ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಕಾರ್ಪೊರೇಶನ್ ಭಾರತದಲ್ಲಿ ನವೀಕರಿಸಬಹುದಾದ ಇಂಧನ ತಂತ್ರವನ್ನು ವಿಸ್ತರಿಸುತ್ತದೆ

ಎಫ್ಎಂಸಿ ಕಾರ್ಪೊರೇಶನ್ ಭಾರತದ ಗುಜರಾತ್ ರಾಜ್ಯದ ಪನೋಲಿ ಕೈಗಾರಿಕಾ ಎಸ್ಟೇಟ್‌ನ ತನ್ನ ಎರಡನೇ ಉತ್ಪಾದನಾ ಘಟಕದಲ್ಲಿ ಸೌರ ಶಕ್ತಿಯನ್ನು ಬಳಸಲು ಆರಂಭಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ತನ್ನ ಮೊದಲ ಘಟಕವನ್ನು ಯಶಸ್ವಿಯಾಗಿ ಸೌರ ಶಕ್ತಿಗೆ ಬದಲಾವಣೆ ಮಾಡಿದ ನಂತರ, ಎರಡನೇ ಘಟಕಕ್ಕೆ ಸೌರ ಶಕ್ತಿ ಬಳಸುವ ವಿಸ್ತರಣೆ ಇದಾಗಿದೆ.

ಎಫ್ಎಂಸಿಯ ಪನೋಲಿ ಕಾರ್ಯಾಚರಣೆಗಳು ಈಗ ತನ್ನ ಶೇಕಡಾ20 ಅನ್ನು ಕೆಪಿಐ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಗುಜರಾತ್ ಇಂಧನ ಪ್ರಸರಣ ಕಾರ್ಪೊರೇಶನ್ ಲಿಮಿಟೆಡ್, (ಗೆಟ್ಕೋ) ಮತ್ತು ಗುಜರಾತ್ ಇಂಧನ ಅಭಿವೃದ್ಧಿ ಸಂಸ್ಥೆ (ಗೇಡಾ) ನಡುವಿನ ಒಪ್ಪಂದದ ಅಡಿಯಲ್ಲಿ 50 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರದಿಂದ ಪಡೆದುಕೊಳ್ಳುತ್ತಿದೆ.

"ಇಂಧನ-ದಕ್ಷ ಪ್ರಕ್ರಿಯೆಗಳಲ್ಲಿ ಎಫ್ಎಂಸಿಯ ಜಾಗತಿಕ ಹೂಡಿಕೆಗಳು ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ ಅಡೆತಡೆಗಳೊಂದಿಗೆ ನಿರ್ದಿಷ್ಟ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಿದೆ. ಪನೋಲಿ ಉತ್ಪಾದನಾ ಘಟಕದಲ್ಲಿ ಸೌರಶಕ್ತಿಯ ಬಳಕೆಯನ್ನು ವಿಸ್ತರಿಸುವುದು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ, ನಮ್ಮ ಒಟ್ಟಾರೆ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಉತ್ತೇಜಿಸುತ್ತದೆ ಎಂದು ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಪ್ರಮೋದ್ ತೋಟಾ ಹೇಳುತ್ತಾರೆ.

ಸೌರಶಕ್ತಿಯ ಬಳಕೆಯು ಶೂನ್ಯ ಹಸಿರುಮನೆ ಪರಿಣಾಮದ ಅನಿಲ (ಜಿಎಚ್‌ಜಿ) ಬಿಡುಗಡೆ ಮಾಡದಿರುವುದರಿಂದ, ಘಟಕದ ಒಟ್ಟಾರೆ ತ್ಯಾಜ್ಯ ಹೊರಸೂಸುವಿಕೆಯನ್ನು ಸುಮಾರು 2,000 ಟನ್‌ಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.

ತೋಟಾ ಅವರ ಪ್ರಕಾರ, "ಆನ್‌‌ಸೈಟ್ ವಿದ್ಯುತ್ ಅಗತ್ಯತೆಗಳಲ್ಲಿ ನಿರೀಕ್ಷಿತ ಹೆಚ್ಚಳದೊಂದಿಗೆ ಸೌರ ಮತ್ತು ಗಾಳಿಯಂತಹ ನವೀಕರಿಸಬಹುದಾದ ಮೂಲಗಳಿಂದ ಬರುವ ನಮ್ಮ ಶಕ್ತಿಯ ಪಾಲನ್ನು ಮತ್ತಷ್ಟು ಹೆಚ್ಚಿಸಲು ನಾವು ಉದ್ದೇಶಿಸಿದ್ದೇವೆ. ಸೌರಶಕ್ತಿಯ ಬಳಕೆಯನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರದ ಪ್ರಯತ್ನಗಳ ನಡುವೆ, ಎಫ್ಎಂಸಿಯ ಸುಸ್ಥಿರತೆಯ ತೊಡಗುವಿಕೆಗಳು ದೇಶದ ಉತ್ಪಾದನಾ ಉದ್ಯಮಕ್ಕೆ ಮಾನದಂಡಗಳನ್ನು ಸ್ಥಾಪಿಸುವಲ್ಲಿ ಸಾಧನವಾಗಿರುತ್ತವೆ.”

ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ವರದಿಯ ಪ್ರಕಾರ, ಭಾರತವು ಮುಂದಿನ ಎರಡು ದಶಕಗಳಲ್ಲಿ ಜಾಗತಿಕವಾಗಿ ಇಂಧನ ಬೇಡಿಕೆಯಲ್ಲಿ ಅತಿದೊಡ್ಡ ಹೆಚ್ಚಳವನ್ನು ನೋಡುತ್ತದೆ ಮತ್ತು 2030 ರ ಒಳಗೆ ಮೂರನೇ ಅತಿದೊಡ್ಡ ಶಕ್ತಿಯ ಗ್ರಾಹಕರಾಗಿ ಯುರೋಪಿಯನ್ ಒಕ್ಕೂಟವನ್ನು ಮೀರಿಸುತ್ತದೆ.