ಮುಖ್ಯಾಂಶಗಳು
- ಡರ್ಮೆಟ್® ಕೀಟನಾಶಕವು ಆರ್ಗನೋಫಾಸ್ಫೇಟ್ ಕೀಟನಾಶಕವಾಗಿದೆ
- ಇದು ಸಂಪರ್ಕ, ಹೊಟ್ಟೆ ಮತ್ತು ವಿಷಾನಿಲ ಕ್ರಿಯೆಯನ್ನು ಹೊಂದಿದೆ
- ಇದು ಕಂಬಳಿ ಹುಳು, ಕಾಂಡ ಕೊರಕ, ಗೊಣ್ಣೆ ಹುಳು, ಹಣ್ಣು ಕೊರಕ, ಬೇರು ಕೊರಕ ಮತ್ತು ಗೆದ್ದಲು ಹುಳುಗಳನ್ನು ನಿಯಂತ್ರಿಸಬಹುದು
- ಇದನ್ನು ಎಲೆಗಳ ಸಿಂಪಡಣೆ, ಮಣ್ಣಿನಲ್ಲಿ ಬೆರೆಸುವಿಕೆ, ಮೊಳಕೆಯಲ್ಲಿ ಅದ್ದುವುದು ಮತ್ತು ಬೀಜ ಸಂಸ್ಕರಣೆಯಾಗಿ ಅಪ್ಲೈ ಮಾಡಬಹುದು
- ಇದನ್ನು ಹತ್ತಿ, ಭತ್ತ, ಬೀನ್ಸ್, ತರಕಾರಿಗಳು ಇತ್ಯಾದಿ ಬೆಳೆಗಳಲ್ಲಿ ಬಳಸಬಹುದು
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಡರ್ಮೆಟ್® ಕೀಟನಾಶಕವು ಆರ್ಗನೋಫಾಸ್ಫೇಟ್ ಕೀಟನಾಶಕವಾಗಿದೆ ಮತ್ತು ಅದು ಸಂಪರ್ಕಕ್ಕೆ ಬಂದಾಗ , ಸೇವಿಸಿದಾಗ ಮತ್ತು ವಿಷಾನಿಲದಂತೆ ಹಲವಾರು ವಿಧಾನಗಳಲ್ಲಿ ಕೆಲಸ ಮಾಡುತ್ತದೆ. ಈ ಕೀಟನಾಶಕವು ಕಂಬಳಿ ಹುಳುಗಳು, ಕಾಂಡ ಕೊರಕಗಳು, ಗೊಣ್ಣೆ ಹುಳುಗಳಿಂದ ಹಿಡಿದು ಹಣ್ಣು ಕೊರಕಗಳು, ಬೇರು ಕೊರಕಗಳು ಮತ್ತು ಗೆದ್ದಲು ಹುಳುಗಳಂಥ ವಿವಿಧ ಕೀಟಗಳ ವಿರುದ್ಧ ಅದ್ಭುತ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಡರ್ಮೆಟ್ ಅನ್ನು ಎಲೆಗಳ ಮೇಲೆ ಸಿಂಪಡಣೆ, ಮಣ್ಣಿನಲ್ಲಿ ಬೆರೆಸುವಿಕೆ, ಮೊಳಕೆಯಲ್ಲಿ ಅದ್ದುವುದು ಮತ್ತು ಬೀಜ ಚಿಕಿತ್ಸೆಯಂಥ ವಿವಿಧ ವಿಧಾನಗಳ ಮೂಲಕ ಬಳಸಬಹುದು ಹಾಗೂ ಇದು ಹತ್ತಿ, ಭತ್ತ, ಬೀನ್ಸ್, ತರಕಾರಿಗಳು ಮತ್ತು ಇನ್ನೂ ಹೆಚ್ಚಿನ ಬೆಳೆಗಳ ರಕ್ಷಣೆಯಲ್ಲಿ ಅಮೂಲ್ಯ ಆಸ್ತಿಯಾಗಿದೆ.
ಬೆಳೆಗಳು
ಭತ್ತ
ಭತ್ತಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗಾಲ್ ಮಿಡ್ಜ್
- ಕಾಂಡ ಕೊರಕ
ಹತ್ತಿ
ಹತ್ತಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗಿಡ ಹೇನು
- ಕಂಬಳಿ ಹುಳು
- ಬಿಳಿ ನೊಣ
- ಕಟ್ವರ್ಮ್
ಬದನೆಕಾಯಿ
ಬದನೆಕಾಯಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಚಿಗುರು ಮತ್ತು ಹಣ್ಣಿನ ಕೊರಕ
ಸೇಬು
ಸೇಬಿಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗಿಡ ಹೇನು
ಗೋಧಿ
ಗೋಧಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗೆದ್ದಲು
ಕಬ್ಬು
ಕಬ್ಬು ಬೆಳೆಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗೆದ್ದಲು
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.