ಸುಸ್ಥಿರ ಕೃಷಿಯನ್ನು ಹೆಚ್ಚಿಸುವ ಬದ್ಧತೆಯೊಂದಿಗೆ, ಎಫ್ಎಂಸಿ ಇಂಡಿಯಾವು ಮಾರ್ಚ್ 22, 2021 ರಂದು 18 ರಾಜ್ಯಗಳಲ್ಲಿ 400 ಕ್ಕಿಂತ ಹೆಚ್ಚು ರೈತರ ಸಭೆಗಳನ್ನು ಆಯೋಜಿಸುವ ಮೂಲಕ ವಿಶ್ವ ನೀರಿನ ದಿನವನ್ನು ಆಚರಿಸಿತು, ಇದು ದೇಶದಾದ್ಯಂತ ಕೃಷಿ ಸಮುದಾಯದಲ್ಲಿ 14,000 ಕ್ಕಿಂತ ಹೆಚ್ಚು ಜನರನ್ನು ತಲುಪಿದೆ.
ಭಾರತದ ಜಲ ಪೋರ್ಟಲ್ ಪ್ರಕಾರ, ಭಾರತದಲ್ಲಿ ಬಳಕೆಯಾಗುವ ಮೇಲ್ಮೈ ನೀರಿನ 80 ಶೇಕಡಾ ನೀರು ಕೃಷಿಗೆ ಬಳಕೆಯಾಗುತ್ತದೆ, ಇದು ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಹೆಚ್ಚುತ್ತಿರುವ ನೀರಿನ ಕೊರತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ. ಕೃಷಿಯಲ್ಲಿ ನೀರಿನ ನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡಲು, ಎಫ್ಎಂಸಿ ತಾಂತ್ರಿಕ ಕ್ಷೇತ್ರ ತಜ್ಞರು ರೈತರೊಂದಿಗೆ ಕೃಷಿಯ ಸುಸ್ಥಿರತೆಯನ್ನು ಹೆಚ್ಚಿಸುವ ಉತ್ತಮ ಕೃಷಿ ಅಭ್ಯಾಸಗಳ ಕುರಿತು ಮಾತನಾಡಿದ್ದಾರೆ ಮತ್ತು ನೀರಿನ ಬಳಕೆಯನ್ನು ಉತ್ತಮಗೊಳಿಸುವ, ದಕ್ಷತೆಯನ್ನು ಹೆಚ್ಚಿಸುವ ಮತ್ತು ನೀರನ್ನು ಸಂರಕ್ಷಿಸುವ ವಿವಿಧ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕಲುಷಿತ ನೀರಿನ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಎಫ್ಎಂಸಿ ತಂಡವು ಶುದ್ಧ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ಕೂಡ ತಿಳಿಸಿ ಹೇಳುತ್ತಿದೆ. ಕಲುಷಿತ ನೀರು ಸೇವನೆಯು ದೇಶದಲ್ಲಿ ಗಂಭೀರವಾದ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗಿದೆ ಮತ್ತು ಈ ಸಮಸ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಿದ್ದು, ರೈತ ಕುಟುಂಬಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದಾಗಿದೆ.
ಎಫ್ಎಂಸಿ ಇಂಡಿಯಾದ ಅಧ್ಯಕ್ಷರಾದ ಶ್ರೀ ಪ್ರಮೋದ್ ಥೋಟ ಹೇಳಿದರು, "ಈ ವಿಶ್ವ ಜಲ ದಿನದಂದು, ಕುಡಿಯುವ ನೀರಿನ ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಹೆಚ್ಚಿಸಲು ರೈತರಿಗೆ ಉತ್ತಮ ಅಭ್ಯಾಸಗಳ ಬಗ್ಗೆ ಶಿಕ್ಷಣ ನೀಡುವ ಕುರಿತು ನಮ್ಮ ಗಮನವಿದೆ. ಭಾರತದಲ್ಲಿ ಸುಸ್ಥಿರತೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ವಿವಿಧ ಬೆಳೆ ಸರಪಳಿಗಳು ಮತ್ತು ಭೌಗೋಳಿಕ ವಲಯಗಳ ಭಾರತೀಯ ರೈತರೊಂದಿಗೆ ನಾವು ಮೂರು ದಶಕಗಳಿಂದ ಪಾಲುದಾರಿಕೆ ಹೊಂದಿದ್ದೇವೆ. ಉತ್ತಮ ಭವಿಷ್ಯಕ್ಕಾಗಿ ಸುಸ್ಥಿರ ಕೃಷಿ ಅಭ್ಯಾಸಗಳನ್ನು ಉತ್ತೇಜಿಸಲು ನಾವು 4,000 ಕ್ಕಿಂತ ಹೆಚ್ಚು ತಾಂತ್ರಿಕ ಕ್ಷೇತ್ರ ಪರಿಣತರನ್ನು ಹೊಂದಿದ್ದು, ಅವರು ವರ್ಷದಲ್ಲಿ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ರೈತರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಪ್ರಾಜೆಕ್ಟ್ ಸಮರ್ಥ್ ಮತ್ತು ಉಗಮ್ ರೀತಿಯ ವಿವಿಧ ಉಪಕ್ರಮಗಳು ಮತ್ತು ಸಮುದಾಯ ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಕೃಷಿ ಸಮುದಾಯವನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಜೀವನಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ.”
ಎಫ್ಎಂಸಿ ಇಂಡಿಯಾ ಭಾರತದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 200,000 ರೈತ ಕುಟುಂಬಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು ಪ್ರಯತ್ನಿಸುವ ಒಂದು ಮಹತ್ವದ ಯೋಜನೆಯನ್ನು ನಡೆಸುತ್ತದೆ. ಇಲ್ಲಿಯವರೆಗೆ, ಸಮರ್ಥ್ ಯೋಜನೆಯು ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ 44 ಸಮುದಾಯ ನೀರು ಶುದ್ಧೀಕರಣ ಸ್ಥಾವರಗಳನ್ನು ಸ್ಥಾಪಿಸಿದ್ದು, ಇದು ಸುಮಾರು 120,000 ಕೃಷಿ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ. ಕಂಪನಿಯು ಈ ವರ್ಷದಿಂದ ಹೆಚ್ಚುವರಿ ಐದು ರಾಜ್ಯಗಳನ್ನು ತಲುಪಲು ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ಎಫ್ಎಂಸಿಯಿಂದ ಉಗಮ್ ಮೂರು ತಿಂಗಳ ಅವಧಿಯ ಅಭಿಯಾನ, ಡಿಸೆಂಬರ್ 2020, 5 ರಂದು ವಿಶ್ವ ಮಣ್ಣು ದಿನದ ಅಂಗವಾಗಿ ಪ್ರಾರಂಭವಾಗಿ, ಹೆಚ್ಚು ಸುಸ್ಥಿರ ರೀತಿಯಲ್ಲಿ ಮಣ್ಣನ್ನು ನಿರ್ವಹಿಸಲು ರೈತರಿಗೆ ಜಾಗೃತಿ, ಜ್ಞಾನ ಮತ್ತು ಸಾಧನಗಳನ್ನು ಒದಗಿಸುವ ಅಭಿಯಾನ ಇದಾಗಿತ್ತು. ಈ ಅಭಿಯಾನವು 40,000 ಕ್ಕಿಂತ ಹೆಚ್ಚು ರೈತರನ್ನು ತಲುಪಿರುವ ಜೊತೆಗೆ, ಫೇಸ್‌ಬುಕ್, ವಾಟ್ಸ್ಯಾಪ್ ಮತ್ತು ಯೂಟ್ಯೂಬ್ ಮುಂತಾದ ಡಿಜಿಟಲ್ ಚಾನೆಲ್‌ಗಳ ಮೂಲಕ 100,000 ಜನರನ್ನು ತಲುಪಿದೆ.
"ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಜೊತೆಗೆ ಸುರಕ್ಷಿತ ಮತ್ತು ಸುಭದ್ರ ಆಹಾರ ಪೂರೈಕೆಯನ್ನು ನಿರ್ವಹಿಸುವ ಉತ್ಪನ್ನಗಳನ್ನು ವಿತರಣೆ ಮಾಡಲು ಎಫ್ಎಂಸಿ ಬದ್ಧವಾಗಿದೆ'' ಎಂದು ತೋಟಾ ಹೇಳಿದರು. "ಅದರ ಜೊತೆಗೆ, ನೀರಿನಿಂದ ಹರಡುವ ಕಾಯಿಲೆಗಳಿಂದ ರಕ್ಷಣೆ ಮತ್ತು ಅಂತರ್ಜಲ ವ್ಯವಸ್ಥೆಗಳ ಸಂರಕ್ಷಣೆ ಸೇರಿದಂತೆ ದೇಶದಲ್ಲಿ ನೀರಿನ ಬಳಕೆಯನ್ನು ಅತ್ಯಂತ ಲಾಭದಾಯಕ ಆಗಿಸುವುದಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎಫ್ಎಂಸಿ ಗುರುತಿಸುತ್ತದೆ. ವಿಶ್ವಸಂಸ್ಥೆಯ ಶೂನ್ಯ ಹಸಿವು ಮತ್ತು ಶುದ್ಧ ನೀರು ಮತ್ತು ನೈರ್ಮಲ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುವತ್ತ ನಮ್ಮ ಕೆಲಸವು ಕೇಂದ್ರೀಕೃತವಾಗಿದೆ” ಎಂದರು