ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಕಾರ್ಪೊರೇಶನ್ ಮತ್ತು ಅರಾಗೆನ್ ಲೈಫ್ ಸೈನ್ಸಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸುತ್ತವೆ

ಅರಾಗೆನ್ ಲೈಫ್ ಸೈನ್ಸಸ್ (ಮೊದಲು, ಜಿವಿಕೆ ಬಯೋ) ಮತ್ತು ಎಫ್ಎಂಸಿ ಕಾರ್ಪೊರೇಶನ್, ಕಾರ್ಯತಂತ್ರದ ಪಾಲುದಾರಿಕೆಯನ್ನು ಪಡೆಯಲು ಒಪ್ಪಿಕೊಂಡಿವೆ. ಈ ಸಹಯೋಗದ ಮೂಲಕ, ಅರಾಗೆನ್ ರಸಾಯನ ಶಾಸ್ತ್ರ ಆವಿಷ್ಕಾರ, ಜೀವಶಾಸ್ತ್ರ ಆವಿಷ್ಕಾರ ಮತ್ತು ರಾಸಾಯನಿಕ ಪ್ರಕ್ರಿಯೆ ಅಭಿವೃದ್ಧಿ ಸೇರಿದಂತೆ ಎಫ್ಎಂಸಿಯ ಜಾಗತಿಕ ಆವಿಷ್ಕಾರ ಮತ್ತು ಅಭಿವೃದ್ಧಿ ಅಗತ್ಯಗಳನ್ನು ಬೆಂಬಲಿಸುತ್ತದೆ.

ಈ ಪಾಲುದಾರಿಕೆಯು ಎಫ್ಎಂಸಿ ಕಾರ್ಪೋರೇಶನ್‌ನ ಕೃಷಿ-ರಾಸಾಯನಿಕ ಪೈಪ್‌ಲೈನ್ ಅನ್ನು ವರ್ಧಿಸುವ ಗುರಿ ಹೊಂದಿದೆ. "ಈ ದೀರ್ಘಕಾಲಿಕ ಪಾಲುದಾರಿಕೆಯ ಮೂಲಕ, ಬೆಳೆ ವಿಜ್ಞಾನದ ಜಾಗತಿಕ ನಾಯಕ ಸ್ಥಾನದಲ್ಲಿ ಒಂದಾಗಿರುವ ಎಫ್ಎಂಸಿಗೆ ಅದರ ಆರ್ ಮತ್ತು ಡಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಆವಿಷ್ಕಾರ ಮತ್ತು ಅಭಿವೃದ್ಧಿಯ ಎಲ್ಲಾ ಹಂತಗಳ ಮೂಲಕ ಈ ಸಹಯೋಗದ ವಿಸ್ತರಣೆಯು ಎಫ್ಎಂಸಿಯು ಅರಾಗೆನ್‌ನಲ್ಲಿ ಹೊಂದಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ- ನಮ್ಮ ಪಾಲುದಾರರಿಗೆ ಇನ್ನೂ ಹೆಚ್ಚಿನ ಯಶಸ್ಸಿನ ಕಥೆಗಳನ್ನು ನೀಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಅರಾಗೆನ್ ಸಿಇಒ ಮಣ್ಣಿ ಕಾಂತಿಪುಡಿ ಹೇಳುತ್ತಾರೆ.

ಪಾಲುದಾರಿಕೆ ಒಪ್ಪಂದದ ಬಗ್ಗೆ ಮಾತನಾಡುತ್ತಾ, ಎಫ್ಎಂಸಿ ಕಾರ್ಪೋರೇಶನ್‌ನ ಉಪಾಧ್ಯಕ್ಷೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿರುವ ಕ್ಯಾಥ್ಲೀನ್ ಶೆಲ್ಟನ್, "ಅರಾಗೆನ್ ಹಲವಾರು ವರ್ಷಗಳಿಂದ ಎಫ್ಎಂಸಿ ಜೊತೆಗೆ ಮೌಲ್ಯಯುತ ಸಹಭಾಗಿತ್ವ ಹೊಂದಿದೆ. ಈ ಪಾಲುದಾರಿಕೆಯು ಸಂಶೋಧನೆ ಮತ್ತು ಅಭಿವೃದ್ಧಿಯ ಅನೇಕ ವಿಭಾಗಗಳಲ್ಲಿ ವಿಸ್ತರಿಸುತ್ತದೆ ಮತ್ತು ನಮ್ಮ ಈ ಬಲವಾದ ಕೆಲಸದ ಸಂಬಂಧವನ್ನು ನಾವು ಪ್ರಶಂಸಿಸುತ್ತೇವೆ ಎಂದು ಹೇಳಿದರು."