09 ಫೆಬ್ರವರಿ, ಮುಂಬೈ
ಎಫ್ಎಂಸಿ ಕಾರ್ಪೊರೇಶನ್, ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಇಂದು ಭಾರತದಲ್ಲಿ ರೈತರಿಗೆ ಡ್ರೋನ್ ಸಿಂಪಡಣೆ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ.
ಭಾರತದಲ್ಲಿ ವಾಯು ಸಾರಿಗೆ ಸೇವೆಗಳ ನಿಯಂತ್ರಣಕ್ಕೆ ಜವಾಬ್ದಾರರಾಗಿರುವ ಸರ್ಕಾರಿ ಸಂಸ್ಥೆಯಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದಿಂದ ಅನುಮೋದಿಸಲ್ಪಟ್ಟ ಡ್ರೋನ್ ಸೇವೆಯು ಕೈ ಕೆಲಸದ ಕಾರ್ಮಿಕರ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಕೃಷಿ ಉತ್ಪಾದಕತೆಯನ್ನು ಸುಧಾರಿಸುವ ನಿರೀಕ್ಷೆಯಿದೆ. ಎಫ್ಎಂಸಿಯ ಡ್ರೋನ್ ಸಿಂಪಡಣೆ ಸೇವೆಯನ್ನು ಎಫ್ಎಂಸಿ ಇಂಡಿಯಾ ರೈತರ ಆ್ಯಪ್ ಮೂಲಕ ಪಡೆಯಬಹುದಾಗಿದ್ದು, ಆ್ಯಪ್ ಏಳು ಪ್ರಾದೇಶಿಕ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಈ ಸೇವೆಯು ಸದ್ಯಕ್ಕೆ ಆಂಧ್ರಪ್ರದೇಶದಲ್ಲಿ ಲಭ್ಯವಿದೆ ಮತ್ತು ತಿಂಗಳಾಂತ್ಯದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ರಾಜ್ಯಗಳಲ್ಲಿಯೂ ಆರಂಭಗೊಳ್ಳಲಿದೆ.
ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು ಅವರು, "ಕೃಷಿ ವಲಯದಲ್ಲಿ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಿರುವುದರಿಂದ, 2030 ರ ಕೊನೆಯಲ್ಲಿ ದೇಶದ ಒಟ್ಟು ಕೃಷಿ ಯಂತ್ರೋಪಕರಣಗಳ ಖರ್ಚಿನಲ್ಲಿ ಡ್ರೋನ್‌ಗಳು 2 ಪ್ರತಿಶತವನ್ನು ಹೊಂದಿರಬೇಕು ಎಂದು ನಿರೀಕ್ಷಿಸಲಾಗಿದೆ. ಈ ಪ್ರಾಯೋಗಿಕ ಹಂತದಲ್ಲಿ, ಭಾರತೀಯ ಕೃಷಿ ಸಮುದಾಯದ ಪ್ರಯೋಜನಕ್ಕಾಗಿ ಡ್ರೋನ್ ಅಪ್ಲಿಕೇಶನ್‌ನಲ್ಲಿ ಎಫ್ಎಂಸಿ ತನ್ನ ಆಳವಾದ ಜಾಗತಿಕ ಜ್ಞಾನ ಮತ್ತು ಪರಿಣತಿಯನ್ನು ಬಳಸುತ್ತದೆ. ಮೊದಲ ಮೂರು ತಿಂಗಳಲ್ಲಿ ಆಯ್ದ ರಾಜ್ಯಗಳಲ್ಲಿ ಭಾರತೀಯ ರೈತರಲ್ಲಿ ನಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ನಾವು ಯೋಜಿಸಿದ್ದೇವೆ ಮತ್ತು ನಂತರ ಮುಂದಿನ ಖಾರಿಫ್ ಅವಧಿ ಆರಂಭವಾಗುವ ಮೊದಲು ದೇಶಾದ್ಯಂತದ ರೈತರಿಗೆ ಸೇವೆಗಳನ್ನು ವಿಸ್ತರಿಸುತ್ತೇವೆ'' ಎಂದು ಹೇಳಿದರು
ಕೃಷಿ ಮಾನವರಹಿತ ವಾಹನಗಳು (ಯುಎವಿಗಳು) ಸಿಂಪಡಣೆ ಏಕರೂಪತೆ ಮತ್ತು ಕವರೇಜ್ ಮೇಲೆ ಹೆಚ್ಚಿನ ನಿಯಂತ್ರಣವನ್ನು ಅನುಮತಿಸುತ್ತವೆ, ಜೊತೆಗೆ ಎಫ್ಎಂಸಿಯ ಪ್ರೀಮಿಯಂ ಮತ್ತು ರೈತ-ವಿಶ್ವಾಸಾರ್ಹ ಬ್ರ್ಯಾಂಡ್‌ಗಳಾದ ಕೊರಾಜೆನ್® ಕೀಟನಾಶಕ ಮತ್ತು ಬೆನೀವಿಯಾ® ಕೀಟನಾಶಕಗಳಂತಹ ಬೆಳೆ ರಕ್ಷಣಾ ಉತ್ಪನ್ನಗಳನ್ನು ಅನ್ವಯಿಸುವ ನಿಖರತೆಯನ್ನು ಸುಧಾರಿಸುತ್ತದೆ. ಪ್ರತಿ ಸ್ಪ್ರೇ ಡ್ರೋನ್ 15-20 ನಿಮಿಷಗಳಲ್ಲಿ 3-4 ಎಕರೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ, ಇದು ಸ್ಪ್ರೇ ಮಾಡುವ ಕೆಲಸವನ್ನು ಸುಲಭವಾಗಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ಯುಎವಿಗಳನ್ನು ಬಳಸುವುದರಿಂದ ರೈತರನ್ನು ಹೀಟ್ ಸ್ಟ್ರೋಕ್‌ನಂತಹ ಪರಿಸರ ಅಪಾಯಗಳಿಂದ ಕೂಡ ರಕ್ಷಿಸುತ್ತದೆ.
ಮುಂದುವರಿದು ಅನ್ನವರಪು ಅವರು, "ರೈತರು ಸುಸ್ಥಿರ ರೀತಿಯಲ್ಲಿ ಇಳುವರಿಯನ್ನು ಹೆಚ್ಚಿಸಲು ನೆರವಾಗಲು ಅವರಿಗೆ ನವೀನ ಪರಿಹಾರಗಳನ್ನು ಒದಗಿಸುವ ಕಡೆಗೆ ನಮ್ಮ ಪ್ರಯತ್ನಗಳು ನಿರಂತರವಾಗಿ ನಿರ್ದೇಶಿಸಲ್ಪಟ್ಟಿವೆ. ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಲು ನಾವು ಡ್ರೋನ್ ತಂತ್ರಜ್ಞಾನ, ತರಬೇತಿ ಮತ್ತು ಹಣಕಾಸಿನ ನೆರವು ನೀಡುತ್ತೇವೆ. ಹೆಚ್ಚುವರಿಯಾಗಿ, ತಂತ್ರಜ್ಞಾನದೊಂದಿಗೆ ಕೃಷಿಯನ್ನು ಆಧುನಿಕರಣಗೊಳಿಸಲು ಸರ್ಕಾರ ಗಮನ ಹರಿಸುತ್ತದೆ ಹಾಗೂ ಡ್ರೋನ್ ಕಾರ್ಯಾಚರಣೆಗಳಂತಹ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಿಖರ ಕೃಷಿಯ ವ್ಯಾಪಕ ಬಳಕೆಯನ್ನು ಖಚಿತಪಡಿಸುತ್ತದೆ. ಭಾರತೀಯ ಕೃಷಿಯು ಬದಲಾವಣೆಯ ಹಂತದಲ್ಲಿದೆ ಮತ್ತು ಕೃಷಿ ಅಭ್ಯಾಸಗಳನ್ನು ಪರಿವರ್ತಿಸುವಲ್ಲಿ ಡ್ರೋನ್ ಸೇವೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ನಾವು ನಂಬುತ್ತೇವೆ. ಭಾರತೀಯ ಕೃಷಿ ಸಮುದಾಯಕ್ಕೆ ಈ ಸೇವೆ ನೀಡುತ್ತಿರುವ ಪ್ರವರ್ತಕರಲ್ಲಿ ಒಬ್ಬರಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದರು.”
ಎಫ್ಎಂಸಿ ರೈತರ ಆ್ಯಪ್ ಅನ್ನು ಐಒಎಸ್ ಆ್ಯಪ್‌ಸ್ಟೋರ್ ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್ ಎರಡರಿಂದಲೂ ಡೌನ್ಲೋಡ್ ಮಾಡಬಹುದು.
ಎಫ್ಎಂಸಿ ಬಗ್ಗೆ
ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಫೇಸ್‌ಬುಕ್® ಮತ್ತು ಯೂಟ್ಯೂಬ್® ನಲ್ಲಿ ಎಫ್ಎಂಸಿ ಇಂಡಿಯಾದ ಬಗ್ಗೆ ಹೆಚ್ಚು ತಿಳಿಯಲು fmc.com ಮತ್ತು ag.fmc.com/in/en ಗೆ ಭೇಟಿ ನೀಡಿ.