ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಫರ್ಟೆರಾ® ಕೀಟನಾಶಕ

ಫರ್ಟೆರಾ ® ಕೀಟನಾಶಕವು ರೈನಾಕ್ಸಿಪೈರ್‌‌ ಸಕ್ರಿಯ ಅಂಶದಿಂದ ಕೂಡಿದ್ದು, ಭತ್ತ ಮತ್ತು ಕಬ್ಬು ಬೆಳೆಗಳಲ್ಲಿನ ಕೊರಕ ಕೀಟಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಹರಳಿನ ರೂಪದಲ್ಲಿರುವ ಆಂಥ್ರಾನಿಲಿಕ್ ಡೈಮೈಡ್ ಕೀಟನಾಶಕವಾಗಿದೆ. ಫರ್ಟೆರಾ® ಕೀಟನಾಶಕವು ಇತರ ಕೀಟನಾಶಕಗಳಿಗೆ ಬಗ್ಗದ ಕೀಟಗಳನ್ನು ಪ್ರತಿರೋಧಿಸುವ ಶಕ್ತಿ ಹೊಂದಿರುವ ಕೀಟಗಳನ್ನು ನಿಯಂತ್ರಿಸುವ ವಿಶಿಷ್ಟ ಕಾರ್ಯಕ್ಷಮತೆಯನ್ನು ಹೊಂದಿದೆ. ಇದು ಉದ್ದೇಶಿತವಲ್ಲದ ಅಕಶೇರುಕಗಳಿಗೆ ಯೋಗ್ಯ ಆಯ್ಕೆಯಾಗಿದೆ ಮತ್ತು ಸುರಕ್ಷಿತವಾಗಿದೆ, ಮತ್ತು ನೈಸರ್ಗಿಕ ಪರಾವಲಂಬಿಗಳು, ಪರಭಕ್ಷಕ ಮತ್ತು ಪರಾಗಸ್ಪರ್ಶಕಗಳನ್ನು ರಕ್ಷಿಸುತ್ತದೆ. ಈ ಗುಣಲಕ್ಷಣಗಳು ಫರ್ಟೆರಾ® ಕೀಟನಾಶಕವನ್ನು ಸಮಗ್ರ ಕೀಟ ನಿರ್ವಹಣೆಗೆ (ಐಪಿಎಂ) ಉತ್ತಮ ಸಾಧನವನ್ನಾಗಿಸಿದೆ ಮತ್ತು ಬೆಳೆಗಾರರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತವೆ. ಇದು ಧಾನ್ಯ ವ್ಯಾಪಾರಿಗಳು, ರಫ್ತುದಾರರು ಮತ್ತು ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ಉನ್ನತ ಗುಣಮಟ್ಟದ ಇಳುವರಿಯನ್ನು ನೀಡುವ ಗುರಿಯನ್ನು ಹೊಂದಿದೆ.

ಮುಖ್ಯಾಂಶಗಳು

  • ಫರ್ಟೆರಾ® ಕೀಟನಾಶಕವು ಹೆಚ್ಚಿನ ಕೀಟನಾಶಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ದೀರ್ಘಾವಧಿಯ ನಿಯಂತ್ರಣವನ್ನು ಒದಗಿಸುತ್ತದೆ
  • ಹರಳಿನ ಸೂತ್ರೀಕರಣದಿಂದಾಗಿ ಬೆಳೆಗಾರರು ಇದನ್ನು ಸುಲಭವಾಗಿ ಬಳಸಬಹುದು
  • ಭತ್ತದ ಕಾಂಡ ಕೊರಕಗಳ ಅತ್ಯುತ್ತಮ ನಿಯಂತ್ರಣದಿಂದಾಗಿ, ಇದು ಹೆಚ್ಚಿನ ಬೆಳೆ ಆರೋಗ್ಯ ಮತ್ತು ಅಧಿಕ ಇಳುವರಿಯ ಸಾಮರ್ಥ್ಯವನ್ನು ಇದು ಖಚಿತಪಡಿಸುತ್ತದೆ
  • ಕಬ್ಬಿನ ಬೆಳೆಯಲ್ಲಿ ಆರಂಭಿಕ ಚಿಗುರು ಕೊರಕ ಮತ್ತು ತುದಿ ಕೊರಕಗಳ ಅತ್ಯುತ್ತಮ ನಿಯಂತ್ರಣವು ಕಡಿಮೆ ಇಳುವರಿಯಿಂದ ಆಗುವ ನಷ್ಟದಿಂದ ಬೆಳೆಗಾರರನ್ನು ರಕ್ಷಿಸುತ್ತದೆ ಮತ್ತು ಲಾಭವನ್ನು ಹೆಚ್ಚಿಸುತ್ತದೆ

ಸಕ್ರಿಯ ಪದಾರ್ಥಗಳು

  • ರೈನಾಕ್ಸಿಪೈರ್® ಸಕ್ರಿಯ ಅಂಶದಿಂದ ಕೂಡಿದೆ- ಕ್ಲೋರಾಂಟ್ರಾನಿಲಿಪ್ರೊಲ್0.4% ಜಿಆರ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಎಫ್ಎಂಸಿಯ ಫರ್ಟೆರಾ® ಕೀಟನಾಶಕವು ಒಂದು ನವೀನ ಕೀಟನಾಶಕ ಉತ್ಪನ್ನವಾಗಿದ್ದು, ಇಂದಿನ ಭತ್ತ ಬೆಳೆಗಾರರಿಗೆ ಇದರ ಪರಿಚಯದ ಅಗತ್ಯವಿಲ್ಲ. ರೈನಾಕ್ಸಿಪೈರ್ ® ಸಕ್ರಿಯ ಅಂಶಗಳ ವಿಶ್ವ ದರ್ಜೆಯ ತಂತ್ರಜ್ಞಾನ ಹೊಂದಿರುವ ಫರ್ಟೆರಾ® ಕೀಟನಾಶಕವು ಹರಳಿನ ರೂಪದಲ್ಲಿದ್ದು, ಭತ್ತ ಮತ್ತು ಕಬ್ಬಿನ ಬೆಳೆಗೆ ಬೇರೆ ಯಾವ ಕೀಟನಾಶಕವೂ ನೀಡದ ರೀತಿಯ ಬೆಳೆ ರಕ್ಷಣೆಯನ್ನು ಒದಗಿಸುತ್ತದೆ. ಬಳಸಲು ಸುಲಭವಾದ ಹರಳಿನ ಸೂತ್ರೀಕರಣ ಹೊಂದಿರುವ ಫರ್ಟೆರಾ® ಕೀಟನಾಶಕವು ಕೊರಕಗಳನ್ನು ಅತ್ಯುತ್ತಮವಾಗಿ ನಿಯಂತ್ರಿಸುವ ಮೂಲಕ ಅಧಿಕ ಇಳುವರಿಯನ್ನು ನೀಡುತ್ತದೆ. ಲಕ್ಷಾಂತರ ಬೆಳೆಗಾರರು ತಮ್ಮ ಹೊಲಗಳಲ್ಲಿ ಫರ್ಟೆರಾ® ಕೀಟನಾಶಕದ ಕ್ರಾಂತಿಕಾರಿ ಪ್ರಯೋಜನಗಳನ್ನು ನೋಡಿದ್ದಾರೆ ಮತ್ತು ಈ ಪ್ರಯಾಣವು ಹೀಗೆಯೇ ಮುಂದುವರೆಯುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ
  • ಕಬ್ಬು