭಾರತದಲ್ಲಿ ಬಳಕೆಗಾಗಿ ನೋಂದಾಯಿಸಲ್ಪಟ್ಟಿದೆ ಮತ್ತು ಇಂದು 120 ಕ್ಕಿಂತ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.

ಎಫ್ಎಂಸಿ ಪ್ರಬಲವಾದ ಸಂಶೋಧನೆ ಮತ್ತು ಅಭಿವೃದ್ಧಿ ಪೈಪ್‌ಲೈನ್‌ಗಳನ್ನು ಹೊಂದಿದೆ ಮತ್ತು ಕೃಷಿ ಉದ್ಯಮದ ಬೆಳೆ ಸಂರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆಯ ಶ್ರೇಷ್ಠತೆಯನ್ನು ನೀಡಲು ಬದ್ಧವಾಗಿದೆ. ಸಮರ್ಥ ತಂತ್ರಜ್ಞಾನಗಳೊಂದಿಗೆ ರೈತರಿಗೆ ಬೆಂಬಲ ನೀಡುವ ಮೂಲಕ, ಎಫ್ಎಂಸಿಯು ಭೂಮಿಗೆ ಕನಿಷ್ಠ ಹಾನಿ ಬೀರುವ ರೀತಿಯಲ್ಲಿ ಸುರಕ್ಷಿತ, ಸುಭದ್ರ ಮತ್ತು ಸುಸ್ಥಿರ ಆಹಾರ ಪೂರೈಕೆಗೆ ಕೊಡುಗೆ ನೀಡುತ್ತಿದೆ.

ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಒಂದು ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಅನುಗುಣವಾಗಿ ವಿಶ್ವದ ಜನಸಂಖ್ಯೆಗೆ ಆಹಾರ, ಫೀಡ್, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ಬೆಳೆಗಾರರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಪ್ರಪಂಚದಾದ್ಯಂತ ನೂರಕ್ಕೂ ಹೆಚ್ಚು ಸೈಟ್‌ಗಳಲ್ಲಿ ಸರಿಸುಮಾರು 6,600 ಉದ್ಯೋಗಿಗಳೊಂದಿಗೆ, ಎಫ್ಎಂಸಿ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಭೂಮಿಗೆ ಸ್ಥಿರವಾಗಿ ಉತ್ತಮವಾದ ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಭೇಟಿ ನೀಡಿ fmc.com ಮತ್ತು ag.fmc.com/in/en ಹೆಚ್ಚು ತಿಳಿಯಲು ಮತ್ತು ಎಫ್ಎಂಸಿ ಇಂಡಿಯಾವನ್ನು ಅನುಸರಿಸಲು ಫೇಸ್‌ಬುಕ್® ಮತ್ತು ಯೂಟ್ಯೂಬ್®.

 

***