ಮುಖ್ಯಾಂಶಗಳು
- ಟಾಲ್‌ಸ್ಟಾರ್® ಪ್ಲಸ್ ಕೀಟನಾಶಕವು ಟ್ರಿಪಲ್-ಆ್ಯಕ್ಷನ್ ಕಾರ್ಯವಿಧಾನವನ್ನು ಪ್ರದರ್ಶಿಸುತ್ತದೆ: ಸಂಪರ್ಕ, ವ್ಯವಸ್ಥಿತ ಮತ್ತು ಸೇವನೆ.
- ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಇದು ಬೆಳೆ ಸ್ಥಾಪನೆಯನ್ನು ಹೆಚ್ಚಿಸುತ್ತದೆ.
- ಮಣ್ಣಿನ ಕೀಟಗಳ ವಿರುದ್ಧ ಮಣ್ಣಿನ ಪ್ರೊಫೈಲ್‌ನ ಸಮಗ್ರ ರಕ್ಷಣೆಯನ್ನು ಖಚಿತಪಡಿಸುತ್ತದೆ.
- ಮಣ್ಣಿನ ನಿರಂತರತೆಯಲ್ಲಿ ಇತರ ಪೈರೆಥ್ರಾಯ್ಡ್‌ಗಳನ್ನು ಮೀರಿಸಿ ದೀರ್ಘಕಾಲ ಉಳಿಯುವ ಗುಣವನ್ನು ಹೊಂದಿದೆ.
- ಗೆದ್ದಲು ಮತ್ತು ಬಿಳಿ ಹುಳುಗಳ ವಿರುದ್ಧ ಅಸಾಧಾರಣ ನಿಯಂತ್ರಣ ದಕ್ಷತೆಯನ್ನು ಪ್ರದರ್ಶಿಸುತ್ತದೆ, ಹೊಸ ಕಾರ್ಯಕ್ಷಮತೆಯ ಮಟ್ಟವನ್ನು ಸ್ಥಾಪಿಸುತ್ತದೆ.
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಟಾಲ್‌ಸ್ಟಾರ್® ಪ್ಲಸ್ ಕೀಟನಾಶಕವು ನಿಮ್ಮ ಬೆಳೆ ರಕ್ಷಣೆಯ ನವೀನ ಪರಿಹಾರವಾಗಿದ್ದು, ಇದು ನೆಲಕಡಲೆ, ಹತ್ತಿ ಮತ್ತು ಕಬ್ಬಿನ ಬೆಳೆಯನ್ನು ಕಾಡುವ ಹೀರುವ ಮತ್ತು ಜಗಿಯುವ ಕೀಟಗಳಿಂದ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಇದು ಮಣ್ಣಿನ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಮತ್ತು ಇತರ ಪೈರೆಥ್ರಾಯ್ಡ್‌ಗಳಿಗೆ ಹೋಲಿಸಿದರೆ ದೀರ್ಘಾವಧಿ ಉಳಿಯುವ ಗುಣವನ್ನು ಹೊಂದಿದೆ.
ಬೆಳೆಗಳು
ನೆಲಕಡಲೆ
ನೆಲಕಡಲೆಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ನುಸಿ
- ಗಿಡ ಹೇನು
- ಬಿಳಿ ಹುಳು
ಹತ್ತಿ
ಹತ್ತಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಬೂದು ಜೀರುಂಡೆ
- ಹುಡಿ ತಿಗಣೆ
- ಜಿಗಿಹುಳು
- ಬಿಳಿ ನೊಣ
- ಗಿಡ ಹೇನು
- ನುಸಿ
ಕಬ್ಬು
ಕಬ್ಬು ಬೆಳೆಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಆರಂಭಿಕ ಚಿಗುರು ಕೊರಕ
- ಗೆದ್ದಲು
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.