ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಇಂಡಿಯಾವು ಕೀಟ ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆಗಾಗಿ ಮೂರು ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಲಿದೆ

ಹೈದರಾಬಾದ್, ಸೆಪ್ಟೆಂಬರ್ 5, 2022: ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾ, ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸುಧಾರಿತ ಮಣ್ಣಿನ ಪ್ರೊಫೈಲ್ ಮೂಲಕ ಉತ್ತಮ ಇಳುವರಿಯನ್ನು ಸಾಧಿಸಲು ಭಾರತೀಯ ರೈತರಿಗೆ ಬೆಂಬಲ ನೀಡುವ ಮೂರು ಹೊಸ ಉತ್ಪನ್ನಗಳೊಂದಿಗೆ ತನ್ನ ಪೋರ್ಟ್‌ಫೋಲಿಯೋ ವಿಸ್ತರಣೆಯನ್ನು ಇಂದು ಘೋಷಿಸಿದೆ.

1

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಎಫ್ಎಂಸಿ ಇಂಡಿಯಾ ಅಧ್ಯಕ್ಷ ಶ್ರೀ ರವಿ ಅನ್ನವರಪು, "ಎಫ್ಎಂಸಿ ಇಂಡಿಯಾ ಮೂರು ದಶಕಗಳಿಗಿಂತ ಹೆಚ್ಚು ಕಾಲದಿಂದ ಭಾರತೀಯ ರೈತರಿಗೆ ಸೇವೆ ಸಲ್ಲಿಸುತ್ತಿದೆ, ಮತ್ತು ಭಾರತೀಯ ಕೃಷಿಯ ಸುಸ್ಥಿರತೆಗೆ ಕೊಡುಗೆ ನೀಡುವ ಮೂಲಕ ಅವರ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ನಾವು ಬದ್ಧರಾಗಿದ್ದೇವೆ. ಇಂದು ಪರಿಚಯಿಸಲಾದ ಹೊಸ ಪರಿಹಾರಗಳು, ರೈತರ ಸವಾಲುಗಳನ್ನು ಗುರುತಿಸುವಲ್ಲಿ ಮತ್ತು ಕಸ್ಟಮೈಸ್ ಮಾಡಿದ ನಾವೀನ್ಯತೆಗಳ ಮೂಲಕ ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಪರಿಹರಿಸುವಲ್ಲಿ ಎಫ್ಎಂಸಿಯ ಆಳವಾದ ಬಹು-ವರ್ಷದ ಸಂಶೋಧನೆಯ ಫಲಿತಾಂಶವಾಗಿದೆ.”



ಟಾಲ್‌ಸ್ಟಾರ್® ಪ್ಲಸ್ ಕೀಟನಾಶಕವು ನವೀನ ವಿಶಾಲ-ವ್ಯಾಪ್ತಿಯ ಪೂರ್ವ ಮಿಶ್ರಣವಾಗಿದ್ದು, ಇದು ಶೇಂಗಾ, ಹತ್ತಿ ಮತ್ತು ಕಬ್ಬು ಬೆಳೆಯುವ ಭಾರತೀಯ ರೈತರಿಗೆ ದೊಡ್ಡ ತಲೆನೋವಾಗಿರುವ ಹೀರುವ ಮತ್ತು ಜಗಿಯುವ ಕೀಟಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಈ ಉತ್ಪನ್ನವು ನೆಲಕಡಲೆಯನ್ನು ಕಾಡುವ ಗೊಣ್ಣೆ ಹುಳು, ನುಸಿ ಮತ್ತು ಗಿಡ ಹೇನುಗಳು; ಹತ್ತಿ ಬೆಳೆಯ ಬೂದು ಜೀರುಂಡೆ, ಹುಡಿ ತಿಗಣೆ, ಜಿಗಿಹುಳು, ಬಿಳಿ ನೊಣ, ನುಸಿ ಮತ್ತು ಗಿಡ ಹೇನುಗಳು; ಮತ್ತು ಕಬ್ಬಿನ ಬೆಳೆಯ ಗೆದ್ದಲು ಮತ್ತು ಆರಂಭಿಕ ಚಿಗುರು ಕೊರಕಗಳ ವಿರುದ್ಧ ಹೋರಾಡಲು ರೈತರಿಗೆ ಉತ್ತಮ ಸಾಧನವನ್ನು ನೀಡುತ್ತದೆ. ಟಾಲ್‌ಸ್ಟಾರ್® ಪ್ಲಸ್ ಕೀಟನಾಶಕವು ದೇಶಾದ್ಯಂತ ಪ್ರಮುಖ ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ.

2



ಪೆಟ್ರಾ® ಜೈವಿಕ ಪರಿಹಾರವು ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಸುಧಾರಿಸಲು ರಿಯಾಕ್ಟಿವ್ ಕಾರ್ಬನ್ ತಂತ್ರಜ್ಞಾನ ಆಧಾರಿತ ಹೊಸ ಪೀಳಿಗೆಯ ಕಸ್ಟಮೈಜ್ ಮಾಡಿದ ಪರಿಹಾರವಾಗಿದೆ. ಇದು ಮಣ್ಣಿನಲ್ಲಿನ ಪಾಸ್ಫರಸ್ ಅನ್ನು ಒಗ್ಗೂಡಿಸುವ ಮೂಲಕ ಬೆಳೆಗಳಿಗೆ ಆರಂಭಿಕವಾಗಿ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಸಾವಯವ ಪದಾರ್ಥಗಳನ್ನು ಹೊಂದಿರುವ ಪೆಟ್ರಾ® ಜೈವಿಕ ದ್ರಾವಣವು ಮಣ್ಣಿನ ಸೂಕ್ಷ್ಮಜೀವಿಗಳಿಗೆ ಆಹಾರದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ, ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ, ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದನ್ನು ಬಳಸುವುದು ಸುಲಭವಾಗಿದ್ದು, ಹೆಚ್ಚಿನ ಬೆಳೆಗಳಿಗೆ ಸೂಕ್ತವಾಗಿದೆ ಮತ್ತು ಆರೋಗ್ಯಕರ ಮಣ್ಣು, ಬೇರು ಮತ್ತು ಸಸ್ಯಗಳಿಗೆ ಉತ್ತಮ ಅಡಿಪಾಯವನ್ನು ಸೃಷ್ಟಿಸುತ್ತದೆ. ಪೆಟ್ರಾ® ಜೈವಿಕ ಪರಿಹಾರವು ಡಿಸೆಂಬರ್ 2022 ರಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.



ಕ್ಯಾಜ್ಬೋ® ಬೆಳೆ ಪೋಷಣೆ, ವಿಶೇಷ ಸೂಕ್ಷ್ಮ ಪೋಷಕಾಂಶ ಪರಿಹಾರವಾಗಿದ್ದು, ಕ್ಯಾಲ್ಸಿಯಂ, ಜಿಂಕ್ ಮತ್ತು ಬೋರಾನ್‌ನಂತಹ ಅಗತ್ಯ ಅಂಶಗಳನ್ನು ಪೂರೈಸುವ ಮೂಲಕ ಬೆಳೆಗಳನ್ನು ಪರಿಣಾಮಕಾರಿಯಾಗಿ ಪೋಷಿಸುತ್ತದೆ ಮತ್ತು ಹೆಚ್ಚಿನ ಬೆಳೆಗಳಲ್ಲಿ ಅನೇಕ ಕೊರತೆಗಳು ಮತ್ತು ಸಂಬಂಧಿತ ಅಸ್ವಸ್ಥತೆಗಳನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಸಾಂಪ್ರದಾಯಿಕ ಕ್ಯಾಲ್ಸಿಯಂ ದ್ರಾವಣಗಳಿಗೆ ಹೋಲಿಸಿದರೆ ಇದು ಉತ್ತಮ ದಕ್ಷತೆಯನ್ನು ಒದಗಿಸುತ್ತದೆ

ಸರಿಯಾದ ಪ್ರಮಾಣದಲ್ಲಿ ಮತ್ತು ಬೆಳೆಯ ಬೆಳವಣಿಗೆ ಚಕ್ರದ ಸರಿಯಾದ ಹಂತದಲ್ಲಿ ಬಳಸಲಾಗುತ್ತದೆ. ಕ್ಯಾಜ್ಬೋ® ಬೆಳೆ ಪೋಷಣೆಯು ಸುಧಾರಿತ ಹಣ್ಣಿನ ಗುಣಮಟ್ಟ ಮತ್ತು ಬೆಳೆಗಳ ಶೇಖರಣಾ ಸಾಮರ್ಥ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ಭರವಸೆ ನೀಡುತ್ತದೆ. ಕ್ಯಾಜ್ಬೋ® ಬೆಳೆ ಪೋಷಣೆಯು ಡಿಸೆಂಬರ್ 2022 ರಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

3



ಎಫ್ಎಂಸಿ ಇಂಡಿಯಾ ರೈತ ಬೆಂಬಲ ಚಟುವಟಿಕೆಯು ವ್ಯಾಪಕ ಉತ್ಪನ್ನ ಕೊಡುಗೆಗೆ ಮಾತ್ರ ಸೀಮಿತವಾಗಿಲ್ಲ. ಕಂಪನಿಯು ವರ್ಷವಿಡೀ ರೈತರಿಗೆ ಕಸ್ಟಮೈಜ್ ಮಾಡಿದ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಭಾರತದಾದ್ಯಂತ ಬೆಳೆಯುವ ಎಲ್ಲಾ ರೀತಿಯ ಬೆಳೆಗಳನ್ನು ಒಳಗೊಂಡಿರುವ ಉತ್ತಮ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತಿದೆ. ಉದಾಹರಣೆಗೆ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಕಂಪನಿಯು ಪ್ರೊಫೆಸರ್ ಜಯಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯ (ಹೈದರಾಬಾದ್) ಜೊತೆಗೆ ಸಹ ಪಾಲುದಾರಿಕೆ ಹೊಂದಿದೆ. ಹೆಚ್ಚುವರಿಯಾಗಿ, ಎಫ್ಎಂಸಿ ಇಂಡಿಯಾ ತನ್ನ ಪ್ರಮುಖ ಸಮುದಾಯ ಪ್ರಚಾರ ಕಾರ್ಯಕ್ರಮ ಯೋಜನೆ 'ಸಮರ್ಥ್' ಮೂಲಕ ಗ್ರಾಮೀಣ ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಕೆಲಸ ಮಾಡುತ್ತಿದೆ. ಇದು ದೇಶದಲ್ಲಿ 57 ಕ್ಕೂ ಹೆಚ್ಚು ರಿವರ್ಸ್ ಆಸ್ಮೋಸಿಸ್ ವಾಟರ್ ಪ್ಲಾಂಟ್‌ಗಳ ಸ್ಥಾಪನೆಯೊಂದಿಗೆ 100,000 ಕ್ಕಿಂತ ಹೆಚ್ಚು ರೈತ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿದೆ.



ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಫೇಸ್‌ಬುಕ್® ಮತ್ತು ಯೂಟ್ಯೂಬ್® ನಲ್ಲಿ ಎಫ್ಎಂಸಿ ಇಂಡಿಯಾದ ಬಗ್ಗೆ ಹೆಚ್ಚು ತಿಳಿಯಲು fmc.com ಮತ್ತು ag.fmc.com/in/en ಗೆ ಭೇಟಿ ನೀಡಿ.