ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಭಾರತದಲ್ಲಿ ರಾಷ್ಟ್ರೀಯ ಸುರಕ್ಷತಾ ಮಂಡಳಿ ಪ್ರಶಸ್ತಿಯನ್ನು ಸ್ವೀಕರಿಸಿದೆ

ಪನೋಲಿ, 24 ಮಾರ್ಚ್ 2023: ಪ್ರಮುಖ ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಕಾರ್ಪೊರೇಶನ್, ತನ್ನ ಪನೋಲಿ ಉತ್ಪಾದನಾ ಘಟಕದ ಅನುಕರಣೀಯ ಸುರಕ್ಷತಾ ಕಾರ್ಯಕ್ಷಮತೆಗಾಗಿ ಭಾರತದ ರಾಷ್ಟ್ರೀಯ ಸುರಕ್ಷತಾ ಮಂಡಳಿ (ಎನ್ಎಸ್‌ಸಿ) ಯಿಂದ ಬೆಳ್ಳಿ ಟ್ರೋಫಿಯನ್ನು ಪಡೆದಿದೆ.



ಕೌನ್ಸಿಲ್‌ನ ಸುರಕ್ಷತಾ ಪ್ರಶಸ್ತಿ 2022 ಉತ್ತಮ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ (ಒಎಸ್ಎಚ್) ಕಾರ್ಯಕ್ಷಮತೆ ಮತ್ತು ಕೆಲಸದ ಸ್ಥಳದಲ್ಲಿ ಗಾಯಗಳನ್ನು ಕಡಿಮೆ ಮಾಡಲು ಸ್ಥಿರ ಬದ್ಧತೆ ಹೊಂದಿರುವ ಉತ್ಪಾದನಾ ವಲಯದಲ್ಲಿನ ಸಂಸ್ಥೆಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎನ್‌ಎಸ್‌ಸಿ ಸುರಕ್ಷತಾ ವೃತ್ತಿಪರರ ಸಮಿತಿಯಿಂದ ಕಳೆದ ಮೂರು ವರ್ಷಗಳ ಸುರಕ್ಷತಾ ಕಾರ್ಯಕ್ಷಮತೆಯ ವಿಮರ್ಶೆ, ಸಂಪೂರ್ಣ ಆಡಿಟ್ ಮತ್ತು ತನಿಖಾ ಪ್ರಕ್ರಿಯೆ ಸೇರಿದಂತೆ ಕಠಿಣ ಮೌಲ್ಯಮಾಪನದ ನಂತರ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

Image

ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು ಅವರು "ಎಫ್ಎಂಸಿಯಲ್ಲಿ, ಸುರಕ್ಷತೆಯು ಪ್ರಮುಖ ಮೌಲ್ಯವಾಗಿದೆ. ಸಂಸ್ಥೆಯ ಎಲ್ಲಾ ಹಂತಗಳನ್ನು ತೊಡಗಿಸಿಕೊಳ್ಳುವ ಕ್ರಿಯಾತ್ಮಕ ಸುರಕ್ಷತಾ ಸಂಸ್ಕೃತಿಯ ಮೂಲಕ ನಮ್ಮ ಕೆಲಸಗಾರರನ್ನು ರಕ್ಷಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. ಪನೋಲಿ ಸ್ಥಾವರದಲ್ಲಿನ ಪ್ರತಿಯೊಬ್ಬ ಉದ್ಯೋಗಿಯು ಸ್ಥಾವರದಲ್ಲಿ ಪರಿಸರ, ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು ಮಾಡಿದ ಕಠಿಣ ಪರಿಶ್ರಮಕ್ಕಾಗಿ ಎನ್‌ಎಸ್‌ಇಯಿಂದ ಗುರುತಿಸಲ್ಪಟ್ಟಿರುವುದು ಗೌರವದ ವಿಷಯ. ಪನೋಲಿ ಉತ್ಪಾದನಾ ಘಟಕವು ಸತತ 500 ದಿನಗಳಿಗಿಂತ ಹೆಚ್ಚು ಕಾಲದಿಂದ ಗಾಯ-ಮುಕ್ತವಾಗಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ, ಮತ್ತು ನಾವು ಸುರಕ್ಷತೆಯ ಬದ್ಧತೆಯನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಉದ್ಯೋಗಿಗಳಿಗೆ ಪ್ರತಿದಿನವನ್ನು ಸುರಕ್ಷಿತ ಕೆಲಸದ ದಿನವನ್ನಾಗಿ ಮಾಡುತ್ತೇವೆ'' ಎಂದು ಹೇಳಿದರು.”



ದೇಶಾದ್ಯಂತ ಉತ್ಪಾದನಾ ವಲಯದಲ್ಲಿ ಗುರುತಿಸಲ್ಪಡಲು ಸ್ಪರ್ಧಿಸುತ್ತಿರುವ 18 ಸಂಸ್ಥೆಗಳಿಂದ ಆಯ್ಕೆಯಾದ 600 ಸಂಸ್ಥೆಗಳಲ್ಲಿ ಎಫ್ಎಂಸಿ ಒಂದಾಗಿದೆ. ಈ ಹಿಂದೆ ಮಂಡಳಿಯ ಸುರಕ್ಷತಾ ಪ್ರಶಸ್ತಿಗಳು 2021 ಮತ್ತು 2019 ರಲ್ಲಿ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ಪಡೆದಿದ್ದ ಪನೋಲಿ ಸ್ಥಾವರವು ಇದೇ ಮೊದಲ ಬಾರಿಗೆ ಬೆಳ್ಳಿ ಟ್ರೋಫಿಯನ್ನು ಗೆದ್ದಿದೆ. ಪನೋಲಿ ಉತ್ಪಾದನಾ ಘಟಕದ ಪ್ಲಾಂಟ್ ಮ್ಯಾನೇಜರ್ ಶ್ರೀ ಮನೋಜ್ ಖನ್ನಾ ಅವರು ಎನ್‌ಎಸ್‌ಸಿಯ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಕುರಿತಾದ 13ನೇ ರಾಷ್ಟ್ರೀಯ ಸಮ್ಮೇಳನ ಮತ್ತು ಎಕ್ಸ್‌ಪೋದಲ್ಲಿ ಎಫ್‌ಎಂಸಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಆರೋಗ್ಯ, ಸುರಕ್ಷತೆ ಮತ್ತು ಪರಿಸರವನ್ನು (ಎಚ್ಎಸ್ಇ) ಉತ್ತೇಜಿಸಲು, ಹಲವಾರು ಚಟುವಟಿಕೆಗಳನ್ನು ನಡೆಸಲು ಮತ್ತು ಎಚ್ಎಸ್ಇ ಕ್ಷೇತ್ರದ ಪ್ರಸ್ತುತ ಸವಾಲುಗಳನ್ನು ನಿಭಾಯಿಸಲು ತಾಂತ್ರಿಕ ಪರಿಣತಿ ಮತ್ತು ಸಾಮರ್ಥ್ಯಗಳನ್ನು ನಿರ್ಮಿಸಲು 1966 ರಲ್ಲಿ ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯವು ಎನ್ಎಸ್‌ಸಿಯನ್ನು ಸ್ಥಾಪಿಸಿತು.



ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಫೇಸ್‌ಬುಕ್® ಮತ್ತು ಯೂಟ್ಯೂಬ್® ನಲ್ಲಿ ಎಫ್ಎಂಸಿ ಇಂಡಿಯಾದ ಬಗ್ಗೆ ಹೆಚ್ಚು ತಿಳಿಯಲು fmc.com ಮತ್ತು ag.fmc.com/in/en ಗೆ ಭೇಟಿ ನೀಡಿ.