ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಗ್ಯಾಲಕ್ಸಿ® ನೆಕ್ಸ್ಟ್ ಕಳೆನಾಶಕ

ಗ್ಯಾಲಕ್ಸಿ® ನೆಕ್ಸ್ಟ್ ಕಳೆ ಮೊಳೆತ ನಂತರ ಬಳಸುವ ಕಳೆನಾಶಕವಾಗಿದ್ದು, ಇದು ಅಗಲ ಎಲೆಯ ಕಳೆಗಳು (ಬಿಎಲ್‌ಡಬ್ಲ್ಯೂ) ಮತ್ತು ಕಿರಿದಾದ ಎಲೆಯ ಕಳೆಗಳ (ಎನ್ಎಲ್‌ಡಬ್ಲ್ಯೂ) ಮೇಲೆ ಉತ್ತಮ ನಿಯಂತ್ರಣವನ್ನು ಒದಗಿಸುತ್ತದೆ. ಇದು ಸೋಯಾಬೀನ್ ರೈತರಿಗೆ ದೀರ್ಘಾವಧಿಯ ಮತ್ತು ಪರಿಣಾಮಕಾರಿ ವಿಶಾಲ-ವ್ಯಾಪ್ತಿಯ ಕಳೆ ನಿಯಂತ್ರಣವನ್ನು ಒದಗಿಸುವ ಅನನ್ಯ ಪ್ರಿಮಿಕ್ಸ್ ಆಗಿದೆ.

ತ್ವರಿತ ವಿವರಣೆಯ ವಿಷಯಗಳು

  • ಗ್ಯಾಲಕ್ಸಿ® ನೆಕ್ಸ್ಟ್ ಕಳೆ ಮೊಳೆತ ನಂತರ ಬಳಸುವ, ವಿಶಾಲ-ವ್ಯಾಪ್ತಿಯ ಕಳೆನಾಶಕವಾಗಿದೆ
  • ಇದು ಕೊಲ್ಲಲು ಕಠಿಣವಾಗಿರುವ ಕಳೆಗಳ ಮೇಲೆಯೂ ಪರಿಣಾಮಕಾರಿ ನಿಯಂತ್ರಣವನ್ನು ನೀಡುತ್ತದೆ
  • ಆರಂಭಿಕ ಬೆಳವಣಿಗೆಯ ಹಂತದಲ್ಲಿ ಬೆಳೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ
  • ಡಬಲ್ ಮೋಡ್ ಆಫ್ ಆ್ಯಕ್ಷನ್‌ನೊಂದಿಗೆ ಸುಧಾರಿತ ಕಳೆನಾಶಕ ತಂತ್ರಜ್ಞಾನ
  • ಒನ್-ಶಾಟ್ ಪರಿಹಾರ - ಯಾವುದೇ ಟ್ಯಾಂಕ್ ಮಿಶ್ರಣದ ಅಗತ್ಯವಿಲ್ಲ
  • ಸಿಂಪಡಣೆ ಮಾಡುವವರಿಗೆ ಮತ್ತು ಬೆಳೆಗಳಿಗೆ ಸುರಕ್ಷಿತವಾಗಿದೆ

ಸಕ್ರಿಯ ಪದಾರ್ಥಗಳು

  • ಫ್ಲೂಥಿಯಾಸೆಟ್-ಮೀಥೈಲ್ 2.5% + ಕ್ವಿಝಲೋಫಾಪ್-ಈಥೈಲ್ 10% ಇಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಬೆಂಬಲಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಗ್ಯಾಲಕ್ಸಿ® ನೆಕ್ಸ್ಟ್ ಕಳೆ ಮೊಳೆತ ನಂತರ ಬಳಸುವ ಆಯ್ದ ಕಳೆನಾಶಕವಾಗಿದ್ದು, ಕಮೆಲಿನಾ ಬೆಂಗಾಲೆನ್ಸಿಸ್, ಅಕಾಲಿಫಾ ಇಂಡಿಕಾ, ದಿಗೇರಾ ಆರ್ವೆನ್ಸಿಸ್, ಎಕಿನೋಕ್ಲೋವಾ ಕೊಲೋನಾ ಮುಂತಾದ ಕೊಲ್ಲಲು ಕಠಿಣವಾಗಿರುವ ಕಳೆಗಳ ವಿರುದ್ಧ ವಿಶಾಲ-ವ್ಯಾಪ್ತಿಯ ಕಳೆ ನಿಯಂತ್ರಣವನ್ನು ಒದಗಿಸುತ್ತದೆ. ಇದು ಎರಡು ಸಕ್ರಿಯ ಪದಾರ್ಥಗಳ ಪೂರ್ವ ಮಿಶ್ರಣವಾಗಿದ್ದು, ಎರಡು ಕ್ರಿಯೆಯ ವಿಧಾನವನ್ನು ಅನುಮತಿಸುತ್ತದೆ. ಸಿಂಪಡಣೆಯ ನಂತರ, ಗ್ಯಾಲಕ್ಸಿ® ನೆಕ್ಸ್ಟ್ ಎಲೆಗಳು ಮತ್ತು ಬೇರುಗಳ ಮೂಲಕ ಹೀರಿಕೊಳ್ಳಲ್ಪಡುತ್ತದೆ ಮತ್ತು 10-15 ದಿನಗಳಲ್ಲಿ ಕಳೆಗಳನ್ನು ಒಣಗಿಸುತ್ತದೆ. ಕಳೆ ರಹಿತ ಹೊಲದಲ್ಲಿ ಬೆಳೆಯು ಅದರ ಆನುವಂಶಿಕ ಸಾಮರ್ಥ್ಯದ ಪ್ರಕಾರ ಬೆಳೆಯುತ್ತದೆ ಮತ್ತು ರೈತರಿಗೆ ಲಾಭದಾಯಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ. 

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.