ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
News & Insights

ಡ್ರೋನ್ ಶಾಟ್‌ಗಳು

ನಮ್ಮ ಉದ್ಯಮದಲ್ಲಿ ಬೇಡಿಕೆಯನ್ನು ಹೆಚ್ಚಿಸುವುದು ಯಶಸ್ಸಿಗೆ ಅನಿವಾರ್ಯವಾಗಿದೆ. ಅದಕ್ಕಾಗಿಯೇ, ವಿವಿಧ ತೊಡಗಿಕೊಳ್ಳುವಿಕೆ ಸ್ವರೂಪಗಳ ಮೂಲಕ ರೈತರಿಗೆ ಉತ್ಪನ್ನದ ಕೆಪಿಐಗಳು ಮತ್ತು ಅಂತಿಮ ಮೌಲ್ಯ ವಿತರಣೆಯ ಕುರಿತು ಪ್ರದರ್ಶನ ನೀಡಲಾಗುತ್ತದೆ. ಒಂದು ಸಂತೃಪ್ತ ದೃಷ್ಟಿಕೋನ ಗ್ರಾಹಕನಾಗಿ ಪರಿವರ್ತನೆಯಾಗುತ್ತದೆ.

Usage of Drone cameras to capture the beauty of our demonstration plots.2020 ರಲ್ಲಿ ನಾವು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ್ದು ಮಾತ್ರವಲ್ಲದೆ, ಗ್ರಾಹಕರ ತೊಡಗುವಿಕೆಯ ಹೊಸ ಸ್ವರೂಪಗಳನ್ನು ಕೂಡ ಕಂಡುಕೊಂಡಿದ್ದೇವೆ, ಅದರಲ್ಲಿ ಒಂದು ಇ-ತೋಟಗಳು (ಹಿಂದಿನ ಸಂಚಿಕೆಯಲ್ಲಿ ಇದು ಒಳಗೊಂಡಿದೆ). ಮತ್ತು ಈ ಪ್ರತಿಯೊಂದು ಸ್ವರೂಪಗಳು ಕೂಡಾ ತಂತ್ರಜ್ಞಾನ ಸಂಯೋಜನೆ ಮತ್ತು ಸುಧಾರಣೆಯ ಹಲವಾರು ಸಾಧ್ಯತೆಗಳನ್ನು ಒಳಗೊಂಡಿವೆ -ಅವುಗಳಲ್ಲಿ ಇತ್ತೀಚಿನದು ಎಂದರೆ ನಮ್ಮ ಪ್ರದರ್ಶನ ಪ್ಲಾಟ್‌ಗಳ ಸೌಂದರ್ಯವನ್ನು ಸೆರೆ ಹಿಡಿಯಲು ಡ್ರೋನ್ ಕ್ಯಾಮರಾಗಳ ಬಳಕೆ.

ಈ ವರ್ಷ ಮಹಾರಾಷ್ಟ್ರದ ಸೋಯಾಬೀನ್ ರೈತರಿಗಾಗಿ, Drone shots of Soybean Field.ಅಥಾರಿಟಿ® ನೆಕ್ಸ್ಟ್ ಎಂಬ ಮುಂದಿನ ತಲೆಮಾರಿನ ಕಳೆನಾಶಕವನ್ನು ಪ್ರಸ್ತುತಪಡಿಸಲಾಗಿದ್ದು; ಇದು ನಮ್ಮ ಪ್ರಾಯೋಗಿಕ ಪ್ರಾಜೆಕ್ಟ್‌ಗೆ ಸೂಕ್ತವಾಗಿದೆ. ನಮ್ಮ ತಂಡವು ವಾಟ್ಸ್ಯಾಪ್ ವಿಡಿಯೋ ಕರೆಗಳು, ಜೂಮ್ ಮತ್ತು ನೇರ ಭೇಟಿಗಳ ಮೂಲಕ ನೇರವಾಗಿ 27000+ ರೈತರೊಂದಿಗೆ ಸಂಪರ್ಕ ಹೊಂದಿದ್ದರೂ, ನಾವು ಹೈ ಡೆಫಿನಿಶನ್ ಡ್ರೋನ್ ಕ್ಯಾಮರಾಗಳೊಂದಿಗೆ ಇ-ಫೀಲ್ಡ್‌ಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯೋಚಿಸಿದ್ದೇವೆ.

Drone shots of Soybean Field.ಅಥಾರಿಟಿ® ನೆಕ್ಸ್ಟ್ 1ನೇ ದಿನದಿಂದಲೂ ಉತ್ತಮ ಕಳೆ ನಿಯಂತ್ರಣವನ್ನು ಒದಗಿಸುತ್ತದೆ, ಮತ್ತು 40ಡಿಎ‌ಎಸ್‌ನಲ್ಲಿ ಅಚ್ಚುಕಟ್ಟು, ಸ್ವಚ್ಛ ಮತ್ತು ಕಳೆ ರಹಿತ ಹೊಲದಲ್ಲಿ ಬೆಳೆಯುವ ಆರೋಗ್ಯಕರ ಬೆಳೆಗಳೊಂದಿಗೆ ಕೆಪಿಐಗಳು ಹೆಚ್ಚು ಪ್ರಮುಖ ಸ್ಥಾನ ಪಡೆದಿವೆ. ಕಳೆನಾಶಕ ಹೊಡೆದ ಪ್ರದೇಶದ ವೈಮಾನಿಕ ವೀಕ್ಷಣೆಗಾಗಿ ನಾವು 4 ಅಡಿ, 10 ಅಡಿ, 70 ಅಡಿ ಮತ್ತು ಮುಂದುವರೆದು 100 ಅಡಿ ಎತ್ತರದವರೆಗಿನ ಚಿತ್ರವನ್ನು ಸೆರೆ ಹಿಡಿಯಲು ಡ್ರೋನ್ ಕ್ಯಾಮರಾವನ್ನು ಬಳಸಿದ್ದೇವೆ. ನಮಗೆ ದೊರೆತ ನೋಟವು ಅದ್ಭುತವಾಗಿತ್ತು; ಅದರ ಕೆಲವು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ನಾವು ನಮ್ಮ ಮುಂದಿನ ಶೂಟ್ ಅನ್ನು 85-90DAS ರಲ್ಲಿ, ಹೂವು ಬಿಡುವ ಹಂತದಲ್ಲಿ ಕೊರಾಜೆನ್ ® ಬಳಸಿದ ನಂತರ ಯೋಜಿಸಿದ್ದೇವೆ. ಈ ಹಂತದಲ್ಲಿ ಕಳೆನಾಶಕದ ಕೆಪಿಐಗಳನ್ನು ಮಾತ್ರವಲ್ಲದೆ, ಗಾಢ ಹಸಿರು ಮತ್ತು ದಟ್ಟವಾಗಿ ಹಣ್ಣು ಹಿಡಿದ ಬೆಳೆಯಲ್ಲಿ ಗೋಚರಿಸುವ ಅತ್ಯುತ್ತಮ ಕೀಟ ಸಂರಕ್ಷಣೆಯ ಫಲಿತಾಂಶವನ್ನು ಕೂಡ ಸೆರೆ ಹಿಡಿಯಲಾಗುತ್ತದೆ. ಹಾಗೆಯೇ ವಿವಿಧ ವೇದಿಕೆಗಳಲ್ಲಿ ನಡೆಯುವ ರೈತರ ಸಭೆಗಳಲ್ಲಿ ನಮ್ಮ ಉತ್ಪನ್ನಗಳ ಬಗ್ಗೆ ಉತ್ಸಾಹ ಮತ್ತು ಬೇಡಿಕೆಯನ್ನು ಸೃಷ್ಟಿಸಲು ಈ ವಿಡಿಯೋಗಳನ್ನು ಬಳಸಲಾಗುತ್ತದೆ.

ಡ್ರೋನ್ ಕ್ಯಾಮರಾಗಳು ನಮಗೆ ಅಪಾರ ಸಾಧ್ಯತೆಗಳಿಂದ ಕೂಡಿದ 100 ಅಡಿ ಎತ್ತರದ ಹೊಸ ದಿಗಂತವನ್ನು ತೋರಿಸಿವೆ. ಮತ್ತು ಮುಂಬರುವ ಸಮಯದಲ್ಲಿ ನಾವು ಅದನ್ನು ಉತ್ತಮವಾಗಿ ಬಳಸುತ್ತೇವೆ.