ಪ್ರಮುಖ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ, ಚಂಡೀಗಢದಲ್ಲಿ ಗ್ರಾಹಕರ ಕಾರ್ಯಕ್ರಮದಲ್ಲಿ ಮುಂಬರುವ ಋತುವಿನಲ್ಲಿ ಗೋಧಿ ಬೆಳೆಯಲ್ಲಿನ ಕಳೆಯ ಬಳಕೆಗಾಗಿ ಆ್ಯಂಬ್ರಿವಾ™ ಕಳೆನಾಶಕ ಅನ್ನು ಪ್ರಾರಂಭಿಸಿದೆ.
ಆ್ಯಂಬ್ರಿವಾ™ ಕಳೆನಾಶಕವು ಐಸೋಫ್ಲೆಕ್ಸ್® ಆ್ಯಕ್ಟಿವ್ ಆಗಿದ್ದು, ಗ್ರೂಪ್ 13 ಕಳೆನಾಶಕವಾಗಿದೆ, ಇದು ಧಾನ್ಯ ಬೆಳೆಗಳಲ್ಲಿ ಹೊಸ ಕ್ರಿಯೆಯ ವಿಧಾನವಾಗಿದೆ ಮತ್ತು ಪ್ರತಿರೋಧ ನಿರ್ವಹಣೆಗೆ ಭಾರತೀಯ ರೈತರಿಗೆ ಹೊಸ ಸಾಧನವನ್ನು ಒದಗಿಸುತ್ತದೆ. ಇದು ಏಕದಳ ಬೆಳೆಗಳಲ್ಲಿ ಒಂದು ವಿನೂತನ ಕ್ರಮವಾಗಿದೆ ಮತ್ತು ಪ್ರತಿರೋಧಕತೆ ನಿರ್ವಹಣೆಗಾಗಿ ಭಾರತೀಯ ರೈತರಿಗೆ ಹೊಸ ಸಾಧನವನ್ನು ಒದಗಿಸುತ್ತದೆ. ಐಸೋಫ್ಲೆಕ್ಸ್® ಆ್ಯಕ್ಟಿವ್ ಮತ್ತು ಮೆಟ್ರಿಬ್ಯೂಜಿನ್ ಎರಡರಿಂದಲೂ ರೂಪಿಸಲಾದ ಆ್ಯಂಬ್ರಿವಾ™ ಕಳೆನಾಶಕ, ಫಲಾರಿಸ್ ಮೈನರ್ ಮೇಲಿನ ನಿಯಂತ್ರಣಕ್ಕಾಗಿ ಬೆಳೆ ಬೆಳೆದ ನಂತರ ಆರಂಭದಲ್ಲೇ ಮಾಡುವ ನಾಕ್-ಡೌನ್ ಚಟುವಟಿಕೆ ಆಗಿದೆ ಮತ್ತು ಪರಿಣಾಮಕಾರಿ ನಿಯಂತ್ರಣವನ್ನು ಪ್ರದರ್ಶಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅದನ್ನು 'ಗುಲ್ಲಿ ದಂಡ' ಅಥವಾ 'ಮಂಡೂಸಿ' ಎಂದು ಕೂಡ ಕರೆಯಲಾಗುತ್ತದೆ. ನಿರ್ಣಾಯಕ ಬೆಳೆ-ಕಳೆಯ ಸ್ಪರ್ಧಾತ್ಮಕ ಬೆಳವಣಿಗೆಯ ಅವಧಿಯಲ್ಲಿ ಗೋಧಿಯನ್ನು ರಕ್ಷಿಸುತ್ತದೆ.
"ಪಂಜಾಬ್, ಹರ್ಯಾಣದ ಗೋಧಿ ಬೆಳೆಯುವ ರೈತರು ಮತ್ತು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಭಾಗಗಳು ಫಲಾರಿಸ್ ಮೈನರ್ ನಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ," ಎಂದು ಎಫ್ಎಂಸಿ ಇಂಡಿಯಾ ಮತ್ತು ದಕ್ಷಿಣ-ಪಶ್ಚಿಮ ಏಷ್ಯಾದ ಅಧ್ಯಕ್ಷ ರವಿ ಅನ್ನವರಪು ಹೇಳಿದರು. “ ಕಳೆದ ಕೆಲವು ದಶಕಗಳಲ್ಲಿ, ಈ ವಿನಾಶಕಾರಿ ಕಳೆಯು ಅನೇಕ ದ್ವಿಗುಣ ಶಕ್ತಿಯ ಕಳೆನಾಶಕ ರಾಸಾಯನಿಕಗಳಿಗೆ ಪ್ರತಿರೋಧವನ್ನು ಒಡ್ಡುತ್ತಾ ಬೆಳೆಯುತ್ತಿದೆ, ಇದು ಬೆಳೆ ಇಳುವರಿಯ ಮೇಲೆ ಪರಿಣಾಮ ಬೀರಿದೆ, ರೈತರನ್ನು ಸೀಮಿತ ಆಯ್ಕೆಗಳೊಂದಿಗೆ ಕಟ್ಟಿಹಾಕಿದಂತಾಗಿದೆ. ಎಫ್ಎಂಸಿಯ ಆ್ಯಂಬ್ರಿವಾ™ ಕಳೆನಾಶಕದ ಪರಿಚಯವು ಪ್ರತಿರೋಧಕತೆಯ ಸವಾಲುಗಳನ್ನು ಪರಿಹರಿಸಲು ಭಾರತೀಯ ರೈತರಿಗೆ ನವೀನ ಪರಿಹಾರವನ್ನು ಒದಗಿಸುತ್ತದೆ" ಎಂದರು
ಆ್ಯಂಬ್ರಿವಾ™ ಕಳೆನಾಶಕ ಉತ್ಪನ್ನವನ್ನು ಭಾರತದಲ್ಲಿ ಅನೇಕ ಋತುಗಳಲ್ಲಿ ಗೋಧಿಯ ಮೇಲೆ ಕಠಿಣವಾಗಿ ಪರೀಕ್ಷೆ ಮಾಡಲಾಗಿದೆ ಮತ್ತು ಕಳೆನಾಶಕವು ಫಲಾರಿಸ್ ಮೈನರ್ ಮತ್ತು ಪ್ರಮುಖ ಹುಲ್ಲಿನ ಕಳೆಗಳ ವಿರುದ್ಧ ಗಮನಾರ್ಹ ಮತ್ತು ಸ್ಥಿರ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.
"ಈ ಹೊಸ ಕಳೆನಾಶಕವು ರೈತರಿಗೆ ಹೆಚ್ಚು ಅಗತ್ಯವಿರುವ ಶಕ್ತಿಶಾಲಿ ಪರಿಹಾರವನ್ನು ಒದಗಿಸುವ ಮೂಲಕ ದೀರ್ಘಾವಧಿಯ ಕಳೆ ನಿಯಂತ್ರಣ ಮತ್ತು ವರ್ಧಿತ ಉತ್ಪಾದಕತೆಯನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ," ಎಂದು ಅನ್ನವರಪು ಹೇಳಿದರು.
ತಮ್ಮ ಬೆಳೆಗಳನ್ನು ರಕ್ಷಿಸಲು ಮತ್ತು ಇಳುವರಿಯನ್ನು ಉತ್ತಮಗೊಳಿಸಲು ಸಹಾಯ ಮಾಡುವ ಹೊಸ ಪರಿಹಾರಗಳನ್ನು ಒದಗಿಸುವ ಮೂಲಕ ರೈತರಿಗೆ ಸೇವೆ ನೀಡಲು ಎಫ್ಎಂಸಿ ಬದ್ಧವಾಗಿದೆ. ಆ್ಯಂಬ್ರಿವಾ™ ಕಳೆನಾಶಕದ ಪರಿಚಯವು ಬೆಳೆಯ ರೋಗ ನಿರೋಧಕ ಶಕ್ತಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಅತ್ಯಾಧುನಿಕ ಸುಸ್ಥಿರ ತಂತ್ರಜ್ಞಾನಗಳ ಮೂಲಕ ಬೆಳೆಗಾರರ ಸವಾಲುಗಳನ್ನು ಪರಿಹರಿಸಲು ಎಫ್ಎಂಸಿಯ ಬಲವಾದ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.
ಎಫ್ಎಂಸಿ ಬಗ್ಗೆ
ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಮೇವು, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ರಕ್ಷಣಾ ಪರಿಹಾರಗಳು - ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರಿಗೆ ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಕಡಿಮೆ ವೆಚ್ಚದಲ್ಲಿ ಪರಿಹರಿಸಲು ಅನುವು ಮಾಡಿಕೊಡುತ್ತವೆ. ವಿಶ್ವಾದ್ಯಂತ ನೂರಕ್ಕೂ ಹೆಚ್ಚು ಸೈಟ್‌ಗಳಲ್ಲಿ ಸುಮಾರು 5,800 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ನಿರಂತರವಾಗಿ ಉತ್ತಮವಾಗಿರುವ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಇನ್ನಷ್ಟು ತಿಳಿಯಲು fmc.com ಮತ್ತು ag.fmc.com/in/en ಗೆ ಭೇಟಿ ನೀಡಿ ಮತ್ತು ಫೇಸ್‌ಬುಕ್® ಮತ್ತು ಯೂಟ್ಯೂಬ್ ನಲ್ಲಿ ಎಫ್ಎಂಸಿ ಇಂಡಿಯಾವನ್ನು ಫಾಲೋ ಮಾಡಿ.
ಆ್ಯಂಬ್ರಿವಾ ಮತ್ತು ಐಸೋಫ್ಲೆಕ್ಸ್ ಎಫ್ಎಂಸಿ ಕಾರ್ಪೊರೇಶನ್ ಮತ್ತು/ಅಥವಾ ಅಂಗಸಂಸ್ಥೆಯ ಟ್ರೇಡ್‌ಮಾರ್ಕ್‌ಗಳಾಗಿವೆ. ಬಳಕೆಗಾಗಿ ಯಾವಾಗಲೂ ಎಲ್ಲಾ ಲೇಬಲ್ ನಿರ್ದೇಶನಗಳು, ನಿರ್ಬಂಧಗಳು ಮತ್ತು ಮುನ್ನೆಚ್ಚರಿಕೆಗಳನ್ನು ಓದಿ ಮತ್ತು ಅನುಸರಿಸಿ.