ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಐಸೋಫ್ಲೆಕ್ಸ್® ಆ್ಯಕ್ಟಿವ್ ಮತ್ತು ಆ್ಯಂಬ್ರಿವಾ™ ಕಳೆನಾಶಕಕ್ಕಾಗಿ ಎಫ್ಎಂಸಿ ಭಾರತದಲ್ಲಿ ನೋಂದಣಿಯನ್ನು ಪಡೆದುಕೊಂಡಿದೆ

ಮುಂಬೈ, 30 ಜುಲೈ 2024 ಪ್ರಮುಖ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ, ಭಾರತದಲ್ಲಿ ಗೋಧಿ ಬೆಳೆಯಲ್ಲಿ ಐಸೋಫ್ಲೆಕ್ಸ್® ಆ್ಯಕ್ಟಿವ್ ಮತ್ತು ಆ್ಯಂಬ್ರಿವಾ™ ಕಳೆನಾಶಕವನ್ನು ಬಳಸಲು ನೋಂದಣಿಯನ್ನು ಪಡೆದಿದೆ. ಐಸೋಫ್ಲೆಕ್ಸ್® ಆ್ಯಕ್ಟಿವ್‌ ನಿಂದ ಚಾಲಿತವಾದ ಆ್ಯಂಬ್ರಿವಾ™ ಕಳೆನಾಶಕ, ಗೋಧಿಗೆ ನವೀನ ರಕ್ಷಣೆಯನ್ನು ಒದಗಿಸುತ್ತದೆ. ಐಸೋಫ್ಲೆಕ್ಸ್® ಆ್ಯಕ್ಟಿವ್ ಅನ್ನು ಕಳೆನಾಶಕ ಪ್ರತಿರೋಧ ಕ್ರಿಯೆ ಸಮಿತಿ (ಎಚ್‌ಆರ್‌ಎಸಿ) ಗ್ರೂಪ್ 13 ಕಳೆನಾಶಕವಾಗಿ ವರ್ಗೀಕರಿಸಿದೆ.

"ಎಫ್ಎಂಸಿಯಲ್ಲಿ, ರೈತರಿಗೆ ತಮ್ಮ ಬೆಳೆಗಳನ್ನು ರಕ್ಷಿಸಲು ಮತ್ತು ಇಳುವರಿಯನ್ನು ಉತ್ತಮಗೊಳಿಸಲು ಸಹಾಯ ಮಾಡುವ ನವೀನ ಬೆಳೆ ಪರಿಹಾರಗಳೊಂದಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ" ಎಂದು ಎಫ್ಎಂಸಿ ಇಂಡಿಯಾ ಮತ್ತು ನೈಋತ್ಯ ಏಷ್ಯಾ ಅಧ್ಯಕ್ಷ ರವಿ ಅನ್ನವರಪು ಹೇಳಿದರು. ''ಕಳೆದ ಕೆಲವು ವರ್ಷಗಳಲ್ಲಿ, ನಾವು ಅನೇಕ ಋತುಗಳಲ್ಲಿ ಗೋಧಿಯಲ್ಲಿ ಆ್ಯಂಬ್ರಿವಾ™ ಕಳೆನಾಶಕವನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿದ್ದೇವೆ,"ಕಳೆದ ಕೆಲವು ವರ್ಷಗಳಲ್ಲಿ, ನಾವು ಫಲಾರಿಸ್ ಮೈನರ್ ವಿರುದ್ಧ ಸ್ಥಿರವಾದ ಕಾರ್ಯಕ್ಷಮತೆಯನ್ನು ಗಮನಿಸುತ್ತಾ, ಗೋಧಿಯಲ್ಲಿ ಆ್ಯಂಬ್ರಿವಾ™ ಕಳೆನಾಶಕವನ್ನು ಹಲವು ಋತುಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಿದ್ದೇವೆ. ಇತರ ಕಳೆನಾಶಕಗಳಿಗೆ ನಿರೋಧಕವಾಗಿರುವ ಫಲಾರಿಸ್ ಮೈನರ್ ಅನ್ನು ನಿಯಂತ್ರಿಸಲು ಬೆಳೆಗಾರರಿಗೆ ಹೊಸ ಮತ್ತು ಪರಿಣಾಮಕಾರಿ ಸಾಧನವನ್ನು ಒದಗಿಸುವ ಮೂಲಕ ಆ್ಯಂಬ್ರಿವಾ™ ಕಳೆನಾಶಕವು ಆರೋಗ್ಯಕರ ಬೆಳೆಗೆ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ"

ಐಸೋಫ್ಲೆಕ್ಸ್® ಆ್ಯಕ್ಟಿವ್ ಮತ್ತು ಮೆಟ್ರಿಬ್ಯೂಜಿನ್ ಅನ್ನು ಹೊಂದಿರುವ ಆ್ಯಂಬ್ರಿವಾ™ ಕಳೆನಾಶಕವು ಗೋಧಿ ರೈತರಿಗೆ, ವಿಶೇಷವಾಗಿ ಇಂಡೋ-ಗಂಗಾ ಬಯಲುಗಳ ವಾಯುವ್ಯ ಪ್ರದೇಶಗಳಲ್ಲಿ ಬೆಂಬಲ ನೀಡುತ್ತದೆ. ಈ ಪ್ರದೇಶದಲ್ಲಿ ಫಲಾರಿಸ್ ಮೈನರ್ ಬೆಳೆ ಇಳುವರಿ ಸಾಮರ್ಥ್ಯಕ್ಕೆ ಗಮನಾರ್ಹ ಸವಾಲು ಎಸಗುತ್ತದೆ. ಆ್ಯಂಬ್ರಿವಾ™ ಕಳೆನಾಶಕವು ಫಲಾರಿಸ್ ಮೈನರ್ ವಿರುದ್ಧ ಉಳಿಕೆಯ ನಿಯಂತ್ರಣವನ್ನು ಪ್ರದರ್ಶಿಸುತ್ತದೆ ಮತ್ತು ಕಳೆ ಮೊಳೆತ ನಂತರ ನಿಯಂತ್ರಿಸುವ ಮೂಲಕ ನಿರ್ಣಾಯಕ ಬೆಳೆ-ಕಳೆ ಸ್ಪರ್ಧೆಯ ಅವಧಿಯಲ್ಲಿ ಗೋಧಿಯನ್ನು ರಕ್ಷಿಸುವ ಅಂತಿಮ ಪರಿಹಾರವಾಗಿದೆ ಎಂದು ಅಧ್ಯಯನಗಳು ತೋರಿಸಿವೆ.

Isoflex® Active and Ambriva® Herbicide

ಭಾರತದಲ್ಲಿ ಆ್ಯಂಬ್ರಿವಾ™ ಕಳೆನಾಶಕದ ನೋಂದಣಿ ಮತ್ತು ತಕ್ಷಣದ ಬಿಡುಗಡೆಯು ಎಫ್ಎಂಸಿಗೆ ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ. ಇದು ಎಫ್ಎಂಸಿಯ ಸದೃಢ ಪೈಪ್‌ಲೈನ್‌ನ ಬಲವನ್ನು ಮತ್ತು ಬೆಳೆಗಳ ಉತ್ಪಾದಕತೆ ಮತ್ತು ಸ್ಥಿರತೆಯನ್ನು ಹೆಚ್ಚಿಸುವ ಹೊಸ ನಾವೀನ್ಯತೆಯ ಪರಿಹಾರಗಳ ಮೂಲಕ ಬೆಳೆಗಾರರ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಐಸೋಫ್ಲೆಕ್ಸ್® ಆ್ಯಕ್ಟಿವ್ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ನೋಂದಣಿಯಾಗಿದೆ.

ಎಫ್ಎಂಸಿ ಬಗ್ಗೆ                                    

ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಮೇವು, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಪ್ರಪಂಚದಾದ್ಯಂತ ನೂರಕ್ಕೂ ಹೆಚ್ಚು ಸೈಟ್‌ಗಳಲ್ಲಿ ಸರಿಸುಮಾರು 6,200 ಉದ್ಯೋಗಿಗಳೊಂದಿಗೆ, ಎಫ್ಎಂಸಿ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಭೂಮಿಗೆ ಸ್ಥಿರವಾಗಿ ಉತ್ತಮವಾದ ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಭೇಟಿ ನೀಡಿ fmc.com ಮತ್ತು ag.fmc.com/in/en ಹೆಚ್ಚು ತಿಳಿಯಲು ಮತ್ತು ಎಫ್ಎಂಸಿ ಇಂಡಿಯಾವನ್ನು ಅನುಸರಿಸಲು Facebook® and YouTube

ಆ್ಯಂಬ್ರಿವಾ™ and Iಐಸೋಫ್ಲೆಕ್ಸ್® ಆ್ಯಕ್ಟಿವ್ ಎಫ್ಎಂಸಿ ಕಾರ್ಪೊರೇಶನ್ ಮತ್ತು/ಅಥವಾ ಅಂಗಸಂಸ್ಥೆಯ ಟ್ರೇಡ್‌ಮಾರ್ಕ್‌ಗಳಾಗಿವೆ. ಬಳಕೆಗಾಗಿ ಯಾವಾಗಲೂ ಎಲ್ಲಾ ಲೇಬಲ್ ನಿರ್ದೇಶನಗಳು, ನಿರ್ಬಂಧಗಳು ಮತ್ತು ಮುನ್ನೆಚ್ಚರಿಕೆಗಳನ್ನು ಓದಿ ಮತ್ತು ಅನುಸರಿಸಿ.