ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಟೊಮ್ಯಾಟೋ ಮತ್ತು ಬೆಂಡೆಕಾಯಿ ಬೆಳೆಯುವ ರೈತರನ್ನು ಬೆಂಬಲಿಸಲು ಎಫ್ಎಂಸಿ ಹೊಸ ಕೀಟನಾಶಕವನ್ನು ಪರಿಚಯಿಸುತ್ತದೆ

ಎಫ್ಎಂಸಿ ಇಂಡಿಯಾವು ಇಂದು ಕಾರ್ಪ್ರಿಮಾ™ ಎಂಬ ಹೊಸ ಸಂಶೋಧನೆ-ಆಧಾರಿತ ಕೀಟನಾಶಕವನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಎಫ್ಎಂಸಿಯ ವಿಶ್ವದ ಪ್ರಮುಖ ರೈನಾಕ್ಸಿಪೈರ್® ಕೀಟ ನಿಯಂತ್ರಣ ತಂತ್ರಜ್ಞಾನದಿಂದ ಚಾಲಿತ ಕಾರ್ಪ್ರಿಮಾ™, ಭಾರತೀಯ ರೈತರಿಗೆ ದೊಡ್ಡ ತಲೆನೋವಾಗಿರುವ ಹಣ್ಣು ಕೊರಕಗಳ ವಿರುದ್ಧ ಉತ್ತಮ ಬೆಳೆ ರಕ್ಷಣೆಯನ್ನು ನೀಡುತ್ತದೆ.

ಭಾರತೀಯ ತರಕಾರಿ ಸಂಸ್ಥೆಯ ಪ್ರಕಾರ, ದೇಶಾದ್ಯಂತ ಟೊಮ್ಯಾಟೋ ಬೆಳೆಗಾರರು ಹಣ್ಣು ಕೊರಕಗಳಿಂದಾಗಿ ಪ್ರತಿ ವರ್ಷ 65 ಶೇಕಡಾದವರೆಗೆ ಇಳುವರಿ ಕಳೆದುಕೊಳ್ಳುತ್ತಾರೆ. ಈ ಕೀಟದ ಸೋಂಕಿನಿಂದಾಗಿ ಹೂವು ಉದುರುತ್ತದೆ ಮತ್ತು ಸಸ್ಯದ ಆರೋಗ್ಯಕ್ಕೆ ಹಾನಿಯಾಗುತ್ತದೆ, ಇದರಿಂದಾಗಿ ಹಣ್ಣಿನ ಗುಣಮಟ್ಟ ಕುಸಿದು ಬೆಳೆಯ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಕಂಪನಿಯ ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ಥಳೀಯ ಪಾಲುದಾರರೊಂದಿಗೆ ಎಫ್ಎಂಸಿ ಇಂಡಿಯಾದ ಅಧ್ಯಕ್ಷ ರವಿ ಅನ್ನವರಪು ಅವರ ಸಮ್ಮುಖದಲ್ಲಿ ಹೊಸ ಉತ್ಪನ್ನವನ್ನು ರಾಯಪುರದಲ್ಲಿ ಬಿಡುಗಡೆಗೊಳಿಸಲಾಯ್ತು. ಉತ್ಪನ್ನ ಬಿಡುಗಡೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅರಿವಿನ ಕಾರ್ಯಾಗಾರಗಳು ನಡೆದವು. 

ಎಫ್ಎಂಸಿ ಇಂಡಿಯಾ, ಬೆಂಡೆಕಾಯಿ ಮತ್ತು ಟೊಮ್ಯಾಟೋ ಬೆಳೆಗಾರರಿಗಾಗಿ ಕಾರ್ಪ್ರಿಮಾ ಎಂಬ ಹೊಸ ಕೀಟನಾಶಕವನ್ನು ಬಿಡುಗಡೆ ಮಾಡಿದೆಎಫ್ಎಂಸಿ ಇಂಡಿಯಾ, ಬೆಂಡೆಕಾಯಿ ಮತ್ತು ಟೊಮ್ಯಾಟೋ ಬೆಳೆಗಾರರಿಗಾಗಿ ಕಾರ್ಪ್ರಿಮಾ ಎಂಬ ಹೊಸ ಕೀಟನಾಶಕವನ್ನು ಬಿಡುಗಡೆ ಮಾಡಿದೆ

ರಾಯಪುರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಎಫ್ಎಂಸಿ ಇಂಡಿಯಾ ಅಧ್ಯಕ್ಷ, ಶ್ರೀ ರವಿ ಅನ್ನವರಪು "ಕಳೆದ ವರ್ಷ ದೇಶದಲ್ಲಿ ದಾಖಲೆಯ ಪ್ರಮಾಣದ ತೋಟಗಾರಿಕೆ ಬೆಳೆ ಉತ್ಪಾದನೆಯಾಗಿದೆ. ಅದಾಗ್ಯೂ, ಪ್ರತಿ ವರ್ಷ ಟೊಮ್ಯಾಟೋ ಮತ್ತು ಬೆಂಡೆಕಾಯಿ ಬೆಳೆಗಾರರು ಹಣ್ಣು ಕೊರಕ ಕೀಟಗಳು, ರೋಗಗಳು ಮತ್ತು ಕೊಯ್ಲು ನಂತರದ ನಷ್ಟಗಳು ಮುಂತಾದ ಇತರ ಕಾರಣಗಳಿಂದ ಭಾರಿ ನಷ್ಟ ಎದುರಿಸುತ್ತಾರೆ. ಎಫ್ಎಂಸಿಯಲ್ಲಿ, ಸುಸ್ಥಿರ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪರಿಚಯಿಸುವ ಮೂಲಕ ರೈತರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ನಾವು ನಾವೀನ್ಯತೆಯನ್ನು ಬಳಸುತ್ತೇವೆ. ರೈತರ ಬೆಳೆ ರಕ್ಷಣೆ ಅಗತ್ಯಗಳನ್ನು ಪೂರೈಸಲು ಹೊಸ ಪರಿಹಾರಗಳನ್ನು ಹುಡುಕುವ ಎಫ್ಎಂಸಿಯ ಬದ್ಧತೆಗೆ ಕಾರ್ಪ್ರಿಮಾ™ ಪರಿಚಯಿಸಿರುವುದೇ ಸಾಕ್ಷಿಯಾಗಿದೆ. ಟೊಮ್ಯಾಟೋ ಮತ್ತು ಬೆಂಡೆಕಾಯಿ ಬೆಳೆಗಾರರಿಗೆ ಉನ್ನತ ಇಳುವರಿ ಮತ್ತು ಉತ್ತಮ ಗುಣಮಟ್ಟದ ಮೂಲಕ ತಮ್ಮ ಆದಾಯವನ್ನು ಸುಧಾರಿಸಲು ಕಾರ್ಪ್ರಿಮಾ™ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು

ನವೀನ ಕೀಟನಾಶಕ ಕಾರ್ಪ್ರಿಮಾ™ ದೀರ್ಘಾವಧಿ ಕೀಟ ನಿಯಂತ್ರಣವನ್ನು ಒದಗಿಸುವ ಮೂಲಕ ರೈತರಿಗೆ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆ, ಹಾಗೂ ಉತ್ತಮ ಗುಣಮಟ್ಟದ ಸಮೃದ್ಧ ಇಳುವರಿಗೆ ಕಾರಣವಾಗುವಂತೆ ಹೆಚ್ಚಿನ ಹೂವು ಮತ್ತು ಹಣ್ಣು ಧಾರಣೆಯನ್ನು ಸಾಬೀತುಪಡಿಸಿದೆ. ರೈನಾಕ್ಸಿಪೈರ್® ಸಕ್ರಿಯ ಅಂಶದಿಂದ ಕೂಡಿದ ಕಾರ್ಪ್ರಿಮಾ™, ಹಣ್ಣು ಕೊರಕ ಕೀಟಗಳಿಂದ ಉತ್ತಮ ಮತ್ತು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುವ ಭರವಸೆ ನೀಡುವ ಮೂಲಕ, ರೈತರು ಬೆಳೆಗಳನ್ನು ರಕ್ಷಿಸಲು ವ್ಯಯಿಸುವ ಸಮಯ, ಹಣ ಮತ್ತು ಪ್ರಯತ್ನವನ್ನು ಉಳಿಸುತ್ತದೆ.

ಈ ತಿಂಗಳ ಆರಂಭದಲ್ಲಿ ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಕನ್ನಡ- ಈ ಐದು ಭಾಷೆಗಳಲ್ಲಿ ನೇರ ಪ್ರಸಾರಗೊಂಡ ವರ್ಚುವಲ್ ಕಾರ್ಯಕ್ರಮದ ಮೂಲಕ ಕಾರ್ಪ್ರಿಮಾ™ ಉತ್ಪನ್ನವನ್ನು ದೇಶಾದ್ಯಂತ ಬಿಡುಗಡೆ ಮಾಡಲಾಯ್ತು ಮತ್ತು ದೇಶಾದ್ಯಂತದ ಹೆಚ್ಚಿನ ಸಂಖ್ಯೆಯ ರೈತರು, ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ಇದರಲ್ಲಿ ಭಾಗವಹಿಸಿದ್ದರು.

 

 

ಛತ್ತೀಸ್‌ಗಢದ ಬಿಡುಗಡೆ ಕಾರ್ಯಕ್ರಮವು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಒಳಗೊಂಡು, ಭಾರತದ ತರಕಾರಿ ಕೇಂದ್ರಗಳ ಮೂರು ನಗರಗಳ ರಾಷ್ಟ್ರೀಯ ಬಿಡುಗಡೆಯ ಭಾಗವಾಗಿದೆ. ಈ ಬಿಡುಗಡೆಯ ಹಲವಾರು ಪ್ರಾದೇಶಿಕ ಸುದ್ದಿ ಪತ್ರಿಕೆಗಳಿಂದ ಸಾಕಷ್ಟು ಮಾಧ್ಯಮ ಗಮನವನ್ನು ಸೆಳೆಯಿತು.

ಎಫ್ಎಂಸಿ ಇಂಡಿಯಾ, ಟೊಮ್ಯಾಟೋ ಮತ್ತು ಬೆಂಡೆಕಾಯಿ ಬೆಳೆಗಾರರಿಗಾಗಿ ಕಾರ್ಪ್ರಿಮಾ ಎಂಬ ಹೊಸ ಕೀಟನಾಶಕವನ್ನು ಪರಿಚಯಿಸಿದೆ​

6 ಗ್ರಾಂ, 17 ಗ್ರಾಂ ಮತ್ತು 34 ಗ್ರಾಂ ಪ್ಯಾಕ್‌ಗಳಲ್ಲಿ ಪರಿಚಯಿಸಲಾದ ಕಾರ್ಪ್ರಿಮಾ™ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರ ಬೆಳೆ ರಕ್ಷಣಾ ಅಗತ್ಯಗಳನ್ನು ಪೂರೈಸುತ್ತದೆ. ಕಾರ್ಪ್ರಿಮಾ™ ಈಗ ಪ್ರಮುಖ ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಾರ್ಪ್ರಿಮಾ™ ಕೀಟನಾಶಕ| ಎಫ್ಎಂಸಿ ಎಜಿ ಇಂಡಿಯಾಗೆ ಭೇಟಿ ನೀಡಿ