ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
madhushakti

ಜೇನು ಸಾಕಣೆ ಉದ್ಯಮದ ಮೂಲಕ ಗ್ರಾಮೀಣ ಪ್ರದೇಶಗಳ ಮಹಿಳೆಯರನ್ನು ಸಬಲೀಕರಣಗೊಳಿಸಲು ಎಫ್ಎಂಸಿ ಜಿಬಿ ಪಂತ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಿದೆ

ಪಂತ್ ನಗರ್, ಏಪ್ರಿಲ್ 29, 2022: ಪ್ರಮುಖ ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾ ಇಂದು ಗೋವಿಂದ್ ಬಲ್ಲಭ್ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಜಿಬಿ ಪಂತ್ ವಿಶ್ವವಿದ್ಯಾಲಯ) ದೊಂದಿಗೆ ಸಹಭಾಗಿತ್ವವನ್ನು ಘೋಷಿಸಿದ್ದು, ಜೇನು ಸಾಕಣೆಯ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ, ಅವರ ಕುಟುಂಬಗಳಿಗೆ ಸುಸ್ಥಿರ ಆದಾಯವನ್ನು ನೀಡುವ ಮತ್ತು ಅವರ ಜೀವನ ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಈ ಸಹಭಾಗಿತ್ವವು ಹೊಂದಿದೆ.

ಪ್ರಾಜೆಕ್ಟ್ ಮಧುಶಕ್ತಿ (ಮಧು ಎಂದರೆ ಹಿಂದಿಯಲ್ಲಿ "ಜೇನು" ಮತ್ತು ಶಕ್ತಿ ಎಂದರೆ "ಮಹಿಳಾ ಶಕ್ತಿ"), ಇದು ಭಾರತದ ಮೊತ್ತಮೊದಲ ನವೀನ ಸುಸ್ಥಿರ ಅಭಿವೃದ್ಧಿ ಉಪಕ್ರಮವಾಗಿದೆ. ಮೂರು ವರ್ಷಗಳ ಅವಧಿಯ ಈ ಯೋಜನೆಯನ್ನು ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಉತ್ತರಾಖಂಡದ ಗ್ರಾಮಾಂತರ ಪ್ರದೇಶಕ್ಕಾಗಿ ಯೋಜಿಸಲಾಗಿದೆ, ಅಲ್ಲಿ ಜೇನು ಉತ್ಪಾದನೆಗೆ ಉಪಯುಕ್ತವಾದ ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಸಸ್ಯ ವರ್ಗದ ಸಮೃದ್ಧ ಮೂಲವಿದೆ. ಉತ್ತರಾಖಂಡದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಜನರು ಬೆಟ್ಟಗಳು ಮತ್ತು ಪರ್ವತಗಳಲ್ಲಿ ವಾಸಿಸುತ್ತಾರೆ, ಅದರಲ್ಲಿ 60 ಪ್ರತಿಶತದಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.

ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು ಅವರು ಹೇಳಿದರು- "ಸುಸ್ಥಿರ ವ್ಯಾಪಾರ ಅವಕಾಶಗಳೊಂದಿಗೆ ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಕುಟುಂಬಗಳ ಜೀವನವನ್ನು ಪರಿವರ್ತಿಸುವುದು ನಮ್ಮ ಪ್ರಾಜೆಕ್ಟ್ ಮಧುಶಕ್ತಿಯ ಉದ್ದೇಶವಾಗಿದೆ. ಭವಿಷ್ಯದ ಪೀಳಿಗೆಗೆ ಪರಿಸರವನ್ನು ರಕ್ಷಿಸುವ ಜೊತೆಗೆ, ಸುರಕ್ಷಿತ ಮತ್ತು ಸುಭದ್ರ ಆಹಾರ ಪೂರೈಕೆಯನ್ನು ನಿರ್ವಹಿಸುವ ರೈತರಿಗೆ ಬೆಂಬಲ ನೀಡುವ ನಮ್ಮ ಬದ್ಧತೆಯಲ್ಲಿ ನಾವು ಸುಸ್ಥಿರ ಕೃಷಿಯನ್ನು ಪ್ರಮುಖವಾಗಿ ಗಮನದಲ್ಲಿ ಇರಿಸುತ್ತೇವೆ. ಈ ಯೋಜನೆಯ ಯಶಸ್ಸು ಭಾರತದ ಮಹಿಳಾ ರೈತರಿಗೆ ಜೇನು ಸಾಕಣೆಯನ್ನು ಫಲಪ್ರದ ಪ್ರಯತ್ನವಾಗಿ ನೋಡಲು ಪ್ರೋತ್ಸಾಹಿಸುವುದಲ್ಲದೆ, ತೀವ್ರವಾದ ಕೃಷಿಯ ಅಡಿಯಲ್ಲಿ ಪರಾಗಸ್ಪರ್ಶಕ ಜನಸಂಖ್ಯೆಯನ್ನು ರಕ್ಷಿಸುವ ಬಗ್ಗೆ ಜಾಗತಿಕ ಕಾಳಜಿಯನ್ನು ಮೂಡಿಸುತ್ತದೆ.” 

ಯೋಜನೆಯ ಭಾಗವಾಗಿ, ಸಿತಾರ್‌ಗಂಜ್, ಕೋಟಾಬಾಗ್ ಮತ್ತು ಅಲ್ಮೋರಾ ಮತ್ತು ರಾಣಿಖೇತ್ ಪಟ್ಟಣಗಳಿಂದ ಗ್ರಾಮೀಣ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಜೇನು ಸಾಕಣೆಯ ಕುರಿತು ತರಬೇತಿ ನೀಡಲಾಗುತ್ತದೆ. ರೈತರ ಜೇನು ಪೆಟ್ಟಿಗೆಗಳಿಂದ ಸಿಗುವ ಉತ್ಪನ್ನವನ್ನು, ಜೇನುಹುಳು ಸಂಶೋಧನೆ ಮತ್ತು ತರಬೇತಿ ಕೇಂದ್ರ ವಿಶ್ವವಿದ್ಯಾಲಯವು (ಎಚ್‌ಬಿಆರ್‌ಟಿಸಿ), ರೈತರಿಗೆ ಪಾವತಿಸಲು ಅನುಕೂಲವಾಗುವಂತೆ ಮತ್ತು ಜೇನು ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಾಪಿಸಲಾದ ಆವರ್ತ ನಿಧಿಯ ಮೂಲಕ ಸಂಗ್ರಹಿಸುತ್ತದೆ. ಯೋಜನೆಯು ಪರಾಗಸ್ಪರ್ಶಕ ನಡವಳಿಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ, ಮತ್ತು ದೇಶಾದ್ಯಂತ ಜೇನು ಸಾಕಣೆದಾರರಿಗೆ ಪ್ರಯೋಜನವನ್ನು ನೀಡುವ ವೈಜ್ಞಾನಿಕ ಜ್ಞಾನದ ಸಂಪತ್ತನ್ನು ಸಂಗ್ರಹಿಸುತ್ತದೆ.

ಈ ಯೋಜನೆಯ ಯಶಸ್ಸು, ದೇಶದ ಇನ್ನಷ್ಟು ಮಹಿಳಾ ರೈತರಿಗೆ ಜೇನು ಸಾಕಣೆಯನ್ನು ಉದ್ಯಮಶೀಲತೆಯ ವ್ಯವಹಾರವಾಗಿ ಅಳವಡಿಸಿಕೊಳ್ಳಲು ಸ್ಫೂರ್ತಿ ನೀಡುವ ಗುರಿಯನ್ನು ಹೊಂದಿದೆ. ಉತ್ತರಾಖಂಡದಲ್ಲಿ ಪರಾಗಸ್ಪರ್ಶಕಗಳ (ಜೇನು ಹುಳುಗಳ) ಸಾಂದ್ರತೆಯ ಹೆಚ್ಚಳವು, ಪರಾಗಸ್ಪರ್ಶದ ದರದಲ್ಲಿ ಹೆಚ್ಚಳ ಮತ್ತು ಕೃಷಿ ಉತ್ಪಾದಕತೆಯನ್ನು ಬೆಂಬಲಿಸುವ ಜೀವ ವೈವಿಧ್ಯತೆಯ ಬೆಳವಣಿಗೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುವುದನ್ನು ನಿರೀಕ್ಷಿಸಲಾಗಿದೆ,. ಯೋಜನೆಯ ಇತರ ಗುರಿಗಳು, ಜೇನು ಹುಳುಗಳನ್ನು ಸುರಕ್ಷಿತವಾಗಿರಿಸಲು ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಶೀಲ ಬಳಕೆಗೆ ಕಾರಣವಾಗುವ ಉತ್ತಮ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುವುದನ್ನು ಒಳಗೊಂಡಿವೆ.

ಜಿಬಿ ಪಂತ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ಚೌಹಾಣ್ ಅವರು ಹೇಳಿದರು, "ಜೇನು ಸಾಕಣೆಯು ರಾಜ್ಯದ ಗ್ರಾಮೀಣ ಮಹಿಳೆಯರಿಗೆ ಕನಿಷ್ಠ ಹೂಡಿಕೆ ಮತ್ತು ಬಹುಪಟ್ಟು ಪ್ರಯೋಜನಗಳೊಂದಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಕರಿಸುವ ಅತ್ಯಂತ ಸಮರ್ಥನೀಯ ವ್ಯವಹಾರ ಅವಕಾಶಗಳಲ್ಲಿ ಒಂದಾಗಿದೆ. ರಾಜ್ಯದ ಶ್ರೀಮಂತ ಜೀವ ವೈವಿಧ್ಯತೆಯು ಜೇನು ಹುಳುಗಳ ಅಭಿವೃದ್ಧಿಗೆ, ವ್ಯಾಪಕವಾದ ಜೇನುತುಪ್ಪ ಉತ್ಪಾದನೆಗೆ ಮತ್ತು ಪರಿಸರವನ್ನು ಚೆನ್ನಾಗಿ ಸಮತೋಲನದಲ್ಲಿ ಇಡಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಪರಿಸರಕ್ಕೆ ಮಾತ್ರವಲ್ಲದೆ ವೈಯಕ್ತಿಕ ರೈತರಿಗೆ ಕೂಡ ಬಹಳ ಪ್ರಯೋಜನಕಾರಿಯಾಗಿದೆ.”

ಉತ್ತರಾಖಂಡ್‌ನಂತಹ ಜೈವಿಕ ವೈವಿಧ್ಯಮಯ ರಾಜ್ಯದಲ್ಲಿ, ಜೇನು ಸಾಕಣೆಯ ಸಾಮರ್ಥ್ಯವು ಬಳಕೆಯಾಗದೆ ಉಳಿದಿದೆ. ರಾಜ್ಯವು ಸದ್ಯಕ್ಕೆ ಕೇವಲ 12,500 ಮೆಟ್ರಿಕ್ ಟನ್‌ಗಳಷ್ಟು ಜೇನನ್ನು ಉತ್ಪಾದಿಸುತ್ತದೆ. ಮಧುಶಕ್ತಿಯಂತಹ ಯೋಜನೆಯ ಆಶ್ರಯದಲ್ಲಿ ಈ ಅಂಕಿ-ಅಂಶವು ಗಮನಾರ್ಹವಾಗಿ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಜೇನು ಸಾಕಣೆಯು ತುಂಬಾ ಆಕರ್ಷಕ ಮತ್ತು ಲಾಭದಾಯಕ ಗ್ರಾಮೀಣ,ಕೃಷಿ-ಆಧಾರಿತ ಉದ್ಯಮವಾಗಿದ್ದು, ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಅಥವಾ ಮೂಲಸೌಕರ್ಯದ ಅಗತ್ಯವಿಲ್ಲ, ಮತ್ತು ಕಡಿಮೆ ಹೂಡಿಕೆ. ರೈತ ಸಮುದಾಯದ ಆರ್ಥಿಕತೆಯನ್ನು ಹೆಚ್ಚಿಸುವ ಸಂಬಂಧಿತ ಚಟುವಟಿಕೆಯಾಗಿ ಸಮಗ್ರ ಕೃಷಿ ವ್ಯವಸ್ಥೆಯಲ್ಲಿ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಜಿ.ಬಿ. ಪಂತ್ ವಿಶ್ವವಿದ್ಯಾನಿಲಯದಲ್ಲಿ ಉಪ ಕುಲಪತಿ ಡಾ. ಎ.ಕೆ. ಶುಕ್ಲಾ, ಎಫ್ಎಂಸಿ ಇಂಡಿಯಾ ಅಧ್ಯಕ್ಷ ರವಿ ಅನ್ನವರಪು, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಅಜೀತ್ ನೈನ್, ಎಫ್ಎಂಸಿ ಸಾರ್ವಜನಿಕ ಮತ್ತು ಕೈಗಾರಿಕಾ ವ್ಯವಹಾರಗಳ ನಿರ್ದೇಶಕ ರಾಜು ಕಪೂರ್ ಮತ್ತು ಏಷ್ಯಾ ಪೆಸಿಫಿಕ್ ಎಫ್‌ಎಂಸಿ ಉಸ್ತುವಾರಿ ಮುಖ್ಯಸ್ಥ ಎಸ್ಲೆ ಎನ್‌ಜಿ ಸಮ್ಮುಖದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.

ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ನೀವು fmc.com ಮತ್ತು ag.fmc.com/in/en ಹೆಚ್ಚು ತಿಳಿಯಲು ಮತ್ತು ಎಫ್ಎಂಸಿ ಇಂಡಿಯಾವನ್ನು ಅನುಸರಿಸಲು ಫೇಸ್‌ಬುಕ್® ಮತ್ತು ಯೂಟ್ಯೂಬ್®.

Madhu shakti

 

madhushkti2