ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಕಾರ್ಪೊರೇಶನ್ ಭಾರತದಲ್ಲಿ ಕೋವಿಡ್-19 ಪರಿಹಾರಕ್ಕಾಗಿ ದೇಣಿಗೆ ನೀಡಲು ಮೀಸಲಾದ ಎರಡನೇ ಆಮ್ಲಜನಕ ಪ್ರೆಶರ್ ಸ್ವಿಂಗ್ ಹೀರಕ ಘಟಕವನ್ನು (ಇಂದೋರ್‌ನಲ್ಲಿ) ಉದ್ಘಾಟಿಸುತ್ತದೆ

ಎಫ್ಎಂಸಿ ಇಂಡಿಯಾವು ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್ ಅನ್ನು ಉದ್ಘಾಟಿಸಿತು (ಪಿಎಸ್ಎ) ಆಮ್ಲಜನಕ ಘಟಕವನ್ನು ಅರಣ್ಯ ಆಸ್ಪತ್ರೆ, ಸ್ಕೀಮ್ ನಂ. 74, ಇಂದೋರ್, ಮಧ್ಯಪ್ರದೇಶಕ್ಕೆ ನೀಡಲಾಗಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಕೈಲಾಶ್ ವಿಜಯ ವರ್ಗೀಯ, ಮತ್ತು ಮಧ್ಯಪ್ರದೇಶದ ಇಂದೋರ್-2 ಶಾಸಕ ಶ್ರೀ ರಮೇಶ್ ಮೆಂಡೋಲಾ ಅವರ ಉಪಸ್ಥಿತಿಯಲ್ಲಿ ಎಫ್ಎಂಸಿ ಇಂಡಿಯಾ ಅಧ್ಯಕ್ಷ, ಎಜಿಎಸ್ ಬಿಸಿನೆಸ್ ನಿರ್ದೇಶಕ ಶ್ರೀ ರವಿ ಅನ್ನವರಪು ಅವರು ಆಮ್ಲಜನಕ ಘಟಕವನ್ನು ಉದ್ಘಾಟಿಸಿದರು.

ಹೊಸದಾಗಿ ಸ್ಥಾಪಿಸಲಾದ ಪಿಎಸ್ಎ ಆಮ್ಲಜನಕ ಘಟಕವು 16 ಹಾಸಿಗೆಗಳು ಮತ್ತು ರೋಗಿಗಳನ್ನು ಏಕಕಾಲದಲ್ಲಿ ನೋಡಿಕೊಳ್ಳಲು 10 ಎನ್‌ಎಂ3/ ಗಂಟೆ ಆಮ್ಲಜನಕ ಪೂರೈಸಲು ಸಶಕ್ತವಾಗಿದೆ.

ಈ ಸಂದರ್ಭದಲ್ಲಿ, ಶ್ರೀ ಅನ್ನವರಪು ಹೇಳಿದರು, "ಪ್ಯಾಂಡೆಮಿಕ್ ವಿರುದ್ಧ ಹೋರಾಡಲು ರಾಷ್ಟ್ರವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಇಂದೋರ್‌ನಲ್ಲಿನ ಪಿಎಸ್ಎ ಆಮ್ಲಜನಕ ಘಟಕವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಗಂಭೀರ ಆರೋಗ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಸಣ್ಣ, ಆದರೆ ಗಮನಾರ್ಹ ಹಂತವಾಗಿದೆ. ಈ ತೊಡಗುವಿಕೆಯು ಇಂದು ಮತ್ತು ಭವಿಷ್ಯದಲ್ಲಿ ರೋಗಿಗಳಿಗೆ ಬೆಂಬಲವನ್ನು ಒದಗಿಸುವಲ್ಲಿ ನಿರ್ಣಾಯಕವಾಗಿರುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಎಂದರು.”

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೈಲಾಶ್ ವಿಜಯವರ್ಗೀಯ ಅವರು, ಸ್ಥಳೀಯ ಸಮುದಾಯಗಳಿಗೆ ಸೇವೆ ನೀಡುವಲ್ಲಿ ಎಫ್ಎಂಸಿಯ ಪ್ರಯತ್ನಗಳನ್ನು ಪ್ರಶಂಸಿಸಿದರು.   

ಇಂದೋರ್ ಶಾಸಕ ಶ್ರೀ ರಮೇಶ್ ಮೆಂಡೋಲಾ, ಎಫ್ಎಂಸಿ ಇಂಡಿಯಾದ ತೊಡಗುವಿಕೆಯನ್ನು ಪ್ರಶಂಸಿಸುತ್ತಾ. ಹೀಗೆ ಹೇಳಿದರು, "ಇದು ಎಫ್ಎಂಸಿ ಇಂಡಿಯಾದ ಉತ್ತಮ ಉಪಕ್ರಮವಾಗಿದೆ ಮತ್ತು ಇದು ಇಂದೋರ್‌ನಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದಕ್ಕೆ ಬೆಂಬಲ ನೀಡಲಿದೆ. ದ್ರವ ರೂಪದ ಆಮ್ಲಜನಕ ಸೇರಿದಂತೆ ನಿರ್ಣಾಯಕ ಸಂಪನ್ಮೂಲಗಳ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸುವ ಮೂಲಕ ಮೂರನೇ ಅಲೆ ಬಂದರೆ ಅದನ್ನು ಸಮರ್ಥವಾಗಿ ಎದುರಿಸಲು ನಾವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಈ ಅಗತ್ಯ ಕೊಡುಗೆಗಾಗಿ ನಾವು ಎಫ್ಎಂಸಿ ಕಾರ್ಪೊರೇಶನ್‌ಗೆ ಕೃತಜ್ಞರಾಗಿದ್ದೇವೆ.”

“''ಎಫ್ಎಂಸಿ ತಂಡಗಳು ತಮ್ಮ ಕೋವಿಡ್-ಸುರಕ್ಷಿತ ಹಳ್ಳಿ ಅಭಿಯಾನದ ಮೂಲಕ ಗ್ರಾಮೀಣ ಸಮುದಾಯಗಳಿಗೆ ಪ್ಯಾಂಡೆಮಿಕ್ ಕುರಿತು ಮತ್ತು ರೋಗದಿಂದ ಪಾರಾಗುವ ಉತ್ತಮ ಅಭ್ಯಾಸಗಳ ಕುರಿತು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುತ್ತಿವೆ" ಎಂದು ಎಫ್ಎಂಸಿಯ ಭಾರತ 3 ಪ್ರಾಂತ್ಯದ ಪ್ರಾದೇಶಿಕ ನಿರ್ದೇಶಕ ಡಿ.ಕೆ. ಪಾಂಡೆ ಈ ಸಂದರ್ಭದಲ್ಲಿ ಹೇಳಿದರು.

ಎಫ್ಎಂಸಿ ಇಂಡಿಯಾವು ದೆಹಲಿ ಎನ್‌ಸಿಆರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಆಸ್ಪತ್ರೆಗಳಿಗೆ ಎಂಟು ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿಎಸ್ಎ) ಆಕ್ಸಿಜನ್ ಘಟಕಗಳನ್ನು ಸಂಗ್ರಹಿಸಲು ಮತ್ತು ದಾನ ಮಾಡಲು ಬದ್ಧವಾಗಿತ್ತು. ಈ ಆಸ್ಪತ್ರೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳ ಸ್ಥಾಪನೆಯಿಂದಾಗಿ ಸಾರಿಗೆ ವ್ಯವಸ್ಥೆಯ ಸವಾಲುಗಳಿಲ್ಲದೆ ಆಮ್ಲಜನಕದ ನಿರಂತರ ಪೂರೈಕೆಯನ್ನು ಸಕ್ರಿಯಗೊಳಿಸುತ್ತದೆ.

ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಲು ಸ್ಥಳೀಯ ರೈತರು ಮತ್ತು ಬೆಳೆಗಾರರಿಗೆ ಸುರಕ್ಷತೆ ಮತ್ತು ವೆಲ್ನೆಸ್ ಕ್ರಮಗಳ ಬಗ್ಗೆ ಶಿಕ್ಷಣ ನೀಡುವ ಉದ್ದೇಶದಿಂದ ಎಫ್ಎಂಸಿ ಇಂಡಿಯಾ ಬಹುಮುಖ ಅಭಿಯಾನವನ್ನು ಕೂಡ ಪ್ರಾರಂಭಿಸಿದೆ. ಜಾಗೃತಿ ಅಭಿಯಾನವು ಭಾರತದ ಪ್ರಮುಖ ಕೃಷಿ ರಾಜ್ಯಗಳಲ್ಲಿ ಸುಮಾರು 1.3Mn ರೈತರನ್ನು ತಲುಪಿದೆ.