ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಗ್ರಾಮೀಣ ಭಾರತದಲ್ಲಿ ಕೋವಿಡ್-19 ಜಾಗೃತಿಯನ್ನು ನೀಡಿದೆ

ಭಾರತದ ಜನರು ಕೋವಿಡ್-19 ರ ವಿನಾಶಕಾರಿ ಎರಡನೇ ಅಲೆಯೊಂದಿಗೆ ಹೋರಾಟ ಮುಂದುವರೆಸಿರುವಾಗ ಅವರ ಜೊತೆಗೆ ನಿಲ್ಲುವ ತನ್ನ ಬದ್ಧತೆಯ ಭಾಗವಾಗಿ, ಎಫ್ಎಂಸಿ ಇಂಡಿಯಾವು, ಕೊರೋನಾ ವೈರಸ್ ಬಗ್ಗೆ ಒಟ್ಟಾರೆ ಜಾಗೃತಿ ಮೂಡಿಸಲು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ವೈರಸ್ ಹರಡುವಿಕೆಯನ್ನು ತಡೆಯಲು ದೇಶದಲ್ಲಿ ಬಹು-ಚಾನೆಲ್ ಶೈಕ್ಷಣಿಕ ಅಭಿಯಾನವನ್ನು ನಡೆಸಲು ಆರಂಭಿಸಿದೆ.

20 ದಿನಗಳಲ್ಲಿ ದೈನಂದಿನ ಸಂಚಿಕೆಗಳ ಸರಣಿಯನ್ನು ಪ್ರಸಾರ ಮಾಡಲು ಎಫ್ಎಂಸಿ ಎಆರ್‌ಡಿಇಎ (ಕೃಷಿ ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ) ಫೌಂಡೇಶನ್ ಮತ್ತು ಡಿಜಿಟಲ್ ಮೀಡಿಯಾ ಚಾನೆಲ್ ಗ್ರೀನ್‌ ಟಿವಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಪ್ರತಿಯೊಂದು ಸಂವಾದಾತ್ಮಕ ಸಂಚಿಕೆಯು ವೈದ್ಯಕೀಯ ತಜ್ಞರನ್ನು ಹೊಂದಿರುತ್ತದೆ, ಅವರು ರೋಗದ ವಿವಿಧ ಅಂಶಗಳ ಕುರಿತು ವೀಕ್ಷಕರಿಗೆ ಮಾಹಿತಿ ನೀಡುತ್ತಾರೆ ಮತ್ತು ನೇರ ಪ್ರಸಾರದ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ.

ಎಫ್ಎಂಸಿ ಇಂಡಿಯಾದ ರಾಷ್ಟ್ರೀಯ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾದ ರವಿ ಅನ್ನವರಪು ಹೇಳುತ್ತಾರೆ, "ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಲಕ್ಷಣಗಳ ಕುರಿತಾದ ಸೀಮಿತ ಜ್ಞಾನ ಮತ್ತು ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆ ಇರುವ ಹಿಂಜರಿಕೆಯು ಗ್ರಾಮೀಣ ಜನಸಂಖ್ಯೆಯನ್ನು ವೈರಸ್‌ಗೆ ಹೆಚ್ಚು ತುತ್ತಾಗುವಂತೆ ಮಾಡಿದೆ''. ಭಾರತೀಯ ಒಳನಾಡುಗಳಲ್ಲಿ ಕೊರೋನಾ ವೈರಸ್‌ ಕುರಿತು ಜಾಗೃತಿ ಮೂಡಿಸುವ ಮತ್ತು ಅವುಗಳನ್ನು ವೈರಸ್‌ನಿಂದ ರಕ್ಷಿಸುವ ತುರ್ತು ಅಗತ್ಯವಿದೆ. ನಮ್ಮ ಸಮುದಾಯ ಸಬಲೀಕರಣ ತೊಡಗುವಿಕೆ ಯೋಜನೆ ಸಮರ್ಥ್‌ ಜೊತೆಗೆ, ಎಫ್ಎಂಸಿ ಇಂಡಿಯಾವು ಜನರು ಸೋಂಕಿಗೆ ಒಳಗಾಗದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಮುಂಜಾಗ್ರತಾ ವಿಧಾನವನ್ನು ಆಯ್ಕೆ ಮಾಡಿದೆ.”

1.3 ದಶಲಕ್ಷಕ್ಕಿಂತ ಹೆಚ್ಚು ವೀಕ್ಷಕರನ್ನು ತಲುಪುವ ನಿರೀಕ್ಷೆ ಇರುವ, "ಕೋವಿಡ್-ಮುಕ್ತ ಹಳ್ಳಿ" ಸರಣಿಯು" ಇದು ಜೂನ್ 1, 2021 ರಿಂದ ಪ್ರತಿ ದಿನ ಬೆಳಗ್ಗೆ 8:30am ಕ್ಕೆ ಗ್ರೀನ್‌ ಟಿವಿ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳಲಿದ್ದು, ಜೂನ್ 20, 2021 ರಂದು ಅಂತಿಮ ಸಂಚಿಕೆ ಪ್ರಸಾರವಾಗಲಿದೆ. ಅದು ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಸಂಚಿಕೆಗಳನ್ನು ಎಫ್ಎಂಸಿ ಇಂಡಿಯಾದ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೂಡಾ ಪ್ರಸಾರ ಮಾಡಲಾಗುವುದು.

20-ದಿನದ ಸರಣಿಯ ಜೊತೆಗೆ, ಕೋವಿಡ್-ಸೂಕ್ತ ನಡವಳಿಕೆಯ ಕುರಿತು ಸಣ್ಣ ಶೈಕ್ಷಣಿಕ ಚಲನಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಎಫ್‌ಎಂಸಿ ತನ್ನ ಸಾಮಾಜಿಕ ಜಾಲತಾಣ ಮಾಧ್ಯಮಗಳ ಮೂಲಕ ರೈತರೊಂದಿಗೆ ಕೋವಿಡ್-19 ಕುರಿತು ಶೈಕ್ಷಣಿಕ ಮಾಹಿತಿ ಮತ್ತು ಸಲಹೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸುತ್ತದೆ.

ಒಂದು ವೇಳೆ, ನೀವು ಲೈವ್ ಸೆಷನ್‌ಗಳನ್ನು ತಪ್ಪಿಸಿಕೊಂಡರೆ ಅವುಗಳನ್ನು ಇಲ್ಲಿ ನೋಡಬಹುದಾಗಿದೆ: