ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
23917
ಸ್ಥಳ | ಇಂಗ್ಲಿಷ್
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಕೃಷಿಯಲ್ಲಿ ಭವಿಷ್ಯದ ನಾಯಕರನ್ನು ಬೆಳೆಸಲು ಎಫ್ಎಂಸಿ ಇಂಡಿಯಾ ಪಿಜೆಟಿಎಸ್ ಕೃಷಿ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಹೊಂದಿದೆ

FMC India, a leading agricultural sciences company, today signed a Memorandum of Understanding (MOU) with Professor Jayashankar Telangana State Agricultural University (PJTSAU) in Hyderabad under its multi-year scholarship program for major agricultural schools across eight states in India. The MOU was signed by Dr. Ravi Annavarapu, President of FMC India and Dr V Praveen Rao, Vice Chancellor of PJTSAU.

ಒಪ್ಪಂದದ ಅಡಿಯಲ್ಲಿ, ಕೃಷಿ ವಿಜ್ಞಾನದಲ್ಲಿ ಡಾಕ್ಟರೇಟ್‌ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಫ್ಎಂಸಿ ವಾರ್ಷಿಕವಾಗಿ ಎರಡು ವಿದ್ಯಾರ್ಥಿವೇತನಗಳನ್ನು ನೀಡುತ್ತದೆ. ಉಜ್ವಲ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಅವರ ಉತ್ಸಾಹವನ್ನು ಹೆಚ್ಚಿಸಲು ಎಫ್ಎಂಸಿ ವಿಶ್ವವಿದ್ಯಾಲಯದೊಂದಿಗೆ ಕೆಲಸ ಮಾಡುತ್ತದೆ. ಕೃಷಿ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಭಾರತದಲ್ಲಿ ಹೆಚ್ಚು ಮಹಿಳೆಯರನ್ನು ಪ್ರೋತ್ಸಾಹಿಸಲು ಮಹಿಳಾ ಅಭ್ಯರ್ಥಿಗಳಿಗೆ ಐವತ್ತು ಶೇಕಡಾ ವಿದ್ಯಾರ್ಥಿವೇತನಗಳನ್ನು ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿವೇತನಗಳ ಜೊತೆಗೆ, ಎಫ್ಎಂಸಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಂಶೋಧನಾ ಕೆಲಸವನ್ನು ಕೈಗೊಳ್ಳಲಿದೆ.

"ಯುವ ಪ್ರತಿಭೆಗಳನ್ನು ಕೃಷಿ ಸಂಶೋಧನೆಯಲ್ಲಿ ಭವಿಷ್ಯದ ನಾಯಕರಾಗಿ ರೂಪಿಸಲು ಎಫ್ಎಂಸಿ ಕೆಲಸ ಮಾಡುತ್ತಿದೆ. ನಮ್ಮ ಪ್ರತಿಭಾ ಕಾರ್ಯತಂತ್ರದ ಭಾಗವಾಗಿ, ಎಫ್ಎಂಸಿಯಲ್ಲಿ ನಾವು ಅಂತರರಾಷ್ಟ್ರೀಯ ಸಂಶೋಧಕರನ್ನು ಒಳಗೊಂಡ ಸ್ಥಳೀಯ ವಿಜ್ಞಾನಿಗಳ ಬಲವಾದ ತಂಡ ಕಟ್ಟುವ ಕಲ್ಪನೆಯನ್ನು ಹೊಂದಿದ್ದೇವೆ, ಅವರು ಭಾರತದಲ್ಲಿ, ಭಾರತ ಮತ್ತು ಜಗತ್ತಿನ ತಂತ್ರಜ್ಞಾನದ ಆವಿಷ್ಕಾರಗಳನ್ನು ಮುನ್ನಡೆಸುತ್ತಾರೆ. ವಿಶ್ವವಿದ್ಯಾಲಯದೊಂದಿಗಿನ ನಮ್ಮ ಸಹಭಾಗಿತ್ವವು ಮಹತ್ವಾಕಾಂಕ್ಷಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ ಮತ್ತು ಉದ್ಯಮದ ತಜ್ಞರು ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಯಶಸ್ಸಿನ ಮಾರ್ಗವನ್ನು ರೂಪಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ" ಎಂದು ಎಫ್ಎಂಸಿ ಇಂಡಿಯಾದ ಅಧ್ಯಕ್ಷ ರವಿ ಅನ್ನವರಪು ಹೇಳಿದರು. "ಭಾರತದಲ್ಲಿ ಆರ್&ಡಿ ಹೂಡಿಕೆಗಳು ಗಮನಾರ್ಹ ದರದಲ್ಲಿ ಬೆಳೆಯುತ್ತಿವೆ ಮತ್ತು ಆವಿಷ್ಕಾರಗಳು ಜಾಗತಿಕ ಗುರುತಿಸುವಿಕೆಯನ್ನು ಪಡೆಯುತ್ತಿವೆ. ಎಫ್ಎಂಸಿ ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ, ಈ ಬೆಳವಣಿಗೆಯ ರೇಖೆಯ ಮುಂಚೂಣಿಯಲ್ಲಿ ಇರಲು ಯುವ ಪ್ರತಿಭೆಗಳನ್ನು ಸಶಕ್ತಗೊಳಿಸುವುದು ನಮ್ಮ ದೃಷ್ಟಿಕೋನವಾಗಿದೆ.”

ಪಾಲುದಾರಿಕೆಯ ಬಗ್ಗೆ ಮಾತನಾಡುತ್ತಾ, ಪಿಜೆಟಿಎಸ್ಎಯು ಉಪಕುಲಪತಿ ಡಾ. ವಿ. ಪ್ರವೀಣ್ ರಾವ್: "ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೃಷಿಯ ಸವಾಲುಗಳನ್ನು ಪರಿಹರಿಸುವ ಸುಸ್ಥಿರ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಎಫ್ಎಂಸಿ ಕೈಗೊಳ್ಳುವ ನವೀನ ತೊಡಗುವಿಕೆಗಳನ್ನು ನಾವು ಪ್ರಶಂಸಿಸುತ್ತೇವೆ. ಶುದ್ಧ ನೀರು, ಉತ್ತಮ ಆರೋಗ್ಯ, ಜಿಎಪಿ, ಕೃಷಿಯಲ್ಲಿ ಮಹಿಳಾ ಸಬಲೀಕರಣ ಮತ್ತು ಯುವ ಜನರಲ್ಲಿ ವಿಜ್ಞಾನವನ್ನು ಉತ್ತೇಜಿಸುವ ಪ್ರಾಜೆಕ್ಟ್ ಸಫಲ್ ಮತ್ತು ಪ್ರಾಜೆಕ್ಟ್ ಸಮರ್ಥ್‌ನಂತಹ ಹಲವಾರು ಉಪಕ್ರಮಗಳ ಮೂಲಕ ಗ್ರಾಮೀಣ ಭಾರತದಲ್ಲಿ ನಡೆಸಲಾದ ಚಟುವಟಿಕೆಗಳು ಎಫ್ಎಂಸಿ ಮಾಡಿದ ಗಮನಾರ್ಹ ಪ್ರಯತ್ನಗಳಾಗಿವೆ" ಎಂದು ಹೇಳಿದರು. ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಶಂಸಿಸುತ್ತಾ, ಡಾ. ರಾವ್ ಮುಂದುವರೆದು, "ಎಫ್ಎಂಸಿಯೊಂದಿಗಿನ ನಮ್ಮ ಸಹಭಾಗಿತ್ವವು ಕೃಷಿ ವಲಯಕ್ಕೆ ಮೌಲ್ಯವನ್ನು ಸೇರಿಸಲು ಬಯಸುವ ಯುವ ಭಾರತೀಯ ಪ್ರತಿಭೆಗೆ ಅಗತ್ಯವಿರುವ ಪ್ರೋತ್ಸಾಹವನ್ನು ಒದಗಿಸಲು ಹಾಗೂ ಪ್ರಸ್ತುತ ಮತ್ತು ಭವಿಷ್ಯದ ಪ್ರತಿಭೆಗಳ ಅಗತ್ಯಗಳಿಗಾಗಿ ಸಮರ್ಥ ಪ್ರತಿಭೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪಿಜೆಟಿಎಸ್ಎಯು ತೆಲಂಗಾಣ ರಾಜ್ಯಾದ್ಯಂತ ದತ್ತು ತೆಗೆದುಕೊಂಡ ಹಳ್ಳಿಗಳಲ್ಲಿ ನಿಖರ ಕೃಷಿ, ಅಗ್ರಿಟೆಕ್ ವೆಂಚರ್ ಕ್ಯಾಪಿಟಲ್, ಸುಸ್ಥಿರ ಕೀಟ ನಿರ್ವಹಣಾ ಪರಿಹಾರಗಳು ಮತ್ತು ರೈತ ಸಂಪರ್ಕ ಕಾರ್ಯಕ್ರಮದಂತಹ ಸಾಮಾನ್ಯ ಗುರಿಗಳ ಮೇಲೆ ಎಫ್ಎಂಸಿ ಸಹಯೋಗದಲ್ಲಿ ಕೆಲಸ ಮಾಡಲು ಪಿಜೆಟಿಎಸ್ಎಯು ಎದುರು ನೋಡುತ್ತಿದೆ ಎಂದರು.”

ಕೃಷಿ ಉದ್ಯಮದಲ್ಲಿ ಅತ್ಯಂತ ಸದೃಢ ಆವಿಷ್ಕಾರ ಮತ್ತು ಅಭಿವೃದ್ಧಿ ಪೈಪ್‌ಲೈನ್‌ಗಳಲ್ಲಿ ಒಂದಕ್ಕೆ ಮಾರ್ಗದರ್ಶನ ನೀಡಲು 800 ವಿಜ್ಞಾನಿಗಳು ಮತ್ತು ಸಹವರ್ತಿಗಳ ವಿಶ್ವದರ್ಜೆಯ ಆರ್&ಡಿ ಸಂಸ್ಥೆಯೊಂದಿಗೆ, ಕೃಷಿ ಪರಿಸರ ವ್ಯವಸ್ಥೆಯೊಳಗೆ ವೈಜ್ಞಾನಿಕ ಸಮುದಾಯ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಹಯೋಗವನ್ನು ಬಲಪಡಿಸಲು ಬದ್ಧವಾಗಿದೆ. ಎಫ್ಎಂಸಿ ಇತ್ತೀಚೆಗೆ ಉತ್ತರಾಖಂಡದ ಪಂತ್‌ನಗರದ ಜಿಬಿ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಗುಂಟೂರಿನ ಆಚಾರ್ಯ ಎನ್.ಜಿ.ರಂಗ ಕೃಷಿ ವಿಶ್ವವಿದ್ಯಾಲಯದೊಂದಿಗೆ ಇದೇ ರೀತಿಯ ಎಂಒಯುಗಳಿಗೆ ಸಹಿ ಹಾಕಿದೆ.

FMC's multi-year scholarship program has pledged to support 10 PhD (Ag) and 10 M.Sc. (Ag) scholarships across India in eight universities, in faculties like Agronomy, Entomology, Pathology, Soil Science and Horticulture. Under the scholarship program, awardees will also be accorded internship and industry mentorship for their overall development, in addition to getting preference in full-time employment opportunities in the company.

ವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಕೃಷಿಯಲ್ಲಿ ಭವಿಷ್ಯದ ನಾಯಕರನ್ನು ಬೆಳೆಸಲು ಎಫ್ಎಂಸಿ ಇಂಡಿಯಾ ಪಿಜೆಟಿಎಸ್ ಕೃಷಿ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಹೊಂದಿದೆವಿಜ್ಞಾನ ನಾಯಕರ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಕೃಷಿಯಲ್ಲಿ ಭವಿಷ್ಯದ ನಾಯಕರನ್ನು ಬೆಳೆಸಲು ಎಫ್ಎಂಸಿ ಇಂಡಿಯಾ ಪಿಜೆಟಿಎಸ್ ಕೃಷಿ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಹೊಂದಿದೆ