ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಪ್ರತಿಷ್ಠಿತ ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನದ ಸಹಾಯದಿಂದ, ಮೀರತ್‌ನ ಕಾವ್ಯ ನರ್ನೆ ಕೃಷಿಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ವಿಷಯದ ಮೇಲೆ ಗಮನ ಹರಿಸಲು ಬಯಸುತ್ತಾರೆ.

ಅಕ್ಟೋಬರ್ 10, 2023: ಉತ್ತರಾಖಂಡದ ಪಂತ್ ನಗರದಲ್ಲಿರುವ ಜಿಬಿ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಜಿಬಿಪಿಯುಎಟಿ), ಕೀಟಶಾಸ್ತ್ರ ವಿಭಾಗದ ಮೊದಲ ವರ್ಷದ ಪಿಎಚ್‌ಡಿ ವಿದ್ಯಾರ್ಥಿಯಾದ ಕಾವ್ಯ ನರ್ನೆ, ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾದಿಂದ ಪ್ರತಿಷ್ಠಿತ ವಿಜ್ಞಾನ ನಾಯಕರ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ರೈತರಿಗೆ ಸಹಾಯ ಮಾಡುವ ಹಂಬಲ ಮತ್ತು ಎಫ್ಎಂಸಿ ಇಂಡಿಯಾದ ಬೆಂಬಲದೊಂದಿಗೆ, ಕೃಷಿಯಲ್ಲಿ ಬೆಳೆ ರಕ್ಷಣೆ ಮತ್ತು ಸುಸ್ಥಿರತೆಯನ್ನು ಉನ್ನತೀಕರಿಸುವ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಮುನ್ನಡೆಯಲು ಕಾವ್ಯಾ ಬಯಸುತ್ತಾರೆ.

Kavya

2021 ರಲ್ಲಿ ಆರಂಭಗೊಂಡ ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮವು, ಕೃಷಿ ವಿಜ್ಞಾನದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಇಪ್ಪತ್ತು ವಿದ್ಯಾರ್ಥಿವೇತನಗಳನ್ನು ನೀಡುತ್ತದೆ. ಪಿಎಚ್‌ಡಿ ಓದುತ್ತಿರುವ ಹತ್ತು ವಿದ್ಯಾರ್ಥಿಗಳಿಗೆ ಮತ್ತು ಕೃಷಿ ವಿಜ್ಞಾನದಲ್ಲಿ ಎಂಎಸ್‌ಸಿ ಓದುತ್ತಿರುವ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ. ಕೃಷಿ ವಿಜ್ಞಾನದಲ್ಲಿ ಯಶಸ್ವಿ ವೃತ್ತಿಜೀವನವನ್ನು ಸಾಧಿಸಲು ಬಯಸುವ ಮಹತ್ವಾಕಾಂಕ್ಷಿ ಮತ್ತು ಪ್ರತಿಭಾನ್ವಿತ ಮಹಿಳೆಯರಿಗೆ ಈ ವಿದ್ಯಾರ್ಥಿವೇತನದಲ್ಲಿ ಐವತ್ತು ಪ್ರತಿಶತವನ್ನು ಮೀಸಲಿಡಲಾಗಿದೆ. ಈ ಕಾರ್ಯಕ್ರಮದ ಮೂಲಕ, ಕೃಷಿ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಮಹತ್ವಾಕಾಂಕ್ಷಿ ವಿಜ್ಞಾನಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಎಫ್ಎಂಸಿ ಇಂಡಿಯಾ ಹೊಂದಿದೆ. ಕೃಷಿ ಉದ್ಯಮದ ಕಾರ್ಯಪಡೆಗೆ ಪ್ರವೇಶಿಸಲು ಬಯಸುವ ಯುವಜನರಿಗೆ ಸಾಮರ್ಥ್ಯ ಮತ್ತು ಕೌಶಲ್ಯ ನಿರ್ಮಾಣ, ಸಂಶೋಧನೆ ಮತ್ತು ನಾವೀನ್ಯತೆ ಒದಗಿಸುವ ಉದ್ದೇಶದೊಂದಿಗೆ ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಎಫ್ಎಂಸಿ ಇಂಡಿಯಾದ ಅಧ್ಯಕ್ಷ ರವಿ ಅನ್ನವರಪು, "ಎಫ್ಎಂಸಿಯಲ್ಲಿ, ಕೃಷಿಯ ಸಮಗ್ರ ಬೆಳವಣಿಗೆಗಾಗಿ ವೈವಿಧ್ಯಮಯ ಮತ್ತು ಅಂತರ್ಗತ ಕೆಲಸದ ಸಂಸ್ಕೃತಿಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ಕೃಷಿ ವಿಜ್ಞಾನದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಪ್ರತಿಭಾನ್ವಿತ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ನಾವು ಹೆಚ್ಚು ಶ್ರಮಿಸುತ್ತೇವೆ. ಕೃಷಿಯ ಹೆಚ್ಚಿನ ಅಭಿವೃದ್ಧಿಗಾಗಿ, ಸಮಾಜದ ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವ ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಪ್ರತಿಭಾನ್ವಿತ ಯುವ ವಿಜ್ಞಾನಿಗಳ ಸದೃಢ ತಂಡವನ್ನು ನಿರ್ಮಿಸುವುದು ಮತ್ತು ಸಬಲೀಕರಣಗೊಳಿಸುವುದು ಇಂದಿನ ಅಗತ್ಯವಾಗಿದೆ” ಎಂದು ಹೇಳಿದರು

“ನಮ್ಮ ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳು ಮಾರ್ಗದರ್ಶನ ಮತ್ತು ಇಂಟರ್ನ್‌ಶಿಪ್ ಅವಕಾಶಗಳ ಮೂಲಕ ತಮ್ಮ ಚಿಂತನೆಯನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಎಫ್ಎಂಸಿಯೊಂದಿಗಿನ ಜಿಬಿಪಿಯುಎಟಿಯ ಪರಸ್ಪರ ಒಪ್ಪಂದದ ಕರಾರು ಪತ್ರ ಸಹಕಾರಿಯಾಗಿದೆ. ಎಫ್ಎಂಸಿ ಸಿಬ್ಬಂದಿ ಮತ್ತು ಸಲಹಾ ಸಮಿತಿಯೊಂದಿಗಿನ ವಿದ್ಯಾರ್ಥಿಗಳ ಸಂವಹನವು ಸದೃಢ ಸಂಶೋಧನಾ ಹೇಳಿಕೆಯನ್ನು ಯೋಚಿಸಲು ಮತ್ತು ರೂಪಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ಇದು ಉದ್ಯಮಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯವನ್ನು ಮುನ್ನಡೆಸಲು ಮತ್ತು ಕೈಗೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ. ಈ ವಿದ್ಯಾರ್ಥಿವೇತನಗಳು ವಿಶೇಷ ತರಬೇತಿ, ಸಂಬಂಧಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಇತ್ಯಾದಿಗಳಲ್ಲಿ ಹಾಜರಾಗುವ ಮೂಲಕ ತಮ್ಮ ಸಂವಹನ ಕೌಶಲ್ಯಗಳು ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಈ ಉದ್ಯಮ-ಶೈಕ್ಷಣಿಕ ಪಾಲುದಾರಿಕೆಯು ಸುಸ್ಥಿರ ಕೃಷಿ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಸಾಧಿಸಲು ಸಹಾಯ ಮಾಡಲು ಶ್ರಮಿಸುತ್ತದೆ ಎಂದು ನನಗೆ ನಂಬಿಕೆಯಿದೆ" ಎಂದು ಜಿಬಿಪಿಯುಎಟಿ ಸ್ನಾತಕೋತ್ತರ ಪದವಿ ಅಧ್ಯಯನ ವಿಭಾಗದ ಡೀನ್ ಡಾ. ಕಿರಣ್ ಪಿ. ರಾವರ್ಕರ್ ಹೇಳಿದರು.

ಅವಕಾಶದ ಕುರಿತು ಮಾತನಾಡಿದ ಕಾವ್ಯಾ, "ಬಾಲ್ಯದಿಂದಲೂ ನಾನು ಸಸ್ಯಗಳು ಮತ್ತು ಕೃಷಿಯಿಂದ ಆಕರ್ಷಿತಳಾಗಿದ್ದು, ಅದು ನನ್ನನ್ನು ಕೃಷಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೇರೇಪಿಸಿತು. ಜಿಬಿ ಪಂತ್ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ನಂತರ ನಾನು ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡೆ. ಕೃಷಿ ಕುರಿತಾದ ಆಸಕ್ತಿಯನ್ನು ಮುಂದುವರಿಸಲು ನನ್ನನ್ನು ಸಜ್ಜುಗೊಳಿಸಿದ ಈ ಪ್ರತಿಷ್ಠಿತ ವಿದ್ಯಾರ್ಥಿವೇತನ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಕೃಷಿ ಕ್ಷೇತ್ರದ ಕುರಿತು ಹೆಚ್ಚಿನ ಜ್ಞಾನವನ್ನು ಪಡೆಯಲು ಮತ್ತು ಕೃಷಿ ಕ್ಷೇತ್ರದಲ್ಲಿ ಯಶಸ್ವಿ ಮಹಿಳಾ ಉದ್ಯಮಿ ಆಗುವ ನನ್ನ ಕನಸನ್ನು ನನಸು ಮಾಡಲು ನಾನು ಎದುರು ನೋಡುತ್ತಿದ್ದೇನೆ. ಈ ಅವಕಾಶಕ್ಕಾಗಿ ನಾನು ಎಫ್ಎಂಸಿ ಇಂಡಿಯಾಕ್ಕೆ ಕೃತಜ್ಞಳಾಗಿದ್ದೇನೆ ಮತ್ತು ನನ್ನ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನನ್ನ ಜ್ಞಾನ ಮತ್ತು ಮಾನ್ಯತೆಯನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ.” 

ಕಾವ್ಯಾ ಆಂಧ್ರಪ್ರದೇಶದಲ್ಲಿ ತಮ್ಮ ಶಾಲಾ ಶಿಕ್ಷಣ ಮತ್ತು ಮಧ್ಯಂತರ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಬಾಪಟ್ಲ ಕೃಷಿ ಕಾಲೇಜ್, ಎಎನ್‌ಜಿಆರ್‌ಎಯುನಿಂದ ಪದವಿ ಪಡೆದರು, ಅಲ್ಲಿ ಅವರ ಕೃಷಿ ಪ್ರೀತಿ ಗಾಢವಾಯಿತು. ಕೃಷಿಯೆಡೆಗೆ ಕಾವ್ಯಾ ಅವರಿಗಿದ್ದ ಆಸಕ್ತಿಯು ಅವರನ್ನು ಉತ್ತರ ಪ್ರದೇಶದ ಮೀರತ್‌ನಲ್ಲಿ ಇರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಪ್ರೇರೇಪಿಸಿತು. ಅವರ ಶಿಕ್ಷಣವು ಅವರಿಗೆ ಕೃಷಿ ತತ್ವಗಳು ಮತ್ತು ಅಭ್ಯಾಸಗಳ ಸಮಗ್ರ ತಿಳಿವಳಿಕೆಯನ್ನು ನೀಡಿದೆ.

ಪ್ರತಿ ವರ್ಷ, ಕೃಷಿ ವಿಜ್ಞಾನಗಳಲ್ಲಿ ಪಿಎಚ್‌ಡಿ/ಎಂಎಸ್‌ಸಿ ವ್ಯಾಸಂಗ ಮಾಡುವ ಇಪ್ಪತ್ತು ವಿದ್ಯಾರ್ಥಿಗಳನ್ನು ದೇಶಾದ್ಯಂತ ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನದಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಗುಂಪಿಗೆ ಸೇರಿಸಲಾಗುತ್ತದೆ.

ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಒಂದು ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಅನುಗುಣವಾಗಿ ವಿಶ್ವದ ಜನಸಂಖ್ಯೆಗೆ ಆಹಾರ, ಫೀಡ್, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ಬೆಳೆಗಾರರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಪ್ರಪಂಚದಾದ್ಯಂತ ನೂರಕ್ಕೂ ಹೆಚ್ಚು ಸೈಟ್‌ಗಳಲ್ಲಿ ಸರಿಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಭೂಮಿಗೆ ಸ್ಥಿರವಾಗಿ ಉತ್ತಮವಾದ ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಭೇಟಿ ನೀಡಿ fmc.com ಇದು ag.fmc.com/in/en ಹೆಚ್ಚು ತಿಳಿಯಲು ಮತ್ತು ಎಫ್ಎಂಸಿ ಇಂಡಿಯಾವನ್ನು ಅನುಸರಿಸಲು ಫೇಸ್‌ಬುಕ್® ಇದು ಯುಟ್ಯೂಬ್®.