ಮುಖ್ಯಾಂಶಗಳು
- ಅತ್ಯುತ್ತಮ ವಿಶಾಲ ವ್ಯಾಪ್ತಿ ಮತ್ತು ಉಳಿಕೆ ನಿಯಂತ್ರಣ
- ಕೀಟಗಳನ್ನು ಹೊಡೆದು ಉರುಳಿಸುವ ಗುಣ ಲಕ್ಷಣ ಹೊಂದಿದೆ, ಆದ್ದರಿಂದ ವಿವಿಧ ರಸ ಹೀರುವ ಮತ್ತು ಜಗಿಯುವ ಕೀಟಗಳ ವಿರುದ್ಧ ತ್ವರಿತ ಕೀಟ ನಿಯಂತ್ರಣ ನೀಡುತ್ತದೆ
- ಹೆಚ್ಚಿನ ತಾಪಮಾನಗಳಲ್ಲಿ ಸ್ಥಿರವಾಗಿರುತ್ತದೆ, ಕಡಿಮೆ ಅಸ್ಥಿರತೆ ಮತ್ತು ಕಡಿಮೆ ಚರ್ಮದ ಕಿರಿಕಿರಿ
- ನೀರಿನೊಂದಿಗೆ ಮಣ್ಣಿನಲ್ಲಿ ಕರಗಿ ಹೋಗುವುದಿಲ್ಲ ಮತ್ತು ಮಣ್ಣಿನ ಜೊತೆಗೆ ಏಕರೂಪದ ಅಡೆತಡೆಯನ್ನು ರೂಪಿಸುವ ಮೂಲಕ ಸೂಕ್ತವಾದ ಗೆದ್ದಲು ನಾಶಕವಾಗಿ ಕಾರ್ಯನಿರ್ವಹಿಸುತ್ತದೆ
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಟಾಲ್ ಸ್ಟಾರ್® ಕೀಟನಾಶಕವು ಅಕಾರ್ಸಿಡಲ್ ಗುಣ ಲಕ್ಷಣಗಳನ್ನು ಹೊಂದಿರುವ ವಿಶಾಲ ವ್ಯಾಪ್ತಿಯ ಕೀಟನಾಶಕವಾಗಿದ್ದು, ವಿವಿಧ ರಸ ಹೀರುವ ಮತ್ತು ಜಗಿಯುವ ಕೀಟಗಳನ್ನು ತ್ವರಿತವಾಗಿ ಕೊಲ್ಲುವ ಮತ್ತು ದೀರ್ಘ ಅವಧಿಯ ನಿಯಂತ್ರಣ ನೀಡುವ ಗುಣಗಳಿಂದ ಹೆಸರುವಾಸಿಯಾಗಿದೆ. ಇದರ ವಿಶಿಷ್ಟ ಅಣು ಸಂಬಂಧಿ ರಚನೆಯಿಂದಾಗಿ, ನೇರವಾಗಿ ಎಲೆಗಳ ಮೇಲೆ ಬಳಕೆ ಮಾಡಿದಾಗ, ಟಾಲ್ ಸ್ಟಾರ್® ಕೀಟನಾಶಕವು ಹೆಚ್ಚಿನ ತಾಪಮಾನದ ಪರಿಸ್ಥಿತಿಗಳಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಣ್ಣಿನ ಮೂಲಕ ಬಳಕೆ ಮಾಡಿದಾಗ, ಮಣ್ಣಿನೊಂದಿಗೆ ಹಿಡಿದಿಡುವ ವಿಶಿಷ್ಟ ಗುಣದಿಂದಾಗಿ ಇದು ಇತರ ಬ್ರ್ಯಾಂಡ್‌ಗಳಿಗಿಂತ ಉತ್ತಮವಾಗಿ ಗೆದ್ದಲನ್ನು ನಿಯಂತ್ರಿಸುತ್ತದೆ. ಉತ್ಪನ್ನದ ಕಡಿಮೆ ಅಸ್ಥಿರತೆ ಮತ್ತು ಚರ್ಮದ ಮೇಲೆ ಕಡಿಮೆ ಕಿರಿಕಿರಿಯನ್ನುಂಟು ಮಾಡುವ ಗುಣದಿಂದಾಗಿ ಇದು ಪರಿಣಾಮಕಾರಿ ಕೀಟ ನಾಶಕವಾಗಿ ರೈತರಿಗೆ ಉತ್ತಮ ಆಯ್ಕೆಯಾಗಿದೆ.
ಬೆಳೆಗಳು

ಭತ್ತ
ಭತ್ತಕ್ಕಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಎಲೆ ಸುರಳಿ ಹುಳ
- ಹಸಿರು ಎಲೆ ಮಿಡತೆ
- ಕಾಂಡ ಕೊರಕ

ಕಬ್ಬು
ಕಬ್ಬು ಬೆಳೆಗೆ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಗೆದ್ದಲು

ಹತ್ತಿ
ಹತ್ತಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಕಂಬಳಿ ಹುಳು
- ಬಿಳಿ ನೊಣ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಭತ್ತ
- ಕಬ್ಬು
- ಹತ್ತಿ