ಎಫ್ಎಂಸಿ ಕಾರ್ಪೊರೇಶನ್, ಶ್ರೀ ರವಿ ಅನ್ನವರಪು ಅವರನ್ನು ಜುಲೈ 1, 2021 ರಿಂದ ಅನ್ವಯವಾಗುವಂತೆ ಎಫ್ಎಂಸಿ ಇಂಡಿಯಾದ ಹೊಸ ಅಧ್ಯಕ್ಷರನ್ನಾಗಿ ನೇಮಿಸಿದೆ. ಭಾರತದಲ್ಲಿ ಕಂಪನಿಯ ವ್ಯವಹಾರ ಕಾರ್ಯ ತಂತ್ರ ಮತ್ತು ಕಾರ್ಯಕ್ಷಮತೆಗೆ ರವಿ ಅವರು ಜವಾಬ್ದಾರರಾಗಿರುತ್ತಾರೆ. ಅವರು ಎಫ್ಎಂಸಿ ಯು.ಎಸ್.ಎ. ಅಧ್ಯಕ್ಷರಾಗಿರುವ ಶ್ರೀ ಪ್ರಮೋದ್ ತೋಟಾ ಅವರ ಉತ್ತರಾಧಿಕಾರಿ ಆಗಲಿದ್ದಾರೆ. ಅನ್ನವರಪು ಅವರು ಎಫ್ಎಂಸಿ ಉಪಾಧ್ಯಕ್ಷೆ ಮತ್ತು ಎಫ್ಎಂಸಿ ಏಷ್ಯಾ ಪೆಸಿಫಿಕ್ ಅಧ್ಯಕ್ಷೆಯಾಗಿರುವ ಮಿಸ್ ಬೆಥ್ವಿನ್ ಟಾಡ್ ಅವರಿಗೆ ವರದಿ ಸಲ್ಲಿಸುತ್ತಾರೆ.
“ರವಿ ಅವರು ಬೆಳೆ ರಕ್ಷಣೆ ಉದ್ಯಮದ ಆಳವಾದ ಜ್ಞಾನ ಹೊಂದಿರುವ ಉತ್ತಮ ತಂಡದ ನಾಯಕರಾಗಿದ್ದಾರೆ ಮತ್ತು ಸ್ಥಳೀಯ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಿದ್ದಾರೆ" ಎಂದು ಮಿಸ್ ಟಾಡ್ ಹೇಳಿದರುರವಿಯ ನಾಯಕತ್ವದಲ್ಲಿ, ಎಫ್ಎಂಸಿ ಯು ಭಾರತದ ಕೃಷಿ ಕ್ಷೇತ್ರಕ್ಕೆ ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ನೀಡುವ, ಸ್ಥಳೀಯ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿದ ನವೀನ ತಂತ್ರಜ್ಞಾನಗಳ ಮೂಲಕ ಸೇವೆ ನೀಡುವುದನ್ನು ಮುಂದುವರೆಸುತ್ತದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ.”
ಮಿಸ್ ಟಾಡ್ ಅವರು ತಮ್ಮ ಕಾಲಾವಧಿಯಲ್ಲಿ ಎಫ್ಎಂಸಿ ಇಂಡಿಯಾದ ಸಮರ್ಥ ನಾಯಕತ್ವ ನಡೆಸಿದ ಶ್ರೀ ಥೋಟ ಅವರಿಗೆ ಧನ್ಯವಾದ ಸಲ್ಲಿಸುತ್ತಾ: "ಭಾರತದಲ್ಲಿ ವ್ಯವಹಾರ ಬೆಳವಣಿಗೆ ಮತ್ತು ಯಶಸ್ಸಿಗೆ ಪ್ರಮೋದ್ ಅವರು ನೀಡಿದ ಅಪಾರ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಸದ್ಯ ಇರುವ ಪ್ಯಾಂಡಮಿಕ್ ಸಮಯವನ್ನು ಒಳಗೊಂಡಂತೆ, ನಮ್ಮ ಉದ್ಯೋಗಿಗಳು ಮತ್ತು ಗ್ರಾಮೀಣ ಭಾರತದ ಕೃಷಿ ಸಮುದಾಯಗಳನ್ನು ಬೆಂಬಲಿಸಲು ಕೋವಿಡ್-19 ಸಮಸ್ಯೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುತ್ತಾ, ನಮ್ಮ ಭಾರತದ ವ್ಯವಹಾರವನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರು ಪ್ರಾಜೆಕ್ಟ್ ಸಫಲ್ (ಫಾಲ್ ಸೈನಿಕ ಹುಳುಗಳ ಪರಿಣಾಮಕಾರಿ ನಿಯಂತ್ರಣ), ಉಗಮ್ (ಉತ್ತಮ ಮಣ್ಣಿನ ಆರೋಗ್ಯ ಅಭ್ಯಾಸಗಳ ಪ್ರಚಾರ), ಪ್ರಾಜೆಕ್ಟ್ ಸಮರ್ಥ್ (ಶುದ್ಧ ನೀರಿನ ಉಪಕ್ರಮ) ಮತ್ತು ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮಗಳಂತಹ ಪ್ರಮುಖ ಯೋಜನೆಗಳ ಹಿಂದಿನ ಶಕ್ತಿಯಾಗಿದ್ದಾರೆ, ಅವುಗಳು ಕೃಷಿ ಸುಸ್ಥಿರತೆಗೆ ಸಕ್ರಿಯ ವೇಗವನ್ನು ನೀಡುತ್ತಿವೆ.”
“ಎಫ್‌ಎಂಸಿಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ನಮ್ಮ ಕಾರ್ಯಾಚರಣೆಗಳನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ'', ಎಂದು, ಪ್ರಸ್ತುತ ಎಫ್‌ಎಂಸಿ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಸ್ಥಾನ ಪಡೆದಿರುವ ಶ್ರೀ ಅನ್ನವರಪು ಹೇಳುತ್ತಾರೆ. "ಕಂಪನಿಯಾಗಿ, ನಮ್ಮ ಗ್ರಾಹಕರಿಗೆ ನವೀನ ಬೆಳೆ ರಕ್ಷಣಾ ಪರಿಹಾರಗಳನ್ನು ನೀಡಲು ಮತ್ತು ನಾವು ಸೇವೆ ನೀಡುವ ಕೃಷಿ ಸಮುದಾಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಕ್ಕೆ ನಾವು ಬದ್ಧರಾಗಿದ್ದೇವೆ. ಎಫ್ಎಂಸಿ ಇಂಡಿಯಾವು ಭಾರತದಾದ್ಯಂತ ಇರುವ ರೈತರಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುತ್ತಾ ಪ್ರಮೋದ್ ಅವರ ಪರಂಪರೆಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.”
ಶ್ರೀ ಅನ್ನವರಪು ಅವರು 2013 ರಲ್ಲಿ ಕಾರ್ಪೊರೇಟ್ ಕಾರ್ಯತಂತ್ರ ಮತ್ತು ಅಭಿವೃದ್ಧಿ ನಿರ್ದೇಶಕರಾಗಿ ಎಫ್ಎಂಸಿಯನ್ನು ಸೇರಿದರು ಮತ್ತು 2016 ರಲ್ಲಿ ಜಾಗತಿಕ ಮಾರುಕಟ್ಟೆಯ ಮುಖ್ಯಸ್ಥ ಸ್ಥಾನವನ್ನು ಒಳಗೊಂಡಂತೆ ಹಿಂದೆ ಎಫ್ಎಂಸಿ ಆರೋಗ್ಯ ಮತ್ತು ಪೋಷಣೆಯ ವ್ಯವಹಾರದಲ್ಲಿ ಹಿರಿಯ ವಾಣಿಜ್ಯ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಎರಡು ವರ್ಷಗಳ ನಂತರ, ಅವರು ಮಾರುಕಟ್ಟೆ, ಕಾರ್ಯತಂತ್ರ ಮತ್ತು ವ್ಯವಹಾರ ಅಭಿವೃದ್ಧಿಯ ನಿರ್ದೇಶಕರಾಗಿ ಯುಎಸ್.ನಿಂದ ಭಾರತಕ್ಕೆ ಬಂದರು ಮತ್ತು 2019 ರಲ್ಲಿ ಅವರನ್ನು ಇತ್ತೀಚಿನ ಸ್ಥಾನಕ್ಕೆ ಹೆಸರಿಸಲಾಯಿತು. ಎಫ್ಎಂಸಿಗಿಂತ ಮೊದಲು, ಅವರು ಮೆಕಿನ್ಸೆ ಆಂಡ್ ಕಂಪನಿಯಲ್ಲಿ ಮ್ಯಾನೇಜ್ಮೆಂಟ್ ಸಮಾಲೋಚಕರಾಗಿ, ಬೆಳವಣಿಗೆ ಕಾರ್ಯ ತಂತ್ರ ಮತ್ತು ಎಂ ಮತ್ತು ಎ ಕ್ಷೇತ್ರಗಳಲ್ಲಿ ಫಾರ್ಚ್ಯೂನ್ 100 ವಿಶೇಷ ರಾಸಾಯನಿಕ ಕಂಪನಿಗಳಿಗೆ ಸಲಹೆ ನೀಡುವ ಕಾರ್ಯನಿರ್ವಹಿಸಿದ್ದಾರೆ. ಶ್ರೀ ಅನ್ನವರಪು ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ ಮತ್ತು ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಿಂದ ಎಂಬಿಎ ಪಡೆದಿದ್ದಾರೆ.