ಐತಿಹಾಸಿಕವಾಗಿ, ದೇಶದ ಬೆಳವಣಿಗೆ ಮತ್ತು ದೀರ್ಘಕಾಲೀನ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ.
ಭಾರತವು ಪ್ರಾಥಮಿಕವಾಗಿ ಕೃಷಿ ಆರ್ಥಿಕತೆ ಹೊಂದಿದ್ದು, ಮಹಿಳೆಯರು ಹೊಲಗಳಲ್ಲಿ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಅಭಿವೃದ್ಧಿ ಮತ್ತು ಹೊಸ ಉದ್ಯೋಗ ಸೃಷ್ಟಿಯಾಗುವುದರೊಂದಿಗೆ, ಹಳ್ಳಿಗಳಿಂದ ನಗರಗಳಿಗೆ ಪುರುಷರ ವಲಸೆ ಹೆಚ್ಚಾಗುತ್ತಿದ್ದು, ರೈತರು, ಉದ್ಯಮಿಗಳು ಮತ್ತು ಕಾರ್ಮಿಕರಾಗಿ, ಹಾಗೂ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಮಹಿಳೆಯರ ಕೊಡುಗೆ ಒತ್ತು ನೀಡುವಂತಿದೆ. ಈ ಉದ್ಯಮವು ಭಾರತೀಯ ಜನಸಂಖ್ಯೆಯ 60 ಪ್ರತಿಶತಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ ಮತ್ತು ದೇಶದ ಜಿಡಿಪಿಗೆ ಸುಮಾರು 18 ಶೇಕಡಾ ಕೊಡುಗೆ ನೀಡುತ್ತದೆ. ವಾಸ್ತವವಾಗಿ, ಆಕ್ಸ್‌ಫ್ಯಾಮ್ ಸಂಶೋಧನೆಯು ಹೇಳುವಂತೆ ಭಾರತದಲ್ಲಿ ಆರ್ಥಿಕವಾಗಿ ಸಕ್ರಿಯವಾದ ಸುಮಾರು 80 ಶೇಕಡಾ ಮಹಿಳೆಯರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ, ಇದರಲ್ಲಿ 48 ಶೇಕಡಾ ಸ್ವಯಂ ಉದ್ಯೋಗಿ ರೈತರು ಮತ್ತು 33 ಶೇಕಡಾ ಕೃಷಿ ಕಾರ್ಮಿಕರು ಸೇರಿದ್ದಾರೆ.
ಆದಾಗ್ಯೂ, ಕೃಷಿ ಕ್ಷೇತ್ರ ಮತ್ತು ಸಂಬಂಧಿತ ವಲಯಗಳಾದ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳು, ರಸಗೊಬ್ಬರಗಳು, ಕೀಟನಾಶಕಗಳು, ಹಣಕಾಸು, ಮೀನುಗಾರಿಕೆ ಮತ್ತು ಎಫ್ಎಂಸಿಜಿ ಮುಂತಾದವುಗಳ ಮಧ್ಯಮ ಮತ್ತು ಮೇಲಿನ-ಮಟ್ಟದ ನಿರ್ವಹಣಾ ಸ್ಥಾನಗಳನ್ನು ಒಳಗೊಂಡಂತೆ ಎಲ್ಲಾ ಹಂತಗಳಲ್ಲಿ ಮಹಿಳೆಯರ ಪಾಲು ತುಲನಾತ್ಮಕವಾಗಿ ಅತ್ಯಲ್ಪವಾಗಿದೆ.
ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶ
ಕೃಷಿ ಕ್ಷೇತ್ರವು ಸಾಮಾನ್ಯವಾಗಿ ರಚನಾತ್ಮಕ ಸವಾಲುಗಳು ಮತ್ತು ಸಿದ್ಧ ಮಾದರಿಯ ಕಲ್ಪನೆಗಳೊಂದಿಗೆ ಹೋರಾಡುತ್ತಿದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸತ್ಯವಾಗಿದೆ, ಇಲ್ಲಿ ಮಹಿಳೆಯರು ಸಾಂಪ್ರದಾಯಿಕ ಪಾತ್ರಗಳಿಗೆ ಅಂದರೆ- ಗೃಹಿಣಿಯಾಗಿ, ಕುಟುಂಬದ ಕಾಳಜಿ ಮಾಡುವವರಾಗಿ ಮತ್ತು ಕುಟುಂಬಕ್ಕಾಗಿ ದುಡಿಯುವ ಮನೆಯ ಗಂಡಸರಿಗೆ ಬೆಂಬಲ ನೀಡುವ ಕೆಲಸಗಳಿಗೆ ಸೀಮಿತರಾಗಿರುತ್ತಾರೆ. ಪುರುಷ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅನ್ವೇಷಿಸಲು ಮಹಿಳೆಯರನ್ನು ಪ್ರೋತ್ಸಾಹಿಸುವ ಸ್ವೀಕೃತಿಯ ಕೊರತೆಯನ್ನು ಕಾಣಬಹುದಾಗಿದೆ ಎಂದು ಹೇಳಬಹುದು.
ಹೆಚ್ಚುವರಿಯಾಗಿ, ಸಂಬಂಧಿತ ವಲಯಗಳಲ್ಲಿಯೂ ಸಹ, ಮಹಿಳೆಯರು ತಮ್ಮ ವೃತ್ತಿಜೀವನದ ಉದ್ದಕ್ಕೂ ಅಡೆತಡೆಗಳನ್ನು ಎದುರಿಸಬಹುದು, ಅದು ಅವರ ವೃತ್ತಿಜೀವನದ ಆಯ್ಕೆಯಾಗಿರಬಹುದು ಅಥವಾ ಕಂಪನಿಯ ಶ್ರೇಣಿಯಲ್ಲಿ ತಮ್ಮ ಸ್ಥಳವನ್ನು ಸೃಷ್ಟಿಸುವ ಪ್ರಯತ್ನಗಳಾಗಿರಬಹುದು. ಮಾರಾಟ, ಸಂಶೋಧನೆ, ಔಷಧಿ, ಉತ್ಪಾದನೆ ಮತ್ತು ಮುಂತಾದ ಕ್ಷೇತ್ರಗಳನ್ನು ಸಾಂಪ್ರದಾಯಿಕವಾಗಿ ಪುರುಷರ ಉದ್ಯೋಗವೆಂದು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಯು ಗ್ರಾಮೀಣ ಮಾರುಕಟ್ಟೆ ಸಂಬಂಧಿತ ಉದ್ಯಮಗಳಲ್ಲಿ ಹೆಚ್ಚಾಗಿ ಕಾಣುತ್ತದೆ, ಇದರಿಂದಾಗಿ ಮಹಿಳೆಯರ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸವಾಲನ್ನು ಪರಿಹರಿಸುವುದು
ಸಾಂಸ್ಥಿಕ ಮೌಲ್ಯಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿ ಪ್ರತಿಭೆಗಳನ್ನು ಹುಡುಕಲು ಮತ್ತು ಅಭಿವೃದ್ಧಿಪಡಿಸಲು ಕಾರ್ಯತಂತ್ರದ ಉಪಕ್ರಮಗಳನ್ನು ಕೈಗೊಳ್ಳುವುದು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ತೊಡಗಿರುವವರ ಸದ್ಯದ ಅಗತ್ಯವಾಗಿದೆ. ಇದನ್ನು 'ಹಾರ್ಡ್‌ವೇರ್' ಮತ್ತು 'ಸಾಫ್ಟ್‌ವೇರ್' ತೊಡಗುವಿಕೆಗಳ ಸಂಯೋಜನೆಯೊಂದಿಗೆ ಸಾಧಿಸಬಹುದು. ಇಲ್ಲಿ, 'ಹಾರ್ಡ್‌ವೇರ್' ಎಂಬುದು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ನಿರ್ದಿಷ್ಟ ನೀತಿಗಳು, ಅನುಕೂಲಕರ, ಸಂತೋಷದಾಯಕ ಮತ್ತು ಬೆಂಬಲ ನೀಡುವ ಕೆಲಸದ ಸಂಸ್ಕೃತಿಯನ್ನು ಸೃಷ್ಟಿಸುವುದು ಮತ್ತು ಮಹಿಳೆಯರಿಗೆ ಸಮಾನವಾಗಿ ಕೆಲಸ ಮಾಡಲು ಅನುಕೂಲ ಮಾಡುವ ಮೂಲಸೌಕರ್ಯವನ್ನು ಒದಗಿಸುವುದನ್ನು ಒಳಗೊಂಡಿದೆ. ‘ಸಾಫ್ಟ್‌ವೇರ್ ಎಂದರೆ, ಒಳಗೊಳ್ಳುವಿಕೆಯ ತರಬೇತಿ, ಅಪ್ರಜ್ಞಾಪೂರ್ವಕ ಮತ್ತು ಪ್ರಜ್ಞಾಪೂರ್ವಕ ಪಕ್ಷಪಾತವನ್ನು ಗುರುತಿಸುವುದು ಮತ್ತು ತೆಗೆದುಹಾಕುವುದು ಇತ್ಯಾದಿಗಳ ಮೂಲಕ ವೈವಿಧ್ಯತೆ ಮತ್ತು ಸೇರ್ಪಡೆಗೆ ಸಂಬಂಧಿಸಿದಂತೆ ಮನಸ್ಥಿತಿಯಲ್ಲಿ ಸ್ಥಿರ ಮತ್ತು ಶಾಶ್ವತ ಬದಲಾವಣೆಯನ್ನು ತರುವುದು ಎಂದರ್ಥ. ವೃತ್ತಿ ಮಾರ್ಗಗಳಲ್ಲಿ ಗುರುತಿಸಿದ ಪೂರ್ವ-ಅಸ್ತಿತ್ವದಲ್ಲಿರುವ ಲಿಂಗ ನಿರೀಕ್ಷೆಗಳಿಂದ ಒಂದು ಹೆಜ್ಜೆ ದೂರವಿಡಲು ಮತ್ತು ನಿಜವಾಗಿಯೂ ವೈವಿಧ್ಯಮಯ ಮತ್ತು ಅಂತರ್ಗತ ಕೆಲಸದ ವಾತಾವರಣವನ್ನು ರಚಿಸಲು ಸಂಸ್ಥೆಗೆ ಸಹಾಯ ಮಾಡುತ್ತದೆ.
ಹೆಚ್ಚುವರಿಯಾಗಿ, ಸಂಸ್ಥೆಗಳು ಅಂತರ್ಗತ ಮತ್ತು ವೈವಿಧ್ಯಮಯ ಕೆಲಸದ ವಾತಾವರಣವನ್ನು ಬಲಪಡಿಸಲು ಮತ್ತು ಉತ್ತೇಜಿಸಲು, ಸಂಸ್ಥೆಯ ಒಳಗಿನ ಎಲ್ಲಾ ಹಂತಗಳಲ್ಲಿಯೂ ಪ್ರತಿಭಾವಂತ ಮಹಿಳಾ ಸಂಪನ್ಮೂಲವನ್ನು ನಿರ್ಮಿಸುವ ಉದ್ದೇಶದ ಮತ್ತು ಕಾರ್ಯತಂತ್ರದ ಕಾರ್ಯಕ್ರಮವನ್ನು ಹೊಂದಿರುವ ಅಗತ್ಯವಿದೆ - ಮೊದಲಿನಿಂದಲೂ ಪುರುಷ ಪ್ರಧಾನ ಎಂದು ಗ್ರಹಿಸಿದ ಸ್ಥಾನಗಳನ್ನು ಒಳಗೊಂಡಂತೆ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ತರಬೇತಿ ನೀಡುವ ಮತ್ತು ಸಿದ್ಧಪಡಿಸುವ ಮೂಲಕ ಅದನ್ನು ಸಾಧಿಸಬಹುದು.
ಉದ್ಯಮಗಳಲ್ಲಿ ಮಹಿಳೆಯರಿಗೆ ಬೆಳವಣಿಗೆಯ ಮಾರ್ಗಗಳನ್ನು ಉತ್ತೇಜಿಸುವ ಉಪಕ್ರಮಗಳು ಮತ್ತು ದೀರ್ಘಕಾಲೀನ ಗುರಿಗಳನ್ನು ಬಿಸಿನೆಸ್‌ಗಳು ಸ್ಥಾಪಿಸಬೇಕು. ಹೆಚ್ಚುವರಿಯಾಗಿ, ಕಂಪನಿಗಳು ಕೇಂದ್ರೀಕೃತ ಗುಂಪು ಚರ್ಚೆಗಳಂತಹ ಮುಕ್ತ ಸಂವಹನ ವ್ಯವಸ್ಥೆಗಳನ್ನು ಸ್ಥಾಪಿಸಬಹುದು, ಇದರಲ್ಲಿ ಮಹಿಳಾ ಉದ್ಯೋಗಿಗಳು ತಾವು ಎದುರಿಸುವ ಸಮಸ್ಯೆ ಅಥವಾ ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬಹುದು. ಕೃಷಿ ಕ್ಷೇತ್ರದ ಪ್ರಮುಖ ಕಂಪನಿಯಾಗಿ ಎಫ್ಎಂಸಿ, ಈ ವಿಷಯವನ್ನು ಪರಿಹರಿಸಲು ವಿವಿಧ ಕಾರ್ಯತಂತ್ರದ ತೊಡಗುವಿಕೆಗಳನ್ನು ನಡೆಸಿದೆ. ಎಫ್ಎಂಸಿಯ ಮಹಿಳಾ ತೊಡಗುವಿಕೆ ನೆಟ್ವರ್ಕ್ (ವಿನ್) ಮತ್ತು ವೈವಿಧ್ಯತೆ ಮತ್ತು ಸೇರ್ಪಡೆ (ಡಿ ಮತ್ತು ಐ) ಕೌನ್ಸಿಲ್, ಲಿಂಗ ಸಮತೋಲನ ಮತ್ತು ಜನಾಂಗ ಸಮತೋಲನ ಕುರಿತು ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುವ ಕೆಲವು ವಿಧಾನಗಳಾಗಿವೆ. ಕಂಪನಿಯು ತನ್ನ ಅನೇಕ ಡಿ ಮತ್ತು ಐ ಕಾರ್ಯತಂತ್ರಗಳ ಮೂಲಕ, 2027 ರ ಒಳಗೆ ತನ್ನ ಜಾಗತಿಕ ಕಾರ್ಯಪಡೆಯ ಎಲ್ಲಾ ಪ್ರದೇಶಗಳು ಮತ್ತು ಉದ್ಯೋಗದ ಹಂತಗಳಲ್ಲಿ 50:50 ಲಿಂಗದ ಅನುಪಾತವನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ.
ತನ್ನ ಕಡೆಯಿಂದ, ಸರ್ಕಾರ ಕೂಡಾ ಮಹಿಳಾ ಸಬಲೀಕರಣದ ಪ್ರಯತ್ನದಲ್ಲಿ ನಿಷ್ಠೆಯಿಂದ ತೊಡಗಿದೆ. ತಳಮಟ್ಟದಲ್ಲಿ, ನಾರಿ ಶಕ್ತಿ ಪುರಸ್ಕಾರ, ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಕಾರ್ಯಕ್ರಮಕ್ಕೆ ಬೆಂಬಲದ (ಸ್ಟೆಪ್) ರೀತಿಯ ಅನೇಕ ಶಿಕ್ಷಣ ಯೋಜನೆಗಳು ಮತ್ತು ತರಬೇತಿ ಮತ್ತು ಕೌಶಲ ಕಾರ್ಯಕ್ರಮಗಳು ಇವೆ. ವಿಶೇಷವಾಗಿ ಶ್ರೇಣಿ 2 ರ ಮತ್ತು 3 ನಗರಗಳಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ಕೃಷಿ ಸಮುದಾಯಕ್ಕಾಗಿ ಪದವಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಕಾರ್ಪೊರೇಟ್ ಕೆಲಸದ ಸ್ಥಳವನ್ನು ಗುರಿಯಾಗಿಸಿಕೊಂಡು ಸರ್ಕಾರವು, ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ನಿಖರವಾದ ಅಂಕಿಅಂಶಗಳನ್ನು ಪಡೆಯಲು ಲಿಂಗ ಸಮಾನತೆ ಅಥವಾ ಕಾರ್ಯಾಚರಣೆಯಲ್ಲಿ ಮಹಿಳೆಯರ ಪ್ರಾತಿನಿಧಿತ್ವ ಮುಂತಾದ ಸೂಚ್ಯಂಕಗಳನ್ನು ರಚಿಸಿದೆ.
ಕೃಷಿ ಉದ್ಯಮದಲ್ಲಿನ ಸಂಸ್ಥೆಗಳು ಮಹಿಳೆಯರ ಯಶಸ್ಸನ್ನು ಗುರುತಿಸಬೇಕು ಮತ್ತು ಈ ಉದ್ಯಮಕ್ಕೆ ಪ್ರವೇಶಿಸಲು ಯೋಚಿಸುತ್ತಿರುವ ಇತರ ಮಹತ್ವಾಕಾಂಕ್ಷಿ ಮಹಿಳೆಯರಿಗೆ ದಾರಿದೀಪವಾಗಲು ಅವರನ್ನು ಪ್ರೇರೇಪಿಸಬೇಕು. ಮಹಿಳಾ ನಾಯಕಿಯರು ಮತ್ತು ಪ್ರಭಾವಿ ವ್ಯಕ್ತಿಗಳು ಸಂವಾದ ನಡೆಸುವ ಮತ್ತು ಕಷ್ಟಗಳನ್ನು ಹಿಮ್ಮೆಟ್ಟಿ ತಾವು ಯಶಸ್ಸು ಸಾಧಿಸಿದ ಕಥೆಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮಗಳು ಯುವತಿಯರನ್ನು ಪ್ರೇರೇಪಿಸುವ ಮತ್ತು ಅವರಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಲು ನೆರವಾಗುವ ಕೆಲವು ಮಾರ್ಗಗಳಾಗಿವೆ.
ಇತರ ಉದಾಹರಣೆಗಳಿಂದ ಕಲಿಕೆ
ಈ ಪರಿಸ್ಥಿತಿಯು ಇತರ ಏಷ್ಯನ್ ರಾಷ್ಟ್ರಗಳಲ್ಲಿ ತುಂಬಾ ಭಿನ್ನವಾಗಿದೆ. ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ, ಮಹಿಳೆಯರನ್ನು ಸಮಾನ ಅನ್ನದಾತರೆಂದು ಒಪ್ಪಿಕೊಳ್ಳಲಾಗುತ್ತದೆ ಮತ್ತು ಸಮಾಜದಲ್ಲಿ ಅವರ ಆರ್ಥಿಕ ಭಾಗವಹಿಸುವಿಕೆ ತುಲನಾತ್ಮಕವಾಗಿ ಹೆಚ್ಚಾಗಿದೆ. ಪರಿಣಾಮವಾಗಿ, ಕೃಷಿ ವ್ಯವಹಾರಗಳು ಮಹಿಳೆಯರಿಂದ ನಡೆಸಲ್ಪಡುತ್ತವೆ ಅಥವಾ ಅವರು ಪ್ರಮುಖ ನಿರ್ಧಾರ-ತೆಗೆದುಕೊಳ್ಳುವವರಾಗಿರುತ್ತಾರೆ.
ವಾಸ್ತವವಾಗಿ, ಹೆಚ್ಚಿನ ಏಷ್ಯನ್ ರಾಷ್ಟ್ರಗಳಲ್ಲಿ, ಎಲ್ಲಾ ಕಾರ್ಪೊರೇಟ್ ಮೂಲಸೌಕರ್ಯಗಳನ್ನು ಪುರುಷರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಪ್ರಮುಖ ಮೂಲ ಸೌಕರ್ಯಗಳಾದಂತಹ, ಶೌಚಾಲಯಗಳು, ಹೆಚ್ಚಿನ ನಗರಗಳಲ್ಲಿ ಮಕ್ಕಳ ಡೇ-ಕೇರ್ ಸೇವೆಗಳಿರುವಂತೆಯೇ ಅಗತ್ಯ ಸೌಲಭ್ಯಗಳು ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳೆಯರಿಗೆ ಲಭ್ಯವಿವೆ. ಮಹಿಳೆಯರ ಸುರಕ್ಷತೆಯ ಮೇಲೆ ಕೇಂದ್ರಿತ ಗಮನವಿದೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ನಗರದೊಳಗೆ, ಹಾಗೆಯೇ ಹೊರ ಪ್ರದೇಶಕ್ಕೆ ಸುಲಭವಾಗಿ ಪ್ರಯಾಣಿಸಲು ಮಹಿಳೆಯರನ್ನು ಸಶಕ್ತರನ್ನಾಗಿಸಲಾಗಿದೆ.
ಭಾರತದ ಕೃಷಿ ಮತ್ತು ಸಂಬಂಧಿತ ವ್ಯವಹಾರಗಳು ಈ ವಿಷಯದಲ್ಲಿ ತನ್ನ ನೆರೆಯವರಿಂದ ಕೆಲವು ಅಂಶಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಹೆಚ್ಚು ಒಳಗೊಳ್ಳುವ ಪರಿಸರವು ನಮ್ಮ ಸಾಂಸ್ಕೃತಿಕ ಚೌಕಟ್ಟಿನಿಂದ ಬಂದಿದೆ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧವಾಗಲು ನಾವು ಬಲವಾದ ಮತ್ತು ಸ್ಥಿರವಾದ ಡಿ ಮತ್ತು ಐ ಕೆಲಸದ ಸಂಸ್ಕೃತಿಯನ್ನು ಹೊಂದಿರಬೇಕು.