ಮುಂಬೈ, ಜೂನ್ 27, 2022 - ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾವು, ಕಬ್ಬಿನ ಬೆಳೆಯ ರಕ್ಷಣೆಗಾಗಿ ಕಳೆ ಹುಟ್ಟುವ ಮೊದಲೇ ಬಳಸುವ ನವೀನ ಆಸ್ಟ್ರಲ್® ಕಳೆನಾಶಕವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆಸ್ಟ್ರಲ್® ಕಳೆನಾಶಕವು ಕಬ್ಬಿನ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ವಿಶಾಲ-ವ್ಯಾಪ್ತಿಯ ಕಳೆ ನಿಯಂತ್ರಣವನ್ನು ಒದಗಿಸುವ ಮೂಲಕ, ಉತ್ತಮ ಇಳುವರಿಗಾಗಿ ಕಬ್ಬು ಸದೃಢವಾಗಿ ಬೆಳೆಯುವುದನ್ನು ಖಚಿತಪಡಿಸುತ್ತದೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಕ ರಾಷ್ಟ್ರವಾಗಿದೆ ಆದರೂ, ಪ್ರತಿ ವರ್ಷ ಕಬ್ಬು ಬೆಳೆಗಾರರು ಕಳೆಗಳಿಂದ ಭಾರೀ ಬೆಳೆ ನಷ್ಟವನ್ನು ಅನುಭವಿಸುತ್ತಾರೆ ಮತ್ತು ವಿವಿಧ ಹುಲ್ಲುಗಳು ಮತ್ತು ಅಗಲವಾದ ಕಳೆಗಳನ್ನು ನಿಯಂತ್ರಿಸುವುದು ಸವಾಲಿನ ವಿಷಯವಾಗಿದೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ - ಕಬ್ಬು ತಳಿ ಸಂಸ್ಥೆ (ಐಸಿಎಆರ್ - ಎಸ್‌ಬಿಐ) ಅಂದಾಜು ಮಾಡುವ ಪ್ರಕಾರ ಕಬ್ಬಿನ ಗದ್ದೆಯಲ್ಲಿ ಆವರಿಸಿರುವ ವಿವಿಧ ಕಳೆ ಪ್ರಭೇದಗಳ ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿ ಕಬ್ಬಿನ ಉತ್ಪಾದಕತೆಯಲ್ಲಿ 10 ಶೇಕಡಾದಿಂದ 70 ಶೇಕಡಾ ಹಾನಿ ಉಂಟಾಗುತ್ತದೆ.
ಆಸ್ಟ್ರಲ್® ಕಳೆನಾಶಕದ ವಿಶಿಷ್ಟ ಡ್ಯುಯಲ್ ಮೋಡ್ ಕ್ರಿಯೆಯು, ಕಳೆಯು ನಿರ್ಣಾಯಕ ರೀತಿಯಲ್ಲಿ ಕಬ್ಬಿನ ಬೆಳೆಗೆ ಸ್ಪರ್ಧೆ ಒಡ್ಡುವ ಅವಧಿಯಲ್ಲಿ ಕಳೆ ಮುಕ್ತ ಪರಿಸ್ಥಿತಿಯನ್ನು ಒದಗಿಸುತ್ತದೆ ಈ ನವೀನ ಸ್ವಾಮ್ಯದ ಉತ್ಪನ್ನ ಪರಿಹಾರವು ಮಣ್ಣಿನ ಮೇಲ್ಭಾಗದಲ್ಲಿ ರಕ್ಷಣೆಯ ಪದರವನ್ನು ರೂಪಿಸುವ ಮೂಲಕ ಬೆಳೆ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಕಳೆಗಳು ಮೊಳಕೆ ಒಡೆಯುವುದನ್ನು ತಡೆಯುತ್ತದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಆರೋಗ್ಯಕರ ಪೈರುಗಳು ಮೂಡುತ್ತವೆ ಮತ್ತು ಕಬ್ಬಿನ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ.
ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು ಹೇಳಿದರು- "ಎಫ್ಎಂಸಿಯಲ್ಲಿ ನಾವು ಪ್ರಬಲ ಆರ್&ಡಿ ತಂಡವನ್ನು ಹೊಂದಿದ್ದು, ಇತ್ತೀಚಿನ ಜಾಗತಿಕ ತಂತ್ರಜ್ಞಾನಗಳನ್ನು ಬಳಕೆಗೆ ತರಲು ಮತ್ತು ಭಾರತೀಯ ರೈತರ ಸವಾಲುಗಳನ್ನು ಪರಿಹರಿಸಲು ಉತ್ತಮ ಮತ್ತು ಸುಸ್ಥಿರ ಪರಿಹಾರಗಳನ್ನು ಪರಿಚಯಿಸಲು ಬದ್ಧರಾಗಿದ್ದೇವೆ ಕಬ್ಬು ಬೆಳೆಗಾರರಿಗಾಗಿ ಆಸ್ಟ್ರಲ್® ಕಳೆನಾಶಕವನ್ನು ಪರಿಚಯಿಸಿರುವುದು, ತಂತ್ರಜ್ಞಾನ-ಚಾಲಿತ, ವೈಜ್ಞಾನಿಕ ಪರಿಹಾರಗಳ ಮೂಲಕ ಉತ್ತಮ ಇಳುವರಿಯನ್ನು ಸಕ್ರಿಯಗೊಳಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಆಸ್ಟ್ರಲ್® ಕಳೆನಾಶಕವು ಪರಿಣಾಮಕಾರಿ ಕಳೆ ರಕ್ಷಣೆಯ ಮೂಲಕ ಕಬ್ಬು ಬೆಳೆಗಾರರಿಗೆ ತಮ್ಮ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ”.
ಆಸ್ಟ್ರಲ್® ಕಳೆನಾಶಕವು ಮುಂಬರುವ ಋತುವಿನಲ್ಲಿ ದೇಶಾದ್ಯಂತ ಪ್ರಮುಖ ಚಿಲ್ಲರೆ ಮಳಿಗೆಗಳಲ್ಲಿ 500 ಗ್ರಾಂ ಮತ್ತು 1 ಕೆ.ಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.
ಎಫ್ಎಂಸಿ ಬಗ್ಗೆ
ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ನೀವು fmc.com ಮತ್ತು ag.fmc.com/in/en ಹೆಚ್ಚು ತಿಳಿಯಲು ಮತ್ತು ಎಫ್ಎಂಸಿ ಇಂಡಿಯಾವನ್ನು ಅನುಸರಿಸಲು ಫೇಸ್‌ಬುಕ್® ಮತ್ತು ಯೂಟ್ಯೂಬ್®.