Skip to main content
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಫ್ಎಂಸಿ ಇಂಡಿಯಾ ರೈತರ ಆ್ಯಪ್ ಅನ್ನು ಪ್ರಾರಂಭಿಸಿದೆ

ಆಂಡ್ರಾಯ್ಡ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌, ಈ ಎರಡರ ಮೂಲಕವೂ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವ ರೈತರ ಅಪ್ಲಿಕೇಶನ್ ಪ್ರಾರಂಭಿಸುವ ಮೂಲಕ ಎಫ್ಎಂಸಿ ಇಂಡಿಯಾ ತನ್ನ ಡಿಜಿಟಲ್ ಪರಿವರ್ತನೆಯಲ್ಲಿ ಇನ್ನೊಂದು ಮೈಲಿಗಲ್ಲನ್ನು ತಲುಪಿದೆ.

ಎಫ್ಎಂಸಿ ಇಂಡಿಯಾ ರೈತರ ಆ್ಯಪ್ ಎಂಬುದು ರೈತರಿಗೆ ತಮ್ಮ ಬೆಳೆಯ ಸವಾಲುಗಳು ಮತ್ತು ಬೆಳೆಗೆ ಎಫ್ಎಂಸಿ ಪರಿಹಾರಗಳು, ಪೋಷಕಾಂಶ ಅವಶ್ಯಕತೆ, ಹತ್ತಿರದ ಅಧಿಕೃತ ಚಿಲ್ಲರೆ ವ್ಯಾಪಾರಿಯ ಸ್ಥಳ, ಚಾಲ್ತಿಯಲ್ಲಿರುವ ಕೃಷಿ ಉತ್ಪಾದನೆಯ ಮಾರುಕಟ್ಟೆ ಬೆಲೆಗಳು ಮತ್ತು ಸ್ಥಳೀಯ ಹವಾಮಾನದ ಅಂದಾಜು ಸೇರಿದಂತೆ ಬೆಳೆ ಸಂಬಂಧಿತ ಮಾಹಿತಿಗೆ ಪ್ರವೇಶ ಪಡೆಯಲು ಒಂದೇ ಸೂರಿನ ಪರಿಹಾರ ನೀಡುವ ಮಾರುಕಟ್ಟೆಯಾಗಿದೆ. ಬಹುಭಾಷಾ 24x7 ಟೋಲ್-ಫ್ರೀ ಸಹಾಯವಾಣಿಯಿಂದ ಬೆಂಬಲಿತವಾದ ಆ್ಯಪ್‌ ಸದ್ಯಕ್ಕೆ ಇಂಗ್ಲೀಷ್‌ನಲ್ಲಿ ಲಭ್ಯವಿದೆ, ಆದರೆ 2021 ರ ಮೂರನೇ ತ್ರೈಮಾಸಿಕದಲ್ಲಿ ಸ್ಥಳೀಯ ಭಾಷೆಗಳಲ್ಲಿ ಅದನ್ನು ಪಡೆಯಲು ಯೋಜನೆಗಳು ಜಾರಿಯಲ್ಲಿವೆ. ಭಾರತದ ತಂಡವು ಮುಂದಿನ ಹಂತದ ಅಭಿವೃದ್ಧಿಯಾಗಿ ಲಾಯಲ್ಟಿ ಕಾರ್ಯಕ್ರಮ ಮತ್ತು ದೃಢೀಕರಣ ಮೌಲ್ಯಮಾಪನದಂತಹ ಹೆಚ್ಚುವರಿ ಫೀಚರ್‌ಗಳ ಮೇಲೆ ಕೂಡ ಕೆಲಸ ಮಾಡುತ್ತಿದೆ.

 

Fಎಂಸಿ ಇಂಡಿಯಾವು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಅದರ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಕ್ಕೆ ಪರಿಪೂರ್ಣ ಪೂರಕವೆನ್ನುವಂತೆ ರೈತರ ಆ್ಯಪ್‌ ಅನ್ನು ಪರಿಚಯಿಸಿದೆ, ಜೊತೆಗೆ ಅದರ ಹೊಸ ವೆಬ್‌‌ಸೈಟ್ ಅನ್ನು ಇತ್ತೀಚೆಗೆ ಹೊಸ ರೂಪದೊಂದಿಗೆ ಪುನಃ ಪ್ರಾರಂಭಿಸಲಾಯಿತು.

ಈ ತಂಡವು ಸದ್ಯಕ್ಕೆ ಕೃಷಿ ಸಮುದಾಯದಲ್ಲಿ ಅದರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತ್ತು ಬಾಯಿ ಮಾತಿನ ಮೂಲಕ ರೈತ ಸಮುದಾಯದಲ್ಲಿ ಆ್ಯಪ್ ಅನ್ನು ಜನಪ್ರಿಯಗೊಳಿಸುವ ಕೆಲಸ ಮಾಡುತ್ತಿದೆ.

ಡೌನ್ಲೋಡ್ ಲಿಂಕ್‌ಗಳು ಈ ಕೆಳಗಿನಂತಿವೆ:

ಆಂಡ್ರಾಯ್ಡ್: https://play.google.com/store/apps/details?id=com.fmc.corporate.ind

ಐಒಎಸ್: https://apps.apple.com/in/app/fmc-india-farmer-app/id1542979156

FMC India Farmer App