ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಸುಮೆಟ್® ಪ್ರೊ ಕಳೆನಾಶಕ

ಸುಮೆಟ್® ಪ್ರೊ ಕಳೆನಾಶಕವು ಭತ್ತದಲ್ಲಿ ವಿಶಾಲ ಎಲೆ ಮತ್ತು ಜೊಂಡು ವರ್ಗದ ಕಳೆ ನಿರ್ವಹಣೆಗೆ ಕಳೆ ಮೊಳೆತ ನಂತರ ಬಳಸುವ ಕಳೆನಾಶಕವಾಗಿದೆ. ಇದು ಎಲೆಗಳ ಮತ್ತು ಮಣ್ಣಿನ ಚಟುವಟಿಕೆಯೊಂದಿಗೆ ವ್ಯವಸ್ಥಿತ ಸಂಯೋಜನೆಯಾಗಿದೆ ಮತ್ತು ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಮುಖ್ಯಾಂಶಗಳು

  • ಸುಮೆಟ್® ಪ್ರೊ ಕಳೆನಾಶಕವು ವಿಶಾಲ-ವ್ಯಾಪ್ತಿಯ, ಕಳೆ ಮೊಳೆತ ನಂತರದ ಕಳೆ ನಿಯಂತ್ರಣ ಪರಿಹಾರವಾಗಿದೆ.
  • ನಾಟಿ ಮಾಡಿದ ಹಾಗೂ ನೇರ ಬಿತ್ತನೆಯ ಭತ್ತದಲ್ಲಿ ವಿವಿಧ ಬಗೆಯ ಅಗಲ ಎಲೆಯ ಕಳೆಗಳು ಮತ್ತು ಜೊಂಡುಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ
  • ಮಣ್ಣಿನಲ್ಲಿ ಸಂಪರ್ಕ ಮತ್ತು ಉಳಿಕೆಯ ಚಟುವಟಿಕೆಯನ್ನು ತೋರಿಸುತ್ತದೆ.
  • ದೀರ್ಘಾವಧಿಯವರೆಗೆ ಭತ್ತದಲ್ಲಿ ಕಳೆ ನಿರ್ವಹಣೆಯನ್ನು ಒದಗಿಸುತ್ತದೆ.  
  • ಎಲೆಗಳ ಮತ್ತು ಮಣ್ಣಿನ ಚಟುವಟಿಕೆಯೊಂದಿಗೆ ವ್ಯವಸ್ಥಿತ ಸಂಯೋಜನೆಯು ಸಲ್ಫೋನಿಲ್ಯೂರಿಯಾ ಗುಂಪಿಗೆ ಸೇರಿದೆ.   

ಸಕ್ರಿಯ ಪದಾರ್ಥಗಳು

  • ಮೆಟ್‌ಸಲ್ಫುರಾನ್ ಮೀಥೈಲ್ 10% + ಕ್ಲೋರಿಮುರಾನ್ ಈಥೈಲ್ 10% ಡಬ್ಲ್ಯೂಪಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಸುಮೆಟ್® ಪ್ರೊ ವಿಶಾಲ-ವ್ಯಾಪ್ತಿಯ, ಕಳೆ ಹುಟ್ಟಿದ ನಂತರ ಬಳಸುವ ಕಳೆನಾಶಕವಾಗಿದೆ ಮತ್ತು ನಾಟಿ ಮಾಡಿದ ಹಾಗೂ ನೇರ ಬಿತ್ತನೆಯ ಭತ್ತದಲ್ಲಿ ವಿವಿಧ ಬಗೆಯ ಅಗಲ ಎಲೆಯ ಕಳೆಗಳು ಮತ್ತು ಜೊಂಡುಗಳನ್ನು ನಿಯಂತ್ರಿಸುತ್ತದೆ. ಇದು ವ್ಯವಸ್ಥಿತ ಗುಣಗಳನ್ನು ಹೊಂದಿದ್ದು, ಗಿಡದ ಚಿಗುರುಗಳು ಮತ್ತು ಬೇರುಗಳಲ್ಲಿ ಕೋಶ ವಿಭಜನೆಯನ್ನು ತಡೆಯುತ್ತದೆ ಮತ್ತು ಅಗತ್ಯ ಅಮಿನೋ ಆಮ್ಲ ಸಂಶ್ಲೇಷಣೆಯನ್ನು ತಡೆಯುತ್ತದೆ.

ಸುಮೆಟ್® ಪ್ರೊ ತನ್ನ ಮಣ್ಣಿನ ಸಂಪರ್ಕ ಮತ್ತು ಉಳಿಕೆಯ ಚಟುವಟಿಕೆಯ ಮೂಲಕ ದೀರ್ಘ ಅವಧಿಗೆ ಭತ್ತದಲ್ಲಿ ಕಳೆ ನಿರ್ವಹಣೆಯನ್ನು ಒದಗಿಸುತ್ತದೆ. ಸೈಪರಸ್ ಇರಿಯಾ, ಬರ್ಗಿಯಾ ಕ್ಯಾಪೆನ್ಸಿಸ್, ಸೈಪರಸ್ ಡಿಫಾರ್ಮಿಸ್, ಸ್ಯಾಜಿಟೇರಿಯಾ ಸ್ಯಾಜಿಟಿಫೋಲಿಯಾ, ಫಿಂಬ್ರಿಸ್ಟೈಲಿಸ್ ಮಿಲಿಯಾಸಿಯಾ, ಎಕ್ಲಿಪ್ಟಾ ಆಲ್ಬಾ, ಮೊನೊಕೊರಿಯಾ ವಜಿನಾಲಿಸ್, ಮಾರ್ಸಿಲಿಯಾ ಕ್ವಾಡ್ರಿಫೋಲಿಯಾ, ಸ್ಫೆನೋಕ್ಲಿಯಾ ಝೆಲಾನಿಕಾ, ಕಮೆಲಿನಾ ಬೆಂಗಾಲೆನ್ಸಿಸ್ ಮುಂತಾದವು ಸುಮೆಟ್® ಪ್ರೊ ಉದ್ದೇಶಿತ ಕಳೆಗಳಾಗಿವೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ. 

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.