ಎಫ್ಎಂಸಿ ಇಂಡಿಯಾ ಭಾರತದಲ್ಲಿ ಕೋವಿಡ್-19 ಪರಿಹಾರ ಕ್ರಮಗಳ ಬಗ್ಗೆ ತನ್ನ ಬದ್ಧತೆಯನ್ನು ಘೋಷಿಸಿದೆ, ಆ ಮೂಲಕ ಐದು ರಾಜ್ಯಗಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಹೆಚ್ಚಿಸುವುದರ ಮೇಲೆ ಗಮನಹರಿಸಲಿದೆ ಮತ್ತು ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ಜಾಗೃತಿ ಅಭಿಯಾನಗಳನ್ನು ನಡೆಸಲಿದೆ.
ಹೆಚ್ಚುತ್ತಿರುವ ಆಮ್ಲಜನಕ ಪೂರೈಕೆ
ಭಾರತ ಸರ್ಕಾರದ ಪ್ರಕಾರ, ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಬೇಡಿಕೆಗೆ ಹೋಲಿಸಿದರೆ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಘಟಕಗಳಲ್ಲಿ ಆಮ್ಲಜನಕದ ಬೇಡಿಕೆಯು ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ಕೋವಿಡ್-19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗಂಭೀರ ಕೊರೋನಾ ವೈರಸ್ ಹೊಂದಿರುವ ಅನೇಕ ರೋಗಿಗಳು ಅವರಿಗೆ ಅಗತ್ಯವಿರುವ ತುರ್ತು ಆಮ್ಲಜನಕ ಪೂರೈಕೆಯನ್ನು ಪಡೆಯಲಾಗುತ್ತಿಲ್ಲ. ತ್ವರಿತವಾಗಿ ಹೆಚ್ಚುತ್ತಿರುವ ವೈದ್ಯಕೀಯ ಆಮ್ಲಜನಕದ ಅವಶ್ಯಕತೆಯನ್ನು ಪೂರೈಸಲು ಸಹಾಯ ಮಾಡಲು ಎಫ್ಎಂಸಿ ಇಂಡಿಯಾವು ಏಳು ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿಎಸ್ಎ) ಆಮ್ಲಜನಕ ಸಲಕರಣೆಗಳನ್ನು ದೆಹಲಿ ಎನ್‌ಸಿಆರ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಆಸ್ಪತ್ರೆಗಳಿಗೆ ದೇಣಿಗೆಯಾಗಿ ನೀಡುತ್ತಿದೆ. ಈ ಆಸ್ಪತ್ರೆಗಳಲ್ಲಿ ಪಿಎಸ್‌ಎ ಆಮ್ಲಜನಕ ಘಟಕಗಳ ಸ್ಥಾಪನೆಯು ಸಾರಿಗೆ ವ್ಯವಸ್ಥೆಗಳ ಸವಾಲುಗಳಿಲ್ಲದೆ ನಿರಂತರ ಆಮ್ಲಜನಕ ಪೂರೈಕೆಯನ್ನು ಸಕ್ರಿಯಗೊಳಿಸುತ್ತದೆ.
ದೇಶವು ಸಾಂಕ್ರಾಮಿಕ ರೋಗದ ಎರಡನೇ ಗಂಭೀರ ಅಲೆಯ ವಿರುದ್ಧ ಹೋರಾಡುತ್ತಿರುವಾಗ, ಈ ಉಪಕ್ರಮಗಳು ಪೂರೈಸಲಾಗದ ಬೇಡಿಕೆ ಸಮೂಹಗಳ ಬಳಿ 1,680ಎನ್‌ಎಂ3 ಆಮ್ಲಜನಕ ಉತ್ಪಾದಿಸುವ ಮೂಲಕ, ಕೋವಿಡ್-19 ವಿರುದ್ಧದ ರಾಷ್ಟ್ರ ಹೋರಾಟದಲ್ಲಿ ಸ್ಥಳೀಯ ಆಸ್ಪತ್ರೆಗಳನ್ನು ಬೆಂಬಲಿಸುತ್ತದೆ.
ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಪ್ರಮೋದ್ ಥೋಟ ಹೇಳಿದರು, "ನಮ್ಮ ಸಂಪೂರ್ಣ ರಾಷ್ಟ್ರಕ್ಕೆ ಕೋವಿಡ್-19 ರ ಎರಡನೇ ಅಲೆಯ ಗಂಭೀರತೆ ಮತ್ತು ತೀವ್ರತೆ ಸವಾಲಾಗಿದೆ, ಇದರಿಂದಾಗಿ ವೈದ್ಯಕೀಯ ಮೂಲಸೌಕರ್ಯಗಳ ಬೇಡಿಕೆಯಲ್ಲಿ ಹೆಚ್ಚಳವಾಗಿ, ಅತಿ ಅಗತ್ಯದ ಸರಬರಾಜುಗಳಲ್ಲಿ ಕೊರತೆ ಉಂಟಾಗಿದೆ. ಪ್ರಾದೇಶಿಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡಲು, ಎಫ್ಎಂಸಿ ಇಂಡಿಯಾ ತುರ್ತು ರೋಗಿಗಳ ಆರೈಕೆಯನ್ನು ಬೆಂಬಲಿಸಲು ಮತ್ತು ಅಮೂಲ್ಯ ಜೀವನವನ್ನು ಉಳಿಸಲು ಏಳು ಪಿಎಸ್ಎ ಘಟಕಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಭಾರತದ ಕೆಲವು ನಿರ್ಣಾಯಕ ವೈದ್ಯಕೀಯ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು- ವಿಶೇಷವಾಗಿ ಹೆಚ್ಚಿನ ಕೋವಿಡ್-19 ಪ್ರಕರಣ ಮತ್ತು ಕಡಿಮೆ ವೈದ್ಯಕೀಯ ಸಂಪನ್ಮೂಲಗಳನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳಿಗೆ ಸಹಾಯ ಮಾಡಲು ನಾವು ನಮ್ಮ ಚಾನೆಲ್ ಪಾಲುದಾರರು ಮತ್ತು ಸಮುದಾಯಗಳೊಂದಿಗೆ ಪಾಲುದಾರಿಕೆ ಹೊಂದಲು ಬದ್ಧರಾಗಿದ್ದೇವೆ.”
ಗ್ರಾಮೀಣ ಜಾಗೃತಿ ಅಭಿಯಾನಗಳು
ಎರಡನೇ ಅಲೆಯಲ್ಲಿ ಕೊರೋನಾ ವೈರಸ್ ಗ್ರಾಮೀಣ ಭಾರತದಾದ್ಯಂತ ಗಮನಾರ್ಹವಾಗಿ ಹರಡುತ್ತಿದೆ. ಕೃಷಿಯನ್ನು ಮುಂದುವರೆಸುತ್ತಾ ಮತ್ತು ಉತ್ತಮ ಕೃಷಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾ, ಕೋವಿಡ್-19 ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ಥಳೀಯ ರೈತರು ಮತ್ತು ಬೆಳೆಗಾರರಿಗೆ ಸುರಕ್ಷತೆ ಮತ್ತು ಆರೋಗ್ಯ ಕ್ರಮಗಳ ಕುರಿತು ಅರಿವು ಮೂಡಿಸುವ ಗುರಿ ಹೊಂದಿರುವ ಬಹು-ಆಯಾಮದ ಅಭಿಯಾನವನ್ನು ಎಫ್ಎಂಸಿ ಇಂಡಿಯಾ ಆರಂಭಿಸಲಿದೆ. ಜಾಗೃತಿ ಅಭಿಯಾನಗಳು ಭಾರತದ ವಿವಿಧ ಪ್ರಮುಖ ಕೃಷಿ ಆಧರಿತ ರಾಜ್ಯಗಳ ಸುಮಾರು 100,000 ರೈತರನ್ನು ತಲುಪುವ ನಿರೀಕ್ಷೆ ಇದೆ. ಈ ಎಲ್ಲಾ ಪ್ರಯತ್ನಗಳು ಎಫ್ಎಂಸಿ ಇಂಡಿಯಾದ ಚಾಲ್ತಿಯಲ್ಲಿರುವ ಸಮುದಾಯ ಸಬಲೀಕರಣ ತೊಡಗುವಿಕೆ- ಸಮರ್ಥ್ ಯೋಜನೆಯ ಭಾಗವಾಗಿದೆ.