ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ, ಅತ್ಯಾಧುನಿಕ ತಂತ್ರಜ್ಞಾನ ಸಂಶೋಧಕ ಸಂಸ್ಥೆ ಆಗಿರುವುದನ್ನು ಹೊರತುಪಡಿಸಿ, ಅಗತ್ಯವಿರುವ ರೀತಿಯ ಮತ್ತು ಸುಸ್ಥಿರ ಕೃಷಿ ಪರಿಹಾರಗಳ ಸಹಾಯದೊಂದಿಗೆ ರೈತರನ್ನು ಬೆಂಬಲಿಸುವ ಮೂಲಕ ಭಾರತದಲ್ಲಿ ಗ್ರಾಮೀಣ ಸಮುದಾಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ.

ಎಫ್ಎಂಸಿಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 6.1 ಗೆ ಬದ್ಧವಾಗಿದ್ದು, 2030 ರ ಒಳಗೆ ಎಲ್ಲರಿಗೂ ಶುದ್ಧ ಮತ್ತು ಕೈಗೆಟುಕುವ ದರದಲ್ಲಿ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದೆ. ವಿಶ್ವಸಂಸ್ಥೆ ವರದಿ ಪ್ರಕಾರ ಭಾರತವು ನೀರಿನ ಗುಣಮಟ್ಟದ ಸೂಚ್ಯಂಕದಲ್ಲಿ 122 ದೇಶಗಳಲ್ಲಿ 120 ನೇ ಸ್ಥಾನದಲ್ಲಿದೆ ಮತ್ತು ಭಾರತದಲ್ಲಿ ನೀರಿನ ಪೂರೈಕೆಯ ಸುಮಾರು 70 ಶೇಕಡವು ಕಲುಷಿತಗೊಂಡಿರುವ ಅಪಾಯದಲ್ಲಿದೆ. ಭಾರತದ ಅಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆಯು ದೇಶದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಲಯಗಳ ಮೇಲೆ ಪರಿಣಾಮ ಬೀರುತ್ತದೆ.

ಭಾರತದಲ್ಲಿ 163 ಮಿಲಿಯನ್‌ಗಿಂತ ಹೆಚ್ಚು ಜನರಿಗೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಆ ಪರಿಣಾಮವಾಗಿ, ಭಾರತದಲ್ಲಿ ಸುಮಾರು 400 ದಶಲಕ್ಷ ಜನರು ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತಾರೆ ಮತ್ತು ಪ್ರತಿದಿನ 500 ಕ್ಕೂ ಹೆಚ್ಚು ಮಕ್ಕಳು ಅತಿಸಾರದಿಂದ ಸಾವಿಗೀಡಾಗುತ್ತಾರೆ. ಮಹಿಳೆಯರು ಮತ್ತು ಹುಡುಗಿಯರು ದೂರದ ಮತ್ತು ಸಾಮಾನ್ಯವಾಗಿ ಅಸುರಕ್ಷಿತ ಸ್ಥಳಗಳಿಂದ ನೀರು ತರಲು ವ್ಯರ್ಥವಾಗುವ ಲಕ್ಷಾಂತರ ಗಂಟೆಗಳ ಉತ್ಪಾದಕತೆಯ ಜೊತೆಗೆ, ಪ್ರತಿ ವರ್ಷ ಅರ್ಧ ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಕೆಲಸದ ದಿನಗಳು ನೀರಿನಿಂದ ಹರಡುವ ರೋಗಗಳಿಂದಾಗಿ ವ್ಯರ್ಥಗೊಳ್ಳುತ್ತಿವೆ. ಗ್ರಾಮೀಣ ಹಳ್ಳಿಗಳಲ್ಲಿ ವಾಸಿಸುತ್ತಿರುವ 70% ಜನಸಂಖ್ಯೆಯಲ್ಲಿ ನೀರಿನ ಸಮಸ್ಯೆ ಇದೆ, ಅದರಲ್ಲೂ ಈ ಸಮಸ್ಯೆ ಉತ್ತರ ಪ್ರದೇಶ ರಾಜ್ಯದಲ್ಲಿ ಹೆಚ್ಚಿದೆ.

ಭಾರತದ ಗ್ರಾಮೀಣ ಸಮುದಾಯಗಳಿಗೆ ಶುದ್ಧ ಕುಡಿಯುವ ನೀರು ನೀಡಲು ಎಫ್ಎಂಸಿ ,ಬಹು-ವರ್ಷದ ಕಾರ್ಯಕ್ರಮ- ಸಮರ್ಥ್ ಅನ್ನು ಕೈಗೆತ್ತಿಕೊಂಡಿದೆ. 2019 ರಲ್ಲಿ ಉತ್ತರ ಪ್ರದೇಶದಿಂದ ಆರಂಭವಾದ ಸಮರ್ಥ್ (ಸಮರ್ಥ್ ಎಂಬುದು ಹಿಂದಿ ಪದವಾಗಿದ್ದು, ಸಶಕ್ತ ಎಂಬ ಅರ್ಥ ಹೊಂದಿದೆ) ಈಗ ಭಾರತದ ಹೆಚ್ಚಿನ ರಾಜ್ಯಗಳಿಗೆ ವಿಸ್ತರಿಸಲ್ಪಟ್ಟಿದೆ.

ಹಂತ 1, 2019 ಮುಖ್ಯಾಂಶಗಳು

  • ಪ್ರತಿ ಗಂಟೆಗೆ 2000 ಲೀಟರ್‌ಗಳನ್ನು; ದಿನಕ್ಕೆ 48 ಸಾವಿರ ಲೀಟರ್‌ಗಳನ್ನು ಶುದ್ಧೀಕರಿಸುವ ಸಾಮರ್ಥ್ಯದ 15 ನೀರು ಶುದ್ಧೀಕರಣ ಘಟಕಗಳನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
  • 60 ಫಲಾನುಭವಿ ಹಳ್ಳಿಗಳು, ಸುಮಾರು 40000 ಅಗತ್ಯ ರೈತರ ಕುಟುಂಬಗಳು ಈ ಸೇವೆ ಪಡೆದುಕೊಂಡಿವೆ.
  • ವಿತರಣಾ ಘಟಕಗಳನ್ನು ಸ್ವೈಪ್ ಕಾರ್ಡ್‌ಗಳಿಂದ ನಿಯಂತ್ರಿಸಲಾಗುತ್ತದೆ. ಪ್ರತಿ ಸ್ವೈಪ್ 20 ಲೀಟರ್‌ಗಳನ್ನು ಬಿಡುಗಡೆ ಮಾಡುತ್ತದೆ.
  • ಪ್ರತಿ ಕುಟುಂಬವು ದಿನಕ್ಕೆ 18-20-liter ನೀರಿನ ಹಂಚಿಕೆಯೊಂದಿಗೆ ಸ್ವೈಪ್ ಕಾರ್ಡ್ ಪಡೆಯುತ್ತದೆ.
  • ಈ ಘಟಕಗಳು ಸಹಕಾರಿ ತತ್ವದ ಆಧಾರದಲ್ಲಿ ಹಳ್ಳಿ ಸಮುದಾಯದಿಂದ ನಿರ್ವಹಿಸಲ್ಪಡುತ್ತವೆ. ಎಫ್ಎಂಸಿ ಸಿಬ್ಬಂದಿಗಳು ಸ್ಥಳೀಯ ಸಮುದಾಯಗಳ ತರಬೇತಿ ಮತ್ತು ನಿರ್ವಹಣೆಗೆ ಬೆಂಬಲ ನೀಡುತ್ತಾರೆ.

FMC team installs 15 RO plants in villages in Uttar Pradesh15 RO plants in Uttar Pradesh with a capacity to filter 2000 liters/hour

ಹಂತ 2, 2020 ಮುಖ್ಯಾಂಶಗಳು

  • ಉತ್ತರ ಪ್ರದೇಶದಲ್ಲಿ 20 ಸಮುದಾಯ ನೀರು ಶುದ್ಧೀಕರಣ ಘಟಕಗಳು ಸ್ಥಾಪನೆಗೊಳ್ಳುತ್ತಿವೆ.
  • ಪಂಜಾಬ್ ರಾಜ್ಯದಲ್ಲಿ 9 ಸಮುದಾಯ ನೀರು ಶುದ್ಧೀಕರಣ ಘಟಕಗಳು ಸ್ಥಾಪನೆಗೊಳ್ಳುತ್ತಿವೆ.
  • 100 ಫಲಾನುಭವಿ ಹಳ್ಳಿಗಳು, ಸುಮಾರು 80,000 ಅಗತ್ಯವಿರುವ ರೈತರ ಕುಟುಂಬಗಳಿಗೆ ಸೇವೆ ನೀಡುವ ಗುರಿ ಹೊಂದಿದೆ.
  • ವಿತರಣಾ ಘಟಕಗಳನ್ನು ಸ್ವೈಪ್ ಕಾರ್ಡ್‌ಗಳಿಂದ ನಿಯಂತ್ರಿಸಲಾಗುತ್ತದೆ. ಪ್ರತಿ ಸ್ವೈಪ್ 20 ಲೀಟರ್‌ಗಳನ್ನು ಬಿಡುಗಡೆ ಮಾಡುತ್ತದೆ.
  • ಪ್ರತಿ ಕುಟುಂಬವು ದಿನಕ್ಕೆ 18-20-liter ನೀರಿನ ಹಂಚಿಕೆಯೊಂದಿಗೆ ಸ್ವೈಪ್ ಕಾರ್ಡ್ ಪಡೆಯುತ್ತದೆ.
  • ಎಫ್ಎಂಸಿ ಸಿಬ್ಬಂದಿಗಳು ಸ್ಥಳೀಯ ಸಮುದಾಯಗಳ ತರಬೇತಿ ಮತ್ತು ನಿರ್ವಹಣೆಗೆ ಬೆಂಬಲ ನೀಡುತ್ತಾರೆ.

50 Community water purification units’ in Sugar Co-operatives Societies in Uttar Pradesh50 Community water purification units’ in Sugar Co-operatives Societies in Uttar Pradesh