ಮುಖ್ಯಾಂಶಗಳು
- ಲೆವಾನಾ® ಕೀಟನಾಶಕವು ನಿಯೋನಿಕೋಟಿನಾಯ್ಡ್ ಕೀಟನಾಶಕಗಳ ಗುಂಪಿಗೆ ಸೇರಿದೆ.
- ಲೆವಾನಾ® ಕೀಟನಾಶಕವು ಸಂಪರ್ಕದ ಮತ್ತು ಸೇವನೆಯ ಮೂಲಕ ಕೆಲಸ ಮಾಡುವ ವಿಶಾಲ ವ್ಯವಸ್ಥೆಯ ಕೀಟನಾಶಕವಾಗಿದೆ.
- ಇದು ತ್ವರಿತ ಮತ್ತು ದೀರ್ಘಾವಧಿಯ ನಿಯಂತ್ರಣವನ್ನು ಹೊಂದಿದೆ.
- ಇತರ ಕೀಟನಾಶಕಗಳೊಂದಿಗೆ ಹೊಂದಾಣಿಕೆಯಾಗುತ್ತದೆ.
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಲೆವಾನಾ® ಕೀಟನಾಶಕವು ವಿವಿಧ ಕೀಟಗಳ ವಿರುದ್ಧ ವಿಶಾಲ ವ್ಯಾಪ್ತಿಯ ರಕ್ಷಣೆಯನ್ನು ಒದಗಿಸುವ ವ್ಯವಸ್ಥಿತ ಕೀಟನಾಶಕವಾಗಿದೆ. ಸಂಪರ್ಕ ಮತ್ತು ಸೇವನೆಯ ವಿಶಿಷ್ಟ ಸಂಯೋಜನೆಯು ಸಮಗ್ರ ಕೀಟ ನಿಯಂತ್ರಣವನ್ನು ಖಚಿತಪಡಿಸುತ್ತದೆ. ತ್ವರಿತ ಮತ್ತು ದೀರ್ಘಾವಧಿಯ ದಕ್ಷತೆಯನ್ನು ಒದಗಿಸುವ ಸಾಮರ್ಥ್ಯವು ಅದರ ಪ್ರಮುಖ ಗುಣಲಕ್ಷಣಗಳಲ್ಲಿ ಒಂದಾಗಿದ್ದು, ಕೀಟಗಳ ವಿರುದ್ಧ ತ್ವರಿತ ಕ್ರಮಕ್ಕಾಗಿ ಸಸ್ಯಗಳು ಅದನ್ನು ತ್ವರಿತವಾಗಿ ಹೀರಿಕೊಳ್ಳುತ್ತವೆ. ಅಷ್ಟೇ ಅಲ್ಲದೆ, ಲೆವಾನಾ ಮಳೆಯಲ್ಲಿ ತೊಳೆದು ಹೋಗದಿರುವ ಅಸಾಧಾರಣ ಗುಣವನ್ನು ಪ್ರದರ್ಶಿಸುತ್ತದೆ. ಮಳೆ ನೀರಿಗೆ ಒಡ್ಡಿಕೊಂಡಾಗಲೂ ಕೂಡ ಪರಿಣಾಮಕಾರಿಯಾಗುವ ಗುಣ ಇದರದ್ದಾಗಿದೆ.
ಬೆಳೆಗಳು
ಭತ್ತ
ಭತ್ತಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಕಾಂಡ ಕೊರಕ
- ಗಾಲ್ ಮಿಡ್ಜ್
- ಎಲೆ ಸುರಳಿ ಹುಳ
- ನುಸಿ
- ಕಂದು ಜಿಗಿ ಹುಳು
- ಹಸಿರು ಎಲೆ ಮಿಡತೆ
- ಬಿಳಿ ಬೆನ್ನಿನ ಜಿಗಿ ಹುಳು
ಗೋಧಿ
ಗೋಧಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗಿಡ ಹೇನು
ಹತ್ತಿ
ಹತ್ತಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಜಿಗಿಹುಳು
- ಗಿಡ ಹೇನು
- ಬಿಳಿ ನೊಣ
ಆಲೂಗಡ್ಡೆ
ಆಲೂಗಡ್ಡೆಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗಿಡ ಹೇನು
ಟೀ
ಚಹಾ ಗಿಡಕ್ಕೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಸೊಳ್ಳೆ
ಬೆಂಡೆಕಾಯಿ
ಬೆಂಡೆಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಜಿಗಿಹುಳು
- ಗಿಡ ಹೇನು
- ಬಿಳಿ ನೊಣ
- ನುಸಿ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.