ಹಣ್ಣುಗಳು ಮತ್ತು ತರಕಾರಿಗಳ (ಎಫ್ ಮತ್ತು ವಿ) ಕೃಷಿಯು ಭಾರತೀಯ ಕೃಷಿ ಬೆಳವಣಿಗೆಯ ಎಂಜಿನ್ ಆಗಿ ಮುಂದುವರೆಯುತ್ತದೆ. ಈ ಸಮಯದಲ್ಲಿನ 2.6% ಕೃಷಿ ಬೆಳವಣಿಗೆಗೆ ಹೋಲಿಸಿದರೆ, ತರಕಾರಿ ಉತ್ಪಾದನೆಯು ಕಳೆದ ದಶಕದಿಂದ ಸಿಎಜಿಆರ್ 4.6% ರಲ್ಲಿ ಬೆಳೆಯುತ್ತಿದೆ. ನಾವೀನ್ಯತೆಯು ಈ ಬೆಳವಣಿಗೆಯನ್ನು ಪ್ರೇರೇಪಿಸುತ್ತಿದೆ ಮತ್ತು ಉತ್ಪಾದಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಪಾರ ಸಾಧ್ಯತೆಗಳಿವೆ. ಬೆಳೆಯುತ್ತಿರುವ ಜನಸಂಖ್ಯೆಯ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ಆಹಾರ ಭದ್ರತೆಯಿಂದ ಹಿಡಿದು, ರೈತರ ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ಆರೋಗ್ಯಕರ ಮತ್ತು ರೋಗ-ಮುಕ್ತ ಜೀವನವನ್ನು ನಿರ್ವಹಿಸಲು, ಹಣ್ಣು ಮತ್ತು ತರಕಾರಿಗಳು ನಮ್ಮ ಮುಂದಿರುವ ದಾರಿಯಾಗಿದೆ.
ಇಂದು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಒಟ್ಟು ಕೃಷಿ ಪ್ರದೇಶದ (ಮತ್ತು ವಿಸ್ತರಿಸುತ್ತಿರುವ) 17% ರಲ್ಲಿ ಬೆಳೆಯಲಾಗುತ್ತದೆ ಮತ್ತು ಕೃಷಿ ಜಿಡಿಪಿಗೆ ಸುಮಾರು 30% ಕೊಡುಗೆ ನೀಡುತ್ತವೆ. ಬೆಳೆ ಬೆಳೆಯುವುದು, ಮಾರುಕಟ್ಟೆ ಸಂಪರ್ಕ, ಹಣಕಾಸು ಇತ್ಯಾದಿಗಳ ಕುರಿತಾಗಿ ರೈತರು ಸೀಮಿತ ಜ್ಞಾನ ಹೊಂದಿರುವುದರಿಂದ ಬಯಸಿದ ಇಳುವರಿಯನ್ನು ಸಾಧಿಸುವಲ್ಲಿ ಕೆಲವು ಸವಾಲುಗಳಿವೆ. ಆದರೆ ಮಾಹಿತಿಯ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಡಿಜಿಟಲ್ ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಧನ್ಯವಾದಗಳು. ಭಾರತ ಸರ್ಕಾರವು ಕೂಡಾ ರೈತರ ಆದಾಯವನ್ನು 2022 ರ ಒಳಗೆ ದ್ವಿಗುಣಗೊಳಿಸುವ ದೃಷ್ಟಿಕೋನವನ್ನು ಹೊಂದಿದೆ. ಸುಸ್ಥಿರ ಭವಿಷ್ಯಕ್ಕಾಗಿ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡ ಹಣ್ಣು ಮತ್ತು ತರಕಾರಿ ಬೆಳೆಗಳ ಕೃಷಿಯಿಂದ ಮಾತ್ರ ಇದು ಸಾಧ್ಯವಾಗುತ್ತದೆ.
ನಾವು, ಎಫ್ಎಂಸಿಯಲ್ಲಿ ರೈತರಿಗೆ ತಮ್ಮ ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸಲು ಸಹಾಯ ಮಾಡುವ ನವೀನ, ಇತ್ತೀಚಿನ ತಂತ್ರಜ್ಞಾನಗಳು ಮತ್ತು ವಿಶೇಷವಾಗಿ ರೂಪಿಸಿದ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದ್ದೇವೆ. ಈ ವಿಭಾಗದಲ್ಲಿ ಸುಸ್ಥಿರ ಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು, ಎಫ್ಎಂಸಿ ಇಂಡಿಯಾ 2020 ರಲ್ಲಿ ಬೆಳೆ ತಂಡವನ್ನು ರಚಿಸಿದೆ. ಪರಿಹಾರ-ಆಧಾರಿತ ವಿಧಾನದ ಮೇಲೆ ನವೀಕೃತ ಗಮನಹರಿಸುವಿಕೆಯೊಂದಿಗೆ, ಬೆಳೆ ತಂಡವು ವಿವಿಧ ಬೆಳೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಗುರಿಯನ್ನು ಹೊಂದಿದೆ. ಈ ತಂಡವು ರೈತರಿಗೆ ಉತ್ತಮ ಕೃಷಿ ಪದ್ಧತಿಗಳನ್ನು ಕಲಿಯಲು ಮತ್ತು ಉತ್ತಮ ಫಲಿತಾಂಶಗಳಿಗಾಗಿ ಪರಿಹಾರ ರೂಪದ ಸಮಗ್ರ ಕೀಟ ನಿರ್ವಹಣೆ ವಿಧಾನವನ್ನು ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ.
ಎಫ್ಎಂಸಿ ಇದುವರೆಗೆ ಸಾಲು ಬೆಳೆಗಳ ಪರಿಹಾರ ಪೂರೈಕೆದಾರ ಎಂದು ಹೆಸರಾಗಿತ್ತು ಮತ್ತು ಈ ನವೀಕರಿಸಿದ ವಿಧಾನದೊಂದಿಗೆ ಹಣ್ಣು ಮತ್ತು ತರಕಾರಿ ರೈತರಿಗೆ ಹತ್ತಿರವಾಗುತ್ತಿದೆ. ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸಲು ಸುಸ್ಥಿರ ಪರಿಹಾರಗಳನ್ನು ಒದಗಿಸುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ.