ಮಣ್ಣಿನ ಲವಣೀಕರಣವನ್ನು ತಡೆದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು
ಸುಸ್ಥಿರತೆಯು ಎಫ್ಎಂಸಿ ಇಂಡಿಯಾದ ವ್ಯವಹಾರದ ಮುಖ್ಯ ಭಾಗವಾಗಿದೆ ಮತ್ತು ನಾವು ವಿವಿಧ ಸುಸ್ಥಿರತೆಯ ತೊಡಗುವಿಕೆಗಳನ್ನು ಮುಂದುವರೆಸಲು ಬದ್ಧರಾಗಿದ್ದೇವೆ. ಮಣ್ಣಿನ ಆರೋಗ್ಯವು ನಮಗೆ ಪ್ರಮುಖ ಸುಸ್ಥಿರತೆಯ ವಿಷಯಗಳಲ್ಲಿ ಒಂದಾಗಿದೆ, ಏಕೆಂದರೆ ಮಣ್ಣು ಕೃಷಿಯ ನಿರ್ಣಾಯಕ ಸಂಪನ್ಮೂಲವಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ಭಾರತೀಯ ಮಣ್ಣು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ - ವರ್ಷಗಳಿಂದ ಈಚೆಗೆ ಮಣ್ಣಿನ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ ಮತ್ತು ಭಾರತದಲ್ಲಿ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಹಿದಾರರಾಗಿ, ವಿಶೇಷವಾಗಿ, "ಶೂನ್ಯ ಹಸಿವು" ಒಂದು ಪ್ರಮುಖ ಅನಿವಾರ್ಯವಾಗಿದೆ.
5ನೇ ಡಿಸೆಂಬರ್ ಅನ್ನು ಭಾರತದಾದ್ಯಂತ ವಿಶ್ವ ಮಣ್ಣಿನ ದಿನವಾಗಿ ಆಚರಿಸಲಾಗುತ್ತದೆ. ವಿಶ್ವ ಮಣ್ಣು ದಿನ 2021 ರ ವಿಷಯವೆಂದರೆ 'ಮಣ್ಣಿನ ಲವಣೀಕರಣವನ್ನು ತಡೆಯುವುದು, ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುವುದು. ಮಣ್ಣಿನ ಲವಣೀಕರಣದ (ಕ್ಷಾರೀಯ ಮಣ್ಣು) ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಪ್ರತಿ ವರ್ಷದಂತೆ, ಎಫ್ಎಂಸಿ ತಂಡವು ವಿಶ್ವ ಮಣ್ಣಿನ ದಿನದ ಅಂಗವಾಗಿ 5ನೇ ಡಿಸೆಂಬರ್ 2021 ರಂದು ವಿವಿಧ ಚಟುವಟಿಕೆಗಳನ್ನು ನಡೆಸಿತು. ರೈತರು, ಚಾನೆಲ್ ಪಾಲುದಾರರು ಮತ್ತು ಇತರ ಪಾಲುದಾರರಿಗೆ ಮಣ್ಣಿನ ಆರೋಗ್ಯದ ಕುರಿತು ಶಿಕ್ಷಣ ನೀಡಲು ನಾವು ಸರಣಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. 600+ ರೈತರ ಸಭೆಗಳನ್ನು ನಡೆಸಲಾಯಿತು, ಇದರಲ್ಲಿ 200+ ಚಾನೆಲ್ ಪಾಲುದಾರರು ಭಾಗವಹಿಸಿದ್ದು, 850+ ಸಸ್ಯಗಳನ್ನು ನೆಡಲಾಯಿತು, 20+ ವಾಹನ ರ‍್ಯಾಲಿಗಳನ್ನು ನಡೆಸಲಾಯಿತು ಮತ್ತು ಸುಮಾರು 80 ಸರ್ಕಾರಿ ಅಧಿಕಾರಿಗಳು ಕೂಡಾ ತಂಡಗಳೊಂದಿಗೆ ತೊಡಗಿಕೊಂಡರು. ಸ್ಥಳೀಯ ಶಾಲೆ/ ಕಾಲೇಜುಗಳಲ್ಲಿ ಮಣ್ಣಿನ ದಿನದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಆಯೋಜಿಸುವ ಮತ್ತು ಈ ವಿಷಯದ ಕುರಿತು ನಾಟಕ ಮತ್ತು ಪಾತ್ರಗಳಲ್ಲಿ ಮಹಿಳಾ ರೈತರನ್ನು ತೊಡಗಿಸುವ ಮೂಲಕ ನಮ್ಮ ಸೃಜನಶೀಲ ನಾಯಕರು ಈ ಅಭಿಯಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದರು.
ಈ ಎಲ್ಲಾ ಚಟುವಟಿಕೆಗಳೊಂದಿಗೆ, ಮಣ್ಣಿನ ಆರೋಗ್ಯದ ಕುರಿತು ನಾವು ಡಿಜಿಟಲ್ ಅಭಿಯಾನಗಳನ್ನು ಕೂಡಾ ಆರಂಭಿಸಿದ್ದೇವೆ. ನಾವು ಐಸಿಎಆರ್‌ನ ಮಣ್ಣು ವಿಜ್ಞಾನಿಯೊಂದಿಗೆ ವೆಬಿನಾರ್ ಆಯೋಜಿಸಿದ್ದು, ಅವರು ಮಣ್ಣಿನಲ್ಲಿ ಲವಣದ ಅಂಶ ಹೆಚ್ಚಲು ಕಾರಣಗಳು ಮತ್ತು ಅದನ್ನು ತಡೆಯುವ ಮಾರ್ಗಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತರ ಡಿಜಿಟಲ್ ಚಟುವಟಿಕೆಗಳು ಮಣ್ಣಿನ ಸ್ಥಿತಿಯ ಕುರಿತಾದ ಸಣ್ಣ ವಿಡಿಯೋಗಳು, ವಿಶ್ವ ಮಣ್ಣಿನ ದಿನದ ಥೀಮ್ ಮತ್ತು ಮಣ್ಣಿನ ಆರೋಗ್ಯ ಜಾಗೃತಿ ಕುರಿತಾದ ಎಫ್ಎಂಸಿ ತೊಡಗುವಿಕೆಯನ್ನು ಬೆಂಬಲಿಸುವ ಗ್ರಾಹಕರ ಪ್ರತಿಜ್ಞೆಯನ್ನು ಒಳಗೊಂಡಿವೆ.
ಈ ಅಭಿಯಾನವು ಪ್ರಮುಖ ಮುದ್ರಣ ಮಾಧ್ಯಮ ಮತ್ತು ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ಈ ಅಭಿಯಾನವನ್ನು ದೇಶದ ಅನೇಕ ಉದ್ಯಮದ ನಾಯಕರು ಮತ್ತು ಮಣ್ಣಿನ ವಿಶೇಷಜ್ಞರು ಪ್ರಶಂಸಿಸಿದ್ದಾರೆ.
ಈ ಅಭಿಯಾನವು ಸುಸ್ಥಿರ ಕೃಷಿಗೆ ಸಣ್ಣ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ಪ್ರತಿ ವರ್ಷ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ಭಾರತವನ್ನು ಸಂಪದ್ಭರಿತ ಮಣ್ಣಿನ ದೇಶವನ್ನಾಗಿ ಮಾಡುವ ಕಡೆಗೆ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ!