ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಬೆಳೆ ರಕ್ಷಣೆ ನಿರ್ವಹಣೆಯನ್ನು ಉತ್ತೇಜಿಸಲು ಎಫ್ಎಂಸಿ ಇಂಡಿಯಾವು ಮಹಾರಾಷ್ಟ್ರ ರಾಜ್ಯದ ಕೃಷಿ ಇಲಾಖೆಯೊಂದಿಗೆ ಜಂಟಿ ಅಭಿಯಾನವನ್ನು ಪ್ರಾರಂಭಿಸಿದೆ

ಅಕೋಲಾ, ಆಗಸ್ಟ್ 31, 2022:: ಕೃಷಿ ವಿಜ್ಞಾನ ಕಂಪನಿಯಾದ ಎಫ್ಎಂಸಿ ಇಂಡಿಯಾವು ಮಹಾರಾಷ್ಟ್ರ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಅಕೋಲಾ ಜಿಲ್ಲೆಯ ರೈತ ಸಮುದಾಯಕ್ಕೆ ಕೀಟನಾಶಕ ಬಳಕೆಯ ಕುರಿತಾದ ಮೂರನೇ ವರ್ಷದ ಸುರಕ್ಷತಾ ಜಾಗೃತಿ ಮತ್ತು ನಿರ್ವಹಣಾ ಅಭಿಯಾನವನ್ನು ಇಂದು ಪ್ರಾರಂಭಿಸಿದೆ.



ಈ ವರ್ಷದ ಅಭಿಯಾನವು, ರೈತ ಸಮುದಾಯದಲ್ಲಿ ಆಕಸ್ಮಿಕ ವಿಷ ಸೇವನೆಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಸುರಕ್ಷಿತ ಕೃಷಿ ಪದ್ಧತಿ ಅಳವಡಿಕೆಯನ್ನು ಉತ್ತೇಜಿಸುವ ಸಲುವಾಗಿ 2020 ರಲ್ಲಿ ಎಫ್‌ಎಂಸಿ ಇಂಡಿಯಾವು ಅಕೋಲಾದಲ್ಲಿ ಪ್ರಾರಂಭಿಸಿದ ಉಪಕ್ರಮವನ್ನು ಆಧರಿಸಿದೆ.

ಜಾಗೃತಿ ಅಭಿಯಾನದ ಕುರಿತು ವಿವರಿಸಿದ ಎಫ್ಎಂಸಿ ಇಂಡಿಯಾದ ಅಧ್ಯಕ್ಷ ಶ್ರೀ ರವಿ ಅನ್ನವರಪು, "ಭಾರತದ ರೈತ ಸಮುದಾಯದ ಅಭಿವೃದ್ಧಿಗಾಗಿ ಎಫ್ಎಂಸಿ ಹೆಚ್ಚು ಹೂಡಿಕೆ ಮಾಡಿದೆ. ಈ ನಿಟ್ಟಿನಲ್ಲಿ, ನಾವು ಅನೇಕ ವರ್ಷಗಳಿಂದ ಸುರಕ್ಷಿತ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ರೈತರಿಗೆ ತರಬೇತಿ ನೀಡುತ್ತಿದ್ದೇವೆ. 2021 ರಲ್ಲಿ ನಮ್ಮ ಅಭಿಯಾನವು ಅಕೋಲಾದ ವಿವಿಧ ಹಳ್ಳಿಗಳ 7,500 ರೈತರನ್ನು ತಲುಪಿದೆ ಮತ್ತು ಈ ವರ್ಷದ ಅಭಿಯಾನವು ಇನ್ನೂ ಹೆಚ್ಚಿನ ಮಟ್ಟವನ್ನು ತಲುಪುತ್ತದೆ ಮತ್ತು ಇನ್ನೂ ವ್ಯಾಪಕವಾದ ರೈತ ಸಮುದಾಯವನ್ನು ತಲುಪುವ ಮೂಲಕ ಅವರ ಜಾಗೃತಿ ಮತ್ತು ಜ್ಞಾನವನ್ನು ಸುಧಾರಿಸುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ” ಎಂದು ಹೇಳಿದರು

image



ಅಭಿಯಾನದ ಭಾಗವಾಗಿ ಎಫ್ಎಂಸಿ ಇಂಡಿಯಾವು, ವಿವಿಧ ಬೆಳೆ ಋತುಗಳು ಮತ್ತು ಬೆಳೆ ಪ್ರಭೇದಗಳಲ್ಲಿ ಕೀಟನಾಶಕಗಳ ಸರಿಯಾದ ಬಳಕೆಯ ಕುರಿತು ರೈತ ಸಭೆಗಳು ಮತ್ತು ಶಿಕ್ಷಣ ಕಾರ್ಯಾಗಾರಗಳನ್ನು ಆಯೋಜಿಸಲು ಸರ್ಕಾರದ ಕೃಷಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ (ಭಾರತದಲ್ಲಿ ಕೃಷಿ ವಿಸ್ತರಣಾ ಕೇಂದ್ರಗಳು) ಜೊತೆಗೆ ಸಹಯೋಗ ನಡೆಸಿದೆ ಅಕೋಲಾ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಹಳ್ಳಿಗಳು ಮತ್ತು ರೈತರಿಗೆ ಶಿಕ್ಷಣ ಕಾರ್ಯಾಗಾರಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ವ್ಯಾನ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ.



ಅಕೋಲಾ ಜಿಲ್ಲಾ ಸಿಇಒ ಸೌರಭ್ ಕಟಿಯಾರ್, ಅಕೋಲಾ ಜಿಲ್ಲಾ ಪರಿಷತ್ ಅಧ್ಯಕ್ಷೆ ಪ್ರತಿಭಾತಾಯಿ ಭೋಜನೆ, ಹೆಚ್ಚುವರಿ ಸಿಇಒ ಡಾ. ಸೌರಭ್ ಪವಾರ್, ಅಕೋಲಾ ಜಿಲ್ಲಾ ಕೃಷಿ ಅಧೀಕ್ಷಕ ಆರಿಫ್ ಷಾ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷೆ ಪುಷ್ಪಾತಾಯಿ ಇಂಗಳೆ, ಅಕೋಲಾ ಜಿಲ್ಲಾ ಕೃಷಿ ಅಭಿವೃದ್ಧಿ ಅಧಿಕಾರಿ ಮುರಳೀಧರ್ ಇಂಗಳೆ, ಜಿಲ್ಲಾ ಗುಣಮಟ್ಟ ನಿಯಂತ್ರಕ ಮಿಲಿಂದ್ ಜಂಜಾಲ್, ಎಫ್ಎಂಸಿ ಇಂಡಿಯಾದ ಏರಿಯಾ ಮಾರ್ಕೆಟಿಂಗ್ ಮ್ಯಾನೇಜರ್ ಹಿರಾಮನ್ ಮಂಡಳ ಸೇರಿದಂತೆ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಈ ವರ್ಷದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

image2

ಎಫ್ಎಂಸಿ ಇಂಡಿಯಾವು ಪ್ರಾಜೆಕ್ಟ್ ಸಮರ್ಥ್ (ಶುದ್ಧ ನೀರಿನ ತೊಡಗುವಿಕೆ), ಉಗಮ್ (ಉತ್ತಮ ಮಣ್ಣಿನ ಆರೋಗ್ಯ ಅಭ್ಯಾಸಗಳ ಪ್ರಚಾರ) ಮತ್ತು ಪ್ರಾಜೆಕ್ಟ್ ಮಧುಶಕ್ತಿ (ಜೇನು ಸಾಕಣೆಯ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಲು ಜಿಬಿ ಪಂತ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೈಗೊಂಡ ಕಾರ್ಯಕ್ರಮ) ಮುಂತಾದ ತೊಡಗುವಿಕೆಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಕೃಷಿ ಸಮುದಾಯಕ್ಕೆ ಬೆಂಬಲ ನೀಡುವ ದೀರ್ಘವಾದ ದಾಖಲೆಯನ್ನು ಹೊಂದಿದೆ.

ಎಫ್ಎಂಸಿ ಬಗ್ಗೆ

ಎಫ್ಎಂಸಿ ಕಾರ್ಪೊರೇಶನ್ ಜಾಗತಿಕ ಕೃಷಿ ವಿಜ್ಞಾನ ಕಂಪನಿಯಾಗಿದ್ದು, ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಾ ವಿಶ್ವದ ಜನಸಂಖ್ಯೆಗೆ ಆಹಾರ, ಫೈಬರ್ ಮತ್ತು ಇಂಧನವನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡಲು ಮೀಸಲಾಗಿದೆ. ಜೈವಿಕ, ಬೆಳೆ ಪೋಷಣೆ, ಡಿಜಿಟಲ್ ಮತ್ತು ನಿಖರ ಕೃಷಿ ಸೇರಿದಂತೆ - ಎಫ್ಎಂಸಿಯ ನವೀನ ಬೆಳೆ ಸಂರಕ್ಷಣಾ ಪರಿಹಾರಗಳು- ಬೆಳೆಗಾರರು, ಬೆಳೆ ಸಲಹೆಗಾರರು ಮತ್ತು ಟರ್ಫ್ ಮತ್ತು ಕೀಟ ನಿರ್ವಹಣಾ ವೃತ್ತಿಪರರು ಪರಿಸರವನ್ನು ರಕ್ಷಿಸುವಾಗ ಎದುರಾಗುವ ಕಠಿಣ ಸವಾಲುಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ವಿಶ್ವಾದ್ಯಂತ 100 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸುಮಾರು 6,400 ಉದ್ಯೋಗಿಗಳೊಂದಿಗೆ, ಎಫ್ಎಂಸಿಯು ಭೂಮಿಗೆ ಹಾನಿ ಮಾಡದ ಹೊಸ ಕಳೆನಾಶಕ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಕ್ರಿಯ ಪದಾರ್ಥಗಳು, ಉತ್ಪನ್ನ ಸೂತ್ರೀಕರಣಗಳು ಮತ್ತು ಪ್ರವರ್ತಕ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಬದ್ಧವಾಗಿದೆ. ಫೇಸ್‌ಬುಕ್® ಮತ್ತು ಯೂಟ್ಯೂಬ್® ನಲ್ಲಿ ಎಫ್ಎಂಸಿ ಇಂಡಿಯಾದ ಬಗ್ಗೆ ಹೆಚ್ಚು ತಿಳಿಯಲು fmc.com ಮತ್ತು ag.fmc.com/in/en ಗೆ ಭೇಟಿ ನೀಡಿ.