ಮುಖ್ಯಾಂಶಗಳು
- ಮೆಕ್ಕೆಜೋಳದ ಮೇಲೆ ಸುರಕ್ಷಿತ ಮತ್ತು ಕಳೆಗಳಿಗೆ ಕಠಿಣ
- ಗಿಲಾರ್ಡೋ ® ಕಳೆನಾಶಕವನ್ನು ಬಳಸುವುದರೊಂದಿಗೆ, ಪೋಷಕಾಂಶಗಳಿಗಾಗಿ ಬೆಳೆ ಮತ್ತು ಕಳೆಗಳ ನಡುವಿನ ಸ್ಪರ್ಧೆ ಕಡಿಮೆಯಾಗಿದೆ. ಇದು ಉತ್ತಮ ಗುಣಮಟ್ಟದ ಬೆಳೆಯನ್ನು ಮತ್ತು ಇಳುವರಿಯನ್ನು ನೀಡುತ್ತದೆ
- ಕಳೆ ನಿರ್ವಹಣೆಯಲ್ಲಿ ಕಡಿಮೆ ಹಸ್ತಕ್ಷೇಪದಿಂದಾಗಿ, ಕಾರ್ಮಿಕರ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ
- ಇದು ತುಂಬಾ ಹೆಚ್ಚಿನ ಬೆಳೆ ಸುರಕ್ಷತಾ ಪ್ರೊಫೈಲ್ ಹೊಂದಿದೆ- ನಂತರ ಬೆಳೆಯುವ ಬೆಳೆಗಳಿಗೆ ಸುರಕ್ಷಿತವಾಗಿದೆ
- ಮಳೆಯ ವೇಗ 2 ಗಂಟೆಗಳು
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಗಿಲಾರ್ಡೋ® ಕಳೆನಾಶಕವು ಒಂದು ಪೈರಾಜೋಲೋನ್ ಆಗಿದ್ದು, ಎಚ್‌ಪಿಪಿಡಿ ತಡೆಯುವ ವಿಶಿಷ್ಟ ಉಪವರ್ಗದ ಕಳೆನಾಶಕ ಆಗಿದೆ. ಇದು ವಾರ್ಷಿಕ ಹುಲ್ಲು ಮತ್ತು ಅಗಲ ಎಲೆಯ ಕಳೆಗಳ ಮೇಲೆ ತ್ವರಿತವಾಗಿ ಕಾರ್ಯ ನಿರ್ವಹಿಸುವ ವಿಶಾಲ ವ್ಯಾಪ್ತಿಯ ಕಾರ್ಯ ಕ್ಷಮತೆಯನ್ನು ಹೊಂದಿದೆ. ಆರ್ಗನೋಫಾಸ್ಪೆಟ್ ಕೀಟನಾಶಕಗಳನ್ನು ಒಳಗೊಂಡಂತೆ ಪ್ರಸ್ತುತ ನೇರವಾಗಿ ಎಲೆಗಳಿಗೆ ಬಳಸುವ ಎಲ್ಲಾ ಕೀಟನಾಶಕಗಳೊಂದಿಗೆ ಇದನ್ನು ಬಳಸಬಹುದು. ಗಿಲಾರ್ಡೋ® ಕಳೆನಾಶಕವು ಸೂಕ್ಷ್ಮ ಹುಲ್ಲು ಮತ್ತು ಅಗಲ ಎಲೆಯ ಕಳೆಗಳ ಮೇಲೆ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಬೇರು ಮತ್ತು ಚಿಗುರಿನ ಮೂಲಕ ವ್ಯವಸ್ಥಿತವಾಗಿ ಉದ್ದೇಶಿತ ಅಂಗಾಂಶಗಳಿಗೆ, ಅಂದರೆ ಚಿಗುರು ಮೆರಿಸ್ಟೆಮ್‌ಗಳಿಗೆ ವರ್ಗಾವಣೆಯಾಗುವ ವಿಶೇಷ ರೀತಿಯ ಕಾರ್ಯ ವೈಖರಿಯನ್ನು ಹೊಂದಿದೆ. ಇದರ ಪರಿಣಾಮವಾಗಿ, ಪತ್ರಹರಿತ್ತಿನ ಆಕ್ಸಿಡೇಟಿವ್ ಡಿಗ್ರೇಡೇಶನ್ ಉಂಟಾಗುತ್ತದೆ, ಇದರಿಂದಾಗಿ ಎದ್ದುಕಾಣುವ ಬಿಳಿತ್ವ ಅಥವಾ ಕಳೆಗಳ ಬ್ಲೀಚಿಂಗ್‌ಗೆ ಇದು ಕಾರಣವಾಗುತ್ತದೆ. ಗಿಲಾರ್ಡೋ® ಕಳೆನಾಶಕವು ಎಲ್ಲಾ ಬೆಳೆಗಳು ಮತ್ತು ವಿಶೇಷವಾಗಿ ಜೋಳದ ಬೆಳೆಗೆ ಅಧಿಕ ಸುರಕ್ಷಿತವಾಗಿದೆ, ಪಾಪ್‌ಕಾರ್ನ್, ಸೀಡ್ ಕಾರ್ನ್ ಮತ್ತು ಸೂಕ್ಷ್ಮ ಪ್ರಭೇದದ ಸಿಹಿ ಮೆಕ್ಕೆಜೋಳಗಳಿಗೂ ಸೂಕ್ತವಾಗಿದೆ. ಅದರ ವಿಶಾಲ ಸಿಂಪರಣೆ ವಿಂಡೋ, ಬೆಳೆಗಾರರಿಗೆ ಬಳಸಲು ಅನುಕೂಲಕರವಾಗಿದೆ.
ಬೆಳೆಗಳು

ಮೆಕ್ಕೆ ಜೋಳ
ಮೆಕ್ಕೆಜೋಳಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಎಲ್ಯೂಸಿನ್ ಇಂಡಿಕಾ (ಭಾರತೀಯ ಗೂಸ್ ಹುಲ್ಲು)
- ಡಿಜಿಟೇರಿಯಾ ಸಾಂಗ್ವಿನಾಲಿಸ್ (ಏಡಿ ಹುಲ್ಲು)
- ಡಾಕ್ಟಿಲೋಕ್ಟೆನಿಯಮ್ ಈಜಿಪ್ಟಿಯಮ್ (ಕಾಡು ರಾಗಿ ಹುಲ್ಲು)
- ಎಕಿನೊಕ್ಲೋವಾ ಎಸ್ಪಿಪಿ. (ಗರಿಕೆ ಹುಲ್ಲು)
- ಕ್ಲೋರಿಸ್ ಬಾರ್ಬಟಾ (ಸ್ವೋಲನ್ ಫಿಂಗರ್ ಹುಲ್ಲು)
- ಪಾರ್ಥೇನಿಯಮ್ ಹಿಸ್ಟಿರೋಫೋರಸ್ (ಕಾಂಗ್ರೆಸ್ ಹುಲ್ಲು)
- ದಿಗೇರಾ ಆರ್ವೆನ್ಸಿಸ್ (ಚೆಂಚಲಿ ಸೊಪ್ಪು)
- ಅಮರಂತುಸ್ ವಿರಿದಿಸ್ (ಅಮರಂತ್)
- ಫಿಸಾಲಿಸ್ ಮಿನಿಮಾ (ಗ್ರೌಂಡ್ ಚೆರಿ)
- ಆಲ್ಟರ್ನಾಂಥೆರಾ ಸೆಸಿಲಿಸ್ (ಸೆಸಿಲ್ ಜಾಯ್ ವೀಡ್)
- ಸೆಲೋಸಿಯಾ ಅರ್ಜೆಂಟಿಯಾ (ಕಾಕ್ಸ್ ಕಾಂಬ್)
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಮೆಕ್ಕೆ ಜೋಳ