ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿಯ 'ಸಮರ್ಥ್' ಇದು ಭಾರತದಲ್ಲಿ ನೀರಿನ ನಿರ್ವಹಣೆ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ

ಎಫ್ಎಂಸಿ ಇಂಡಿಯಾ ತನ್ನ ಸಮುದಾಯ ಪ್ರಚಾರ ಕಾರ್ಯಕ್ರಮವಾದ ಸಮರ್ಥ್ ಯೋಜನೆ ಮೂಲಕ ರೈತರಿಗೆ ಉತ್ತಮ ಮತ್ತು ಹೆಚ್ಚು ಸಮೃದ್ಧ ಜೀವನವನ್ನು ಪಡೆಯಲು ಬೆಂಬಲ ನೀಡುತ್ತಿದೆ.

ನಾಲ್ಕು ಪ್ರಮುಖ ವಿಷಯಗಳನ್ನು ಉತ್ತೇಜಿಸುವ ಮೂಲಕ ಭಾರತೀಯ ಕೃಷಿ ಕುಟುಂಬಗಳ ಜೀವನದಲ್ಲಿ ಬದಲಾವಣೆ ತರಲು ಕಂಪನಿಯು ಬದ್ಧವಾಗಿದೆ: ಶುದ್ಧ ನೀರು ಮತ್ತು ಉತ್ತಮ ಆರೋಗ್ಯ, ಉತ್ತಮ ಕೃಷಿ ಅಭ್ಯಾಸಗಳು, ಕೃಷಿಯಲ್ಲಿ ವಿಜ್ಞಾನ ಮತ್ತು ಕೃಷಿಯಲ್ಲಿ ಮಹಿಳೆಯರ ಸಬಲೀಕರಣ.

ಸಮರ್ಥ್‌ ಯೋಜನೆಯ ಸ್ತಂಭವಾಗಿ ವಿವಿಧ ರೈತ-ಕೇಂದ್ರಿತ ಯೋಜನೆಗಳು ಚಾಲನೆಯಲ್ಲಿವೆ ಅಥವಾ ಪ್ರಾರಂಭಗೊಳ್ಳಲಿವೆ. ಉದಾಹರಣೆಗೆ, ಸಮರ್ಥ್ ಯೋಜನೆ ಅಡಿಯಲ್ಲಿನ ಶುದ್ಧ ನೀರಿನ ಉಪಕ್ರಮವು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 6.1 ಆಗಿರುವ, "2030 ರ ಒಳಗೆ ಎಲ್ಲರಿಗೂ ಶುದ್ಧ ಮತ್ತು ಕೈಗೆಟುಕುವ ದರದಲ್ಲಿ ಕುಡಿಯುವ ನೀರನ್ನು ಒದಗಿಸುವ" ಗುರಿಯನ್ನು ನೇರವಾಗಿ ಬೆಂಬಲಿಸುತ್ತದೆ. ಈ ಉಪಕ್ರಮದ ಮೂಲಕ, ಎಫ್ಎಂಸಿ ಇಂಡಿಯಾವು ಮುಂದಿನ ಮೂರು ವರ್ಷಗಳ ಒಳಗೆ ದೇಶದ 200,000 ಕೃಷಿ ಕುಟುಂಬಗಳಿಗೆ ಶುದ್ಧ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಒದಗಿಸುವ ಆಶಯ ಹೊಂದಿದೆ.

ಶುದ್ಧ ನೀರು ಒದಗಿಸುವ ಕಾರ್ಯದ ಅಡಿಯಲ್ಲಿ, ಕಂಪನಿಯು 2019 ರಲ್ಲಿ 15 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ನೀರು ವಿತರಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಕುಟುಂಬವು 20 ಲೀಟರ್ ನೀರು ಬಿಡುಗಡೆ ಮಾಡುವ ಸ್ವೈಪ್ ಕಾರ್ಡ್‌ನೊಂದಿಗೆ ಸುಲಭವಾಗಿ ಅದರ ಶುದ್ಧ ನೀರನ್ನು ಪಡೆಯಬಹುದು. ಘಟಕಗಳ ನಿರ್ವಹಣೆಯನ್ನು ಹಳ್ಳಿಯ ಸಮುದಾಯವು ಸಹಕಾರಿ ಆಧಾರದ ಮೇಲೆ ನಿರ್ವಹಿಸುತ್ತದೆ, ಸ್ಥಳೀಯ ಎಫ್‌ಎಂಸಿ ಸಿಬ್ಬಂದಿಗಳು ಘಟಕಗಳ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಈ ಉಪಕ್ರಮದಿಂದ ಸಮುದಾಯದ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿವರಿಸುತ್ತಾ, ರಾಮಾಪುರದ ನಿವಾಸಿ ಮಣಿಕಾಂತ್ ಮಿಶ್ರಾ, "ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ ನಂತರ, ರೋಗಗಳ ಸಂಭವಗಳು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೆಚ್ಚುವರಿಯಾಗಿ, ಈ ಕಾಯಿಲೆಗಳ ಚಿಕಿತ್ಸೆಯ ಖರ್ಚುಗಳಿಂದಲೂ ನಮಗೆ ಮುಕ್ತಿ ಸಿಕ್ಕಿದೆ'' ಎಂದು ಹೇಳಿದರು.”

2020 ರಲ್ಲಿ, ಉತ್ತರ ಪ್ರದೇಶದ ಕಬ್ಬು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಶುದ್ಧೀಕರಣ, ಕೂಲರ್ ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಹೊಂದಿರುವ 52 ನೀರು ಶುದ್ಧೀಕರಣ ಘಟಕಗಳನ್ನು ಕಂಪನಿಯು ಸ್ಥಾಪಿಸಿತು. ಘಟಕಗಳು ಪ್ರತಿ ಗಂಟೆಗೆ 40 ಲೀಟರ್ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ, ಸಹಕಾರಿ ಸಂಘಕ್ಕೆ ಬರುವ ರೈತರು ಮತ್ತು ಸಾರ್ವಜನಿಕರಿಗೆ ವರ್ಷಪೂರ್ತಿ ಶುದ್ಧ ಮತ್ತು ತಣ್ಣನೆಯ ನೀರು ಸಿಗುವಂತಾಯಿತು. ಮಾರ್ಚ್ 2021 ರಲ್ಲಿ 27 ಹೊಸ ಸಮುದಾಯ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಯೊಂದಿಗೆ ಇದನ್ನು ಮತ್ತಷ್ಟು ವಿಸ್ತರಿಸಲಾಯಿತು. ಇಂದು, ಉತ್ತರ ಪ್ರದೇಶ ಮತ್ತು ಪಂಜಾಬ್‌ನ 120 ಹಳ್ಳಿಗಳು, 80,000 ರೈತ ಕುಟುಂಬಗಳು ಈ ಯೋಜನೆಯಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಫೈಜಾಪುರದ ಗೃಹಿಣಿ ಮಿತಿಲೇಶ್ ಅವರು, ತನ್ನ ಸಮಯ ಮತ್ತು ಶಕ್ತಿಯನ್ನು ಉಳಿಸಲು ಸಹಾಯ ಮಾಡಿದ ಮತ್ತು ತನ್ನ ಕುಟುಂಬದ ಎಲ್ಲರಿಗೂ ಆರಾಮ ನೀಡಿದ ಈ ಸೌಲಭ್ಯವನ್ನು ಒದಗಿಸಿದ ಎಫ್ಎಂಸಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನೊಬ್ಬ ಗ್ರಾಮಸ್ಥರು ಹೇಳುತ್ತಾರೆ, "ಈ ಯೋಜನೆಯು ನಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಮಾಡಿರುವುದು ಮಾತ್ರವಲ್ಲದೆ, ಈ ಸೇವೆಯನ್ನು ಪಡೆಯುವ ಎಲ್ಲಾ ಕುಟುಂಬಗಳಿಗೆ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯನ್ನು ತಂದಿದೆ. ನೀರು ತರಲು ಬಳಸುತ್ತಿದ್ದ ಸಮಯವನ್ನು ನಾವೀಗ ಕೃಷಿ ಚಟುವಟಿಕೆಗಳಿಗೆ ಬಳಸುತ್ತೇವೆ.”

ಎಫ್ಎಂಸಿಯು ಭಾರತದಾದ್ಯಂತ ಹೆಚ್ಚುವರಿ ಐದು ರಾಜ್ಯಗಳನ್ನು ಸೇರಿಸಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಮತ್ತು ಆಯ್ಕೆ ಮಾಡಿದ ರಾಜ್ಯಗಳಲ್ಲಿ 2021 ರಲ್ಲಿ 35 ಸಮುದಾಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಿದೆ. ಅಷ್ಟೇ ಸಂಖ್ಯೆಯ, ಅದೇ ರೀತಿಯ ಘಟಕಗಳನ್ನು 2022 ರಲ್ಲಿಯೂ ಆರಂಭಿಸುವ ಯೋಜನೆಯಿದೆ. ರೈತ ಸಮುದಾಯಕ್ಕೆ ಶುದ್ಧ ಮತ್ತು ಸುಲಭದ ನೀರಿನ ಮೂಲವನ್ನು ಕಲ್ಪಿಸುವುದು, ನೀರು ತರಲು ಅವರು ದಿನನಿತ್ಯ ಕಷ್ಟಪಡುವುದನ್ನು ತಪ್ಪಿಸುತ್ತದೆ ಮತ್ತು ಹಾಗೆ ಉಳಿಸಿದ ಸಮಯದಲ್ಲಿ ಇತರೆ ಮೂಲಗಳಿಂದ ಆದಾಯ ಸಂಪಾದಿಸಬಹುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ತೊಡಗಿಕೊಳ್ಳಬಹುದು.

ಶುದ್ಧ ನೀರು ಒದಗಿಸುವ ಉಪಕ್ರಮದ ವಿಸ್ತರಣೆಯಾಗಿ, ಶುದ್ಧ ನೀರಿನ ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಹೆಚ್ಚಿಸಲು ಅನುಸರಿಸಬೇಕಾದ ಉತ್ತಮ ಅಭ್ಯಾಸಗಳ ಕುರಿತು ಕಂಪನಿಯು ರೈತರಿಗೆ ಶಿಕ್ಷಣ ನೀಡುತ್ತಿದೆ. ಉದಾಹರಣೆಗೆ, ವಿಶ್ವ ಜಲ ದಿನ 2021 ಕ್ಕೆ, ಎಫ್ಎಂಸಿಯು 18 ರಾಜ್ಯಗಳಲ್ಲಿ 400 ಕ್ಕಿಂತ ಹೆಚ್ಚು ರೈತ ಸಭೆಗಳನ್ನು ಆಯೋಜಿಸಿ, ದೇಶಾದ್ಯಂತ ಕೃಷಿ ಸಮುದಾಯದ 14,000 ಕ್ಕಿಂತ ಹೆಚ್ಚು ಜನರನ್ನು ತಲುಪುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನವನ್ನು ಆರಂಭಿಸಿತು. ಕೃಷಿಯಲ್ಲಿ ನೀರಿನ ನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡಲು, 4,000 ಕ್ಕಿಂತ ಹೆಚ್ಚು ಎಫ್ಎಂಸಿ ತಾಂತ್ರಿಕ ಕ್ಷೇತ್ರ ತಜ್ಞರು ಕೃಷಿಯ ಸುಸ್ಥಿರತೆಯನ್ನು ಹೆಚ್ಚಿಸುವ ಉತ್ತಮ ಕೃಷಿ ಅಭ್ಯಾಸಗಳ ಬಗ್ಗೆ ರೈತರೊಂದಿಗೆ ಮಾತನಾಡಿದ್ದಾರೆ ಮತ್ತು ನೀರಿನ ಬಳಕೆಯನ್ನು ಕಡಿಮೆಗೊಳಿಸುವ, ದಕ್ಷತೆಯನ್ನು ಹೆಚ್ಚಿಸುವ ಮತ್ತು ನೀರನ್ನು ಸಂರಕ್ಷಿಸುವ ವಿವಿಧ ವಿಧಾನಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ.

ಶುದ್ಧ ನೀರು ಒದಗಿಸುವ ಉಪಕ್ರಮವನ್ನು ಹೊರತುಪಡಿಸಿ, ಭಾರತದಲ್ಲಿ ರೈತರಿಗೆ ರಚನಾತ್ಮಕ ಪರಿಹಾರಗಳನ್ನು ನೀಡುವ ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಿದ ನಾವೀನ್ಯತೆಯ ತಂತ್ರಜ್ಞಾನಗಳೊಂದಿಗೆ ರೈತರಿಗೆ ಬೆಂಬಲ ನೀಡುವ ಪ್ರಮುಖ ಬೆಳೆ ರಕ್ಷಣಾ ಕಂಪನಿಗಳಲ್ಲಿ ಒಂದಾದ ಎಫ್ಎಂಸಿ, ಕೃಷಿ ಸಮುದಾಯದ ಜೀವನೋಪಾಯವನ್ನು ಸುಧಾರಿಸಲು ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಇತರ ಯೋಜನೆಗಳಲ್ಲಿಯೂ ಕೂಡಾ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ವಿಶ್ವಸಂಸ್ಥೆಯ ಶುದ್ಧ ನೀರು ಮತ್ತು ನೈರ್ಮಲ್ಯದ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಬೆಂಬಲಿಸುವುದರ ಮೇಲೆ ಮಾತ್ರ ಕಂಪನಿಯ ಕೆಲಸಗಳು ಕೇಂದ್ರೀಕೃತವಾಗಿಲ್ಲ, ಜೊತೆಗೆ ಜನರ ಹಸಿವನ್ನು ನಿವಾರಿಸುವುದು ಕೂಡಾ ಕಂಪನಿಯ ಗುರಿಯಾಗಿದೆ.

ಎಫ್ಎಂಸಿಯ ಪ್ರಮುಖ ಮೌಲ್ಯಗಳಲ್ಲಿ ಒಂದಾದ ಸುಸ್ಥಿರತೆಯು, ಸುರಕ್ಷಿತ ಮತ್ತು ಸುಭದ್ರ ಆಹಾರ ಪೂರೈಕೆಯನ್ನು ನಿರ್ವಹಿಸಲು ರೈತರಿಗೆ ಬೆಂಬಲ ನೀಡುವುದು ಕಂಪನಿಯ ಕೇಂದ್ರಿಕೃತ ಗಮನವಾಗಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ವಿಶ್ವಾದ್ಯಂತ ರೈತರ ಜೀವನ ಮತ್ತು ಜೀವನೋಪಾಯವನ್ನು ಸಮೃದ್ಧಗೊಳಿಸುವ ಪರಿಹಾರಗಳು ಮತ್ತು ಜ್ಞಾನವನ್ನು ಒದಗಿಸಲು ತಂಡಗಳು ಅವಿರತವಾಗಿ ಕೆಲಸ ಮಾಡುತ್ತಿವೆ.

ಕಳೆದ ವರ್ಷ ಕಬ್ಬು ಬೆಳೆಗಾರರ ಪ್ರಾಯೋಗಿಕ ಯೋಜನೆಯಲ್ಲಿ ಡಿಸಿಎಂ ಶ್ರೀರಾಮ್ ಗುಂಪಿನೊಂದಿಗೆ ಎಫ್ಎಂಸಿ ಪಾಲುದಾರಿಕೆ ಹೊಂದಿತ್ತು, ಆ ಯೋಜನೆಯು ಶುದ್ಧ ನೀರು, ಉತ್ತಮ ಕೃಷಿ ಪದ್ಧತಿಗಳು, ಬೆಳೆ ರಕ್ಷಣಾ ಉತ್ಪನ್ನಗಳ ಸರಿಯಾದ ಬಳಕೆ ಮತ್ತು ಗ್ರಾಮೀಣ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿತ್ತು. 2020 ನೇ ವರ್ಷದಲ್ಲಿ ಉತ್ತಮ ಕೃಷಿ ಪದ್ಧತಿಗಳ ಬಗ್ಗೆ ಹಲವಾರು ಜಾಗೃತಿ ಮತ್ತು ತರಬೇತಿ ಶಿಬಿರಗಳ ಮೂಲಕ 3.2 ದಶಲಕ್ಷ ರೈತರನ್ನು ತಲುಪಲಾಗಿದೆ.

(ಲೇಖನದ ಮೂಲ: https://indiacsr.in/csr-fmcs-samarth-promotes-water-stewardship-and-sustainable-agriculture-in-india/)